»   » ಮುಗಿದ 'ಮಜಾ ಟಾಕೀಸ್': ವೀಕ್ಷಕರ ಕಡೆಯಿಂದ ಬಂತು ನೂರಾರು ಕಾಮೆಂಟ್ಸ್!

ಮುಗಿದ 'ಮಜಾ ಟಾಕೀಸ್': ವೀಕ್ಷಕರ ಕಡೆಯಿಂದ ಬಂತು ನೂರಾರು ಕಾಮೆಂಟ್ಸ್!

Posted By:
Subscribe to Filmibeat Kannada

ಪ್ರತಿ ವಾರಾಂತ್ಯ ಟಿವಿ ಮುಂದೆ ಕುಳಿತು 'ಮಜಾ ಟಾಕೀಸ್' ನೋಡುವ ಜನ ಇನ್ನು ಮುಂದೆ ಅದನ್ನು ತುಂಬ ಮಿಸ್ ಮಾಡಿಕೊಳ್ಳುತ್ತಾರೆ. ಕಾರಣ 'ಮಜಾ ಟಾಕೀಸ್' ಕಾರ್ಯಕ್ರಮ ಇದೀಗ ಕೊನೆಯ ಹಂತ ತಲುಪಿದೆ. ಕಾರ್ಯಕ್ರಮದ ಗ್ರಾಂಡ್ ಫಿನಾಲೆ ಸಂಚಿಕೆ ಈಗಾಗಲೇ ಚಿತ್ರೀಕರಣವಾಗಿದೆ.

ಸೃಜನ್ ಲೋಕೇಶ್ ತಮ್ಮ ಫೇಸ್ ಬುಕ್ ಖಾತೆಯ ಮೂಲಕ 'ಮಜಾ ಟಾಕೀಸ್' ಕಾರ್ಯಕ್ರಮ ಮುಗಿಯುತ್ತಿರುವ ಬಗ್ಗೆ ತಿಳಿಸಿದ್ದಾರೆ. ಇನ್ನೂ ಸೃಜನ್ ಅವರ ಆ ಪೋಸ್ಟ್ ಗೆ ಈಗ ನೂರಾರು ಕಾಮೆಂಟ್ ಗಳು ಬಂದಿದೆ. ಪ್ರತಿ ವಾರ ಕಾರ್ಯಕ್ರಮ ನೋಡುತ್ತಿದ್ದ ವೀಕ್ಷಕರು ಫೇಸ್ ಬುಕ್ ನಲ್ಲಿ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

'ನಿಲ್ಲಿಸಬೇಡಿ'

'ಮಜಾ ಟಾಕೀಸ್' ಮುಗಿಯುವ ವಿಷಯ ತಿಳಿದ ನಂತರ ಫೇಸ್ ಬುಕ್ ನಲ್ಲಿ ನೂರಾರು ವೀಕ್ಷಕರು ''ಡೋಂಟ್ ಸ್ಟಾಪ್ ಮಜಾ ಟಾಕೀಸ್'' ಎಂದು ಸರಣಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಕಾರಣ ಕೋಡಿ

ಕೆಲ ವೀಕ್ಷಕರು 'ಮಜಾ ಟಾಕೀಸ್' ಕೊನೆಗೊಳಿಸುತ್ತಿರುವುದಕ್ಕೆ ಸೂಕ್ತ ಕಾರಣ ನೀಡಿ ಎಂದು ಕೇಳಿದ್ದಾರೆ.

'ಮಜಾ ಟಾಕೀಸ್ 2' ಮಾಡಿ

''ಮಜಾ ಟಾಕೀಸ್' ಮುಗಿದರೆ ಪರವಾಗಿಲ್ಲ. ಅದಷ್ಟು ಬೇಗ 'ಮಜಾ ಟಾಕೀಸ್ 2' ಶುರು ಮಾಡಿ'' ಎನ್ನುತ್ತಿದ್ದಾರೆ ವೀಕ್ಷಕರು.

ತುಂಬ ಬೇಜಾರು ಆಗುತ್ತದೆ

''ವೀಕೆಂಡ್ ನಲ್ಲಿ ಬರುತ್ತಿದ್ದ ಒಳ್ಳೆಯ ಕಾರ್ಯಕ್ರಮ ಮಜಾ ಟಾಕೀಸ್. ಇದನ್ನು ಕೊನೆ ಮಾಡಿದ್ದು ನಮಗೆ ಬೇಸರ ತಂದಿದೆ'' ಎಂದು ಕೆಲವರು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಮಿಸ್ ಮಾಡಿಕೊಳ್ಳುತ್ತೇವೆ.

''ಕಾರ್ಯಕ್ರಮದಲ್ಲಿ ನಾವು ಸೃಜನ್ ಲೋಕೇಶ್ ಮತ್ತು ಕುರಿ ಪ್ರತಾಪ್ ಅವರನ್ನು ತುಂಬ ಮಿಸ್ ಮಾಡಿಕೊಳ್ಳುತ್ತೇವೆ'' ಎಂದು ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ.

ನಗುವಿನ ಟಾಕೀಸ್ ಆಗಿದ್ದ 'ಮಜಾ ಟಾಕೀಸ್' ಮುಚ್ಚಿದ ಸೃಜನ್ ಲೋಕೇಶ್!

ನಗ್ತಾ ಇರಿ ನಗಿಸುತ್ತಾ ಇರಿ

''ಎ ಡೇ ವಿತ್ ಔಟ್ ಲಾಫ್ ಇಸ್ ಡೇ ವೇಸ್ಟೆಡ್' ನೀವು ನಗ್ತಾ ಇರಿ ನಗಿಸುತ್ತಾ ಇರಿ'' ಎಂದು ಸೃಜನ್ ಫ್ಯಾನ್ ಶುಭ ಹಾರೈಸಿದ್ದಾರೆ.

ಯಾರಿದು? 'ಮಜಾ ಟಾಕೀಸ್'ನಲ್ಲಿ ಪ್ರತ್ಯಕ್ಷವಾದ ಜೂನಿಯರ್ ಟಾಕಿಂಗ್ ಸ್ಟಾರ್!

'ಮಜಾ ಟಾಕೀಸ್' ಬಗ್ಗೆ

'ಮಜಾ ಟಾಕೀಸ್' ಕಾರ್ಯಕ್ರಮ ಲೋಕೇಶ್ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣವಾಗಿದ್ದು, ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತಿತ್ತು.

English summary
Viewers has taken their facebook account to give reaction about Colours Kannada Channel's popular show 'Maja Talkies' grand finale.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada