»   » ನಟ ವಿಜಯ್ ರಾಘವೇಂದ್ರಗಿದ್ದ ಒಂದು ಆಸೆ ಈಡೇರಲೇ ಇಲ್ಲ.!

ನಟ ವಿಜಯ್ ರಾಘವೇಂದ್ರಗಿದ್ದ ಒಂದು ಆಸೆ ಈಡೇರಲೇ ಇಲ್ಲ.!

Posted By:
Subscribe to Filmibeat Kannada

ವಿಜಯ್ ರಾಘವೇಂದ್ರ... ಉತ್ತಮ ನಟ ಮಾತ್ರ ಅಲ್ಲ, ಅಷ್ಟೇ ಉತ್ತಮ ಗಾಯಕ ಕೂಡ ಹೌದು. 'ಸೇವಂತಿ ಸೇವಂತಿ' ಚಿತ್ರದಲ್ಲಿ ಗಾನಸುಧೆ ಹರಿಸಿರುವ ವಿಜಯ್ ರಾಘವೇಂದ್ರ ರವರಿಗೆ ಒಂದಾಸೆ ಇತ್ತು. ಆದ್ರೆ, ಅದು ಈಡೇರಲೇ ಇಲ್ಲ.!

ಉತ್ತಮ ದನಿ ಹೊಂದಿರುವ ನಟ ವಿಜಯ್ ರಾಘವೇಂದ್ರಗೆ 'ಸೇವಂತಿ ಸೇವಂತಿ' ಚಿತ್ರದಲ್ಲಿ ಹಾಡುವ ಅವಕಾಶ ಲಭಿಸಿತು. ತಾವು ದನಿಗೂಡಿಸಿದ ಮೊದಲ ಟ್ರ್ಯಾಕ್ ನ ಮೊದಲು ಅಣ್ಣಾವ್ರು ಡಾ.ರಾಜ್ ಕುಮಾರ್ ಗೆ ಕೇಳಿಸಬೇಕು ಎಂಬುದೇ ವಿಜಯ್ ರಾಘವೇಂದ್ರ ಇಚ್ಛೆ ಆಗಿತ್ತು. ಆದ್ರೆ, ಅದು ಸಾಧ್ಯವಾಗಲಿಲ್ಲ. ಯಾಕಂದ್ರೆ, ಟ್ರ್ಯಾಕ್ ಸಿದ್ಧವಾಗುವಷ್ಟರಲ್ಲಿ ಡಾ.ರಾಜ್ ಕುಮಾರ್ ಕೊನೆಯುಸಿರೆಳೆದಿದ್ದರು.

ವಿಜಯ್ ರಾಘವೇಂದ್ರ ಜೊತೆಗಿನ ಬಾಲ್ಯದ ನೆನಪು ಬಿಚ್ಚಿಟ್ಟ ಅಪ್ಪು, ಶಿವಣ್ಣ

Vijay Raghavendra speaks about Dr.Rajkumar in Super Talk Time

''ನಾನು ಹಾಡುವುದೆಂದರೆ ಅವರಿಗೆ ಇಷ್ಟ. 'ಸೇವಂತಿ ಸೇವಂತಿ' ಸಿನಿಮಾದಲ್ಲಿ ಮೊದಲ ಬಾರಿಗೆ ಹಾಡಿದೆ. ಅದನ್ನ ಅವರಿಗೆ ಮೊದಲು ಕೇಳಿಸಬೇಕು ಅಂತ ತುಂಬಾ ಆಸೆ ಇತ್ತು. ಆದರೆ ಆ ಅವಕಾಶ ಸಿಗಲೇ ಇಲ್ಲ. ಅದೇ ಸಮಯಕ್ಕೆ ಅವರು ತೀರಿಕೊಂಡರು. ನನ್ನ ಜೀವನದಲ್ಲಿ ಈಡೇರದ ಒಂದು ಆಸೆ ಅಂದ್ರೆ ಅದೇ'' ಎಂದು ನಟ ವಿಜಯ್ ರಾಘವೇಂದ್ರ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಸಂದರ್ಶನ: ಹುಟ್ಟುಹಬ್ಬ ಸಂಭ್ರಮದಲ್ಲಿ 'ಚಿನ್ನಾರಿ ಮುತ್ತ' ಹಂಚಿಕೊಂಡ ಕನಸುಗಳು..

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ ವಿಜಯ್ ರಾಘವೇಂದ್ರ, ''ಶಿವರಾಜ್ ಕುಮಾರ್ ಜೊತೆ 'ರಿಷಿ' ಅಂತ ಒಂದು ಸಿನಿಮಾ ಮಾಡಿದೆ. ಅದು ಬಹಳ ಒಳ್ಳೆಯ ಸಿನಿಮಾ. ಇವತ್ತು ನನ್ನ ಲುಕ್ ಚೇಂಜ್ ಓವರ್ ಆಗಲು ಕಾರಣ 'ರಿಷಿ' ಸಿನಿಮಾ ಹಾಗೂ ನಿರ್ದೇಶಕ ಪ್ರಕಾಶ್. 'ರಿಷಿ' ಸಿನಿಮಾ ನೋಡಿಕೊಂಡು ಬಂದು ಬಹಳ ಚೆನ್ನಾಗಿ ಮಾಡಿದ್ದೀಯಾ ಅಂತ ಅಪ್ಪಾಜಿ (ಡಾ.ರಾಜ್ ಕುಮಾರ್) ಹೇಳಿದರು. ನನಗೆ ಅದೇ ಖುಷಿ'' ಎಂದು ಅಣ್ಣಾವ್ರನ್ನ ನೆನೆದರು.

English summary
Kannada Actor Vijay Raghavendra speaks about Dr.Rajkumar in Colors Super Channel's popular show 'Super Talk Time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada