ಕಲರ್ಸ್ ಕನ್ನಡದಲ್ಲಿ ಮತ್ತೆ 'ಕಿರಿಕ್ ಪಾರ್ಟಿ' ಸಿನಿಮಾ ಪ್ರಸಾರ
ಕನ್ನಡದ ಬ್ಲಾಕ್ ಬಾಸ್ಟರ್ ಸಿನಿಮಾ 'ಕಿರಿಕ್ ಪಾರ್ಟಿ' ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಅರೇ.. ಈ ಹಿಂದೆಯೇ 'ಕಿರಿಕ್ ಪಾರ್ಟಿ' ಕಿರುತೆರೆಯಲ್ಲಿ ಬಂದಿತ್ತಲ್ವಾ ಅಂತ ನೀವು ಯೋಚನೆ ಮಾಡಬಹುದು ಆದರೆ 'ಕಿರಿಕ್ ಪಾರ್ಟಿ' ಚಿತ್ರ ಮತ್ತೆ ಟಿವಿಯಲ್ಲಿ ರಾರಾಜಿಸಲಿದೆ.
ಆಗಸ್ಟ್ 19 ಮತ್ತು 20 ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ 'ಕಿರಿಕ್ ಪಾರ್ಟಿ' ಸಿನಿಮಾ ಪ್ರಸಾರವಾಗಿತ್ತು. ಆಗ ಕಲರ್ಸ್ ಕನ್ನಡ ವೀಕ್ಷಕರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿ TRP ಯಲ್ಲಿ ಕಲರ್ಸ್ ಕನ್ನಡ ವಾಹಿನಿ ನಂಬರ್ 1 ಸ್ಥಾನಕ್ಕೆ ಬಂದಿತ್ತು. ಈಗ ಅದೇ ಕಾರಣದಿಂದ ಚಿತ್ರವನ್ನು ಮೂರನೇ ಬಾರಿ ಪ್ರಸಾರ ಮಾಡಲಾಗುತ್ತಿದೆ. ಬರುವ ಭಾನುವಾರ ಮಧ್ಯಾಹ್ನ 1 ಗಂಟೆಗೆ 'ಕಿರಿಕ್ ಪಾರ್ಟಿ' ಸಿನಿಮಾವನ್ನು ನೀವು ಮತ್ತೆ ನೋಡಬಹುದು.

English summary
Watch Kannada Movie 'Kirik Party' in Colors Kannada on September 24th at 1 pm.


Click it and Unblock the Notifications