»   » 'ಮಜಾ ಟಾಕೀಸ್'ನಲ್ಲಿ ಎಲ್ಲರಿಗೂ 100 ವರ್ಷ: ವರಲಕ್ಷ್ಮಿ ಇನ್ನೂ ಹದಿಹರೆಯ.!

'ಮಜಾ ಟಾಕೀಸ್'ನಲ್ಲಿ ಎಲ್ಲರಿಗೂ 100 ವರ್ಷ: ವರಲಕ್ಷ್ಮಿ ಇನ್ನೂ ಹದಿಹರೆಯ.!

Posted By:
Subscribe to Filmibeat Kannada

ವರ್ಷಗಳಿಂದ ನಿಮ್ಮನ್ನೆಲ್ಲಾ ನಕ್ಕು-ನಲಿಸುತ್ತಿರುವ ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ಮಜಾ ಟಾಕೀಸ್'. ಈ ಶೋನಲ್ಲಿರುವ ಎಲ್ಲರಿಗೂ ಈಗ ದಿಢೀರ್ ಅಂತ ವಯಸ್ಸಾಗಿಬಿಟ್ಟಿದೆ. ಎಲ್ಲರಿಗೂ ಅಂದಾಜು ನೂರು ವರ್ಷ ವಯಸ್ಸು.!['ಮಜಾ ಟಾಕೀಸ್'ನಲ್ಲಿ 'ರಾಜಕುಮಾರ'ನ ಗೆಲುವು ಸಂಭ್ರಮಿಸಿದ ಪುನೀತ್]

ತಲೆಗೂದಲು ಬೆಳ್ಳಗಾಗಿ... ಊರುಗೋಲು ಹಿಡಿದು ಎಲ್ಲರೂ ನಡೆದಾಡುತ್ತಿದ್ದರೆ... ಒನ್ ಅಂಡ್ ಒನ್ಲಿ ವರಲಕ್ಷ್ಮಿಗೆ ಮಾತ್ರ ವಯಸ್ಸೇ ಆಗಿಲ್ಲ ಕಣ್ರೀ..! ಇನ್ನೂ ಸ್ವೀಟ್ 16 ತರಹ ಕುಣಿದಾಡಿಕೊಂಡಿದ್ದಾರೆ.

ಸ್ವೀಟ್ 16 ವರಲಕ್ಷ್ಮಿ

ಮನೆ ಓನರ್ ದಯಾನಂದ್ ಹಾಗೂ ಕುರಿ ಮುದುಕರಾಗಿದ್ದರೂ, ಯಂಗ್ ಅಂಡ್ ಎನರ್ಜಿಟಿಕ್ ವರಲಕ್ಷ್ಮಿ ಮಾತ್ರ ಹೇಗೆ ಲಕಲಕ ಅಂತ ಮಿಂಚ್ತಿದ್ದಾರೆ ನೋಡಿ....

ಯಾರಿದು ಹೇಳಿ ನೋಡೋಣ....

'ಮಜಾ ಟಾಕೀಸ್'ನಲ್ಲಿ ಕೋಬ್ರಾ ಸೃಜನ್ ಲೋಕೇಶ್ ಗೂ ನೂರು ವರ್ಷ ಆಗ್ಬಿಟ್ಟಿದೆ. ವಯಸ್ಸಾಗಿದ್ದರೂ, ಸೃಜನ್ ಕಾಮಿಡಿ ಟೈಮಿಂಗ್ ಕೊಂಚ ಕೂಡ ಕಮ್ಮಿ ಆಗಿಲ್ಲ.

ಮನೆಯ ಮಹಾ'ರಾಣಿ'

'ಮಜಾ ಟಾಕೀಸ್' ಮನೆಯ ರಾಣಿ ಶ್ವೇತ ಚೆಂಗಪ್ಪ 'ಅಜ್ಜಿ'ಯಾಗಿ ಹೇಗೆ ಕಾಣ್ತಾರೆ ಅಂತ ನೀವೇ ನೋಡಿ...

ಪಾಪ ಮುದ್ದೇಶನಿಗೆ ಇನ್ನೂ ಮದುವೆ ಆಗಿಲ್ಲ

ವಯಸ್ಸಿನಲ್ಲಿ ಶತಕ ಬಾರಿಸಿದ್ದರೂ, ಪಾಪಾ... ಮುದ್ದೇಶನಿಗೆ ಮಾತ್ರ ಇನ್ನೂ ಮದುವೆ ಆಗಿಲ್ಲ ಅನ್ನೋ ಕೊರಗು ಕಾಡುತ್ತಲೇ ಇದೆ.

ಹಾಡು ಹಾಡಿ ವಯಸ್ಸಾಯ್ತು....

ಇನ್ನೂ 'ರೆಮೋ'ಗೂ ಹಾಡು ಹಾಡಿ ಹಾಡಿ ವಯಸ್ಸಾಗಿರೋದೇ ಗೊತ್ತಾಗಿಲ್ಲ ಅಂತ ಕಾಣುತ್ತೆ.

ಮಕ್ಕಳಾಯ್ತಾ.?

ಕೋಬ್ರಾ ಮತ್ತು ರಾಣಿಗೆ ವಯಸ್ಸಾಗಿರುವುದು ನಿಜ. ಆದ್ರೆ, ಅವರಿಗೆ ಮಕ್ಕಳಾಯ್ತಾ.? ಈ ಪ್ರಶ್ನೆಗೆ ಉತ್ತರ ಬೇಕು ಅಂದ್ರೆ ಇಂದಿನ ಸಂಚಿಕೆ ಮಿಸ್ ಮಾಡ್ಬೇಡಿ....

ಮಜವಾದ ಸಂಚಿಕೆ

'ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಇರುವ ಕಲಾವಿದರೆಲ್ಲರಿಗೂ ವಯಸ್ಸಾದ್ರೆ... ಶೋ ಹೇಗೆ ಮೂಡಿಬರಬಹುದು.? ಎಂಬ ಕಲ್ಪನೆಯೊಂದಿಗೆ ತಯಾರಾಗಿರುವ 'ಮಜವಾದ' ಸಂಚಿಕೆ ಇಂದು ಸಂಜೆ 8 ಗಂಟೆಗೆ ನಿಮ್ಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಮಿಸ್ ಮಾಡದೆ ನೋಡಿರಿ....

ಪ್ರೋಮೋ ನೋಡಿದ್ರಾ.?

'ಮಜಾ ಟಾಕೀಸ್' ಕಾರ್ಯಕ್ರಮದ ಇಂದಿನ ಸಂಚಿಕೆಯ ಸಣ್ಣ ಝಲಕ್ ಇಲ್ಲಿದೆ. ನೋಡಲು ಈ ಲಿಂಕ್ ಕ್ಲಿಕ್ ಮಾಡಿ....

English summary
Watch Maja Talkies special episode today at 8pm in Colors Kannada Channel.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada