For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಮನೆಯಿಂದ ಹುಚ್ಚ ವೆಂಕಟ್ 'ಕಿಕ್'ಔಟ್ ಆಗಿದ್ಯಾಕೆ?

  By Harshitha
  |

  'ಬಿಗ್ ಬಾಸ್' ಪ್ರಿಯರು ಊಹಿಸಿಕೊಳ್ಳುವುದಕ್ಕೂ ಆಗದ ಬೆಳವಣಿಗೆ ನಿನ್ನೆ 'ಬಿಗ್ ಬಾಸ್-3' ಮನೆಯಲ್ಲಿ ನಡೆದಿದೆ. ಪ್ರೇಕ್ಷಕರ ಅಚ್ಚುಮೆಚ್ಚಿನ 'ಮನರಂಜನೆ'ಯ ಸ್ಪರ್ಧಿ...ಟಿ.ಆರ್.ಪಿ ಕಿಂಗ್...ಯು ಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಕಿಕ್ ಔಟ್ ಆಗಿದ್ದಾರೆ.

  ನಾಮಿನೇಟ್ ಆಗದೆ ಸೇಫ್ ಝೋನ್ ನಲ್ಲಿದ್ದ ಹುಚ್ಚ ವೆಂಕಟ್ ಕೋಪದಲ್ಲಿ ಮಾಡಿದ ರಂಪಾಟದಿಂದ 'ಬಿಗ್ ಬಾಸ್' ಮನೆಯಿಂದ ಗೇಟ್ ಪಾಸ್ ಪಡೆದಿದ್ದಾರೆ. [ಯಾರೀ ಹುಚ್ಚ ವೆಂಕಟ್? ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿ]

  ಗಾಯಕ ರವಿ ಮುರೂರು ಮೇಲೆ ಹಲ್ಲೆ ನಡೆಸಿ, 'ಬಿಗ್ ಬಾಸ್' ಕಾರ್ಯಕ್ರಮದ ನಿಯಮ ಮುರಿದ ಪರಿಣಾಮ ಡೈರೆಕ್ಟ್ ಆಗಿ ಮನೆಯಿಂದ ಹೊರ ನಡೆದಿದ್ದಾರೆ. [ಸೈಲೆಂಟ್ 'ಹುಚ್ಚ ವೆಂಕಟ್' ಏಕ್ದಂ ವೈಲೆಂಟ್ ಆಗಿದ್ಯಾಕೆ?]

  ಕಿಚ್ಚ ಸುದೀಪ್ ಮಾತನಾಡುವಾಗ ಕೂಲ್ ಆಗೇ ಇದ್ದ ಹುಚ್ಚ ವೆಂಕಟ್ ಸಡನ್ ಆಗಿ ಟೆಂಪರ್ ರೈಸ್ ಮಾಡಿಕೊಂಡು ರವಿ ತಲೆಗೆ ನಾಲ್ಕು ತದಕಿದರು. ಇದಕ್ಕೆ ಕಾರಣ ಏನು? ಹುಚ್ಚ ವೆಂಕಟ್ ಪಿತ್ತ ನೆತ್ತಿಗೇರಿಸಿಕೊಂಡಿದ್ಯಾಕೆ.? ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಏನೇನಾಯ್ತು ಅನ್ನೋದನ್ನ ಸವಿವರವಾಗಿ ಹೇಳ್ತೀವಿ...ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

  ಗಾಯಕ ರವಿ ಮುರೂರು ಜೊತೆ ಸುದೀಪ್ ಸಂಭಾಷಣೆ

  ಗಾಯಕ ರವಿ ಮುರೂರು ಜೊತೆ ಸುದೀಪ್ ಸಂಭಾಷಣೆ

  ಗಾಯಕ ರವಿ ಮುರೂರು ಜೊತೆ ಸುದೀಪ್ ಮಾತನಾಡುತ್ತಿದ್ದರು. 'ಆಳು-ಅರಸ' ಟಾಸ್ಕ್ ನಡೆಯುತ್ತಿದ್ದ ಸಂದರ್ಭದಲ್ಲಿ ಹುಚ್ಚ ವೆಂಕಟ್ ಬಗ್ಗೆ ಮಾಸ್ಟರ್ ಆನಂದ್ ಬಳಿ ರವಿ ಮುರೂರು - ''ನಾನು ದೈಹಿಕ ಹಲ್ಲೆಗೂ ಮುಂದಾಗಬಲ್ಲೆ'' ಅಂತ ಹೇಳಿದ್ರು. ಇದನ್ನ 'ವಾರದ ಕಥೆ ಕಿಚ್ಚ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಕೆದಕಿದರು. [ತಲೆ ಮೇಲೆ 'ಎಕ್ಕಡ' ಹೊತ್ತು ಶಿಕ್ಷೆ ಅನುಭವಿಸಿದ ಹುಚ್ಚ ವೆಂಕಟ್!]

  ಸುದೀಪ್ ಕೇಳಿದ್ದೇನು?

  ಸುದೀಪ್ ಕೇಳಿದ್ದೇನು?

  ''ಸ್ವಾಭಿಮಾನಕ್ಕೆ ಪೆಟ್ಟು ಬಿದ್ರೆ, ಜನರನ್ನ ಮ್ಯಾನ್ ಹ್ಯಾಂಡಲ್ ಮಾಡೋಕೂ ರೆಡಿ ನಾನು. ಪ್ರಶ್ನೆ ಅರ್ಥವಾಯಿತಲ್ವೇ. ಉತ್ತರ ಕೊಡಿ'' ಅಂತ ರವಿ ಮುರೂರುಗೆ ಸುದೀಪ್ ಪ್ರಶ್ನಿಸಿದರು.

  ರವಿ ಮುರೂರು ಹೇಳಿದ್ದೇನು?

  ರವಿ ಮುರೂರು ಹೇಳಿದ್ದೇನು?

  ''ವೆಂಕಟ್ ಹೇಳಿದ್ರು. ನನ್ ಸೇನೆ ಇದೆ. ಹೊರಗಡೆ ಹೋದರೆ ಹಾಗ್ ಮಾಡ್ತೀನಿ. ಹೀಗೆ ಮಾಡ್ತೀನಿ. ಅಂತ.....'' ಅಂತ ರವಿ ಮುರೂರು ಮಾತನಾಡಲು ಶುರುಮಾಡಿದರು. ಅಷ್ಟು ಬೇಗ ನಡೆಯಬಾರದ್ದು ನಡೆದೇ ಹೋಯ್ತು. ['ಹುಚ್ಚ ವೆಂಕಟ್'ಗೆ ಬೆಂಡೆತ್ತಿ ಬ್ರೇಕ್ ಹಾಕಿದ ರವಿ ಮುರೂರು]

  ರವಿ ಮುರೂರುಗೆ ತದಕಿದ ಹುಚ್ಚ ವೆಂಕಟ್

  ರವಿ ಮುರೂರುಗೆ ತದಕಿದ ಹುಚ್ಚ ವೆಂಕಟ್

  ರವಿ ಮುರೂರು ಸ್ಪಷ್ಟನೆ ಕೊಡುವ ಮುನ್ನವೇ ಹುಚ್ಚ ವೆಂಕಟ್ ಕೆರಳಿ, ರವಿ ಮುರೂರು ತಲೆಗೆ ತದಕಿದರು. ರವಿ ಮುರೂರು ಬಾಯಲ್ಲಿ ರಕ್ತ ಚಿಮ್ಮಿತು. [ನನ್ಮಗಂದ್, ಸೇವಕ ಆಗಲ್ಲ ಅಂದ ವೆಂಕಟ್ ಗೆ ಫುಲ್ ಆವಾಜ್!]

  ಕೋಪೋದ್ರಿಕ್ತರಾದ ಹುಚ್ಚ ವೆಂಕಟ್

  ಕೋಪೋದ್ರಿಕ್ತರಾದ ಹುಚ್ಚ ವೆಂಕಟ್

  ಚಂದನ್, ಅಯ್ಯಪ್ಪ ಮತ್ತು ರೆಹಮಾನ್ ತಡೆದರೂ ಹುಚ್ಚ ವೆಂಕಟ್ ಅಬ್ಬರ ನಿಲ್ಲಲಿಲ್ಲ. ''ಸೇನೆ ಬಗ್ಗೆ ಮಾತಾಡ್ತೀಯಾ. ನನ್ ಮಗಂದ್. ಟಾಸ್ಕ್ ಇರೋದು ನಮ್ಮಲ್ಲಿ.'' ಅಂತ ಬೊಬ್ಬಿರಿದರು. [ಬಿಗ್ ಬಾಸ್ ಮನೆಯಲ್ಲಿ ವೆಂಕಟ್ ದಬ್ಬಾಳಿಕೆ, ಕಣ್ಣೀರಿಟ್ಟ ರೆಹಮಾನ್!]

  ಸಾರಿ ಕೇಳಿದ ಹುಚ್ಚ ವೆಂಕಟ್

  ಸಾರಿ ಕೇಳಿದ ಹುಚ್ಚ ವೆಂಕಟ್

  ಈ ಮಧ್ಯೆ ದೈಹಿಕ ಹಲ್ಲೆ ನಡೆಸಿದ್ದಕ್ಕೆ ''ಸಾರಿ ರೂಲ್ಸ್ ಬ್ರೇಕ್ ಮಾಡಿದ್ದಕ್ಕೆ'' ಅಂತ ಹುಚ್ಚ ವೆಂಕಟ್ ಕ್ಷಮೆ ಯಾಚಿಸಿದರು. [ಬಿಗ್ ಬಾಸ್ ಮನೆಗೆ ಹುಚ್ಚ ವೆಂಕಟ್ ರೀ ಎಂಟ್ರಿ ಡೌಟ್]

  ಮನೆಯಿಂದ ಹುಚ್ಚ ವೆಂಕಟ್ ಕಿಕ್ ಔಟ್

  ಮನೆಯಿಂದ ಹುಚ್ಚ ವೆಂಕಟ್ ಕಿಕ್ ಔಟ್

  'ಬಿಗ್ ಬಾಸ್' ಮನೆ ಒಳಗೆ ಹೋಗುವ ಮುನ್ನ ಎಲ್ಲರೂ ಅಗ್ರೀಮೆಂಟ್ ಗೆ ಸಹಿ ಹಾಕಬೇಕು. ಅದರ ಪ್ರಕಾರ, ಯಾರೂ ದೈಹಿಕ ಹಲ್ಲೆ ನಡೆಸುವಂತಿಲ್ಲ. 'ಬಿಗ್ ಬಾಸ್' ಮನೆಯಲ್ಲಿ ಅವಾಚ್ಯ ಶಬ್ದ ಬಳಸುವಂತಿಲ್ಲ. ಹೀಗಿದ್ದರೂ ದೈಹಿಕ ಹಲ್ಲೆ ಮಾಡಿ, ನಿಯಮ ಮುರಿದ ಪರಿಣಾಮ ಹುಚ್ಚ ವೆಂಕಟ್ ಹೊರನಡೆಯಬೇಕಾಯಿತು.

  ವಿಡಿಯೋ ನೋಡಿ

  'ಬಿಗ್ ಬಾಸ್' ಮನೆಯಲ್ಲಿ ಆದ ರಂಪಾಟದ ಕಂಪ್ಲೀಟ್ ವಿಡಿಯೋ ಇಲ್ಲಿದೆ ನೋಡಿ.....

  English summary
  YouTube Star Huccha Venkat has been kicked out from Bigg Boss Kannada 3 reality show for beating up Singer Ravi Muroor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X