»   » ಪ್ರಥಮ್ ಬಗ್ಗೆ ಶಿವರಾಜ್ ಕುಮಾರ್ ಏನು ಹೇಳಿದ್ದಾರೆ ಗೊತ್ತಾ.?

ಪ್ರಥಮ್ ಬಗ್ಗೆ ಶಿವರಾಜ್ ಕುಮಾರ್ ಏನು ಹೇಳಿದ್ದಾರೆ ಗೊತ್ತಾ.?

Posted By:
Subscribe to Filmibeat Kannada

ಬಾಯಿ ತೆಗೆದರೆ 'ಒಳ್ಳೆ ಹುಡುಗ' ಪ್ರಥಮ್ ಖಂಡಿಸ್ತೀನಿ ಅಂತ ಹೇಳ್ಬಹುದು... 'ಬಿಗ್ ಬಾಸ್' ಮನೆಯಲ್ಲಿ ಇತರೆ ಸದಸ್ಯರಿಗೆ ಕಿರಿಕಿರಿ ಉಂಟು ಮಾಡಬಹುದು... ಇರಿಟೇಶನ್ ಎನ್ನುವ ಪದಕ್ಕೆ ಇರಿಟೇಶನ್ ಹುಟ್ಟಿಸಬಹುದು... ಇದೇ ಕಾರಣಕ್ಕೆ ಪ್ರಥಮ್ ಅಂದ್ರೆ ಕೆಲವರು ಮೂಗು ಮುರಿಯಬಹುದು... ಆದ್ರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಅದೇ ಪ್ರಥಮ್ ಅಂದ್ರೆ ಇಷ್ಟ ಅನ್ನೋದು ನಿಮಗೆ ಗೊತ್ತಾ.?

ನಾವು ಹೇಳ್ತಿರೋದನ್ನ ನೀವು ನಂಬಲ್ಲ ಅಂದ್ರೆ, ಒಂದು ವಿಡಿಯೋ ತೋರಿಸ್ತೀವಿ ನೋಡಿ....

ಪ್ರಥಮ್ ಬಗ್ಗೆ ಶಿವರಾಜ್ ಕುಮಾರ್ ಮಾತು

'ಬಿಗ್ ಬಾಸ್' ಮನೆಯಲ್ಲಿ ಇರುವ ಪ್ರಥಮ್ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಒಂದು ವಿಡಿಯೋ ಬೈಟ್ ನೀಡಿದ್ದಾರೆ. ಅದರಲ್ಲಿ ಅವರು ಹೇಳಿರುವ ಮಾತುಗಳು...

ತುಂಬಾ ಕ್ಲೆವರ್.!

''ಹಾಯ್ ಪ್ರಥಮ್... ನಾನು 'ಬಿಗ್ ಬಾಸ್' ನೋಡ್ತಿದ್ದೀನಿ. ಯು ಆರ್ ಪ್ಲೇಯಿಂಗ್ ವೆರಿ ವೆಲ್. ಎಲ್ಲಾ ಕಂಟೆಸ್ಟೆಂಟ್ಸ್ ತುಂಬಾ ಚೆನ್ನಾಗಿ ಆಡ್ತಿದ್ದಾರೆ. ನೀನಂತೂ ತುಂಬಾ ಕ್ಲೆವರ್, ಓಪನ್ ಹಾರ್ಟೆಡ್ ಆಗಿ ಆಡ್ತಿದ್ದೀಯಾ. ಶೋನ ಗೆದ್ದು ಬಾ'' ಅಂತ ಪ್ರಥಮ್ ಗೆ ಶಿವಣ್ಣ ಹರಸಿದ್ದಾರೆ.['ಬಿಗ್ ಬಾಸ್' ಗೆದ್ರೆ ಕನ್ನಡಿಗರಿಗಾಗಿ ಪ್ರಥಮ್ ಏನ್ ಮಾಡ್ಬಹುದು.?]

ಖಂಡಿಸಿದರೂ.. ಪ್ರೀತಿಸುತ್ತೇನೆ.!

''Ofcourse, ಎಲ್ಲರ ಆಶೀರ್ವಾದ ಇದೆ. ಎಲ್ಲರೂ ನೋಡ್ತಿದ್ದಾರೆ. ನೀನು ಖಂಡಿಸಿದರೂ, ನಾನು ನಿನ್ನ ಪ್ರೀತಿಸುತ್ತೇನೆ. ಆಲ್ ದಿ ಬೆಸ್ಟ್ ಪ್ರಥಮ್'' ಎಂದಿದ್ದಾರೆ ಶಿವಣ್ಣ.

ವಿಡಿಯೋ ನೋಡಿ...

ಪ್ರಥಮ್ ಗೆ ಶಿವಣ್ಣ ವಿಶ್ ಮಾಡಿರುವ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ....

English summary
Kannada Actor Shiva Rajkumar speaks about BBK4 Contestant Pratham. Watch video...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada