Don't Miss!
- News
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದ ಅದಾನಿ, ಇದು ಆರ್ಥಿಕ ದಿವಾಳಿತನದ ಮುನ್ಸೂಚನೆಯೇ
- Finance
Jio, Airtel 5G: ಕಳೆದ 4 ತಿಂಗಳಲ್ಲಿ ಎಷ್ಟು ಗ್ರಾಹಕರನ್ನು ಆಕರ್ಷಿಸಿವೆ ಟೆಲಿಕಾಂ ಕಂಪನಿಗಳು? ಇಲ್ಲಿದೆ ಮಾಹಿತಿ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದರ್ಶನ್ ಜೊತೆ ಕಿಚ್ಚನ ಗೆಳೆತನದ ರಹಸ್ಯ ವೀಕೆಂಡ್ ನಲ್ಲಿ ಬಹಿರಂಗ
'ಮಾಣಿಕ್ಯ' ಚಿತ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಅಪ್ಪ-ಮಗನಾಗಿ ನಟಿಸಿದ್ದ ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಕಿಚ್ಚ ಸುದೀಪ್ ಅವರು ಇಡೀ ಚಿತ್ರರಂಗ ಕ್ಷೇತ್ರದವರ ಮತ್ತು ಅಭಿಮಾನಿಗಳ ಮನಗೆದ್ದಿದ್ದರು.
ಆ ಜೋಡಿ ಮತ್ತೆ ವೀಕೆಂಡ್ ವಿತ್ ರಮೇಶ್ ವೇದಿಕೆಯಲ್ಲಿ ಒಂದಾಗಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕಿಚ್ಚ ಸುದೀಪ್ ಅವರ ಬಗ್ಗೆ ಮನದಾಳದ ಮಾತುಗಳನ್ನು ಹೇಳಿದ್ದಾರೆ.[ಕುಡಿದ ಮತ್ತಿನಲ್ಲಿ ಸುದೀಪ್ ಕೆನ್ನೆಗೆ ರಪ-ರಪ ಅಂತ ಬಾರಿಸಿದವರಾರು?]
ಜೊತೆಗೆ ಕಿಚ್ಚ ಸುದೀಪ್ ಅವರ ಬಗ್ಗೆ ತಮಿಳು ನಟರಾದ ವಿಶಾಲ್, ಶ್ಯಾಮ್, ಸೋನು ಸೂದ್, ಸುನೀಲ್ ಶೆಟ್ಟಿ, ನಿರ್ದೇಶಕ ಎಸ್.ಎಸ್ ರಾಜಮೌಳಿ ಮುಂತಾದವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ವಿಶೇಷವಾಗಿ ದೊಡ್ಮನೆ ಹುಡುಗರಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೂಡ ಸುದೀಪ್ ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.[ಕಿಚ್ಚ ಸುದೀಪ್ ಬಗ್ಗೆ ಕನ್ನಡ ನಿರ್ದೇಶಕರ ಉವಾಚ]
ಮಾತ್ರವಲ್ಲದೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಗ್ಗೆ ಸುದೀಪ್ ಅವರು ಮನಬಿಚ್ಚಿ ಮಾತನಾಡುವ ಮೂಲಕ ತಮ್ಮ ಗೆಳೆತನ ಸದಾ ಹಸಿರು ಎಂಬುದನ್ನು ಬಹಿರಂಗವಾಗಿ ಸಾರಿದ್ದಾರೆ. ಯಾರೆಲ್ಲಾ ಏನೇನು ಹೇಳಿದ್ದಾರೆ ಅನ್ನೋದನ್ನ ನೋಡಿ ಕೆಳಗಿನ ಸ್ಲೈಡುಗಳಲ್ಲಿ....

ಕ್ರೇಜಿಸ್ಟಾರ್ ರವಿಚಂದ್ರನ್
"ಸಾಮಾನ್ಯವಾಗಿ ಎಲ್ಲರೂ ಸುದೀಪ್ ಅವರನ್ನು ನೋಡಿದ ತಕ್ಷಣ, ಸ್ವಲ್ಪ ಜಂಭ ಜಾಸ್ತಿ ಅವನಿಗೆ, ದುರಹಂಕಾರ, ಸ್ವಲ್ಪ ಅಹಂಕಾರ ಇದೆ ಅಂತ ಅಂದುಕೊಳ್ಳುತ್ತಾರೆ. ಆದ್ರೆ ಅದೂ ಯಾವುದು ಈ ವ್ಯಕ್ತಿನಲ್ಲಿ ಒಂಚೂರು ಇಲ್ಲ. 'ನಾವೆಲ್ಲ ಹಾಗಲ್ಲ, ಬರ್ತಾನೇ ದುರಹಂಕಾರ, ಗರ್ವದ ಜೊತೆನೇ ಬಂದು ಬಿಟ್ವಿ. ನನಗೆ ಸುದೀಪ್ ನ ಫಸ್ಟ್ ಸಿನಿಮಾದಲ್ಲಿ ನೋಡಿದ ನೆನಪು 'ಸ್ಪರ್ಶ' ಚಿತ್ರದಲ್ಲಿ. ಆವಾಗ ಇನ್ನೂ ಅವನಿಗೆ ಮೀಸೆನೇ ಬೆಳೆದಿರಲಿಲ್ಲ. ಆದಾದ್ಮೆಲೇ ಮೀಸೆ ಬೆಳೆದು, ಅದನ್ನು ಬೆಳೆಸಿ, ಬಹಳ ಗತ್ತಿನಿಂದ ತಿರುವಿ ಇದೀಗ 'ಮಾಣಿಕ್ಯ' ಆಗಿ ಇಲ್ಲಿ ಬಂದು ಕುಳಿತಿದ್ದಾನೆ. -ರವಿಚಂದ್ರನ್[ವಿಡಿಯೋ ನೋಡಿ; ನಟ ದರ್ಶನ್ ಕೋಪದ ಬಗ್ಗೆ ಸುದೀಪ್ ಕಾಮೆಂಟ್.!]

ಸುದೀಪ್ ನನ್ನ ಮಗನ ಸಮಾನ
'ನನಗೆ ಚಿತ್ರರಂಗದಲ್ಲಿ ತುಂಬಾ ಜನ ಪರಿಚಯ ಇದ್ದಾರೆ. ಸುದೀಪ್ ಗೆ ಒಂದು ಸ್ಥಾನ ಹೆಚ್ಚಿಗೆ ಕೊಟ್ಟಿರೋದು ಎಲ್ಲಿ ಅಂದ್ರೆ ನನ್ನ ದೊಡ್ಡ ಮಗ ಇವನು. ನನ್ನ ಮಗನ ಜಾಗ ಅವನಿಗೆ ಕೊಟ್ಟಿದ್ದೇನೆ. ನಾನು ಪ್ರೇಮಲೋಕ ಮಾಡಬೇಕಾದ್ರೆ, ನನ್ನ ತಂದೆ ಅಪ್ಪಿಕೊಂಡು ನನ್ನ ಭುಜದಲ್ಲಿ ತಲೆ ಇಟ್ಟು ಅತ್ತರು. ನಾನು ಪ್ರೇಮಲೋಕ ಮಾಡಿದ್ದನ್ನು ನೋಡಿ ತುಂಬಾ ಹೆಮ್ಮೆ ಪಟ್ಟರು. ಇದೀಗ ಇವನು 'ಮಾಣಿಕ್ಯ' ಮಾಡಿದ. ಅದೇ ಅಪ್ಪುಗೆಯನ್ನು ನಾನೀಗ ಇವನಿಗೆ ಕೊಡುತ್ತೇನೆ'.- ರವಿಚಂದ್ರನ್[ಆಪ್ತಮಿತ್ರ ದರ್ಶನ್ ಬಗ್ಗೆ 'ವೀಕೆಂಡ್' ನಲ್ಲಿ ಸುದೀಪ್ ಆಡಿದ ಮಾತೇನು?]

ಪವರ್ ಸ್ಟಾರ್ ಪುನೀತ್
"ನೀವು ಕನ್ನಡ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಸುಮಾರು 20 ವರ್ಷ ಆಗ್ತಾ ಬಂತು. ಈ 20 ವರ್ಷಗಳಲ್ಲಿ ನೀವು ಹಲವಾರು ಸಿನಿಮಾಗಳನ್ನು ಕೊಟ್ಟಿದ್ದೀರಿ. ಸುದೀಪ್ ಅನ್ನೋ ನಟ ಬರೀ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ, ತಮಿಳು-ತೆಲುಗು ಮತ್ತು ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸುದೀಪ್ ಅವರು ನಿರ್ದೇಶಕ ಸೇರಿದಂತೆ ಅವರು ಒಬ್ಬ ಉತ್ತಮ ನಟ. ನೀವು ಮುಂದೆ ಮಾಡುವ ಸಿನಿಮಾ, ಹಾಗೂ ನಿಮ್ಮ ಕೆರಿಯರ್ ಗೆ ಆಲ್ ದಿ ಬೆಸ್ಟ್- ಪುನೀತ್ ರಾಜ್ ಕುಮಾರ್.

ಶಿವರಾಜ್ ಕುಮಾರ್
"ಸುದೀಪ್ ನಮಗೆ ಯಾವಾಗಲೂ ನಮ್ಮ ಮನೆಯ ಸದಸ್ಯ ಇದ್ದ ಹಾಗೆ. ಈಗ ಸುದೀಪ್ ಅವರು ಇಷ್ಟು ಎತ್ತರಕ್ಕೆ ಬೆಳೆದಿರುವುದನ್ನು ಕಂಡರೆ ತುಂಬಾ ಖುಷಿ ಆಗುತ್ತಿದೆ. ಎಸ್ ಎಸ್ ರಾಜಮೌಳಿ ಅವರ ಜೊತೆ 'ಈಗ' ಸಿನಿಮಾ ಮಾಡಿದ್ದು ಸುಲಭ ಅಲ್ಲ ಬಹಳ ಕಷ್ಟದ ಕೆಲಸ. ಇದೀಗ ನಾವು ಒಟ್ಟಿಗೆ 'ಕಲಿ' ಸಿನಿಮಾ ಮಾಡುತ್ತಿದ್ದೇವೆ. ತುಂಬಾ ಖುಷಿ ಆಗುತ್ತಿದೆ. ಆಲ್ ದಿ ಬೆಸ್ಟ್ ಸುದೀಪ್ ಲವ್ ಯೂ". -ಶಿವರಾಜ್ ಕುಮಾರ್.

ದರ್ಶನ್ ನನ್ನ ಬೆಸ್ಟ್ ಫ್ರೆಂಡ್
"ದರ್ಶನ್ ವಿಚಾರ ಬಂದಾಗ, ಅವನಿಗೆ ಅವನದೇ ಆದ ನೋವು ಇತ್ತು, ನನಗೆ ನನ್ನದೇ ಆದ ನೋವು ಇತ್ತು. ಅದನ್ನು ನೋಡಿ ಯಾರ್ಯಾರೋ ಕಥೆ ಕಟ್ಟಿದ್ರು. ಇಲ್ಲಿ ಯಾರು ಯಾರಿಗೂ ವೈರಿಗಳಲ್ಲ, ನಾವು ವೈರಿಗಳಾಗೋಕೆ ಇಲ್ಲಿಗೆ ಬಂದಿಲ್ಲ. ಯಾರದೋ ಶತ್ರುತ್ವ ಮಾಡಿಕೊಂಡು ನಾವು ಮನೆಗೆ ಹೋಗಿ ಸಾಧನೆ ಮಾಡಬೇಕಾಗಿಲ್ಲ. ಕೆಲವು ತಪ್ಪುಗಳು ನಡೆಯುತ್ತವೆ. ಕೆಲವೊಂದು ಬಾರಿ ನಾನು ಒಬ್ಬನೇ ಆದಾಗ ನನಗೆ ಗೆಳೆಯ ಅಂತ ಹತ್ತಿರ ಆದವನು ದರ್ಶನ್. - ಸುದೀಪ್

ದರ್ಶನ್ ಮಗು ಥರ
'ನಾವು ಗುಂಪು ಕಟ್ಟೋಕೆ ಹೋಗಿಲ್ಲ, ನಾನು ದರ್ಶನ್ ತುಂಬಾನೇ ಕಂಫರ್ಟೇಬಲ್ ಆಗಿ ಇದ್ವಿ. ಇನ್ನು ದರ್ಶನ್ ಗೆ ಮೂಗಿನ ಮೇಲೆ ಕೋಪ. ಅದನ್ನು ಹಿಡಿಯಬೇಕು ಮಗು ಥರ, ಹೇ ಬೇಡ ಬೇಡ ಅಂತ. ನನಗೂ ಅಷ್ಟೇ ಸ್ವಲ್ಪ ಟೆಂಪರ್ ಜಾಸ್ತಿ, ಅದನ್ನೇ ಜನ ಇವರಿಬ್ಬರಿಗೆ ಆಗಲ್ಲ ಅಂತ ಸುದ್ದಿ ಮಾಡಿದ್ರು. ಯಾವತ್ತಾದ್ರೂ ನಾವು ಮೈಕ್ ಹಿಡ್ಕೊಂಡು ಹೇಳಿದ್ವಾ? ನಮಗಿಬ್ಬರಿಗೆ ಆಗಿ ಬರೋದಿಲ್ಲ ಅಂತ.- ಸುದೀಪ್

ಎಸ್.ಎಸ್ ರಾಜಮೌಳಿ
'ಅವರು ಒಬ್ಬ ದೊಡ್ಡ ಸೂಪರ್ ಸ್ಟಾರ್ ಆದ್ರೂನೂ ಅವರಿಗೆ ಗೊತ್ತು ಹೇಗೆ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಅಂತ. ಅವರು ಒಬ್ಬ ಅದ್ಭುತ ಕಮರ್ಷಿಯಲ್ ಪಾತ್ರಕ್ಕೆ ಹೊಂದಿಕೊಳ್ಳುವವರು. ಹಾಗೆಯೇ ಅಭಿಮಾನಿಗಳನ್ನು ತುಂಬಾ ಸಂತೋಷ ಪಡಿಸುತ್ತಾರೆ. ಜೊತೆಗೆ ಅವರೊಬ್ಬ ನಟನಾಗಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುತ್ತಾರೆ. ಅವರಿಗೆ ಹೇಗೆ ಕಥೆ ಹೇಳುವುದು ಅಂತ ಗೊತ್ತಾಗಲ್ಲ. ಆದರೆ ಅವರಿಗೆ ಕಥೆ ಹೇಳಲು ಶುರು ಮಾಡಿದರೆ ಅವರ ಮುಖದಲ್ಲಿ ಖಂಡಿತವಾಗಲೂ ಅವರು ಭಾವನೆ ಹೊರಹಾಕುವುದಿಲ್ಲ. ಇತ್ತೀಚೆಗೆ ಮತ್ತೆ 'ಈಗ' ಸಿನಿಮಾ ನೋಡಿದೆ, ತುಂಬಾ ಖುಷಿ ಆಯ್ತು ಇಂತಹ ನಟರ ಜೊತೆ ಕೆಲಸ ಮಾಡಿದೆನಲ್ಲಾ ಅಂತ. ಮತ್ತೆ ಸಿನಿಮಾ ಮಾಡೋಣ ಮಿಸ್ ಯೂ ಸುದೀಪ್.- ಎಸ್.ಎಸ್ ರಾಜಮೌಳಿ

ತಮಿಳು ನಟ ವಿಶಾಲ್
"ಸುದೀಪ್ ಅಂದ್ರೆ ನನಗೆ ನೆನಪಿಗೆ ಬರೋದು ಅವರಲ್ಲಿ ಇರುವ ತೀವ್ರತೆ, ಅವರಲ್ಲಿ ನಾಯಕತ್ವದ ಗುಣಗಳನ್ನು ನೋಡಿದ್ದೀನಿ. ಕೈಗೆತ್ತಿಕೊಂಡ ಯಾವುದೇ ಕೆಲಸವನ್ನು ಪೂರ್ಣಗೊಳಿಸಿದೆ ಬಿಡುವುದಿಲ್ಲ. ಅದನ್ನು ನಾನು ಕಣ್ಣಾರೆ ನೋಡಿದ್ದೀನಿ. ಐ ಲವ್ ಯೂ ಬ್ರದರ್, ನಿಮ್ಮ ಸಹೋದರನಾಗಿ ನಿಮ್ಮ ಹಾಗೆ ಇರಲು ಇಷ್ಟಪಡ್ತೀನಿ. - ವಿಶಾಲ್ ರೆಡ್ಡಿ

ನಟ ಸೋನು ಸೂದ್
'ಸುದೀಪ್ ಅದ್ಭುತ ಕಲಾವಿದ ಅಷ್ಟೇ ಅಲ್ಲ ನನ್ನ ಸಹೋದರ. 'ವಿಷ್ಣುವರ್ಧನ' ಚಿತ್ರದಲ್ಲಿ ಒಟ್ಟಿಗೆ ನಟಿಸುವ ಅವಕಾಶ ಸಿಕ್ಕಿತು. ಕನ್ನಡದಲ್ಲಿ ನನ್ನ ಮೊದಲ ಸಿನಿಮಾ. ಕನ್ನಡ ಭಾಷೆ ಮತ್ತು ಸಂಭಾಷಣೆಯಲ್ಲಿ ನನಗೆ ತುಂಬಾ ಸಹಾಯ ಮಾಡಿದ್ರಿ. ಬೆಂಗಳೂರಿನಲ್ಲಿ ಕಳೆದ ಪ್ರತಿ ದಿನವೂ ನನ್ನನ್ನು ಚೆನ್ನಾಗಿ ನೋಡಿಕೊಂಡ್ರಿ. ನನಗೆ ಮಿಸ್ ಮಾಡಿಕೊಂಡೆ ಎಂಬ ಭಾವನೆ ಕಾಡಲಿಲ್ಲ, ಸುದೀಪ್ ನನ್ನ ಸಹೋದರ ಎನ್ನುವುದಕ್ಕೆ ಹೆಮ್ಮೆ ಪಡ್ತೀನಿ. -ಬಹುಭಾಷಾ ನಟ ಸೋನು ಸೂದ್.

ನಟ ಸುನೀಲ್ ಶೆಟ್ಟಿ
'ಸುದೀಪ್ ಅವರು ಕೆಲಸದ ಮೇಲೆ ಇಟ್ಟಿರುವ ನಂಬಿಕೆ ಅಪಾರವಾದದ್ದು, ನಾವು ಒಟ್ಟಿಗೆ ಸಿ.ಸಿ.ಎಲ್ ಆಡುವ ಸಮಯದಲ್ಲಿ ಸುದೀಪ್ ನಾಯಕತ್ವ ಹೇಗಿದೆ ಎಂದು ನೋಡಿದ್ವಿ. ಮಹೇಂದ್ರ ಸಿಂಗ್ ಧೋನಿಯನ್ನ ನೋಡಿದ ಹಾಗೆ ಅನಿಸಿತು. -ಬಾಲಿವುಡ್ ನಟ ಸುನೀಲ್ ಶೆಟ್ಟಿ.

ತಮಿಳು ನಟ ಶ್ಯಾಮ್
"ಅನುಮಾನವೇ ಇಲ್ಲ ನೀವು ಸಿಸಿಎಲ್ ನ ಉತ್ತಮ ನಾಯಕ. ಅವರದ್ದೇ ಆದ ಅದ್ಭುತ ಟೀಮ್ ಇದೆ ಅದೇ 'ಕರ್ನಾಟಕ ಬುಲ್ಡೋಜರ್ಸ್'. ತಮ್ಮನ್ನು ತಾವು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ, ಅವರ ಜೀವನದ ಪ್ರತೀ ಕ್ಷಣವನ್ನು ಸಂತೋಷದಿಂದ ಕಳೆಯುತ್ತಾರೆ. ಅವರ ಮಾತುಗಳು ಬೇರೆಯವರಿಗೆ ಸ್ಫೂರ್ತಿಯಾಗಿರುತ್ತೆ. ಸುದೀಪ್ ಪರಿಚಯವಾದ ನಂತರ ಅವರಂತೆ ಶ್ರದ್ಧೆಯಿಂದ ಇರುವುದನ್ನು ಕಲಿತಿದ್ದೇನೆ.-ಶ್ಯಾಮ್

ಬಿಗ್ ಬಾಸ್ ಬಗ್ಗೆ
'ಬಿಗ್ ಬಾಸ್ ವೇದಿಕೆ ಅನ್ನೋದು ಏನಿದೆ ಅಲ್ಲಿ ನಾನು ನಾನಾಗಿದ್ದೆ. ಒಂದೊಂದು ಬಾರಿ ನಾನು ಯೋಚನೆ ಮಾಡ್ತಾ ಇದ್ದೆ. ನಾನು ಸಿನಿಮಾಗಿಂತ ಜಾಸ್ತಿ, ಎಲ್ಲರಿಗೂ ಹತ್ತಿರ ಆಗಿದ್ದು, ಬಿಗ್ ಬಾಸ್ ಕಾರ್ಯಕ್ರಮದಿಂದ-ಸುದೀಪ್

ಧನ್ಯವಾದ
"ಧನ್ಯವಾದ ಹೇಳೋದು ಅಂದ್ರೆ ರಾಘವೇಂದ್ರ ಹುಣಸೂರು, ಯಾಕೆಂದರೆ 'ಪ್ಯಾಟೆ ಮಂದಿ ಹಳ್ಳಿ ಲೈಫು' ಬಂದಾಗ ಒಬ್ಬ ವ್ಯಕ್ತಿಯ ಕನಸು ಅವರ ಕಣ್ಣಲ್ಲಿ ಕಾಣ್ತಾ ಇತ್ತು. ನನಗೆ ಟಿವಿಯಲ್ಲಿ ಕೆಲಸ ಮಾಡಲು ಇಂಟ್ರೆಸ್ಟ್ ಇರಲಿಲ್ಲ. ನಾನು ಇವತ್ತಿಗೆ ಬದುಕೋನು, ನಾಳೆಗೆ ಅಲ್ಲ. ನಿನ್ನೆ ಬಗ್ಗೆ ಗೊತ್ತಿಲ್ಲ. ಅವರಿಗೆ ಥ್ಯಾಂಕ್ಸ್, ನನ್ನ ಸಂಘದವರಿಗೆ ಥ್ಯಾಂಕ್ಸ್, ಚಿತ್ರರಂಗ ಕೈ ಹಿಡಿಯಿತು. ಬಿದ್ದಾಗ ಕೈ ಹಿಡಿದು ನಡೆಸಿತು, ಸೋ ನಾನು ಕನ್ನಡ ಇಂಡಸ್ಟ್ರಿಗೆ ಥ್ಯಾಂಕ್ಸ್ ಹೇಳ್ತೀನಿ.- ಸುದೀಪ್

ಪ್ರೀಯಾರಿಗೆ ಧನ್ಯವಾದ
"ನನ್ನ ಕುಟುಂಬಕ್ಕೆ, ನನ್ನ ಫ್ಯಾಮಿಲಿ ಇಲ್ಲದೇ ನಾನಿಲ್ಲ, ನಾನು ಏನೂ ಅಲ್ಲ. ನನ್ನ ಕುಟುಂಬದಲ್ಲಿ ಕೆಲವೊಂದು ಘಟನೆಗಳು ನಡೆದರೂ ನಾನು ಪ್ರೀಯಾ ಅವರಿಗೆ ಥ್ಯಾಂಕ್ಸ್ ಹೇಳ್ತೀನಿ. ಅವರೂ ನನ್ನ ಜೀವನದಲ್ಲಿ ಇಲ್ಲಿಯವರೆಗೆ ಹೆಜ್ಜೆ ಹಾಕಿದ್ದಾರೆ. ನನ್ನ ಮಗಳಿಗೆ ಥ್ಯಾಂಕ್ಸ್ ಹೇಳ್ತೀನಿ ಯಾಕೆಂದ್ರೆ ಅವಳು ತುಂಬಾ ಶ್ರದ್ಧೆಯುಳ್ಳ ಮಗಳು, ಜೊತೆಗೆ ತುಂಬಾ ಟ್ಯಾಲೆಂಟೆಡ್ ಮಗಳು. - ಸುದೀಪ್

ಕ್ಷಮೆ
ನಾನು ನನ್ನ ಮಗಳಿಗೆ ಕ್ಷಮೆ ಕೇಳ್ತೀನಿ. ಯಾಕೆಂದರೆ ಅವಳು ಬೆಳೆಯುವಷ್ಟು ದಿನ ನಾನು ಅವಳೊಟ್ಟಿಗೆ ಇರಲು ಆಗಲಿಲ್ಲ. ತುಂಬಾ ದಿನಗಳನ್ನು ಕಳೆದುಕೊಂಡೆ. ನಾನು ಇಬ್ಬರನ್ನು ಮಿಸ್ ಮಾಡ್ಕೋತಿನಿ, ರವಿಶಂಕರ್ ಮತ್ತು ದರ್ಶನ್, ನಾನು ಯಾವಾಗಲೂ ದರ್ಶನ್ ಗೆಳೆಯ ಆಗಿರೋಕೆ ಇಷ್ಟಪಡ್ತೀನಿ. -ಸುದೀಪ್