»   » 'ಪ್ರತ್ಯರ್ಥ' ಚಿತ್ರದಲ್ಲಾದ 'ಆ' ಘಟನೆ ಬಗ್ಗೆ ಸುದೀಪ್ ಬಿಚ್ಚಿಟ್ಟ ರಹಸ್ಯ!

'ಪ್ರತ್ಯರ್ಥ' ಚಿತ್ರದಲ್ಲಾದ 'ಆ' ಘಟನೆ ಬಗ್ಗೆ ಸುದೀಪ್ ಬಿಚ್ಚಿಟ್ಟ ರಹಸ್ಯ!

Posted By:
Subscribe to Filmibeat Kannada

'ಇನ್ನುಂದೆ ಓಡಬಾರದು. ಜಾಸ್ತಿ ಸ್ಟ್ರೇನ್ ಆಗಬಾರದು. ಈಗ ಆಗಿರುವುದನ್ನ ಗುಣ ಪಡಿಸಲು ಸಾಧ್ಯ ಇಲ್ಲ. ಅದಾಗಿ ಅದೇ ಸರಿ ಹೋಗಬೇಕು ಅಷ್ಟೆ'' ಅಂತ ವೈದ್ಯರು ಸುದೀಪ್ ಗೆ ಸಲಹೆ ನೀಡಿದರು. ಅದು 'ಪ್ರತ್ಯರ್ಥ' ಶೂಟಿಂಗ್ ನಲ್ಲಿ ಆದ ಒಂದು ಸಣ್ಣ ಅವಘಡದಿಂದ.!

ಬಿದ್ದ ಒಂದು ಸಣ್ಣ ಏಟಿನಿಂದ ಉಸಿರಾಡಲು ಹರಸಾಹಸ ಪಟ್ಟ ಕಿಚ್ಚ ಸುದೀಪ್ ಅಂದು ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ.['ಅಭಿನಯ ಚಕ್ರವರ್ತಿ' ಸುದೀಪ್ ಗೆ 'ಐರನ್ ಲೆಗ್' ಎಂದವರು ಯಾರು?]

ಇನ್ನೂ 'ಪ್ರತ್ಯರ್ಥ' ಚಿತ್ರಕ್ಕೂ ಮುನ್ನ ಸುದೀಪ್ ಅಭಿನಯಿಸಿದ 'ತಾಯವ್ವ' ಸಿನಿಮಾ ಬಿಡುಗಡೆ ಆದ್ಮೇಲೆ ಆಸೆಯಿಂದ ಚಿತ್ರಮಂದಿರಕ್ಕೆ ಹೋದ ಸುದೀಪ್ ಗೆ ಶಾಕ್ ಕಾದಿತ್ತು.[ನಾಗತಿಹಳ್ಳಿ ಚಂದ್ರಶೇಖರ್ ರಿಜೆಕ್ಟ್ ಮಾಡಿದ ನಟ ಸುದೀಪ್.! ನಿಮ್ಗೊತ್ತಾ?]

'ತಾಯವ್ವ' ಹಾಗೂ 'ಪ್ರತ್ಯರ್ಥ' ಚಿತ್ರ ಸಂದರ್ಭದಲ್ಲಿ ನಡೆದ ಕೆಲ ಘಟನೆಗಳನ್ನ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಸುದೀಪ್ ಮನಬಿಚ್ಚಿ ಮಾತನಾಡಿದರು. ಅದನ್ನೆಲ್ಲಾ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ.....

'ತಾಯವ್ವ' ಚಿತ್ರಕ್ಕೆ ಸಿಕ್ಕ ಸಂಭಾವನೆ

''ತಾಯವ್ವ' ಸಿನಿಮಾ ಬಂದಾಗ ನಾನೇ ಹೀರೋ ಅಂದರು. 90 ಸಾವಿರ ಸಂಭಾವನೆ ಅಂದರು. ಅದರಲ್ಲಿ 81 ಸಾವಿರ ನನ್ನ ಕಾಸ್ಟ್ಯೂಮ್ ಗೆ. ಉಳಿದ 9 ಸಾವಿರ ನನಗೆ ಅಂತ ಹೇಳಿದರು'' - ಸುದೀಪ್ [ಸುದೀಪ್ ಜೀವನದ 'ಬೆಸ್ಟ್ ಫ್ರೆಂಡ್ಸ್' ಯಾರು ಅಂದ್ಕೊಂಡ್ರೀ.? 'ಇವರೇ'.!]

'ತಾಯವ್ವ' ಸಿನಿಮಾ ರಿಲೀಸ್ ಆದ್ಮೇಲೆ....

''ಸಿನಿಮಾ ರಿಲೀಸ್ ಆದ್ಮೇಲೆ ಥಿಯೇಟರ್ ನಲ್ಲಿ ಜನ ತುಂಬಿರ್ತಾರೆ ಅಂತ ಆಸೆ ನನಗೆ. ಪ್ರಿಯಾ ಆಗ ಜೆಟ್ ಏರ್ ವೇಸ್ ನಲ್ಲಿ ಕೆಲಸ ಮಾಡ್ತಿದ್ಲು. ಅವಳಿಗೆ ಫೋನ್ ಮಾಡಿ ಸಿನಿಮಾ ರಿಲೀಸ್ ಆಗಿದೆ, ಹೋಗೋಣ ಅಂತ ಹೇಳಿದೆ. ಅವಳು ತುಂಬಾ ಎಕ್ಸೈಟ್ ಆಗಿ, ಡ್ರೆಸ್ ಮಾಡಿಕೊಂಡು ಬಂದಿದ್ಲು'' - ಸುದೀಪ್ [ಕಿಚ್ಚ ಸುದೀಪ್ ತಂದೆಗೆ ಅಮಿತಾಬ್ ಬಚ್ಚನ್ ಹೇಳಿದ ಮುತ್ತಿನಂಥ ಮಾತು]

ಥಿಯೇಟರ್ ನಲ್ಲಿ ಆಗಿದ್ದೇನು?

''ಮೊದಲು ಥಿಯೇಟರ್ ವಿಸಿಟ್ ಮಾಡೋಣ, ಆಮೇಲೆ ಸಿನಿಮಾ ನೋಡೋಣ ಅಂತ ಆಯ್ತು. ಗೋವರ್ಧನ್ ಥಿಯೇಟರ್ ಗೆ ಹೋದ್ವಿ. ಅಲ್ಲಿ ಇಬ್ಬರು ಮೂರು ಜನ ಇದ್ದರು ಅಷ್ಟೆ. ಅವತ್ತು ತುಂಬಾ ಬೇಜಾರಾಯ್ತು. ನಂತರ ಸಿನಿಮಾ ನೋಡಲೇ ಇಲ್ಲ'' - ಸುದೀಪ್

'ಪ್ರತ್ಯರ್ಥ' ಶೂಟಿಂಗ್ ಸಂದರ್ಭದಲ್ಲಿ.....

''ಪ್ರತ್ಯರ್ಥ' ಸಿನಿಮಾದ ಫೈಟ್ ಸೀನ್ ಶೂಟ್ ಮಾಡುವಾಗ, ಏನೋ ಹೊಡೆದ ಹಾಗೆ ಆಯ್ತು. ಒಳಗಡೆ ನೋವು ಆಗ್ತಿತ್ತು. ಹಾರ್ಟ್ ಅಟ್ಯಾಕ್ ಅಂದ್ರೇನು ಅಂತ ಗೊತ್ತಿಲ್ಲ. ಆದ್ರೆ, ಉಸಿರಾಡಲು ಆಗುತ್ತಿರಲಿಲ್ಲ'' - ಸುದೀಪ್

ನೋವಾಗ್ತಿದೆ ಅಂದರೂ ಕೇಳಲಿಲ್ಲ!

''ನೋವಾಗುತ್ತಿದೆ ಅಂತ ದೇಸಾಯಿ ಅವರಿಗೆ ಹೇಳುತ್ತಿದ್ದೆ. ಅದ್ರೂ, ಶೂಟಿಂಗ್ ಮುಂದುವರಿಸಿದರು'' - ಸುದೀಪ್

ವೈದ್ಯರು ಹೇಳಿದ್ದು...

''ನಂತರ ಬೆಂಗಳೂರಿಗೆ ಬಂದು ಚೆಕಪ್ ಮಾಡಿಸಿದಾಗ, Lungs ನಲ್ಲಿ ಎರಡು ಚೇಂಬರ್ ಬರ್ಸ್ಟ್ ಆಗ್ಬಿಟ್ಟಿದೆ. 'ಇವತ್ತಿಂದ ಓಡಬಾರದು. ಸ್ಟ್ರೆಸ್ ಆಗಬಾರದು' ಅಂತ ಡಾಕ್ಟರ್ ಹೇಳಿದರು. ಅದು ಗುಣ ಆಗುವುದಿಲ್ಲ. ಅದಾಗದೇ ವಾಪಸ್ ಬರಬೇಕು ಅಂತ ಹೇಳಿದರು. ನಂತರ 'ಹುಚ್ಚ' ಸಿನಿಮಾ ಮಾಡಿದೆ. ಲಿಗಮೆಂಟ್ ಟೇರ್ ಆಯ್ತು'' - ಸುದೀಪ್

ಸುನೀಲ್ ಕುಮಾರ್ ದೇಸಾಯಿ ನನ್ನ ಗುರು

''ಸುನೀಲ್ ಕುಮಾರ್ ದೇಸಾಯಿ ತುಂಬಾ ಟ್ಯಾಲೆಂಟೆಡ್ ಡೈರೆಕ್ಟರ್. ನನಗೆ ಅವರೇ ಗುರು. ಆ ಸಲುಗೆ ಮೇಲೆ ಅವರಿಗೆ ನಾನು ಸದಾ ರೇಗಿಸುತ್ತಿರುತ್ತೇನೆ'' - ಸುದೀಪ್

ಅವರೇ ಕಾರಣ...

''ನಾನು ಸಿನಿಮಾ ಪ್ರೀತಿಸುವುದಕ್ಕೆ ಅವರೇ ಕಾರಣ. ನಾನು ಡೆಡಿಕೇಷನ್ ಕಲಿತಿದ್ದೇ ಅವರಿಂದ. ನನ್ನಲ್ಲಿ ಒಬ್ಬ ಕಲಾವಿದ ಇದ್ದಾನೆ ಅಂತ ತೋರಿಸಿಕೊಟ್ಟಿದ್ದೇ ಅವರು'' - ಸುದೀಪ್

ಸುನೀಲ್ ಕುಮಾರ್ ದೇಸಾಯಿ ಮಾತು....

''ಸುದೀಪ್ ಬಹಳ ಸೆನ್ಸಿಟೀವ್ ಪರ್ಸನ್. 'ಸ್ಪರ್ಶ' ಮಾಡುವ ಟೈಮ್ ನಲ್ಲಿ ಹಾಡಿನ ಚಿತ್ರೀಕರಣದಲ್ಲಿ ಅವರನ್ನ ನೋಡಿದಾಗ, ''ಕನ್ನಡ ಇಂಡಸ್ಟ್ರಿಗೆ ಒಬ್ಬರು ರೋಮ್ಯಾಂಟಿಕ್ ಹೀರೋ ಸಿಕ್ಕರು'' ಅಂತ ನನಗೆ ಅನಿಸ್ತು'' - ಸುದೀಪ್

ತುಂಬಾ ಖುಷಿ

''ನಾನು ಅವರಿಗೆ ಏನೂ ಮಾಡಿಲ್ಲ. ಒಂದು ಸಣ್ಣ ಗೈಡೆನ್ಸ್ ಕೊಟ್ಟಿದ್ದೀನಿ ಅಷ್ಟೆ. ಅದಕ್ಕೆ ಅವರು ನನ್ನ ಬಗ್ಗೆ ಒಳ್ಳೆ ಮಾತುಗಳನ್ನ ಹೇಳಿದ್ದಾರೆ. ನನಗೆ ತುಂಬಾ ಖುಷಿ ಆಗುತ್ತೆ'' - ಸುದೀಪ್

English summary
Kannada Actor, Director Kiccha Sudeep spoke about the making of Kannada Movie 'Prathyartha' in Zee Kannada channel's popular show Weekend With Ramesh season2.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada