»   » ಗೋಲ್ಡನ್ ಸ್ಟಾರ್ ಜೊತೆ 'ವೀಕೆಂಡ್ ಫಿನಾಲೆ' ಹಂಚಿಕೊಳ್ಳುವ ಸುವರ್ಣವಾಕಾಶ.!

ಗೋಲ್ಡನ್ ಸ್ಟಾರ್ ಜೊತೆ 'ವೀಕೆಂಡ್ ಫಿನಾಲೆ' ಹಂಚಿಕೊಳ್ಳುವ ಸುವರ್ಣವಾಕಾಶ.!

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಆದಷ್ಟೂ ಬೇಗ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ಗಣೇಶ್ ಅವರ ಎಪಿಸೋಡ್ ಮೂಲಕ 'ವೀಕೆಂಡ್ ವಿತ್ ರಮೇಶ್' ಮೂರನೇ ಆವೃತ್ತಿಯನ್ನ ಯಶಸ್ವಿಯಾಗಿ ಮುಗಿಸುವ ನಿರ್ಧಾರ ಮಾಡಿದೆ ಜೀ-ಕನ್ನಡ. ಜುಲೈ 1 ಮತ್ತು 2 ರಂದು ಗಣೇಶ್ ಅವರ ಕಾರ್ಯಕ್ರಮ ಪ್ರಸಾರವಾಗಲಿದೆ.

ಈ ಮಧ್ಯೆ ಜೀ-ಕನ್ನಡ ವಾಹಿನಿ 'ವೀಕೆಂಡ್ ವಿತ್ ರಮೇಶ್' ಪ್ರೇಕ್ಷಕರಿಗೆ ಒಂದೊಳ್ಳೆ ಆಫರ್ ನೀಡಿದೆ. ಗಣೇಶ್ ಅವರ ಎಪಿಸೋಡ್ ನ ಫಿನಾಲೆಯಲ್ಲಿ ಭಾಗವಹಿಸಲು ಒಂದು ಸುವರ್ಣ ಅವಕಾಶ ಕಲ್ಪಿಸಿದೆ. ಅದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ.

ಒಂದ್ಕಡೆ ಪವರ್ ಸ್ಟಾರ್, ಮತ್ತೊಂದೆಡೆ ಗೋಲ್ಡನ್ ಸ್ಟಾರ್: ಫುಲ್ ಧಮಾಕ.!

Weekend With Ramesh 3 Grand Finale With Ganesh

ನಟ ರಮೇಶ್ ಅರವಿಂದ್ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮವನ್ನ ನಿರೂಪಣೆ ಮಾಡುತ್ತಿದ್ದಾರೆ. ಅದೇ ರಮೇಶ್ ಅವರು ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರವೊಂದನ್ನ ನಿರ್ದೇಶನ ಕೂಡ ಮಾಡಿದ್ದಾರೆ. ಆ ಚಿತ್ರದ ಹೆಸರು ಯಾವುದು ಎಂದು ಸರಿಯಾಗಿ ಹೇಳಿದ್ರೆ ನೀವು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಗಣೇಶ್ ಅವರ ಸಂಚಿಕೆಯಲ್ಲಿ ನೇರವಾಗಿ ಭಾಗವಹಿಸಿಬಹುದು.

ಪ್ರಶ್ನೆ ಹೀಗಿದೆ.....
ರಮೇಶ್ ಅರವಿಂದ್ ನಿರ್ದೇಶನದಲ್ಲಿ, ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿರುವ ಚಿತ್ರ ಯಾವುದು?

A. ಮುಂಗಾರು ಮಳೆ-2
B. ಸುಂದರಾಂಗ ಜಾಣ
C. ಹುಡುಗಾಟ

ಈ ಸರಳ ಪ್ರಶ್ನೆಗೆ ಉತ್ತರಿಸಿ, ಆಯ್ಕೆಯಾದ 20 ಅದೃಷ್ಟಶಾಲಿಗಳಿಗೆ ಮಾತ್ರ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ವೀಕೆಂಡ್ ವಿತ್ ರಮೇಶ್-3', ಗ್ರ್ಯಾಂಡ್ ಫಿನಾಲೆ ಸಂಚಿಕೆಯನ್ನು ನೇರವಾಗಿ ನೋಡುವ ಅವಕಾಶ ಸಿಗಲಿದೆ.

ಬ್ರೇಕಿಂಗ್ ನ್ಯೂಸ್: ಸಾಧಕರ ಸೀಟ್ ಮೇಲೆ ಕುಳಿತ ಮುಖ್ಯಮಂತ್ರಿ ಸಿದ್ದರಾಮಯ್ಯ

English summary
Answer The Following Question, and You will Get Chance For Weekend With Ramesh Grand Finale Episode.
Please Wait while comments are loading...