»   » ನಟ ಪ್ರಕಾಶ್ ರೈ ಜೀವನಕ್ಕೆ ಹೊಸ ತಿರುವು ನೀಡಿದ ಅದೃಷ್ಟಲಕ್ಷ್ಮಿ ಇವರೇ.!

ನಟ ಪ್ರಕಾಶ್ ರೈ ಜೀವನಕ್ಕೆ ಹೊಸ ತಿರುವು ನೀಡಿದ ಅದೃಷ್ಟಲಕ್ಷ್ಮಿ ಇವರೇ.!

Posted By:
Subscribe to Filmibeat Kannada

ನಾಟಕ, ಧಾರಾವಾಹಿಗಳಲ್ಲಿ ಅಭಿನಯಿಸಿದ ಬಳಿಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಪ್ರಕಾಶ್ ರೈ ರವರಿಗೆ ಉತ್ತಮ ಅವಕಾಶಗಳು ದೊರಕಲಿಲ್ಲ. 'ಸ್ಟಾರ್' ಆಗಬೇಕು ಎಂಬ ಕನಸು ಕಾಣುತ್ತಿದ್ದ ಪ್ರಕಾಶ್ ರೈ ರವರಿಗೆ ಸಿಗ್ತಾಯಿದ್ದದ್ದು ಸಣ್ಣ ಪುಟ್ಟ ಪಾತ್ರಗಳಷ್ಟೇ. ಆಗ ಪ್ರಕಾಶ್ ರೈ ರವರಲ್ಲಿ ಅಡಗಿದ್ದ ಪ್ರತಿಭೆಯನ್ನ ಗುರುತಿಸಿದವರು ನಟಿ ಗೀತಾ.!

ಹೌದು, ಕಾಲಿವುಡ್ ನಿರ್ದೇಶಕ ಕೆ.ಬಾಲಚಂದರ್ ರವರಿಗೆ ಪ್ರಕಾಶ್ ರೈ ರವರನ್ನ ಪರಿಚಯಿಸಿದವರು ನಟಿ ಗೀತಾ.[ಅಂದು ನಟ ಪ್ರಕಾಶ್ ರೈ ಅಂತರಾಳದಲ್ಲಿ ಕುದಿಯುತ್ತಿತ್ತು ಹತಾಶೆಯ ಬೇಗುದಿ]

ಇಂದು ಕಾಲಿವುಡ್, ಟಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಲ್ಲಿ ಪ್ರಕಾಶ್ ರೈ 'ಚಿನ್ನದ ಮೊಟ್ಟೆ ಇಡುವ ಕೋಳಿ' ಆಗಿದ್ದಾರೆ ಅಂದ್ರೆ ಅದಕ್ಕೆ ಕಾರಣ ನಟಿ ಗೀತಾ ಮಾಡಿದ ಸಹಾಯ. ಆ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ ಓದಿರಿ....

ಗೀತಾ ಜೊತೆ ಪ್ರಕಾಶ್ ರೈ ಅಭಿನಯ

''ಪ್ರಕಾಶ್ ರೈ ಒಳ್ಳೆಯ ಅರ್ಟಿಸ್ಟ್ ಅಂತ ಎಲ್ಲರೂ ಹೇಳುತ್ತಾರೆ. ಆದ್ರೆ, ಅದಕ್ಕೂ ಮೇಲೆ ಅವರು ಮೆಂಟಲಿ ತುಂಬಾ ಮೆಚ್ಯೂರ್ಡ್ ಆಗಿದ್ದಾರೆ. ನಾನು ಅವರ ಜೊತೆ ಮೊದಲು ಆಕ್ಟ್ ಮಾಡಿದ್ದು 'ಹರಕೆಯ ಕುರಿ' ಎಂಬ ಚಿತ್ರದಲ್ಲಿ'' - ಗೀತಾ, ನಟಿ

ಕೆ.ಬಾಲಚಂದರ್ ರವರಿಗೆ ಪ್ರಕಾಶ್ ರನ್ನ ಪರಿಚಯಿಸಿದ ಗೀತಾ

''ಪ್ರಕಾಶ್ ರೈ ರವರ ಕಣ್ಣು ಚೆನ್ನಾಗಿತ್ತು. 'ಡುಯೆಟ್' ಸಿನಿಮಾಗಾಗಿ ಕೆ.ಬಾಲಚಂದರ್ ಸರ್ ರವರು ಒಂದು ವಿಲನ್ ಪಾತ್ರಕ್ಕೆ ಹುಡುಕುತ್ತಿದ್ದರು. ಆಗ ನಾನು ಕೆ.ಬಾಲಚಂದರ್ ಸರ್ ಗೆ ಹೇಳಿದ್ದೆ, ''ನೀವು ಯಾಕೆ ಪ್ರಕಾಶ್ ರವರನ್ನ ಟ್ರೈ ಮಾಡಬಾರದು.? ಬೆಂಗಳೂರಿನಲ್ಲಿ ಇದ್ದಾರೆ'' ಅಂತ. ಹೀಗಾಗಿ ಅವರಿಗೆ ಚಾನ್ಸ್ ಸಿಕ್ತು'' - ಗೀತಾ, ನಟಿ[ನಟ ಪ್ರಕಾಶ್ ರೈ ಮಾಡಿರುವ ಸಾಧನೆ ಎಂಥದ್ದು ಅಂತೀರಾ.?]

ಪ್ರಕಾಶ್ ಅದೃಷ್ಟ ಚೆನ್ನಾಗಿತ್ತು

''ನಾನು ಹೇಳಿದ್ದರಿಂದ ಅವರಿಗೆ ಅವಕಾಶ ಸಿಕ್ತು ಅನ್ನೋದಕ್ಕಿಂತ ಅವರ ಅದೃಷ್ಟ ಕೂಡಿ ಬಂತು. ಅದಕ್ಕೆ ಅವರು ಸೆಲೆಕ್ಟ್ ಆದರು'' - ಗೀತಾ, ನಟಿ

ಪ್ರಕಾಶ್ ರವರಲ್ಲಿ ಇರುವ ಒಳ್ಳೆಯ ಗುಣ

''ಪ್ರಕಾಶ್ ರೈ ಇಷ್ಟು ದೊಡ್ಡ ಆರ್ಟಿಸ್ಟ್ ಆಗಿದ್ದಾರಲ್ಲ.? ನಿಮ್ಮ ಹತ್ತಿರ ಹೇಗಿದ್ದಾರೆ ಅಂತ ಎಷ್ಟೋ ಜನ ಕೇಳುತ್ತಾರೆ.. ನಾನು ಹೇಳುತ್ತೇನೆ, ''ಅದೇ ಪ್ರಕಾಶ್ ಆಗಿ ಅಷ್ಟೇ ಸಿಂಪಲ್ ಆಗಿ ಇವತ್ತಿಗೂ ನನ್ನ ಜೊತೆ ಮಾತನಾಡುತ್ತಾರೆ'' ಅಂತ. ಅದೇ ಅವರ ಒಳ್ಳೆಯ ಗುಣ'' - ಗೀತಾ, ನಟಿ[ನಟ ಪ್ರಕಾಶ್ ರೈ ಪಾಲಿನ 'ದೇವತೆ' ಈಕೆಯೇ.!]

ಗೀತಾ ಬಗ್ಗೆ ಪ್ರಕಾಶ್ ರೈ ಹೇಳಿದ್ದೇನು.?

''ನನ್ನ ಜೀವನದಲ್ಲಿ ಬಂದ ಇನ್ನೊಂದು ದೇವತೆ ಈಕೆ. ನಾನೇನು ಮಾಡಿಲ್ಲ ಅಂತ ಹೇಳ್ತಾರೆ ಆದ್ರೆ ನನ್ನ ಫೋಟೋನ ತಗೊಂಡು ಹೋಗಿದ್ದು ಇವರೇ.. ಕೆ.ಬಾಲಚಂದರ್ ಅವರಿಗೆ ನನ್ನ ಫೋಟೋ ಕೊಟ್ಟಿದ್ದು ಇವರೇ.. ನನಗೆ ಮೀಟಿಂಗ್ ಫಿಕ್ಸ್ ಮಾಡಿದ್ದು ಇವರೇ.. ನಾನು ಚೆನ್ನೈಗೆ ಹೋದಾಗ ನಾನು ಇರಲು ರೂಮ್ ಬುಕ್ ಮಾಡಿದ್ದು ಇವರೇ... ಇವರ ಕಾರ್ ನಲ್ಲಿಯೇ ನಾನು ಕೆ.ಬಾಲಚಂದರ್ ಆಫೀಸ್ ಗೆ ಹೋಗಿದ್ದು... ಕೆ.ಬಾಲಚಂದರ್ ಜೊತೆ ಮಾತನಾಡಿ ಬಂದ್ಮೇಲೆ ಹೊರಗಡೆ ಸ್ವೀಟ್ ಬಾಕ್ಸ್ ಇಟ್ಟುಕೊಂಡು ನಿಂತಿದ್ದು ಇವರೇ... ಅವರಿಂದಲೇ ನಾನು ಇಷ್ಟು ಬೆಳೆಯೋಕೆ ಕಾರಣ. ಇಲ್ಲಂದ್ರೆ ನಾನು ಕೆ.ಬಾಲಚಂದರ್ ರವರನ್ನ ಹೇಗೆ ಹೋಗಿ ನೋಡಲಿ.? ಆ ಸಾಧ್ಯತೆ ಕೂಡ ನನಗೆ ಗೊತ್ತಿರಲಿಲ್ಲ'' - ಪ್ರಕಾಶ್ ರೈ, ನಟ

ಗೀತಾ ಹಾಗೆ ಮಾಡದೆ ಇದಿದ್ರೆ.?

''ಅವರು (ಗೀತಾ) ಹಾಗೆ ಮಾಡದೇ ಇದ್ದಿದ್ರೆ, ಇನ್ನೂ ಲೇಟ್ ಆಗ್ತಿತ್ತೇನೋ.. ಆಗ್ತಿರ್ಲಿಲ್ಲವೇನೋ.. ಗೊತ್ತಿಲ್ಲ'' - ಪ್ರಕಾಶ್ ರೈ, ನಟ[ನಟ ಪ್ರಕಾಶ್ ರೈಗಿದ್ದ ಅಹಂಕಾರ ಮಟ್ಟ ಆಗಿದ್ದು ಹೇಗೆ ಗೊತ್ತಾ.?]

ನನಗೆ ಗೀತಾ ಸ್ಫೂರ್ತಿ

''ಗೀತಾ is an Inspiration. ಯಾರಿಗೋ ಯಾರೋ ಬಂದು ಹೀಗೆ ಹೆಲ್ಪ್ ಮಾಡಿದರೆ ಒಬ್ಬರ ಜೀವನ ನಡೆಯುತ್ತೆ. ಅವರ (ಗೀತಾ) ಒಂದು ಸಹಾಯದಿಂದ ನನ್ನ ಜೀವನ... ನನ್ನ ಇಡೀ ಕುಟುಂಬದ ಜೀವನ ನಡೆಯಿತು. ನಿಷ್ಕಲ್ಮಷವಾಗಿ ಮಾಡುವ ಒಂದು ಸಹಾಯಕ್ಕೆ ಇಷ್ಟು ದೊಡ್ಡ ಶಕ್ತಿ ಇರುತ್ತದೆ. ಗೀತಾ ಅವರೇ ಸ್ಫೂರ್ತಿ ನನಗೆ'' - ಪ್ರಕಾಶ್ ರೈ, ನಟ

English summary
Multilingual Actor Prakash Rai thanked Actress Geetha in 'Weekend With Ramesh-3'
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada