»   » 'ವೀಕೆಂಡ್ ವಿತ್ ರಮೇಶ್'ಗೆ 'ಶುಭಂ' ಹಾಡುವ ಕಾಲ ಬಂತು: ಕೊನೆ ಯಾವಾಗ.?

'ವೀಕೆಂಡ್ ವಿತ್ ರಮೇಶ್'ಗೆ 'ಶುಭಂ' ಹಾಡುವ ಕಾಲ ಬಂತು: ಕೊನೆ ಯಾವಾಗ.?

Posted By:
Subscribe to Filmibeat Kannada

ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಕಾರ್ಯಕ್ರಮಗಳ ಪೈಕಿ 'ವೀಕೆಂಡ್ ವಿತ್ ರಮೇಶ್' ಕೂಡ ಒಂದು. 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಎರಡು ಆವೃತ್ತಿಗಳು ಯಶಸ್ವಿಯಾಗಿ ಮುಗಿದು, ಮೂರನೇ ಆವೃತ್ತಿ ಇದೀಗ ವಾರಾಂತ್ಯದಲ್ಲಿ ಪ್ರಸಾರ ಆಗುತ್ತಿದೆ.

ಈಗಾಗಲೇ 'ವೀಕೆಂಡ್ ವಿತ್ ರಮೇಶ್ ಸೀಸನ್-3'ನಲ್ಲಿ ನಟ ಪ್ರಕಾಶ್ ರೈ, ಜಗ್ಗೇಶ್, ಪ್ರಾಣೇಶ್, ಪ್ರೊ.ಕೃಷ್ಣೇಗೌಡ, ನ್ಯಾ.ಸಂತೋಷ್ ಹೆಗ್ಡೆ, ವಿಜಯ್ ರಾಘವೇಂದ್ರ, ಪ್ರಿಯಾಮಣಿ ಸೇರಿದಂತೆ ಹಲವರು ಸಾಧಕರ ಸೀಟ್ ಮೇಲೆ ಕೂತು ತಮ್ಮ ಜೀವನವನ್ನು ರಿವೈಂಡ್ ಮಾಡಿ ನೋಡಿದ್ದಾರೆ.

ಸಾಧಕರ ಸೀಟ್ ಮೇಲೆ ಅರ್ಹ ವ್ಯಕ್ತಿಗಳನ್ನು ಕೂರಿಸುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ 'ವೀಕೆಂಡ್ ವಿತ್ ರಮೇಶ್' ಚರ್ಚೆಗೆ ಗ್ರಾಸವಾಗಿತ್ತು. ಈಗ 'ವೀಕೆಂಡ್ ವಿತ್ ರಮೇಶ್' ಮೂರನೇ ಆವೃತ್ತಿಗೆ 'ಶುಭಂ' ಹಾಡುವ ಕಾಲ ಹತ್ತಿರ ಬಂದಿದೆ. ಮುಂದೆ ಓದಿರಿ...

ಈ ತಿಂಗಳೇ ಕೊನೆ

ಜೂನ್ ತಿಂಗಳು ಮುಗಿಯುವ ಹೊತ್ತಿಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಕೂಡ ಮುಕ್ತಾಯವಾಗಲಿದೆ.['ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮ ಈ ವಾರವೇ ಕೊನೆಯಂತೆ.! ಹೌದಾ.?]

ಇನ್ನು ಮೂರೇ ವಾರ

ಇನ್ನು ಮೂರು ವಾರಗಳಲ್ಲಿ 'ವೀಕೆಂಡ್ ವಿತ್ ರಮೇಶ್' ಮೂರನೇ ಆವೃತ್ತಿಗೆ ಫುಲ್ ಸ್ಟಾಪ್ ಬೀಳಲಿದೆ.[ಯಾರು ಎಷ್ಟೇ ಛೀಮಾರಿ ಹಾಕಿದ್ರೂ, ಟಿ.ಆರ್.ಪಿ ಬಂದಿದ್ದು ರಕ್ಷಿತ್ ಶೆಟ್ಟಿ ಸಂಚಿಕೆಗೆ.!]

ಈ ವಾರಾಂತ್ಯ ಪೂರ್ತಿ ಎಚ್.ಡಿ.ದೇವೇಗೌಡ

ಬರುವ ಶನಿವಾರ-ಭಾನುವಾರ ಅಂದ್ರೆ ಜೂನ್ 10 ಹಾಗೂ 11ನೇ ತಾರೀಖು ರಾತ್ರಿ 9 ಗಂಟೆಗೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಎಚ್.ಡಿ.ದೇವೇಗೌಡ ಭಾಗವಹಿಸಿರುವ ಸಂಚಿಕೆ ಪ್ರಸಾರ ಆಗಲಿದೆ.[ಈ 'ವೀಕೆಂಡ್'ನಲ್ಲಿ ಸಾಧಕರ ಸೀಟ್ ಮೇಲೆ ಎಚ್.ಡಿ.ದೇವೇಗೌಡ: ಮಿಸ್ ಮಾಡ್ಬೇಡಿ]

ಮುಂದಿನ ಎರಡು ವಾರ ಪ್ರಸಾರ

ಎಚ್.ಡಿ.ದೇವೇಗೌಡ ಎಪಿಸೋಡ್ ಮುಗಿದ ಬಳಿಕ ಮುಂದಿನ ಎರಡು ವಾರಗಳು ಮಾತ್ರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಪ್ರಸಾರ ಆಗಲಿದೆ.

ಮುಂದಿನ ಅತಿಥಿ ಯಾರು.?

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗವಹಿಸಲು 'ಕನಸಿನ ರಾಣಿ', 'ಲೇಡಿ ರ್ಯಾಂಬೋ' ಮಾಲಾಶ್ರೀ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ.

ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಬರ್ತಾರೆ.!

ಅನೇಕರ ಇಚ್ಛೆಯಂತೆ ಗೋಲ್ಡನ್ ಸ್ಟಾರ್ ಗಣೇಶ್ ಕೂಡ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಹಿರೇಮಗಳೂರು ಕಣ್ಣನ್

ಮೂಲಗಳ ಪ್ರಕಾರ, ಹಿರೇಮಗಳೂರು ಕಣ್ಣನ್ ಕೂಡ ಸಾಧಕರ ಸೀಟ್ ಮೇಲೆ ಆಸೀನರಾಗಲಿದ್ದಾರೆ.

ಶ್ರುತಿ ಜೊತೆ ಮಾತುಕತೆ ನಡೆಯುತ್ತಿದೆ

ಸಾಧಕರ ಸೀಟ್ ಮೇಲೆ ಕೂತು ತಮ್ಮ ಜೀವನ ಚರಿತ್ರೆಯನ್ನು ಅನಾವರಣ ಮಾಡಲು ನಟಿ ಶ್ರುತಿ ಇನ್ನೂ ಅನುಮತಿ ಕೊಟ್ಟಿಲ್ಲ. ಅವರು 'ಓಕೆ' ಎಂದ ಕೂಡಲೆ ಶೂಟಿಂಗ್ ಪ್ರಾರಂಭವಾಗಲಿದೆ.

ಹದಿನಾರು ಸಾಧಕರು, ಇಪ್ಪತ್ತು ಸಂಚಿಕೆ

ಇಲ್ಲಿಯವರೆಗೂ ಹದಿನಾರು ಸಾಧಕರು 'ವೀಕೆಂಡ್ ವಿತ್ ರಮೇಶ್' ಸೀಸನ್ 3 ನಲ್ಲಿ ಪಾಲ್ಗೊಂಡಿದ್ದಾರೆ. ಇದುವರೆಗೂ ಒಟ್ಟು ಇಪ್ಪತ್ತು ಸಂಚಿಕೆಗಳು ಪ್ರಸಾರ ಆಗಿವೆ.

English summary
Zee Kannada Channel's Popular show 'Weekend With Ramesh' season 3 to end by the end of this month (June)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada