»   » ಸ್ವಿಮ್ ಸೂಟ್ ಹಾಕ್ತೀಯಾ ಅಂದಿದ್ದಕ್ಕೆ, ಕಾಲು ತೋರಿಸಿಬಿಟ್ರು ನಟಿ ಲಕ್ಷ್ಮಿ!

ಸ್ವಿಮ್ ಸೂಟ್ ಹಾಕ್ತೀಯಾ ಅಂದಿದ್ದಕ್ಕೆ, ಕಾಲು ತೋರಿಸಿಬಿಟ್ರು ನಟಿ ಲಕ್ಷ್ಮಿ!

Posted By:
Subscribe to Filmibeat Kannada

1975 ನೇ ಇಸವಿಯಲ್ಲೇ 'ಜ್ಯೂಲಿ' ಅಂತಹ ಗ್ಲಾಮರಸ್ ಸಿನಿಮಾದಲ್ಲಿ ಅಲ್ಟ್ರಾ ಮಾಡರ್ನ್ ಕುವರಿಯಾಗಿ ಕಾಣಿಸಿಕೊಂಡು ಪಡ್ಡೆ ಹುಡುಗರ ಹೃದಯಕ್ಕೆ ಕಿಚ್ಚು ಹತ್ತಿಸಿದ ನಟಿ ಲಕ್ಷ್ಮಿ. ಇದೇ ಕಾರಣಕ್ಕೆ ಈಗಲೂ ನಟಿ ಲಕ್ಷ್ಮಿ, 'ಜ್ಯೂಲಿ' ಲಕ್ಷ್ಮಿ ಅಂತಲೇ ಹೆಸರುವಾಸಿ.

16ನೇ ವಯಸ್ಸಿನಲ್ಲೇ ಬಣ್ಣ ಹಚ್ಚಲು ಪ್ರಾರಂಭಿಸಿದ ನಟಿ ಲಕ್ಷ್ಮಿ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದು 1968 ರಲ್ಲಿ ತೆರೆಕಂಡ ವರನಟ ಡಾ.ರಾಜ್ ಕುಮಾರ್ ಮುಖ್ಯ ಭೂಮಿಕೆಯಲ್ಲಿದ್ದ 'ಗೋವಾದಲ್ಲಿ ಸಿ.ಐ.ಡಿ. 999' ಚಿತ್ರದ ಮೂಲಕ.

ಆಗಿನ್ನೂ ಸ್ಕೂಲ್ ನಲ್ಲಿ ಓದುತ್ತಿದ್ದ ನಟಿ ಲಕ್ಷ್ಮಿ 'ಗೋವಾದಲ್ಲಿ ಸಿ.ಐ.ಡಿ. 999' ಚಿತ್ರದಲ್ಲಿ ಸ್ವಿಮ್ ಸೂಟ್ ಧರಿಸಬೇಕು ಅಂತ ನಿರ್ದೇಶಕ ದೊರೈ-ಭಗವಾನ್ ಕೇಳಿದಾಗ, ಲಕ್ಷ್ಮಿ 'ನನ್ನ ಕಾಲು ಚೆನ್ನಾಗಿದ್ದೀಯಾ ನೋಡಿ' ಅಂತ ಕಾಲು ತೋರಿಸಿಬಿಟ್ಟರಂತೆ.!! [ನಟಿ ಲಕ್ಷ್ಮಿ ಕೊಟ್ಟ 'ತೊಂದರೆ' ಬಗ್ಗೆ ರಾಜೇಂದ್ರ ಸಿಂಗ್ ಬಾಬು ಹೇಳಿದ ಸತ್ಯ]

'ಗೋವಾದಲ್ಲಿ ಸಿ.ಐ.ಡಿ. 999' ಚಿತ್ರಕ್ಕೆ ನಟಿ ಲಕ್ಷ್ಮಿ ಆಯ್ಕೆ ಆದ ಬಗೆಯನ್ನ ನಿರ್ದೇಶಕ ಎಸ್.ಕೆ.ಭಗವಾನ್, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ವಿವರಿಸಿದರು. ಅದನ್ನೆಲ್ಲಾ ಅವರ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ....

'ಗೋವಾದಲ್ಲಿ ಸಿ.ಐ.ಡಿ. 999' ಅವಕಾಶ ಸಿಕ್ಕಿದ್ದು....

''ತಮಿಳು ಸಿನಿಮಾ 'ಜೀವನಾಂಶಂ' ಮಾಡುತ್ತಿರುವಾಗ ದೊರೈ-ಭಗವಾನ್ ಬಂದು ನನ್ನನ್ನ ನೋಡಿ 'ಗೋವಾದಲ್ಲಿ ಸಿ.ಐ.ಡಿ 999' ಸಿನಿಮಾಗೆ ಆಫರ್ ಮಾಡಿದ್ರು'' - ಲಕ್ಷ್ಮಿ

ಡಾ.ರಾಜ್ ಕುಮಾರ್ ರನ್ನ ನೋಡಿದಾಗ...

''ಗೋವಾಗೆ ಹೋದ್ಮೇಲೆ ಮೊದಲನೇ ದಿನ ನಾನು ರಾಜ್ ಕುಮಾರ್ ರವರನ್ನ ನೋಡಿದ್ದು. ಅವರನ್ನ ನೋಡಿ ಎಷ್ಟು ಖುಷಿ ಆಯ್ತು ಅಂದ್ರೆ, ಅಲ್ಲಿವರೆಗೂ ಅವರ ಬಗ್ಗೆ ತುಂಬಾ ಕೇಳಿದ್ದೆ. ಅವರ humbleness ನೋಡಿ ತುಂಬಾ ಇಷ್ಟ ಆಯ್ತು'' - ಲಕ್ಷ್ಮಿ

ಲಕ್ಷ್ಮಿ ಬಗ್ಗೆ ಭಗವಾನ್ ಕಾಮೆಂಟ್

''ಇಷ್ಟು ವರ್ಷ ಆದರೂ, ಅವರ ಚಾರ್ಮ್ ಇನ್ನೂ ಹೋಗಿಲ್ಲ. 50 ವರ್ಷ ಆಯ್ತು, ಅವತ್ತು ಹೇಗೆ ನೋಡಿದ್ನೋ, ಇವತ್ತಿಗೂ ಹಾಗೇ ನೋಡ್ತಾ ಇದ್ದೀನಿ'' - ಎಸ್.ಕೆ.ಭಗವಾನ್, ನಿರ್ದೇಶಕ

ಸ್ವಿಮ್ ಸೂಟ್ ಹಾಕೋಕೆ ಕೇಳಿದ್ರೆ ಕಾಲು ತೋರಿಸಿದ್ರು!

''ಲಕ್ಷ್ಮಿ ಅವರನ್ನ ಸೆಲೆಕ್ಟ್ ಮಾಡೋಕೆ ಅವರ ಮನೆಗೆ ಹೋಗಿದ್ದಾಗ, ಇದು ಬಾಂಡ್ ಸಿನಿಮಾ. ಗ್ಲಾಮರ್ ಇದೆ. ಸ್ವಿಮ್ ಸೂಟ್ ಹಾಕ್ಬೇಕು ಅಂದ್ವಿ. ಅದಕ್ಕೆ ನನ್ನ ಕಾಲು ಚೆನ್ನಾಗಿದ್ದೀಯಾ ನೋಡಿ ಅಂತ ಕಾಲು ತೋರಿಸಿದರು. ಆಗ್ಲೇ ನಮಗೆ ಗೊತ್ತಾಗಿದ್ದು, ಹುಡುಗಿ ತುಂಬಾ ಬೋಲ್ಡ್ ಅಂತ'' - ಎಸ್.ಕೆ.ಭಗವಾನ್, ನಿರ್ದೇಶಕ

ನಟಿ ಲಕ್ಷ್ಮಿ ಏನಂದ್ರು?

''ಆಗಷ್ಟೆ ನಾನು ಸ್ಕೂಲ್ ನಿಂದ ಬಂದಿದ್ದೆ. ಯೂನಿಫಾರ್ಮ್ ಹಾಕೊಂಡಿದ್ದೆ. ಸ್ಕರ್ಟ್ ಶಾಟ್ ಆಗಿತ್ತು ಅಷ್ಟೆ'' - ಎಸ್.ಕೆ.ಭಗವಾನ್, ನಿರ್ದೇಶಕ

ಸ್ವಿಮ್ಮಿಂಗ್ ಬರುತ್ತೆ ಅಂದಿದ್ರು!

''ಸ್ವಿಮ್ಮಿಂಗ್ ಬರಲ್ಲ ಅವರಿಗೆ ಆದರೂ ಅವಕಾಶಕ್ಕಾಗಿ ಬರುತ್ತೆ ಅಂದಿದ್ದರು. ಅದು ನಮಗೆ ಗೊತ್ತಿಲ್ಲ. ಡೈವ್ ಮಾಡು ಅಂದ್ವಿ, ಕೆಳಗೆ ಹೋದರೆ, ಮತ್ತೆ ಮೇಲೆ ಬರಲೇ ಇಲ್ಲ. ಜೂಡೋ ರತ್ಮಂ ಅಂತ ಸ್ಟಂಟ್ ಮಾಸ್ಟರ್, ಅವರು ಬಂದು ಲಕ್ಷ್ಮಿ ಅವರನ್ನ ಕಾಪಾಡಿದರು'' - ಎಸ್.ಕೆ.ಭಗವಾನ್, ನಿರ್ದೇಶಕ

ಚಂದನದ ಗೊಂಬೆ ಲಕ್ಷ್ಮಿ

''ಚಂದನದ ಗೊಂಬೆ' ಚಿತ್ರಕ್ಕೆ ಕಲ್ಪನಾ ರವರನ್ನ ಹಾಕೊಳ್ಳೋಣ ಅಂತ ಯೋಚಿಸುತ್ತಿದ್ದಾಗ, ಲಕ್ಷ್ಮಿ ನೆನಪಾದರು. ಲಕ್ಷ್ಮಿ ಅವರಿಗೆ ಸ್ಟೋರಿ ಹೇಳಿದ ತಕ್ಷಣ ಕಣ್ಣಲ್ಲಿ ನೀರು ಬಂತು. ಆಮೇಲೆ ಅವರು ಎಲ್ಲರ ಕಣ್ಣಲ್ಲೂ ನೀರು ತರಿಸಿದರು'' - ಎಸ್.ಕೆ.ಭಗವಾನ್, ನಿರ್ದೇಶಕ

ಆಕ್ಟಿಂಗ್ ನಲ್ಲಿ ಲಕ್ಷ್ಮಿ ಮೀರಿಸುವವರು ಯಾರೂ ಇಲ್ಲ!

''ಹೆಣ್ಮಕ್ಕಳಲ್ಲಿ ರಾಜ್ ಕುಮಾರ್ ಯಾರು ಅಂದ್ರೆ 'ಲಕ್ಷ್ಮಿ' ಅಂತ ನಾನು ಹೇಳ್ತೀನಿ. ಆಕ್ಟಿಂಗ್ ನಲ್ಲಿ ಅವರನ್ನ ಮೀರಿಸುವವರು ಯಾರು ಇಲ್ಲ'' - ಎಸ್.ಕೆ.ಭಗವಾನ್, ನಿರ್ದೇಶಕ

English summary
Director S.K.Bhagavan spoke about Actress Lakshmi in Zee Kannada Channel's popular show Weekend With Ramesh season 2.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada