twitter
    For Quick Alerts
    ALLOW NOTIFICATIONS  
    For Daily Alerts

    'ಗಂಡಸ್ತನ ಇದ್ರೆ ಗಿಟಾರ್ ನುಡಿಸು' - ರಘು ದೀಕ್ಷಿತ್ ಬದುಕು ಬದಲಿಸಿದ ಚಾಲೆಂಜ್

    By Harshitha
    |

    ''ನಿನ್ನ ಪೂಜೆಗೆ ಬಂದೆ ಮಹದೇಶ್ವರ...'' ಹಾಡಿನ ಮೂಲಕ ಕರ್ನಾಟಕದ ಮೂಲೆ ಮೂಲೆಯಲ್ಲೂ ಮನೆ ಮಾತಾದ ಗಾಯಕ ಕಮ್ ಸಂಗೀತ ನಿರ್ದೇಶಕ ರಘು ದೀಕ್ಷಿತ್.

    Contemporary Folk Form ಮೂಲಕ ಇಂದು 'ಕರ್ನಾಟಕದ ಇಂಟರ್ ನ್ಯಾಷನಲ್ ರಾಕ್ ಸ್ಟಾರ್' ಅಂತಲೇ ವಿಶ್ವದಾದ್ಯಂತ ಖ್ಯಾತಿ ಗಳಿಸಿರುವ ಗಾಯಕ ರಘು ದೀಕ್ಷಿತ್ ಒಂದ್ಕಾಲದಲ್ಲಿ ಭರತನಾಟ್ಯ ಕಲಾವಿದ ಅನ್ನೋದು ನಿಮಗೆ ಗೊತ್ತಾ?

    ಭರತನಾಟ್ಯದಲ್ಲಿ ವಿದ್ವತ್ ಪಡೆದಿದ್ದ ರಘು ದೀಕ್ಷಿತ್, ಕೈಲಿ ಗಿಟಾರ್ ಹಿಡಿದು ಹಾಡೋಕೆ ಶುರು ಮಾಡಿದ್ದೇ ಒಂದು 'ಚಾಲೆಂಜಿಂಗ್ ಕಥೆ'!

    ''ಗಂಡಸ್ತನ ಇದ್ರೆ ಗಿಟಾರ್ ನುಡಿಸು'' ಅಂತ ಫ್ರೆಂಡ್ ರೇಗಿಸ್ದ ಅನ್ನೋ ಕಾರಣಕ್ಕೆ ಎರಡು ತಿಂಗಳಲ್ಲಿ ಗಿಟಾರ್ ಕಲಿಯುವ ಚಾಲೆಂಜ್ ಸ್ವೀಕರಿಸಿದ ರಘು ದೀಕ್ಷಿತ್ ಇದುವರೆಗೂ ಗಿಟಾರ್ ನ ಕೆಳಗೆ ಇಟ್ಟಿಲ್ಲ. [ರಘು ದೀಕ್ಷಿತ್ ಬಗ್ಗೆ ಶಾರುಖ್, ಪ್ರಿಯಾಂಕ ಛೋಪ್ರಾ ಹೇಳಿದ್ದೇನು ಗೊತ್ತೇ?]

    ಅಂತಹ ರೋಚಕ ಕಥೆಯನ್ನ ಡ್ಯಾನ್ಸರ್ ಕಮ್ ಸಿಂಗರ್ ರಘು ದೀಕ್ಷಿತ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಹಿರಂಗ ಪಡಿಸಿದರು. ಅದೆಲ್ಲವನ್ನೂ ರಘು ದೀಕ್ಷಿತ್ ಮಾತುಗಳಲ್ಲೇ ಓದಿ....ಕೆಳಗಿರುವ ಸ್ಲೈಡ್ ಗಳಲ್ಲಿ......

    ಭರತನಾಟ್ಯ ಕಲಿಯಲು ಯಾರು ಕಾರಣ?

    ಭರತನಾಟ್ಯ ಕಲಿಯಲು ಯಾರು ಕಾರಣ?

    ''ನಾನು ಭರತನಾಟ್ಯ ಕಲಿಯುವುದಕ್ಕೆ ಅಪ್ಪ-ಅಮ್ಮ ಕಾರಣ. ತುಂಬಾ ಗಲಾಟೆ ಮಾಡಿದ್ದೆ, ಆಗಲ್ಲ ನನ್ನ ಕೈಯಲ್ಲಿ ಇದು, ಮಾಡಲ್ಲ ಅಂತ. ಆದರೂ, ಅಪ್ಪನ ಹೆದರಿಕೆಗೆ ಕಲಿಯುವುದಕ್ಕೆ ಶುರು ಮಾಡಿದೆ'' - ರಘು ದೀಕ್ಷಿತ್

    ಭರತನಾಟ್ಯ ಕ್ಲಾಸ್ ಗೆ ಹೋಗ್ತಿರ್ಲಿಲ್ಲ!

    ಭರತನಾಟ್ಯ ಕ್ಲಾಸ್ ಗೆ ಹೋಗ್ತಿರ್ಲಿಲ್ಲ!

    ''ಅವನಿಗೆ ಕ್ರಿಕೆಟ್ ಹುಚ್ಚು. ಫ್ರೆಂಡ್ಸ್ ಜೊತೆ ಕ್ರಿಕೆಟ್ ಆಡಲು ಆಸೆ. ಆದ್ರೆ ಡ್ಯಾನ್ಸ್ ಕ್ಲಾಸ್ ಗೆ ಹೋಗಬೇಕು. ಎಷ್ಟೋ ಬಾರಿ ಡ್ಯಾನ್ಸ್ ಕ್ಲಾಸ್ ಗೆ ಅವನು ಹೋಗುತ್ತಲೇ ಇರಲಿಲ್ಲ'' - ಮಾಲಿನಿ, ರಘು ದೀಕ್ಷಿತ್ ತಾಯಿ

    ರಘು ದೀಕ್ಷಿತ್ ಜೀವನದ ಟರ್ನಿಂಗ್ ಪಾಯಿಂಟ್

    ರಘು ದೀಕ್ಷಿತ್ ಜೀವನದ ಟರ್ನಿಂಗ್ ಪಾಯಿಂಟ್

    ''ಯುವರಾಜ ಕಾಲೇಜಿನಲ್ಲಿ ಓದಿದ್ದು. ಜೆಫ್ರಿ ಅಂತ ಒಬ್ಬ ಇದ್ದ ಕಾಲೇಜ್ ನಲ್ಲಿ. ನಮ್ಮ ಜೊತೆಯಲ್ಲಿ ಓದುತ್ತಿದ್ದ ಗೆಳೆಯ. ಅವನಿಗೂ ನನ್ನ ಸಂಗೀತಕ್ಕೂ ದೊಡ್ಡ ಕನೆಕ್ಷನ್ ಇದೆ'' - ರಘು ದೀಕ್ಷಿತ್

    ಭರತನಾಟ್ಯ ನೃತ್ಯ ನೋಡಿ ಜನ ನಕ್ಕಿದ್ರು!

    ಭರತನಾಟ್ಯ ನೃತ್ಯ ನೋಡಿ ಜನ ನಕ್ಕಿದ್ರು!

    ''ಕಾಲೇಜ್ ನಲ್ಲಿ ಒಮ್ಮೆ ನಾನು ಭರತನಾಟ್ಯ ಪರ್ಫಾಮೆನ್ಸ್ ಕೊಟ್ಟೆ. ಆಗ ಅಲ್ಲಿ ಅರ್ಧ ಜನ ನಕ್ಕರೆ, ಇನ್ನರ್ಧ ಜನ ಚಪ್ಪಾಳೆ ತಟ್ಟಿದ್ರು'' - ರಘು ದೀಕ್ಷಿತ್

    ಅರ್ಧ-ಅರ್ಧ!!!!

    ಅರ್ಧ-ಅರ್ಧ!!!!

    ''ಪರ್ಫಾಮೆನ್ಸ್ ಮುಗಿದ ಮೇಲೆ ಮೇಕಪ್ ತೆಗೆಯಲು ಹೋದೆ. ಆಗ ಜೆಫ್ರಿ ಬಂದ. ನನ್ನ ನೋಡಿ ನಗಲು ಶುರು ಮಾಡಿದ. ಯಾಕೆ ಅಂತ ಕೇಳಿದ್ದಕ್ಕೆ, 'ಲೋ, ಒಳ್ಳೆ ಅರ್ಧ ಅರ್ಧ' ಅಂತ ಹೇಳಿದ. 'ಏನು ಅರ್ಧ ಅರ್ಧ ಅಂದ್ರೆ' ಅಂತ ಕೇಳಿದಕ್ಕೆ 'ಒಳ್ಳೆ ಹುಡುಗಿ ತರಹ ಇದ್ದೀಯಾ. ಮೇಕಪ್, ಕಣ್ಣಿಗೆ ಕಾಜಲ್ ಹಾಕೊಂಡು. ಗಂಡಸು ತರಹ ಅಂದ್ರೆ ನನ್ನ ಹಾಗೆ ಗಿಟಾರ್ ಹಿಡ್ಕೊಂಡು ನುಡಿಸು ಮಗಾ' ಅಂತ ರೇಗಿಸ್ದ'' - ರಘು ದೀಕ್ಷಿತ್

    ರಘು ದೀಕ್ಷಿತ್ ಗೆ ಅವಮಾನ

    ರಘು ದೀಕ್ಷಿತ್ ಗೆ ಅವಮಾನ

    ''ನನಗೆ ಬಹಳ ಕೋಪ ಬಂದುಬಿಡ್ತು. ಇವತ್ತಿಗೆ ನಾನು ಗಿಟಾರ್ ಹಿಡ್ಕೊಂಡು ನುಡಿಸಿ, ಹಾಡು ಹಾಡುತ್ತಿರಬಹುದು. ಆದ್ರೆ ಅವತ್ತಿಗೆ ನಾನು Passionate ಡ್ಯಾನ್ಸರ್. ಕ್ಲಾಸಿಕಲ್ ಡ್ಯಾನ್ಸರ್'' - ರಘು ದೀಕ್ಷಿತ್

    ಶಿವ ಕೂಡ ಅರ್ಧನಾರೇಶ್ವರ!

    ಶಿವ ಕೂಡ ಅರ್ಧನಾರೇಶ್ವರ!

    ''ಅವನಿಗೆ ನಾನು ಬೈದಿದ್ದೆ. ''ನಿನಗೆ ಏನು ಗೊತ್ತು. ಶಿವ ಕೂಡ ಅರ್ಧ ನಾರೇಶ್ವರ ಅಂತ ಹೇಳ್ತೀವಿ'' ಅಂತೆಲ್ಲಾ ತುಂಬಾ ಟೆಕ್ನಿಕಲ್ ಆಗಿ ಎಕ್ಸ್ ಪ್ಲನೇಷನ್ ಕೊಡಲು ಹೋದೆ'' - ರಘು ದೀಕ್ಷಿತ್

    ಗಂಡಸ್ತನ ಇದ್ರೆ ಗಿಟಾರ್ ನುಡಿಸು!

    ಗಂಡಸ್ತನ ಇದ್ರೆ ಗಿಟಾರ್ ನುಡಿಸು!

    ''ಗಿಟಾರ್ ಹಿಡ್ಕೊಂಡ್ರೆ ನೋಡಮ್ಮ, ಹುಡುಗಿಯರು ಬೀಳ್ತಾರೆ. ಅದೇ ಗಂಡಸ್ತನ. ನೀನು ಗಂಡಸು ಆಗಿದ್ರೆ ನುಡಿಸಿ ತೋರಿಸು' ಅಂತ ಅವನು ಹೇಳ್ದ'' - ರಘು ದೀಕ್ಷಿತ್

    ಪ್ರತಿ ಚಾಲೆಂಜ್ ಹಾಕಿದ ರಘು ದೀಕ್ಷಿತ್

    ಪ್ರತಿ ಚಾಲೆಂಜ್ ಹಾಕಿದ ರಘು ದೀಕ್ಷಿತ್

    ''ಅದಕ್ಕೆ ನಾನು ಹೇಳಿದೆ, 'ಎರಡು ತಿಂಗಳು ಟೈಮ್ ಕೊಡು, ನಿನ್ನ ಜುಜುಬಿ Instrument ನ ನುಡಿಸಿ ತೋರಿಸ್ತೀನಿ. ಅದೇ ಎರಡು ತಿಂಗಳಲ್ಲಿ ನೀನು ನಾಲ್ಕು ಸ್ಟೆಪ್ ಹಾಕಿ ತೋರಿಸು' ಅಂತ'' - ರಘು ದೀಕ್ಷಿತ್

    ಜೋಷ್ ನಲ್ಲಿ ಚಾಲೆಂಜ್!

    ಜೋಷ್ ನಲ್ಲಿ ಚಾಲೆಂಜ್!

    ''ಆಗ ಜೋಷ್ ನಲ್ಲಿ ಚಾಲೆಂಜ್ ತಗೊಂಡೆ. ಅವತ್ತು ರಾತ್ರಿ ನಿದ್ದೆ ಬರಲೇ ಇಲ್ಲ. ಗಿಟಾರ್ ಕಲಿಯಲೇಬೇಕು ಅಂತ ನಿರ್ಧಾರ ಮಾಡಿದೆ'' - ರಘು ದೀಕ್ಷಿತ್

    ಗಿಟಾರ್ ಕಲಿಯಲು ಕಂಡೀಷನ್ಸ್!

    ಗಿಟಾರ್ ಕಲಿಯಲು ಕಂಡೀಷನ್ಸ್!

    ''ಗಿಟಾರ್ ಕಲಿಯುವುದಕ್ಕೆ ನನ್ನ ಹತ್ತಿರ ಕಂಡೀಷನ್ಸ್ ಇತ್ತು. ಕಲಿಸುವವರು ದುಡ್ಡು ಕೇಳಬಾರದು, ಅವರ ಮನೆಯಲ್ಲಿ ಕಲಿಸಬೇಕು, ಅವರದ್ದೇ ಗಿಟಾರ್ ನಲ್ಲಿ ಕಲಿಸಬೇಕು ಮತ್ತು ನಮ್ಮ ಅಪ್ಪ-ಅಮ್ಮನಿಗೆ ಹೇಳಬಾರದು. ಇಷ್ಟೆಲ್ಲಾ ಕಂಡೀಷನ್ ಗೆ ಒಪ್ಪಿಕೊಂಡು ಯಾರು ಹೇಳಿಕೊಡ್ತಾರೆ ಅಂತ ಎಲ್ಲಾ ಕ್ರಿಶ್ಚಿಯನ್ ಫ್ರೆಂಡ್ಸ್ ಮನೆಗೂ ಹೋಗಿ ಕೇಳಿದೆ. ಎಲ್ಲರೂ 'ಆಗಲ್ಲ' ಅಂದ್ರು'' - ರಘು ದೀಕ್ಷಿತ್

    ಜೆಫ್ರಿ ಮುಖ ನೋಡಿದ್ರೆ ಮೈಯೆಲ್ಲಾ ಉರಿಯೋದು!

    ಜೆಫ್ರಿ ಮುಖ ನೋಡಿದ್ರೆ ಮೈಯೆಲ್ಲಾ ಉರಿಯೋದು!

    ''ಒಂದು ವಾರ ಆಗೋಯ್ತು. ಇನ್ನೂ ಗಿಟಾರ್ ಕಲಿಸೋರು ಸಿಗ್ಲಿಲ್ಲ. ಕ್ಲಾಸ್ ನಲ್ಲಿ ಜೆಫ್ರಿ ಮುಖ ನೋಡಿದ್ರೆ, ಮೈ ಎಲ್ಲಾ ಉರಿಯೋದು. ಅವನ ಜೊತೆ ಮಾತು ನಿಲ್ಲಿಸಿದ್ದೆ'' - ರಘು ದೀಕ್ಷಿತ್

    ರಘು ದೀಕ್ಷಿತ್ ಜೀವನ ಬದಲಾಗಿದ್ದು...

    ರಘು ದೀಕ್ಷಿತ್ ಜೀವನ ಬದಲಾಗಿದ್ದು...

    ''ಪಿಯುಸಿನಲ್ಲಿ ನನ್ನ ಕ್ಲಾಸ್ ಮೇಟ್ ಇದ್ದ ಲಿಯೋ ಅಂತ. ಅವನಿಗೆ ಕೇಳಿದಾಗ ಅವನು ಬ್ರದರ್ ಪೀಟರ್ ಮತ್ತು ಬ್ರದರ್ ಐವನ್ ಅಂತ ಪರಿಚಯ ಮಾಡಿಕೊಟ್ಟ. ಇವರಿಬ್ಬರನ್ನ ನಾನು ಲೈಫ್ ನಲ್ಲಿ ಮರೆಯೋಕೆ ಸಾಧ್ಯವೇ ಇಲ್ಲ'' - ರಘು ದೀಕ್ಷಿತ್

    ಕ್ಲಾಸ್ ಬಂಕ್ ಮಾಡಿ ಗಿಟಾರ್ ಪಾಠ

    ಕ್ಲಾಸ್ ಬಂಕ್ ಮಾಡಿ ಗಿಟಾರ್ ಪಾಠ

    ''ಚಾಲೆಂಜ್ ಗಾಗಿ ಕಲಿಯಬೇಕು ಅಂತಲೇ ಹೇಳಿ ಕಲಿತೆ. ಪ್ರತಿದಿನ ಕಾಲೇಜ್ ಗೆ ಹೋಗ್ತೀನಿ ಅಂತ ಅಮ್ಮನ ಬಳಿ ಸುಳ್ಳು ಹೇಳಿ, ಕ್ಲಾಸ್ ಬಂಕ್ ಮಾಡಿ ಮೂರು ವಾರ ಗಿಟಾರ್ ಕಲಿತೆ. ನಾಲ್ಕೈದು ಹಾಡು ನುಡಿಸಲು ಕಲಿತೆ'' - ರಘು ದೀಕ್ಷಿತ್

    ಇವತ್ತಿಗೂ ಹಾಡುತ್ತಿರುವುದಕ್ಕೆ ಕಾರಣ....

    ಇವತ್ತಿಗೂ ಹಾಡುತ್ತಿರುವುದಕ್ಕೆ ಕಾರಣ....

    ''500 miles ಅಂತ ಹಾಡು ಕಲಿತೆ. ಬ್ರದರ್ ಐವನ್ ರವರ ಬಳಿಯೇ ಗಿಟಾರ್ ತಗೊಂಡು ಜೆಫ್ರಿ ಮುಂದೆ ಹಾಡು ಹಾಡಿದೆ. ಆಗೊಂಥರಾ ಸೆನ್ಸೇಷನ್ ನನಗೆ. ಮೊದಲ ಬಾರಿ ಗಿಟಾರ್ ಹಿಡ್ಕೊಂಡು ಹಾಡಿದಾಗ ಸಿಕ್ಕ ಖುಷಿ ಇವತ್ತಿಗೂ ಹಾಗೇ ಇದೆ. ಅದಕ್ಕೆ ನಾನು ಇವತ್ತಿಗೂ ಮ್ಯೂಸಿಕ್ ಮಾಡುತ್ತಿದ್ದೇನೆ'' - ರಘು ದೀಕ್ಷಿತ್

    ಕಣ್ಣು ಮುಚ್ಚಿ ಹಾಡುತ್ತಿದ್ದರೆ...

    ಕಣ್ಣು ಮುಚ್ಚಿ ಹಾಡುತ್ತಿದ್ದರೆ...

    ''ಇವತ್ತಿಗೂ ನನಗೆ ಕಣ್ಣು ಬಿಟ್ಟು ಹಾಡಲು ಕಷ್ಟ. Distract ಆಗುತ್ತೆ. ಅದಕ್ಕೆ ಕಣ್ಣು ಮುಚ್ಚಿ ನನ್ನದೇ ಒಂದು ಪ್ರಪಂಚಕ್ಕೆ ಹೋಗಿ ಹಾಡುತ್ತೇನೆ. ಇವತ್ತು ನನಗೆ ಏನೇ ಕಷ್ಟ ಇದ್ದರೂ, ಮ್ಯೂಸಿಕ್ ಒಂದು ಮನೆ ನನಗೆ'' - ರಘು ದೀಕ್ಷಿತ್

    ನಮ್ಮದೆ ಬ್ಯಾಂಡ್ ಶುರು ಆಯ್ತು!

    ನಮ್ಮದೆ ಬ್ಯಾಂಡ್ ಶುರು ಆಯ್ತು!

    ''ಗಿಟಾರ್ ಹಿಡಿದ ಮೇಲೆ ಬ್ಯಾಂಡ್ ಮಾಡಬಹುದು ಅಂತ ಅನಿಸ್ತು. ವಿಶ್ವಜೀತ್ ಅಂತ ಫ್ರೆಂಡ್ ಇದ್ದ. ಅವನು ಬೇಸ್ ಗಿಟಾರ್ ನುಡಿಸುತ್ತಿದ್ದ. ಮಾರ್ಕ್ ಅಂತ ಡ್ರಮರ್ ಎಲ್ಲಾ ಸೇರಿ Eclipse ಅಂತ ಬ್ಯಾಂಡ್ ಮಾಡಿಕೊಂಡ್ವಿ'' - ರಘು ದೀಕ್ಷಿತ್

    ಮೊದಲ ಪರ್ಫಾಮೆನ್ಸ್ - ಅಪ್ಪ ತೀರಿಕೊಂಡರು!

    ಮೊದಲ ಪರ್ಫಾಮೆನ್ಸ್ - ಅಪ್ಪ ತೀರಿಕೊಂಡರು!

    ''ಒಂದು Annual Day ಗೆ ಮೂರು ಸಾವಿರ ರೂಪಾಯಿಗೆ ನಮ್ಮ ಬ್ಯಾಂಡ್ ಮೊದಲು ಪರ್ಫಾಮೆನ್ಸ್ ಕೊಡಬೇಕು ಅಂತ ಪ್ರ್ಯಾಕ್ಟೀಸ್ ಮಾಡ್ತಿದ್ವಿ. ಪ್ರೋಗ್ರಾಮ್ ಇದೇ ಅನ್ನೋವಾಗಲೇ ಅಪ್ಪ ತೀರಿಕೊಂಡರು'' - ರಘು ದೀಕ್ಷಿತ್

    ಅಪ್ಪ ತೀರಿಕೊಂಡಾಗ...

    ಅಪ್ಪ ತೀರಿಕೊಂಡಾಗ...

    ''ನಾನು ಮನೆಗೆ ಹೋಗುವಾಗಲೇ ಹೊರಗೆ ಬೆಂಕಿ ಹಾಕ್ಬಿಟ್ಟಿದ್ದರು. ಅವತ್ತು ನನಗೆ ಅಳು ಬರಲೇ ಇಲ್ಲ. ಇವತ್ತಿಗೂ ಯಾಕೆ ಅಂತ ಗೊತ್ತಿಲ್ಲ. ಅಪ್ಪನಿಗೆ ಬೆಂಕಿ ಇಡುವಾಗ ತುಂಬಾ ಅತ್ತುಬಿಟ್ಟೆ. ಆದರೂ ಐದೇ ನಿಮಿಷ. ಚೇತರಿಸಿಕೊಂಡೆ'' - ರಘು ದೀಕ್ಷಿತ್

    ಕಮಿಟ್ ಮೆಂಟ್ ಶುರುವಾಗಿದ್ದೇ ಅಲ್ಲಿಂದ!

    ಕಮಿಟ್ ಮೆಂಟ್ ಶುರುವಾಗಿದ್ದೇ ಅಲ್ಲಿಂದ!

    ''ಬ್ಯಾಂಡ್ ಪರ್ಫಾಮೆನ್ಸ್ ಪ್ರೋಗ್ರಾಂ ಕ್ಯಾನ್ಸಲ್ ಮಾಡಬೇಕು ಅಂತ ಮಾತನಾಡಿಕೊಳ್ಳುವಾಗಲೇ, ಅಮ್ಮ ಕೇಳಿಸಿಕೊಂಡು 'ಮಾಡಿ ಹೋಗು' ಅಂದರು. ಅದು ಮೊದಲ ಪರ್ಫಾಮೆನ್ಸ್ ಬೇರೆ. ಕಮಿಟ್ ಮೆಂಟ್ ಬ್ರೇಕ್ ಮಾಡಬಾರದು ಅಂತ ಹೋಗಿ ಪರ್ಫಾಮ್ ಮಾಡಿದ್ವಿ. ಎರಡನೇ ಹಾಡಿಗೆ ಆಡಿಯನ್ಸ್ ಖುಷಿ ಪಟ್ಟರು. ಅವತ್ತು ಕಲಿತ ಪಾಠ ಕಮಿಟ್ಮೆಂಟ್ ಬ್ರೇಕ್ ಮಾಡಬಾರದು ಅಂತ'' - ರಘು ದೀಕ್ಷಿತ್

    English summary
    Bharatanatyam Dancer turned Music Director, Singer Raghu Dixit's life story was revealed in Zee Kannada Channel's popular show Weekend With Ramesh.
    Monday, March 21, 2016, 12:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X