For Quick Alerts
  ALLOW NOTIFICATIONS  
  For Daily Alerts

  ನೀವು ಕೇಳರಿಯದ ಸತ್ಯ ಸಂಗತಿಗಳ 'ದರ್ಶನ' ವೀಕೆಂಡ್ ನಲ್ಲಾಯ್ತು!

  By Harshitha
  |

  ಇಂದು 'ಬಾಕ್ಸ್ ಆಫೀಸ್ ಸುಲ್ತಾನ್', 'ಚಾಲೆಂಜಿಂಗ್ ಸ್ಟಾರ್' ಅಂತೆಲ್ಲಾ ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಿಸಿಕೊಳ್ಳುವ ದರ್ಶನ್ ಬಾಲ್ಯ ಜೀವನದ ಬಗ್ಗೆ ನಿಮಗೆಷ್ಟು ಗೊತ್ತು?

  ಕನ್ನಡ ಚಿತ್ರರಂಗದ ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ರವರ ಪುತ್ರ ದರ್ಶನ್, ಸ್ಕೂಲ್ ಮತ್ತು ಕಾಲೇಜು ಬಂಕ್ ಮಾಡಿ ಮೈಸೂರು ಝೂ ನಲ್ಲಿ ಹಾಜರಾಗುತ್ತಿದ್ದರು ಅನ್ನೋ ವಿಷಯ ಕೇಳಿರುವವರು ಯಾರು? ['ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದರ್ಶನ್ ಹೇಳಿರುವ ಸತ್ಯಗಳೇನು?]

  ಮೈಸೂರಿನಲ್ಲಿರುವ 'ತೂಗುದೀಪ ಫಾರ್ಮ್'ಗೆ ದರ್ಶನ್ ಒಡೆಯ ಅಂತ ಎಲ್ಲರಿಗೂ ಗೊತ್ತು. ಅದರಲ್ಲಿ ಎಷ್ಟು ಪ್ರಾಣಿಗಳಿವೆ? ಪ್ರಾಣಿ ಪ್ರಿಯ ದರ್ಶನ್ ಓದಿನಲ್ಲಿ ಹೇಗಿದ್ದರು? ಎನ್ನುವ ಸತ್ಯ ಸಂಗತಿಗಳ ಅನಾವರಣವಾಗಿದ್ದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ.

  ಜೀ ಕನ್ನಡದಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ನಟ ದರ್ಶನ್ ಮನದಾಳವನ್ನ ಅವರ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ......

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರಿತು....

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುರಿತು....

  ನಿಜ ನಾಮ - ಹೇಮಂತ್ ಕುಮಾರ್
  ಜನ್ಮ ದಿನಾಂಕ - 16 ಫೆಬ್ರವರಿ 1977
  ಹುಟ್ಟಿದ ಊರು - ರಾಮಕೃಷ್ಣ ಸೇವಾ ಆಶ್ರಮ, ಪೊನ್ನಂಪೇಟೆ
  ತಂದೆ - ತೂಗುದೀಪ ಶ್ರೀನಿವಾಸ್, ತಾಯಿ - ಮೀನಾ ತೂಗುದೀಪ ಶ್ರೀನಿವಾಸ್
  ಸಹೋದರಿ - ದಿವ್ಯ
  ಸಹೋದರ - ದಿನಕರ್ ತೂಗುದೀಪ ಶ್ರೀನಿವಾಸ್
  ಪತ್ನಿ - ವಿಜಯಲಕ್ಷ್ಮಿ
  ಪುತ್ರ - ವಿನೀಶ್
  ಸಾಕು ಪ್ರಾಣಿಗಳು - 118
  'ಸಂಗೊಳ್ಳಿ ರಾಯಣ್ಣ' ಚಿತ್ರಕ್ಕೆ ರಾಜ್ಯ ಪ್ರಶಸ್ತಿ - 'ಅತ್ತ್ಯುತ್ತಮ ನಟ'

  ದರ್ಶನ್ ಆಗಿದ್ದು ಹೇಗೆ?

  ದರ್ಶನ್ ಆಗಿದ್ದು ಹೇಗೆ?

  ''ಹೇಮಂತ್ ಕುಮಾರ್ ಅನ್ನೋದು ಹುಟ್ಟಿದ ಹೆಸರು. ತೊಟ್ಟಿಲು ಹೆಸರು ಇಡ್ತಾರಲ್ಲ ಹಾಗೇ. ಆಮೇಲೆ ಸ್ಕೂಲ್ ನಲ್ಲಿ ಕೊಟ್ಟ ಹೆಸರೆಲ್ಲಾ ದರ್ಶನ್ ಅಂತಲೇ. ಸಿನಿಮಾಗೆ ಅಂತ ಹೆಸರು ಬದಲಿಸಿಕೊಂಡಿಲ್ಲ'' - ದರ್ಶನ್

   ಶಿವರಾತ್ರಿಯಂದು ಜನನ

  ಶಿವರಾತ್ರಿಯಂದು ಜನನ

  ''ದರ್ಶನ್ ಹುಟ್ಟಿದಾಗ ಶಿವರಾತ್ರಿ. ಉಪವಾಸದ ದಿನ. ಮಧ್ಯಾಹ್ನ 1.30ಕ್ಕೆ ಹುಟ್ಟಿದ್ದು. ಗಂಡು ಮಗು ಅಂದ ತಕ್ಷಣ ನನಗೆ ಇದ್ದ ನೋವೆಲ್ಲಾ ಮರೆತು ತುಂಬಾ ಖುಷಿ ಪಟ್ಟೆ ನಾನು. ನಾನು ಅವನಿಗೆ ದರ್ಶನ್ ಅಂತ ಹೆಸರಿಡಬೇಕು ಅಂತ ಹುಟ್ಟೋಕ್ಕಿಂತ ಮುಂಚೆ ಅಂದುಕೊಂಡುಬಿಟ್ಟಿದ್ದೆ'' - ಮೀನಾ ತೂಗುದೀಪ ಶ್ರೀನಿವಾಸ್, ದರ್ಶನ್ ತಾಯಿ

  ನನಗೆ ಏಟು ಜಾಸ್ತಿ

  ನನಗೆ ಏಟು ಜಾಸ್ತಿ

  ''ನಮ್ಮ ತಂದೆಗೆ ನಮ್ಮ ಅಕ್ಕನ ಕಂಡ್ರೆ ತುಂಬಾ ಪ್ರೀತಿ. ನಮ್ಮ ಮನೆಯಲ್ಲಿ ಅಪ್ಪನಿಂದ ಜಾಸ್ತಿ ಏಟು ತಿಂದವನೇ ನಾನು. ಅಕ್ಕ ತಪ್ಪು ಮಾಡಿದ್ರೂ, ನನಗೇ ಏಟು. ದಿನಕರ್ ತಪ್ಪು ಮಾಡಿದ್ರೂ ನನಗೇ ಏಟು. ಹೀಗೆ ಏಟು ತಿಂದು ತಿಂದು ಮೊಂಡ ಆಗ್ಬಿಟ್ಟಿದ್ದೆ'' - ದರ್ಶನ್

  ದುಡ್ಡು ಕದ್ದು ಮಾಡ್ತಿದ್ದದ್ದು ಏನು?

  ದುಡ್ಡು ಕದ್ದು ಮಾಡ್ತಿದ್ದದ್ದು ಏನು?

  ''ನಮ್ಮಮ್ಮ ಒಂದೊಂದು ರೂಪಾಯಿ ಕಾಯಿನ್ ಕೂಡಿ ಇಡ್ತಾಯಿದ್ರು. ಅದನ್ನ ಕದ್ದು ನಾನು ಪಾರಿವಾಳ ಮತ್ತು ಮೀನು ತರ್ತಾಯಿದ್ದೆ'' - ದರ್ಶನ್

  ದರ್ಶನ್ ಒಳ್ಳೆ ಗುಣ

  ದರ್ಶನ್ ಒಳ್ಳೆ ಗುಣ

  ''ತಾನು ಕೂಡಿಟ್ಟಿದ್ದ ಹಣವನ್ನ ತೆಗೆದುಕೊಂಡು ಹೋಗಿ ಹಾಳು ಮಾಡಿದ್ದೆ ಅಂತ ಬೇಜಾರು ಮಾಡಿಕೊಂಡು ಮತ್ತೆರಡು ಡಬ್ಬ ತೆಗೆದುಕೊಟ್ಟ. ಇವತ್ತಿನ ವರೆಗೂ ಅದನ್ನೇ ನಾನು ವರಮಹಾಲಕ್ಷ್ಮಿ ಹಬ್ಬಕ್ಕೆ ಇಟ್ಟು ಪೂಜೆ ಮಾಡುವುದು'' - ಮೀನಾ ತೂಗುದೀಪ ಶ್ರೀನಿವಾಸ್, ದರ್ಶನ್ ತಾಯಿ

  ಹಾಕು...ಹಾಕು ಅಂತಿದ್ದೆ!

  ಹಾಕು...ಹಾಕು ಅಂತಿದ್ದೆ!

  ''ಸಿನಿಮಾದಲ್ಲಿ ಅಪ್ಪನನ್ನ ಹೀರೋ ಹೊಡೆಯುತ್ತಿರುವಾಗ, ಚಿಕ್ಕ ವಯಸ್ಸಲ್ಲಿ ನಾನು ಹೇಳ್ತಿದ್ದೆ 'ಹಾಕು..ಹಾಕು' ಅಂತ. ಯಾಕಂದ್ರೆ ನಾವು ತಿಂದಿರ್ತಿದ್ವಲ್ಲಾ. ಯಾರಾದರೂ ಅವರಿಗೆ ಹೊಡೆಯುತ್ತಿದ್ದರೆ, 'ಹೊಡೀರಿ..ಹೊಡೀರಿ' ಅಂತಿದ್ದೆ'' - ದರ್ಶನ್

  ಎಕ್ಸಾಂ ಅಂದ್ರೆ ಭಯ

  ಎಕ್ಸಾಂ ಅಂದ್ರೆ ಭಯ

  ''ನನಗೆ ಟೆಸ್ಟ್, ಎಕ್ಸಾಂ ಬಂದ್ರೆ ಭಯ. ಯಾಕಂದ್ರೆ ನಾನು ರ್ಯಾಂಕ್ ಸ್ಟೂಡೆಂಟ್ ಅಲ್ಲ. ಎಲ್ಲಾದರಲ್ಲೂ ಝೀರೋ. ನನಗೆ ವಿದ್ಯೆ ನೈವೇದ್ಯ. ನಿಜವಾಗಲೂ ನನಗೆ ಓದೋಕೆ ಬರಲ್ಲ. ಭಾಷೆ ಮಾತನಾಡುತ್ತೇನೆ. ಆದ್ರೆ ಬರೆಯುವಾಗ ತುಂಬಾ ಮಿಸ್ಟೇಕ್ ಮಾಡ್ತೀನಿ. ಇವತ್ತು ಅನ್ಸುತ್ತೆ ಓದ್ಬೇಕಿತ್ತು ಅಂತ'' - ದರ್ಶನ್

  ಝೂನಲ್ಲಿ ಹಾಜರ್

  ಝೂನಲ್ಲಿ ಹಾಜರ್

  ''ಮೈಸೂರು ಝೂ ಯೂತ್ ಕ್ಲಬ್ ಮೆಂಬರ್ ಆಗಿದ್ದೆ. ನಾನು ಆರ್ಟಿಸ್ಟ್ ಆಗಿಲ್ಲ ಅಂದ್ರೆ ಝೂನಲ್ಲಿ ಕೆಲಸ ಮಾಡಿಕೊಂಡು ಇರ್ತಾಯಿದ್ದೆ. ಯಾಕಂದ್ರೆ ನನಗೆ ಓದೋಕೆ ಇಷ್ಟ ಇರ್ಲಿಲ್ಲ. ಹೇಗಾದರೂ ಮಾಡಿ 10ನೇ ಕ್ಲಾಸ್ ಮುಗಿಸಿಬಿಟ್ರೆ, ಕೆಲಸ ಮಾಡಿಕೊಂಡು ಇರೋಣ ಅಂದುಕೊಂಡಿದ್ದೆ'' - ದರ್ಶನ್

  ಕುದುರೆ ಅಂದ್ರೆ ಇಷ್ಟ!

  ಕುದುರೆ ಅಂದ್ರೆ ಇಷ್ಟ!

  ''ಸಣ್ಣ ವಯಸ್ಸಿಂದಲೂ ಕುದುರೆ ಅಂದ್ರೆ ಇಷ್ಟ. ನಾನು ಮೊದಲು ಫಾರ್ಮ್ ತೆಗೆದುಕೊಂಡಾಗ, ಫಸ್ಟ್ ಒಂದು ಹಸು ಮತ್ತು ಕರು ಬಿಟ್ಟು, ಇಲ್ಲಿ ಒಂದು ಮಿನಿ ಝೂ ಮಾಡಬೇಕು ಅಂತ ಅಂದುಕೊಂಡೆ. ಆಮೇಲೆ ಅಲ್ಲಿ ಒಂದೊಂದೇ ಪ್ರಾಣಿ ಬರೋಕೆ ಶುರುವಾಯ್ತು. ಕುದುರೆ ಸವಾರಿ ನಾನು ಎಲ್ಲೂ ಕಲಿತಿಲ್ಲ. ನಾನೇ ತಂದು, ಕಲಿತಿರುವುದು'' - ದರ್ಶನ್

  ಎಷ್ಟು ಪ್ರಾಣಿಗಳಿವೆ?

  ಎಷ್ಟು ಪ್ರಾಣಿಗಳಿವೆ?

  ತೂಗುದೀಪ ಫಾರ್ಮ್ ನಲ್ಲಿ ಒಟ್ಟು 118 ಪ್ರಾಣಿಗಳಿವೆ. ಬಾದಲ್, ರೋಸಿ, ಭೈರವ, ವೀರು, ಜ್ಯೂಲಿ, ಸಿಂಗಾರಿ, ಈಶ್ವರಿ ಹೀಗೆ 18 ಕುದುರೆಗಳು, 13 ಹಸುಗಳು, ರಾಮ ಲಕ್ಷ್ಮಣ 2 ಎತ್ತು, 15 ಇಮೂ, 1 ಆಸ್ಟ್ರಿಚ್, 30 ಬಾತುಕೋಳಿ, 2 ಬ್ಲಾಕ್ ಸ್ವಾನ್, 15 ಕುರಿ, 15 ಪಾರಿವಾಳ, 15 ಟರ್ಕಿ ಕೋಳಿ, ಎರಡು ನಾಯಿ, ಎರಡು ಹಂದಿ ಮತ್ತು 1 ಕೋತಿ.

  ಸ್ಟಾನ್ಲಿ - ಇಷ್ಟದ ಕುದುರೆ

  ಸ್ಟಾನ್ಲಿ - ಇಷ್ಟದ ಕುದುರೆ

  ''ಸ್ಟಾನ್ಲಿ (ಕುದುರೆ) ಸತ್ತಮೇಲೆ ತುಂಬಾ ಬೇಜಾರು ಆಯ್ತು. ಅವನ ನೆನಪಿಗೆ ನಾನು ಟಾಟ್ಯೂ ಹಾಕಿಸಿಕೊಂಡಿದ್ದು. ಅವನು ನನ್ನ ಬಿಟ್ಟು, ಇನ್ಯಾರನ್ನೂ ತನ್ನ ಮೇಲೆ ಕೂರಿಸಿಕೊಳ್ಳುತ್ತಿರಲಿಲ್ಲ. ಕುದುರೆಗಳಿಗೆ ಡೈಲಿ ಟ್ರೇನ್ ಮಾಡ್ಬೇಕು. ಸ್ಟಾನ್ಲಿ ಮಾತ್ರ ನಾನು ಆರು ತಿಂಗಳು ತೋಟಕ್ಕೆ ಹೋಗ್ಲಿಲ್ಲ ಅಂದ್ರೂ ಸುಮ್ನೆ ಕೂತಿರ್ತಿದ್ದ ಹೊರತು ಒಬ್ಬರನ್ನೂ ಬೆನ್ನ ಮೇಲೆ ಕೂರಿಸಿಕೊಳ್ಳುತ್ತಿರಲಿಲ್ಲ. ಯಾರೇ ಹತ್ತಿದರೂ ಹೇಗಾದರೂ ಮಾಡಿ ಬೀಳಿಸಿ ಬರ್ತಿದ್ದ. ನಾನು ಹೋದ ತಕ್ಷಣ ಅವನಿಗೆ ಗೊತಾಗ್ತಿತ್ತು. ಯಾವುದೋ ಟೆನ್ಷನ್ ನಲ್ಲಿ ನಾನು ಹೋದರೂ, ನನ್ನ ಮೂಡ್ ಗೆ ತಕ್ಕಂತೆ ಕೂರಿಸಿಕೊಂಡು ಹೋಗೋನು. ನನ್ನ ಮನಸ್ಸಲ್ಲಿ ಏನೇ ಇದ್ರೂ, ಎಲ್ಲಾ ಹೇಳಿಕೊಳ್ಳುತ್ತಿದ್ದೆ. ಅವನು ಸತ್ತ ದಿನ ನನಗೆ ಒಂಥರಾ ಆಗೋಯ್ತು'' - ದರ್ಶನ್

  ಕಾಲೇಜಿಗೆ ಹೋಗಲಿಲ್ಲ

  ಕಾಲೇಜಿಗೆ ಹೋಗಲಿಲ್ಲ

  ''ನಾನು ಕಾಲೇಜ್ ಗೆ ಹೋಗಲಿಲ್ಲ. ಡಿಪ್ಲೊಮೋಗೆ ಕಳುಹಿಸಿದರು. 12 ಸಬ್ಜೆಕ್ಟ್ ಇತ್ತು. ನನಗೆ ವಿದ್ಯೆ ನೈವೇದ್ಯ. ಅದಕ್ಕೆ ನಾನು ಕಾಲೇಜಿಗೆ ಹೋಗ್ತಾನೇ ಇರ್ಲಿಲ್ಲ. ಅಪ್ಪನಿಗೆ ಹೆಲ್ತ್ ಅಪ್ ಸೆಟ್ ಆಗಿತ್ತು. ಅಮ್ಮನಿಗೆ ನಾನು ಡ್ರೈವರ್ ಆಗ್ಬಿಟ್ಟಿದ್ದೆ. ಆಸ್ಪತ್ರೆಗೆ ಕರ್ಕೊಂಡು ಹೋಗೋದು, ಬರೋದು ಇಷ್ಟೇ ಆಗಿತ್ತು ನನ್ನ ಕೆಲಸ. ಎಕ್ಸಾಂಗೆ ನಾನು ಹೋಗಲೇ ಇಲ್ಲ'' - ದರ್ಶನ್

  'ನೀನಾಸಂ'ಗೆ ಸೇರಿದ್ದು

  'ನೀನಾಸಂ'ಗೆ ಸೇರಿದ್ದು

  ''ಒಂದು ದಿನ ನಾನು ನಿರ್ಧಾರ ಮಾಡಿದ್ದು 'ನೀನಾಸಂ'ಗೆ ನಾನು ಹೋಗ್ತೀನಿ ಅಂತ. ಗಾರ್ಡಿಯನ್ ಆಗಿ ನನ್ನ ತಾಯಿ ಸೈನ್ ಮಾಡಿದ್ರು. ಅಪ್ಪ ಮಾಡಲಿಲ್ಲ'' - ದರ್ಶನ್

  ಮಂಡ್ಯ ರಮೇಶ್ ಮೊದಲು ಬಣ್ಣ ಹಚ್ಚಿದ್ದು

  ಮಂಡ್ಯ ರಮೇಶ್ ಮೊದಲು ಬಣ್ಣ ಹಚ್ಚಿದ್ದು

  ''ಮಂಡ್ಯ ರಮೇಶ್ ಅವರು ನನಗೆ ಮೊದಲು ಬಣ್ಣ ಹಚ್ಚಿದ್ದು. ಇವತ್ತು ನಾನು ಏನು ಬಣ್ಣ ಹಚ್ತಾಯಿದ್ದೀನಿ, ಅದರ ಕ್ರೆಡಿಟ್ ಸಲ್ಲಬೇಕಾಗಿರೋದು ಮಂಡ್ಯ ರಮೇಶ್ ಗೆ'' - ದರ್ಶನ್

  ಮಾಡೆಲಿಂಗ್ ಮಾಡಿದ್ದೆ

  ಮಾಡೆಲಿಂಗ್ ಮಾಡಿದ್ದೆ

  ''ಮೈಸೂರಿನಲ್ಲಿ ಮಾಡೆಲಿಂಗ್ ಮಾಡಿದ್ದೆ. ಮಾಡಲಿಂಗ್ ಬಗ್ಗೆ ಏನೂ ಗೊತ್ತಿರ್ಲಿಲ್ಲ. ಮೈಸೂರಲ್ಲಿ ನಾವಿಬ್ಬರೇ ಮೇಲ್ ಮಾಡೆಲ್ಸ್ ಅಂದ್ರೆ. ಸಾವಿರ ರೂಪಾಯಿ ಕೊಡ್ತಿದ್ರು. ಆಗ ಸಾವಿರ ರೂಪಾಯೇ ದೊಡ್ಡದು. ಆ ದುಡ್ಡಿನಿಂದ ನಾನು ಮೊದಲು ಹಸು ತೆಗೆದುಕೊಂಡಿದ್ದು. 'ಸೂಪರ್ ಮಾಡೆಲ್' ಕಾನ್ಟೆಸ್ಟ್ ಗೆ ಸೂಟ್ ಬೇಕಾಗಿತ್ತು. ನಮ್ಮ ತಾಯಿ ಪಕ್ಕದ ಮನೆಯಿಂದ ಸಾಲ ಮಾಡಿ ಸೂಟ್ ಹೊಲಿಸಿದ್ದರು. ಅದಕ್ಕೆ ನಾನು ಸೆಲೆಕ್ಟ್ ಆಗಲೇ ಇಲ್ಲ'' - ದರ್ಶನ್

  ಜೀವನ ಕಲಿತಿದ್ದು 'ನೀನಾಸಂ'ನಲ್ಲಿ

  ಜೀವನ ಕಲಿತಿದ್ದು 'ನೀನಾಸಂ'ನಲ್ಲಿ

  ''ನೀನಾಸಂ'ನಲ್ಲಿ ನಾನು ಜೀವನ ಕಲಿತೆ. ಅಲ್ಲಿ ರತ್ನಕ್ಕ ಅಂತ ಮೆಸ್ ಮಾಡ್ತಿದ್ರು. ಎಲ್ಲರೂ ಅಲ್ಲಿ ಅಕೌಂಟ್ ಬರೆಸುತ್ತಾರೆ. ನನಗೆ ಅಮ್ಮ ಕೊಟ್ಟು ಕಳುಹಿಸಿದ್ದು 500 ರೂಪಾಯಿ. ಬರಬೇಕಾದರೆ 560 ರೂಪಾಯಿ ವಾಪಸ್ ತಂದೆ. ಹೇಗೆ ಅಂದ್ರೆ 500 ರೂಪಾಯಿ ಬ್ಯಾಂಕ್ ನಲ್ಲಿ ಹಾಕಿದ್ದೆ. ನನಗೆ ಒಂದು ವರ್ಷ ಅನ್ನ ಹಾಕಿದ ಅನ್ನದಾತರು ರತ್ನಕ್ಕ'' - ದರ್ಶನ್

  ಫೇವರಿಟ್ ಲೂನಾ

  ಫೇವರಿಟ್ ಲೂನಾ

  ''ನನ್ನ ಫೇವರಿಟ್ ಗಾಡಿ ಲೂನಾ. ಇವತ್ತಿಗೂ ಅದನ್ನ ಇಟ್ಟುಕೊಂಡಿದ್ದೀನಿ. ಒಂದು ಸಣ್ಣ ರೌಂಡ್ ಆದರೂ ಓಡಿಸುತ್ತೇನೆ. ನಮ್ಮ ತಂದೆ ಕೊಟ್ಟಿರುವ ಏಕೈಕ ಆಸ್ತಿ ಅದು ನನಗೆ. 37 ವರ್ಷ ಆಯ್ತು ಅದಕ್ಕೆ'' - ದರ್ಶನ್

  English summary
  Kannada Actor Darshan's life story was revealed in Zee Kannada Channel's popular show Weekend With Ramesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X