For Quick Alerts
  ALLOW NOTIFICATIONS  
  For Daily Alerts

  ತೆಳ್ಳಗಿದ್ದ ದೊಡ್ಡಣ್ಣ ಇದ್ದಕ್ಕಿದ್ದ ಹಾಗೆ ದಢೂತಿ ಆಗಿದ್ದು ಹೇಗೆ ಗೊತ್ತಾ?

  By Harshitha
  |

  ಚಂದನವನ ಎಂಬ ದೊಡ್ಡ ತಾರಾವನದಲ್ಲಿ ದೊಡ್ಡ ದೊಡ್ಡ ಕಲಾವಿದರ ಜೊತೆ ಪಳಗಿ ದೊಡ್ಡ ಹೆಸರು ಮಾಡಿರುವ 'ಸ್ಯಾಂಡಲ್ ವುಡ್ ನ ಬಿಗ್ ಬ್ರದರ್' ನಟ 'ದೊಡ್ಡಣ್ಣ'.

  ಹೆಸರಿಗೆ ತಕ್ಕ ಹಾಗೆ ದೊಡ್ಡಣ್ಣ ದೊಡ್ಡದಾಗಿ ಇದ್ದಾರೆ ಅಂತ ನೀವೆಲ್ಲಾ ಈಗ ಅಂದುಕೊಳ್ಳಬಹುದು. ಆದ್ರೆ, ಕೆಲವೇ ಕೆಲವು ವರ್ಷಗಳ ಹಿಂದೆ ದೊಡ್ಡಣ್ಣ ಹೀಗೆ ಇರ್ಲಿಲ್ಲ. ಅಸಲಿಗೆ, ದೊಡ್ಡಣ್ಣಗೆ ಈ ಹೆಸರು ಬರಲು ಕಾರಣ ಅವರ ತಾತ 'ಕಡಲೆ ದೊಡ್ಡಪ್ಪ'. ತಾತನ ಹೆಸರನ್ನೇ ಮಗನಿಗೆ ಇಟ್ಟಿದ್ದು ದೊಡ್ಡಣ್ಣ ತಂದೆ ಸೂಗೂರಪ್ಪ.

  ಹದಿಹರೆಯದ ವಯಸ್ಸಿನಲ್ಲಿ ತೆಳ್ಳಗಿದ್ದ ದೊಡ್ಡಣ್ಣ ಇದ್ದಕ್ಕಿದ್ದ ಹಾಗೆ ದಢೂತಿ ಆಗ್ಬಿಟ್ಟರು. ಸಾವಿನಂಚಿನಲ್ಲಿದ್ದ ದೊಡ್ಡಣ್ಣ ಬದುಕಿ ಬಂದಿದ್ದೇ ಅಚ್ಚರಿ ಕಥೆ. ಅದನ್ನೆಲ್ಲಾ ನಟ ದೊಡ್ಡಣ್ಣ ಜೀ ಕನ್ನಡ ವಾಹಿನಿಯ ಜನಪ್ರಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಿಚ್ಚಿಟ್ಟರು. ಎಲ್ಲವನ್ನೂ ಅವರ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ......

  ದೊಡ್ಡಣ್ಣ ಕುರಿತು....

  ದೊಡ್ಡಣ್ಣ ಕುರಿತು....

  ನಿಜ ನಾಮ - ದೊಡ್ಡಣ್ಣ
  ಜನ್ಮ ದಿನಾಂಕ - 1949 ನವೆಂಬರ್ 12
  ಊರು - ಅರಸೀಕೆರೆ, ಹಾಸನ
  ತಾತ - ಕಡಲೆ ದೊಡ್ಡಪ್ಪ
  ತಂದೆ - ಸೂಗೂರಪ್ಪ, ತಾಯಿ - ನಂಜಮ್ಮ
  ಸಹೋದರರು - ಬಸವರಾಜು, ರಾಚಣ್ಣ
  ಪತ್ನಿ - ಶಾಂತ
  ಮಕ್ಕಳು - ಉಷಾರಾಣಿ, ಸೂಗೂರೇಶ್, ಚೈತ್ರ

  ಬಡತನದಲ್ಲಿ ಬೆಳೆದದ್ದು

  ಬಡತನದಲ್ಲಿ ಬೆಳೆದದ್ದು

  ''ಅತ್ಯಂತ ಕಷ್ಟ, ಬಡತನದಿಂದ ಬಂದಿರುವುದು ನಾನು. ಎಷ್ಟೇ ಕಷ್ಟ ಇದ್ದರೂ, ತಂದೆ-ತಾಯಿ ಸಂಸ್ಕಾರ ಕಲಿಸಿಕೊಟ್ಟಿದ್ದರು'' - ದೊಡ್ಡಣ್ಣ.

  ಪೋಲಿಯೋ ತಾಯಿ

  ಪೋಲಿಯೋ ತಾಯಿ

  ''ನಮ್ಮ ತಾಯಿ ಪೋಲಿಯೋ ಹೆಣ್ಣು. ಆದರೂ, ಪ್ರೀತಿ ಮಾಡೋದ್ರಲ್ಲೂ ಎಕ್ಸ್ ಟ್ರೀಮ್, ಹೊಡೆಯುವುದರಲ್ಲೂ ಎಕ್ಸ್ ಟ್ರೀಮ್. ನಾನು ತುಂಬಾ ತರ್ಲೆ. ಮುದ್ದು ಮಾಡಿ ಕರೆದು, ಮೂಲೆಯಲ್ಲಿ ಇರ್ತಿದ್ದ ಪೊರಕೆಯಲ್ಲಿ ಹೊಡೆಯುತ್ತಿದ್ದರು'' - ದೊಡ್ಡಣ್ಣ

  ತಂದೆ ಧರ್ಮಗುರು

  ತಂದೆ ಧರ್ಮಗುರು

  ''ನಮ್ಮ ತಂದೆ ಧರ್ಮಗುರು ಇದ್ದ ಹಾಗೆ. ಯಾವತ್ತೂ ಯಾರಿಗೂ ಗದರಿಲ್ಲ, ಹೊಡೆದಿಲ್ಲ. ನಾವು ತಪ್ಪು ಮಾಡಿದರೆ ಹೊಡೆಯುತ್ತಿರಲಿಲ್ಲ. ಅವರು ಊಟ ಬಿಟ್ಟುಬಿಡ್ತಾಯಿದ್ದರು. ಅವರು ಊಟ ಬಿಟ್ಟರೆ ನಮಗೆ ಅಮ್ಮ ಕೇಳ್ತಿದ್ರು, ಯಾರು ಏನು ತಪ್ಪು ಮಾಡಿದ್ದಾರೆ ಹೋಗಿ ಕೇಳಿಕೊಳ್ಳಿ ಅಂತ. ನಾವು ಹೋಗಿ ಕ್ಷಮೆ ಕೇಳಿದ್ಮೇಲೆ ಸರಿ ಹೋಗ್ತಿದ್ರು. ಅಪ್ಪ-ಅಮ್ಮನಿಗೆ ಕೆಟ್ಟ ಹೆಸರು ತರಬೇಡಿ ಅಂತ ಸದಾ ಹೇಳ್ತಿದ್ರು'' - ದೊಡ್ಡಣ್ಣ

  ಓದಿನಲ್ಲಿ ಸೊನ್ನೆ!

  ಓದಿನಲ್ಲಿ ಸೊನ್ನೆ!

  ''ವಿದ್ಯಾಭ್ಯಾಸ ಅಂದ್ರೆ ಏನು ಮಾಡಿದ್ರೂ ತಲೆಗೆ ಹೋಗ್ತಿರ್ಲಿಲ್ಲ. ಇಬ್ಬರು ಅಣ್ಣಂದಿರು ಚೆನ್ನಾಗಿ ಓದ್ತಿದ್ರು. ನನಗೆ ಆಗ್ತಿರ್ಲಿಲ್ಲ. ನಮ್ಮ ತಾಯಿ ನನಗೆ ಸ್ವಲ್ಪ ಸಪೋರ್ಟ್. ಎಲ್ಲರೂ ಓದಿದ್ರೆ, ಮನೆಯಲ್ಲಿದ್ದ ಎಮ್ಮೆ ಸಾಕಬೇಕಿತ್ತಲ್ಲಾ. ಅದಕ್ಕೆ ಅಮ್ಮ ನನ್ನ ಪರ''- ದೊಡ್ಡಣ್ಣ

  ಅಣ್ಣನೇ ಗುರು!

  ಅಣ್ಣನೇ ಗುರು!

  ''ನಾಟಕದಲ್ಲಿ ನನ್ನ ಅಣ್ಣ ನನಗೆ ಮೊದಲ ಗುರು. ಅವನಿಗೆ ದುರ್ಯೋಧನ ಬಸವರಾಜು ಅಂತ ಎಲ್ಲರೂ ಕರೆಯುತ್ತಾರೆ. ನಾಟಕದಲ್ಲಿ ಅಷ್ಟು ಫೇಮಸ್ ಅವನು. ಅವನನ್ನ ನೋಡಿ ನನಗೆ ನಾಟಕದಲ್ಲಿ ಇಂಟ್ರೆಸ್ಟ್ ಬಂದಿದ್ದು'' - ದೊಡ್ಡಣ್ಣ

  ಓದು ಬಿಟ್ಟು ಕೆಲಸ ಸೇರಿದೆ

  ಓದು ಬಿಟ್ಟು ಕೆಲಸ ಸೇರಿದೆ

  ''ನಾನು ಎಸ್.ಎಸ್.ಎಲ್.ಸಿ ಓದುವಾಗ ತಂದೆ ತೀರಿಕೊಂಡರು. ಅಣ್ಣನ ಆಶ್ರಯದಲ್ಲೇ ಮನೆ ನಡೀತಾಯಿತ್ತು. ಎಸ್.ಎಸ್.ಎಲ್.ಸಿ ಪಾಸ್ ಆಗ್ಲಿಲ್ಲ. ಎಕ್ಸಾಂ ಇದ್ದರೂ ನಾಟಕದ ರೂಮ್ ನಲ್ಲಿ ಮಲಗಿಬಿಟ್ಟಿದ್ದೆ. ಓದು ಬಿಟ್ಟು ಕೆಲಸ ಸೇರಿಬಿಟ್ಟೆ'' - ದೊಡ್ಡಣ್ಣ

  ತೆಳ್ಳಗೆ ಇದ್ದೆ!

  ತೆಳ್ಳಗೆ ಇದ್ದೆ!

  ''ನಾನು ಮುಂಚೆ ಇಷ್ಟೊಂದು ದಪ್ಪ ಇರ್ಲಿಲ್ಲ. ತೆಳ್ಳಗೆ ಇದ್ದೆ. ಒಮ್ಮೆ ನನಗೆ ಥೈಫಾಯ್ಡ್ ಆಯ್ತು. ಉಳಿಯುವುದೇ ಕಷ್ಟ ಎನ್ನುವ ಸ್ಥಿತಿ ಇತ್ತು. ಬದುಕಿ ಬಂದಿದ್ದೇ ಹೆಚ್ಚು. ಕೊನೆಗೆ ಅದು ವಾಸಿ ಆದ್ಮೇಲೆ ವಿಪರೀತ ಹಸಿವು ಶುರುವಾಯ್ತು. ಅಲ್ಲಿಂದ ಪ್ಲೇಟ್ ಮೀಲ್ಸ್ ಇಲ್ಲವೇ ಇಲ್ಲ. ಏನಿದ್ರೂ ಫುಲ್ ಮೀಲ್ಸ್'' - ದೊಡ್ಡಣ್ಣ

  ಇವತ್ತು ಖುಷಿ..

  ಇವತ್ತು ಖುಷಿ..

  ''VSIL ನಲ್ಲಿ ಶೇರಿಂಗ್ ಆಪರೇಟರ್ ಆಗಿದ್ದೆ. ಅಲ್ಲಿ ಸ್ಕ್ರಾಪ್ ಗಳನ್ನ ಎತ್ತಿ ಹಾಕುವ ಕೆಲಸ. ಯಾವುದನ್ನೂ ನಾನು ಬಯಸಿದ್ದಿಲ್ಲ. ಚಿತ್ರರಂಗಕ್ಕೆ ಬರಬೇಕು ಅಂತ ಅಂದುಕೊಂಡಿರಲಿಲ್ಲ. ಆದರೂ ಬಂದೆ. ನಾವು ಬಂದ ಹೊಸದರಲ್ಲಿ ತುಂಬಾ ಕಷ್ಟ ಪಟ್ಟಿದ್ದೀನಿ. ಇವತ್ತು ಖುಷಿಯಾಗಿದ್ದೀನಿ'' - ದೊಡ್ಡಣ್ಣ

  English summary
  Kannada Actor Doddanna's life story was revealed in Zee Kannada Channel's popular show Weekend With Ramesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X