»   » 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದರ್ಶನ್ ಮುಚ್ಚಿಟ್ಟ ರಹಸ್ಯವೇನು?

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದರ್ಶನ್ ಮುಚ್ಚಿಟ್ಟ ರಹಸ್ಯವೇನು?

Posted By:
Subscribe to Filmibeat Kannada

ತಮ್ಮ ಬದುಕಿನ ಕಷ್ಟದ ದಿನಗಳ ಕುರಿತು ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಮನಬಿಚ್ಚಿ ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಒಂದು ವಿಷಯದ ಬಗ್ಗೆ ಮಾತ್ರ ಬಾಯ್ಬಿಡಲಿಲ್ಲ.

ಆ ವಿಚಾರದ ಕುರಿತು ಆಪ್ತ ಮಲ್ಲಿಕಾರ್ಜುನ್ ಮತ್ತು ಸ್ನೇಹಿತರು ಪ್ರಸ್ತಾಪ ಮಾಡಿದಾಗಲೂ, ದರ್ಶನ್ ಅದನ್ನ ಅರ್ಧಕ್ಕೆ ನಿಲ್ಲಿಸಿದರು.

''ಆಮೇಲೆ ಮಾತನಾಡೋಣ, ಈಗ ಸಾಕು, ಬಿಟ್ಟುಬಿಡಿ'' ಅಂತ ದರ್ಶನ್ ಹೇಳಿ ಟಾಪಿಕ್ ಗೆ ಫುಲ್ ಸ್ಟಾಪ್ ಇಟ್ಟುಬಿಟ್ಟರು. [ಪೈಸೆ-ಪೈಸೆಗೂ ಕಷ್ಟ ಪಟ್ಟ ದರ್ಶನ್ ಬದುಕಿನ ನೋವಿನ ಕಥೆ]

ಹಾಗಾದ್ರೆ, 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದರ್ಶನ್ ಮುಚ್ಚಿಟ್ಟ ರಹಸ್ಯವೇನು? ಅದನ್ನ ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

ದರ್ಶನ್ ಬಗ್ಗೆ ಮಲ್ಲಿಕಾರ್ಜುನ್ ಹೇಳಿದಿಷ್ಟು!

''ದರ್ಶನ್ ಜೊತೆ ಕೆಲಸ ಮಾಡುವುದು ಅಂದ್ರೆ ಕಷ್ಟನೇ ಅಲ್ಲ. ತುಂಬಾ ಸುಲಭ. ಅವರು ಮಗು ತರಹ. ಇವತ್ತು ನನ್ನ ಅವರು ಮಗು ತರಹ ನೋಡಿಕೊಳ್ಳುತ್ತಿದ್ದಾರೆ. ಇವತ್ತು ಅವರ ತೂಗುದೀಪ ಪ್ರೊಡಕ್ಷನ್, ಡಿಸ್ಟ್ರಿಬ್ಯೂಷನ್ ಮತ್ತು ತೋಟದಲ್ಲಿ 500 ಜನ ಕೆಲಸ ಮಾಡುತ್ತಾರೆ. ನಿಜವಾಗಲೂ ಅವರಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು'' - ಮಲ್ಲಿಕಾರ್ಜುನ್, ದರ್ಶನ್ ಆಪ್ತ [ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅವಮಾನ ಮಾಡಿದವರು ಯಾರು?]

ಮಲ್ಲಿಕಾರ್ಜುನ್ ಹೇಳೋಕೆ ಹೊರಟ ವಿಷಯವೇನು?

''ಹಿರಿಯರು ಹೇಳ್ತಾರೆ, ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಅಂತ. ದರ್ಶನ್ ಅದನ್ನ ಪಾಲಿಸುವುದರಲ್ಲಿ ಮೊದಲಿಗರು. ಇವತ್ತಿನ ವರೆಗೂ ಮೀಡಿಯಾನ ಅವಾಯ್ಡ್ ಮಾಡಿ ಹೆಲ್ಪ್ ಮಾಡುವ ಏಕೈಕ ವ್ಯಕ್ತಿ ಅಂದ್ರೆ ಅವರೇ'' - ಮಲ್ಲಿಕಾರ್ಜುನ್, ದರ್ಶನ್ ಆಪ್ತ [ನೀವು ಕೇಳರಿಯದ ಸತ್ಯ ಸಂಗತಿಗಳ 'ದರ್ಶನ' ವೀಕೆಂಡ್ ನಲ್ಲಾಯ್ತು!]

ಯಾವ ಇನ್ಸಿಡೆಂಟ್ ಹೇಳ್ತಿದ್ರು?

''ಇವತ್ತು ಒಂದು ಇನ್ಸಿಡೆಂಟ್ ನ ನಾನು ಅನಿವಾರ್ಯವಾಗಿ ಹೇಳಲೇಬೇಕು'' ಅಂತ ಮಲ್ಲಿಕಾರ್ಜುನ್ ಹೇಳಿದ್ದೇ ತಡ, ''ಓಕೆ..ಓಕೆ..ಅದು ಆಮೇಲೆ ಮಾತಾಡೋಣ'' ಅಂತ ದರ್ಶನ್ ಅರ್ಧಕ್ಕೆ ನಿಲ್ಲಿಸಿದರು. ['ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದರ್ಶನ್ ಹೇಳಿರುವ ಸತ್ಯಗಳೇನು?]

ಅದರ ಹಿಂದಿನ ನೋವು?

''ಈ ಇನ್ಸಿಡೆಂಟ್ ಹೇಳಿಬಿಟ್ಟರೆ, ಅದರ ಹಿಂದೆ ಬೇರೆ ನೋವುಗಳಿವೆ. ದರ್ಶನ್ ಸರ್ ಗೆ ಚೆನ್ನಾಗಿ ಗೊತ್ತು. ಅದಕ್ಕೆ ಅವರು ಹೇಳ್ಬೇಡಾ ಅಂತ ಹೇಳ್ತಿದ್ದಾರೆ'' - ಮಲ್ಲಿಕಾರ್ಜುನ್, ದರ್ಶನ್ ಆಪ್ತ

ಕಡೆಗೂ ದರ್ಶನ್ ಹೇಳುವುದಕ್ಕೆ ಬಿಡಲೇ ಇಲ್ಲ!

ದರ್ಶನ್ - ''ಬಿಟ್ಬಿಡಿ ಈಗ. ಈಗಾಯ್ತು ಸಾಕು ಬಿಟ್ಬಿಡಿ''
ಮಲ್ಲಿಕಾರ್ಜುನ್ - ''ಅವರು ಯಾಕೆ ಬೇಡ ಅಂತಿದ್ದಾರೆ ಅಂತ ನನಗೆ ಗೊತ್ತು''
ರಮೇಶ್ - ''ಬಿಡಿ, ಅವರ ಭಾವನೆಗೆ ನಾವು ಸ್ಪಂದಿಸಬೇಕು''
ಮಲ್ಲಿಕಾರ್ಜುನ್ - ''ಸಾರಿ ಸರ್''

ದರ್ಶನ್ ಕೊಟ್ಟ ಸಮರ್ಥನೆ

''ಅವರದ್ದು ಏನೋ ಒಂದು ಕಷ್ಟ ಇರುತ್ತೆ. ಅವರಿಗೆ ಸಹಾಯ ಮಾಡಿದ್ದೀವಿ ಅಂತ ನಾಲ್ಕು ಜನರ ಮುಂದೆ ಅವರಿಗೆ ಅವಮಾನ ಮಾಡುವುದು ಸರಿಯಲ್ಲ. ಎಲ್ಲರೂ ಮಾನ ಮರ್ಯಾದೆಗೆ ಹೆದರುತ್ತಾರೆ. ಎಲೆ ಮರೆಯ ಕಾಯಿ ತರ ಇರೋಣ. ನಾನು ಮಾಡ್ತೀನಿ ಅಂತ ಅವರಿಗೆ ಅವಮಾನ ಮಾಡುವುದು ಯಾವ ನ್ಯಾಯ'' - ದರ್ಶನ್

ದರ್ಶನ್ ಸ್ನೇಹಿತ ಹೇಳಿದಿಷ್ಟು

''ಅವರ ತಂದೆ ದಾನ ಧರ್ಮ ಮಾಡುವುದರಲ್ಲಿ ಎತ್ತಿದ ಕೈ. ಅವರ ಹೆಸರನ್ನ ಉಳಿಸಿದ್ದಾರೆ. ಮೊನ್ನೆ ಮೊನ್ನೆ ತಾನೇ ಸ್ಟೇಟ್ ಅವಾರ್ಡ್ ಚೆಕ್ ಬಂತು'' ಅಂತ ದರ್ಶನ್ ಸ್ನೇಹಿತ ಹೇಳಿದ್ದೇ ತಡ, ''ಏಯ್..ಏಯ್...ನಿಲ್ಲಿಸು...'' ಅಂತ ಅವರ ಬಾಯಿ ಮುಚ್ಚಿಸಿದರು ದರ್ಶನ್

ರಮೇಶ್ ಪ್ರತಿಕ್ರಿಯೆ

''ಬಲಗೈಗೆ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಅಂತ ನಿಮ್ಮ ಸ್ನೇಹಿತರು ಹೇಳ್ತಿದ್ರು. ಅದು ಈಗ ಪ್ರೂವ್ ಆಯ್ತು. ಸೋ ನೈಸ್. ಕೀಪ್ ಇಟ್ ಅಪ್'' - ರಮೇಶ್ ಅರವಿಂದ್.

ದರ್ಶನ್ ಹೇಗೆ ಅಂದ್ರೆ....

''ಇವತ್ತಿನ ಯಶಸ್ಸು ಬಯಸದೇ ಬಂದ ಭಾಗ್ಯ. ಹಾರ್ಡ್ ವರ್ಕ್ ಇದೆ ಅದರಲ್ಲಿ. ನಾನು ಏನೂ ಮಾಡಿಲ್ಲ. ಕೆಲಸ ಮಾಡಿಕೊಂಡು ಹೋಗ್ತೀನಿ. ನನ್ನದೊಂದು ಬಹಳ ಕೆಟ್ಟ ಬುದ್ಧಿ ಅಂದ್ರೆ I will be a wall or mirror. ನೀವು ನನ್ನ ನೋಡಿ ನಕ್ಕಿದ್ರೆ, ನಾನು ತುಂಬಾ ಚೆನ್ನಾಗಿ ನಕ್ತೀನಿ. ಸ್ವಲ್ಪ ಕೋಪಿಸಿಕೊಂಡ್ರೆ, ಅದರ ಡಬಲ್ ಆಗುತ್ತೆ. ನಾನು ಎಲ್ಲರ ಹತ್ರ ಹಾಗೇನೆ. ನಮ್ಮ ಅಮ್ಮ ಹೇಳಿದ್ರು ಹೆಂಗರುಳು ಅಂತ. ನನಗೆ ರಾಕ್ಷಸ ಕರುಳು ಕೂಡ ಇದೆ'' - ದರ್ಶನ್

ಕನ್ನಡಿಗರಿಗೆ ಧನ್ಯವಾದ

''ನನಗೆ ಮೊದಲು ಅನ್ನ ಕೊಟ್ಟ ರಾಮ ಮೂರ್ತಿ ಅವರಿಗೆ ದೊಡ್ಡ ಥ್ಯಾಂಕ್ಸ್ ಹೇಳಬೇಕು. ಅಪ್ಪಾಜಿ ಅವರಿಗೆ ಧನ್ಯವಾದ ಸಲ್ಲಿಸಬೇಕು. ಒಂದು ಕಹಿ ಘಟನೆ ಆದ್ಮೇಲೆ ಈ ಲೆವೆಲ್ ಗೆ ಎತ್ಕೊಂಡು ಬಂದ ಎಲ್ಲಾ ಕನ್ನಡಿಗರಿಗೆ ನನ್ನ ಹೃತ್ಪೂರ್ವಕ ಧನ್ಯವಾದ ಹೇಳುವುದಕ್ಕೆ ಇಷ್ಟಪಡ್ತೀನಿ'' - ದರ್ಶನ್

ರಮೇಶ್ ಗೆ ಕ್ಷಮೆ ಕೇಳಿದ ದರ್ಶನ್

''ಎಲ್ಲದಕ್ಕಿಂತ ನೀವು ನಮಗಿಂತ ಸೀನಿಯರ್ಸ್. ನಿಮ್ಮ ಮುಂದೆ ಇಷ್ಟು ಹೊತ್ತು ಕೂತಿದ್ದಕ್ಕೆ ನಾನು ನಿಮ್ಮನ್ನ ಕ್ಷಮೆ ಕೇಳ್ಬೇಕು. ನನ್ನ ಈ ಶೋಗೆ ಕರ್ಸಿದಕ್ಕೆ ತುಂಬಾ ಥ್ಯಾಂಕ್ಸ್'' - ದರ್ಶನ್

English summary
Kannada Actor Darshan's helping nature was revealed in Zee Kannada Channel's popular show Weekend With Ramesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada