»   » ಗಾಯಕ ಸಿ.ಅಶ್ವಥ್ ಬಗ್ಗೆ ಸಾಧು ಕೋಕಿಲ ಏನಂದ್ರು ಗೊತ್ತೇ?

ಗಾಯಕ ಸಿ.ಅಶ್ವಥ್ ಬಗ್ಗೆ ಸಾಧು ಕೋಕಿಲ ಏನಂದ್ರು ಗೊತ್ತೇ?

Posted By:
Subscribe to Filmibeat Kannada

ಕರುನಾಡು ಕಂಡಂತಹ ಅಪ್ರತಿಮ ಗಾಯಕ ಹಾಗು ಸಂಗೀತ ನಿರ್ದೇಶಕ ಸಿ.ಅಶ್ವಥ್. ಸುಗಮ ಸಂಗೀತ ಕ್ಷೇತ್ರದಲ್ಲಿ ಅಪಾರ ಜನಪ್ರಿಯತೆ ಗಳಿಸಿರುವ ಸಿ.ಅಶ್ವಥ್ ಗರಡಿಯಲ್ಲಿ ಪಳಗಿದವರು ಸಾಧು ಕೋಕಿಲ.

ಸಿ.ಅಶ್ವಥ್ ರವರ ಸ್ವರ ಸಂಯೋಜನೆ ತಂಡದಲ್ಲಿ ಕೀ ಬೋರ್ಡ್ ಪ್ಲೇಯರ್ ಆಗಿದ್ದ ಸಾಧು ಕೋಕಿಲ, ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಹಳೇ ದಿನಗಳ ಮೆಲುಕು ಹಾಕುತ್ತಾ ಸಿ.ಅಶ್ವಥ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. [ವೀಕೆಂಡ್ ನಲ್ಲಿ ಬಹಿರಂಗವಾದ ಸಾಧು ಕೋಕಿಲ ನಿಜ ಬದುಕಿನ ಕಷ್ಟ-ನಷ್ಟ]

ಸಿ.ಅಶ್ವಥ್ ಮತ್ತು ಅವರ ಹಾಡುಗಳ ಬಗ್ಗೆ ಸಾಧು ಕೋಕಿಲ ಹೇಳಿರುವುದೆಲ್ಲವನ್ನ ಕೆಳಗಿರುವ ಸ್ಲೈಡ್ ಗಳಲ್ಲಿ ಅವರ ಮಾತುಗಳಲ್ಲೇ ಓದಿ....

ಹಾಡು ನುಡಿಸುವುದು, ಅಳುವುದು.!

''ಅಶ್ವಥ್ ಹಾಡಿರುವ ''ಏಕೆ..ಏಕೆ ಈ ನಿಟ್ಟುಸಿರು...'' ಹಾಡನ್ನ ನುಡಿಸಿ, ನುಡಿಸಿ ರೂಮ್ ನಲ್ಲಿ ಹೋಗಿ ಅಳೋದು. ಹೀಗೆ ಆಗೋಯ್ತಲ್ಲಾ ನಮಗೆ ಅಂತ. ನನ್ನ ಲವ್ ಟೈಮ್ ಅವಾಗ'' - ಸಾಧು ಕೋಕಿಲ. [ಆತ್ಮಹತ್ಯೆ ಮಾಡಿಕೊಳ್ಳಲು ಸಾಧು ಕೋಕಿಲ ನಿರ್ಧರಿಸಿದ್ದು ಯಾಕೆ?]

ಅವರಲ್ಲಿ ಪವರ್ ಇದೆ!

''ಸಿ.ಅಶ್ವಥ್ ರವರ ಎಷ್ಟೋ ಕಂಪೋಸಿಂಗ್ ಗೆ ನಾನು ಕೀ ಬೋರ್ಡ್ ಆರ್ಟಿಸ್ಟ್ ಆಗಿ ನುಡಿಸಿದ್ದೀನಿ. ಅಶ್ವಥ್ ಅವರಿಗೆ ಕಂಪೇರ್ ಮಾಡುವುದಕ್ಕೆ ಇಲ್ಲಿ ಯಾರೂ ಮ್ಯೂಸಿಶಿಯನ್ಸ್ ಇಲ್ಲ. ಅದೇನೋ ಒಂದು ಪವರ್ ಇದೆ ಅವರ ಒಳಗೆ. ನಮಗೆ ಅದು ಗೊತ್ತಾಗಲ್ಲ'' - ಸಾಧು ಕೋಕಿಲ

ನಮಗೆಲ್ಲಾ ಅವರೇ ದೇವರು

''ಅವರ ಹಾಡು ''ಕಾಣದ ಕಡಲಿಗೆ ಹಂಬಲಿಸಿದೆ ಮನ...'' ಹಾಡಬೇಕಾದರೆ, ಮೈ ಮೇಲೆ ದೇವರು ಬಂದ ಹಾಗೆ ಆಗುತ್ತೆ. ನಮಗೆಲ್ಲಾ ಹೋಗ್ತಾ, ಹೋಗ್ತಾ ಅವರು ದೇವರು ಆಗ್ಬಿಟ್ಟರು. ಯಾಕಂದ್ರೆ ಅವರ ಟ್ಯೂನ್ ನಲ್ಲಿ ಅಂತಹ ಒಂದು ಡಿವೈನ್ ಇರೋದು'' - ಸಾಧು ಕೋಕಿಲ

ಅಶ್ವಥ್ ಮ್ಯೂಸಿಕ್ ಗಾಡ್

''ಅಶ್ವಥ್ ಅವರ ವಾಯ್ಸ್ ಒಂದೊಂದು ಬಾರಿ ಕಿರುಚುತ್ತಾರೆ ಅಂತ ಹೇಳ್ತಿದ್ವಿ. ಆದ್ರೆ, ಅವರು ನಮ್ಮ ಮ್ಯೂಸಿಕ್ ಫೀಲ್ಡ್ ಗೆ ಒಂದು ದೇವರು ಇದ್ದ ಹಾಗೆ. ಎಲ್ಲರಿಗೂ ಅಶ್ವಥ್...He is God. Music God'' - ಸಾಧು ಕೋಕಿಲ.

English summary
Kannada Actor, Music Director, Director, Singer Sadhu Kokila spoke about Singer, Music Director C.Ashwath in Zee Kannada Channel's popular show Weekend With Ramesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada