For Quick Alerts
  ALLOW NOTIFICATIONS  
  For Daily Alerts

  ನಟ ರವಿಶಂಕರ್ ಬಗ್ಗೆ ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿಗಳು!

  By Harshitha
  |

  ರವಿಶಂಕರ್ ಖಡಕ್ ಖಳ ನಟ ಅನ್ನೋದು ನಿಮಗೆ ಗೊತ್ತು. ನಟನೆಗೂ ಮುನ್ನ ಅವರು ಡಬ್ಬಿಂಗ್ ಆರ್ಟಿಸ್ಟ್ ಆಗಿದ್ದವರು ಅನ್ನೋದು ಕೂಡ ಎಲ್ಲರಿಗೂ ಗೊತ್ತಿರುವ ವಿಚಾರವೇ.

  ಆದ್ರೆ, ಇದೇ ರವಿಶಂಕರ್ ನಿರ್ದೇಶಕರಾಗಿ, ಸಂಗೀತ ನಿರ್ದೇಶಕರಾಗಿ, ಗಾಯಕರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ ಅನ್ನೋದು ನಿಮಗೆ ಗೊತ್ತಾ? [ಖಡಕ್ ಖಳ ನಟ ರವಿಶಂಕರ್ ಗೆ ಅವಮಾನ ಮಾಡಿದವರು ಯಾರು?]

  ನಟ ರವಿಶಂಕರ್ ಬಗ್ಗೆ ನಿಮಗ್ಯಾರಿಗೂ ಗೊತ್ತಿಲ್ಲದ ಎಷ್ಟೋ ಸಂಗತಿಗಳು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಹಿರಂಗವಾಯ್ತು. ಕೆಳಗಿರುವ ಸ್ಲೈಡ್ ಗಳಲ್ಲಿ ಓದಿ.....

  ಸಿಂಗಿಂಗ್ ನಲ್ಲಿ ನಂಬರ್ 1

  ಸಿಂಗಿಂಗ್ ನಲ್ಲಿ ನಂಬರ್ 1

  ''ಸ್ಕೂಲ್ ನಲ್ಲಿ ಮದ್ರಾಸ್ ಜಿಲ್ಲೆಗೆ ಸಿಂಗಿಂಗ್ ನಲ್ಲಿ ನನಗೆ ಮೊದಲ ಬಹುಮಾನ ಬಂದಿತ್ತು. ಡ್ಯಾನ್ಸ್ ನಲ್ಲಿ ತುಂಬಾ ಅವಾರ್ಡ್ ಬಂದಿದೆ'' - ರವಿಶಂಕರ್

  ಮೊದಲ ಸಂಗೀತ ನಿರ್ದೇಶನ....

  ಮೊದಲ ಸಂಗೀತ ನಿರ್ದೇಶನ....

  ''ಗಾಯಕ ಉನ್ನಿಕೃಷ್ಣನ್ ನನ್ನ ಸೀನಿಯರ್. ಉನ್ನಿಕೃಷ್ಣನ್ ರವರ ಮೊದಲ ರೆಕಾರ್ಡಿಂಗ್ ಮಾಡಿದ್ದೇ ನಾನು. ಒಂದು ಟಿವಿ ಸೀರಿಯಲ್ ಗೆ ನಾನು ಮ್ಯೂಸಿಕ್ ಡೈರೆಕ್ಟರ್ ಆಗಿದ್ದೆ. ಅದಕ್ಕೆ ನಾನು ಉನ್ನಿಕೃಷ್ಣನ್ ರಿಂದ ಹಾಡಿಸಿದ್ದೆ. ಅದೇ ಅವರ ಮೊದಲ ರೆಕಾರ್ಡಿಂಗ್. ಅದಾದ್ಮೇಲೆ ಅವರಿಗೆ ಎ.ಆರ್.ರೆಹಮಾನ್ ಸಂಗೀತ ನಿರ್ದೇಶನದ 'ಕಾದಲನ್' ಸಿನಿಮಾಗೆ ಅವಕಾಶ ಸಿಕ್ಕಿದ್ದು'' - ರವಿಶಂಕರ್

  ಸಂಗೀತ ಕಲಿತಿದ್ದು...

  ಸಂಗೀತ ಕಲಿತಿದ್ದು...

  ''ಸಂಗೀತ ಕಲಿಯೋಕೆ ಶುರು ಮಾಡಿದ್ದು ಅಣ್ಣ ಸಾಯಿ ಕುಮಾರ್ ಮತ್ತು ಅಕ್ಕ ಕಮಲಾರಿಂದ. ಅವರಿಗೆ ನಾನು ಹಾರ್ಮೋನಿಯಮ್ ಬಾರಿಸ್ತಿದ್ದೆ. ಅದೇ ನನ್ನ ಕೆಲಸ. ಹಾಗೇ ಸಂಗೀತ ಕಲಿತೆ'' - ರವಿಶಂಕರ್

  ಭರತನಾಟ್ಯ ಕಲಿತೆ!

  ಭರತನಾಟ್ಯ ಕಲಿತೆ!

  ''ಭಾರತನಾಟ್ಯಂ ಮತ್ತು ಕುಚಿಪುಡಿ ಕೂಡ ಕಲಿತಿದ್ದೆ'' - ರವಿಶಂಕರ್

  ಅಪ್ಪ-ಅಮ್ಮನಿಗೆ ಆದ ಹಾಗೆ....

  ಅಪ್ಪ-ಅಮ್ಮನಿಗೆ ಆದ ಹಾಗೆ....

  ''ದೊಡ್ಡ ಕಲಾವಿದ ಆಗ್ಬೇಕು ಅಂತ ಆಸೆಯಿಂದಲೇ ಅಪ್ಪ ಚಿತ್ರರಂಗಕ್ಕೆ ಬಂದಿದ್ದು. ಆದ್ರೆ, ಅವರಿಗೆ ಅವಕಾಶಗಳು ಸಿಗ್ಲಿಲ್ಲ. ನಮ್ಮ ತಾಯಿ ನಾಯಕಿ ಆಗಿದ್ದವರು. ಅವರೂ ಕೂಡ ಮದುವೆ ಆದ್ಮೇಲೆ, ನಟಿಸುವುದು ಬಿಟ್ಬಿಟ್ರು. ನಮಗೆ ಹಾಗೆ ಆಗ್ಬಾರ್ದು ಅನ್ನೋ ಕಾರಣಕ್ಕೆ, ನಮಗೆ ಸಂಗೀತ, ಡ್ಯಾನ್ಸ್ ಸೇರಿದಂತೆ ಎಲ್ಲಾ ತರಹ ವಿದ್ಯೆಗಳನ್ನ ಕಲಿಸಿದರು'' - ರವಿಶಂಕರ್

  ನಾನು ಸತ್ತ ಮೇಲೆ....

  ನಾನು ಸತ್ತ ಮೇಲೆ....

  ''ನಾನು ಸತ್ತಮೇಲೆ ಹಿಂದು ಪೇಪರ್ ನ ಮೊದಲ ಪೇಜ್ ನಲ್ಲಿ ನನ್ನ ಫೋಟೋ ದೊಡ್ಡದಾಗಿ ಬರಬೇಕು ಅನ್ನೋದು ಅಮ್ಮನ ಆಸೆ ಆಗಿತ್ತು. ಅದನ್ನ ಅವರು ಡೈರಿಯಲ್ಲಿ ಬರೆದಿದ್ದರು. ಅಂದ್ರೆ, ಊಹಿಸಿಕೊಳ್ಳಿ ನನ್ನ ತಾಯಿಯ ಆಸೆ ಪ್ರಕಾರ ನಾನು ಎಷ್ಟು ದೊಡ್ಡ ವ್ಯಕ್ತಿ ಆಗಿರ್ಬೇಕು ಹಿಂದು ಪೇಪರ್ ನಲ್ಲಿ ನನ್ನ ಫೋಟೋ ಬರ್ಬೇಕು ಅಂದ್ರೆ'' - ರವಿಶಂಕರ್

  ರವಿಶಂಕರ್ ಹೆಸರು ಇಟ್ಟಿದ್ದು...

  ರವಿಶಂಕರ್ ಹೆಸರು ಇಟ್ಟಿದ್ದು...

  ''ನಾನು ದೊಡ್ಡ ವ್ಯಕ್ತಿ ಆಗ್ಬೇಕು ಅನ್ನೋ ಕಾರಣಕ್ಕೆ ನನಗೆ ಸಿತಾರ್ ವಾದಕ ರವಿಶಂಕರ್ ಹೆಸರನ್ನ ನನ್ನ ತಾಯಿ ನನಗೆ ಇಟ್ಟಿದ್ದಂತೆ'' - ರವಿಶಂಕರ್

  ತಾಯಿ ತೀರಿಕೊಂಡಿದ್ದು ಯಾಕೆ?

  ತಾಯಿ ತೀರಿಕೊಂಡಿದ್ದು ಯಾಕೆ?

  ''ಡ್ಯಾನ್ಸ್ ಗೊತ್ತು, ಸಂಗೀತ ಗೊತ್ತು, ಡೈರೆಕ್ಷನ್ ಮಾಡ್ತೀನಿ, ಹಾಡುಗಳನ್ನ ಬರೀತಿನಿ, ಆಕ್ಟಿಂಗ್ ಬರುತ್ತೆ, ಎಲ್ಲಾ ಬಂದ್ರೂ ನಾನು ವೇಸ್ಟ್ ಆಗಿದ್ದೀನಿ ಅನ್ನೋ ನೋವಿನಲ್ಲೇ ನನ್ನ ತಾಯಿ ತೀರ್ಕೊಂಡಿದ್ದಾರೆ. ಅವರು ಸತ್ತಮೇಲೆ ಡೈರಿ ಓದಿದ ಮೇಲೆ ನನಗೆ ಗೊತ್ತಾಗಿದ್ದು'' - ರವಿಶಂಕರ್

  ಅದೃಷ್ಟಕ್ಕೆ ಸಿಕ್ಕಿದ್ದು 'ಕೆಂಪೇಗೌಡ'

  ಅದೃಷ್ಟಕ್ಕೆ ಸಿಕ್ಕಿದ್ದು 'ಕೆಂಪೇಗೌಡ'

  ''ಆ ಘಟನೆ ನಂತರವೇ ನಾನು ನಿರ್ಧಾರ ಮಾಡಿದ್ದು ಏನಾದರೂ ಸಾಧಿಸಬೇಕು ಅಂತ. ಅದೃಷ್ಟಕ್ಕೆ 'ಕೆಂಪೇಗೌಡ' ಸಿನಿಮಾ ಅವಕಾಶ ಸಿಕ್ತು. ಜೈ ಕರ್ನಾಟಕ...ಜೈ ಭುವನೇಶ್ವರಿ...'' - ರವಿಶಂಕರ್

  'ಅರುಂಧತಿ' ಚಿತ್ರದಲ್ಲಿ ಉತ್ತಮ ಅವಕಾಶ

  'ಅರುಂಧತಿ' ಚಿತ್ರದಲ್ಲಿ ಉತ್ತಮ ಅವಕಾಶ

  ''ಅರುಂಧತಿ' ಸಿನಿಮಾ, ನನ್ನ ಜೀವನದಲ್ಲಿ ಸಿಕ್ಕ ದೊಡ್ಡ ಅವಕಾಶ. ಯಾಕಂದ್ರೆ, ಯಾವ ಡಬ್ಬಿಂಗ್ ಆರ್ಟಿಸ್ಟ್ ಗೆ ಕೂಡ ಅಂತಹ ಅವಕಾಶ ಸಿಕ್ಕಿಲ್ಲ'' - ರವಿಶಂಕರ್

  ವಿಲನ್ ಗಿಂತ ನನ್ನ ವಾಯ್ಸ್ ಹೆಚ್ಚಿತ್ತು!

  ವಿಲನ್ ಗಿಂತ ನನ್ನ ವಾಯ್ಸ್ ಹೆಚ್ಚಿತ್ತು!

  ''ಸೋನು ಸೂದ್ ಸ್ಕ್ರೀನ್ ಪ್ರೆಸೆನ್ಸ್ ಗಿಂತ ನನ್ನ ವಾಯ್ಸ್ ಹೆಚ್ಚಾಗಿತ್ತು. 15 ದಿನ ಡಬ್ಬಿಂಗ್ ಮಾಡಿದೆ. ಅದರ ಮೇಲೆ ಅವರು ಚಿತ್ರೀಕರಣ ಮಾಡಿದ ಮೇಲೆ ನಾನು 21 ದಿನ ಮತ್ತೆ ಡಬ್ಬಿಂಗ್ ಮಾಡಿದೆ'' - ರವಿಶಂಕರ್

  ರವಿಶಂಕರ್ ಸೀರಿಯಸ್ ಆಗಿದ್ದು...

  ರವಿಶಂಕರ್ ಸೀರಿಯಸ್ ಆಗಿದ್ದು...

  ''ರವಿ ಒಂಥರಾ ಡಿಫರೆಂಟ್ ಕ್ಯಾರೆಕ್ಟರ್. ಚೈಲ್ಡಿಶ್, ಅಗ್ರೆಸ್ಸಿವ್, ಲವ್ವಬಲ್. ರವಿ ನೆಗ್ಲೆಟ್ ಮಾಡ್ತಿದ್ದಾನೆ. ಅವನು ವೃತ್ತಿಯಲ್ಲಿ concentrate ಮಾಡಿದ್ರೆ, ಖಂಡಿತ ಸಾಧನೆ ಮಾಡುತ್ತಾನೆ ಅಂತ ಅಮ್ಮ ಡೈರಿಯಲ್ಲಿ ಬರ್ದಿದ್ರು. ಅದನ್ನ ಓದಿದ ಮೇಲಿಂದ ಲೈಫ್ ನಲ್ಲಿ ಅವನು ಸೀರಿಯಸ್ ಆದ'' - ಸಾಯಿ ಕುಮಾರ್

  ಅಮ್ಮನ ಆಸೆ ಈಡೇರಿದೆ!

  ಅಮ್ಮನ ಆಸೆ ಈಡೇರಿದೆ!

  ''ಕೆಂಪೇಗೌಡ' ಸಿನಿಮಾ ಆಯ್ತು. ಅದರಿಂದ ಅವನ ಲಕ್ ಚೇಂಜ್ ಆಯ್ತು. ಇವತ್ತು ಅವನು ತುಂಬಾ ಬಿಜಿ ಇದ್ದಾನೆ. ಅಮ್ಮನ ಆಸೆ ಈಡೇರಿಸಿದ್ದಾನೆ'' - ಸಾಯಿ ಕುಮಾರ್

  English summary
  Kannada Actor cum Dubbing Artist Ravishankar's life story was revealed in Zee Kannada Channel's popular show Weekend With Ramesh season 2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X