For Quick Alerts
  ALLOW NOTIFICATIONS  
  For Daily Alerts

  ಏಳನೇ ಕ್ಲಾಸ್ ಗೆ ನಾಯಕಿಯಾದ ಸುಧಾರಾಣಿ ಪಟ್ಟ ಹಿಂಸೆ! ಯಾಕ್ಕೇಳ್ತೀರಾ!

  By Harshitha
  |

  ಆಟ ಆಡುವ, ಪಾಠ ಕಲಿಯುವ ವಯಸ್ಸಿನಲ್ಲೇ 'ನಾಯಕಿ' ಪಟ್ಟ ಪಡೆದವರು ನಟಿ ಸುಧಾರಾಣಿ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರವರ ಚೊಚ್ಚಲ ಚಿತ್ರ 'ಆನಂದ್' ಮೂಲಕ ಸಿನಿ ಅಂಗಳದಲ್ಲಿ 'ಹೀರೋಯಿನ್' ಆಗಿ ಮಿನುಗಲು ಆರಂಭಿಸಿದಾಗ ಸುಧಾರಾಣಿ ರವರಿಗಿನ್ನೂ ಕೇವಲ 12 ವರ್ಷ. [ನಟಿ ಸುಧಾರಾಣಿ ಮಾಡಿರುವ ಸಾಧನೆ ಬಗ್ಗೆ ನಿಮಗೆಷ್ಟು ಗೊತ್ತು?]

  ಏಳನೇ ಕ್ಲಾಸ್ ನಲ್ಲಿ ಓದುತ್ತಿರುವಾಗಲೇ, 'ನಾಯಕಿ' ಆದ ಸುಧಾರಾಣಿ ಅತ್ತ ಸ್ಕೂಲ್, ಇತ್ತ ಶೂಟಿಂಗ್...ಅದೇ ಗ್ಯಾಪ್ ನಲ್ಲಿ ಅಭಿಮಾನಿಗಳು...ಈ ಎಲ್ಲವನ್ನೂ ಮ್ಯಾನೇಜ್ ಮಾಡಲು ಆಗದೆ ಪಟ್ಟ ಹಿಂಸೆ ಹೇಳತೀರದು. [ಸುಧಾರಾಣಿ ವೈಯುಕ್ತಿಕ ಜೀವನದ ಬಗ್ಗೆ ಯಾರಿಗೂ ಗೊತ್ತಿಲ್ಲದ ಕಠೋರ ಸತ್ಯ!]

  ಮೊನ್ನೆಯಷ್ಟೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಫ್ಲ್ಯಾಶ್ ಬ್ಯಾಕ್ ಗೆ ತೆರಳಿದ ನಟಿ ಸುಧಾರಾಣಿ ಕೆಲವು ವಿಷಯಗಳನ್ನ ಬಾಯ್ಬಿಟ್ಟರು. ಅದೆಲ್ಲವನ್ನೂ ಸುಧಾರಾಣಿ ರವರ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ.....

  ಹುಟ್ಟುವಾಗಲೇ ಬಹುಮಾನ ಜಸ್ಟ್ ಮಿಸ್!

  ಹುಟ್ಟುವಾಗಲೇ ಬಹುಮಾನ ಜಸ್ಟ್ ಮಿಸ್!

  ''ನಾನು ಹುಟ್ಟಿದ ನರ್ಸಿಂಗ್ ಹೋಮ್ ನಲ್ಲಿ, 100ನೇ ಮಗುವಿಗೆ ಬಹುಮಾನ ಇಟ್ಟಿದ್ದರು. ಆಗ, ಅಲ್ಲಿನ ಡಾಕ್ಟರ್ ಕೂಡ ಎಕ್ಸ್ ಪೆಕ್ಟ್ ಮಾಡ್ತಿದ್ರು. ನಾನು 99ನೇ ಮಗುವಾಗಿ ಹುಟ್ಟಿದೆ. 100ನೇ ಮಗುವಾಗಿ ಡಾಕ್ಟರ್ ಮಗು ಜನಿಸಿತು'' - ಸುಧಾರಾಣಿ

  ತುಂಬಾ ಮುದ್ದು!

  ತುಂಬಾ ಮುದ್ದು!

  ''ಚಿಕ್ಕವಯಸ್ಸಿನಲ್ಲಿ ನಾನು ನಡೆದ ಬಗ್ಗೆ ಜ್ಞಾಪಕವೇ ಇಲ್ಲ. ಯಾವಾಗಲೂ ಯಾರಾದರೂ ಎತ್ತಿಕೊಂಡು ಇರ್ತಿದ್ರು. ತುಂಬಾ ಮುದ್ದು ಮಾಡ್ತಿದ್ರು ಎಲ್ಲರೂ'' - ಸುಧಾರಾಣಿ

  ಹತ್ತು ವರ್ಷದ ನಂತರ ಹುಟ್ಟಿದ್ದು!

  ಹತ್ತು ವರ್ಷದ ನಂತರ ಹುಟ್ಟಿದ್ದು!

  ''ಇಬ್ಬರೂ ಗಂಡು ಮಕ್ಕಳು ಆದಾಗ, ಹೆಣ್ಣು ಮಗು ಆಗಲಿ ಎನ್ನುವ ಆಸೆ ಇತ್ತು. ಹತ್ತು ವರ್ಷ ಆದ್ಮೇಲೆ ಅವಳು ಹುಟ್ಟಿದ್ದು. ಹೆಣ್ಣು ಮಗು ಆದರೆ ಲಕ್ಷ್ಮಿ ಹೆಸರು ಇಡ್ತೀನಿ ಅಂತ ದೇವರ ಹತ್ರ ಹರಕೆ ಮಾಡಿಕೊಂಡಿದ್ದೆ. ಆಮೇಲೆ ಜಯಶ್ರೀ ಅಂತ ಹೆಸರು ಇಟ್ಟೆ. ಹುಟ್ಟಿದಾಗ ತುಂಬಾ ಮುದ್ದಾಗಿ ಇದ್ದಳು'' - ನಾಗಲಕ್ಷ್ಮಿ, ಸುಧಾರಾಣಿ ತಾಯಿ

  ಭರತನಾಟ್ಯ ಕಲಾವಿದೆ

  ಭರತನಾಟ್ಯ ಕಲಾವಿದೆ

  ''ನನಗೆ ಡ್ಯಾನ್ಸ್ ಕಲಿಯಬೇಕು ಅಂತ ತುಂಬಾ ಆಸೆ ಇತ್ತು. ಆಗಿನ ಕಾಲದಲ್ಲಿ ಅದಕ್ಕೆಲ್ಲಾ ಬಿಡ್ತಾ ಇರಲಿಲ್ಲ. ಹಾಗಾಗಿ ನನ್ನ ಮಗಳು ಕಲಿಯಲಿ ಅಂತ ಭರತನಾಟ್ಯ ಕಲಿಸಿದೆ'' - ನಾಗಲಕ್ಷ್ಮಿ, ಸುಧಾರಾಣಿ ತಾಯಿ

  ನಿನ್ನಂಥ ತಂಗಿ ಇಲ್ಲ!

  ನಿನ್ನಂಥ ತಂಗಿ ಇಲ್ಲ!

  ''ನನಗೆ - ಅವಳಿಗೆ ವಯಸ್ಸು ಎಷ್ಟು ಹೆಚ್ಚು-ಕಮ್ಮಿ ಇದೆ ಅಂದ್ರೆ, ನಾನು ಅವಳನ್ನ ತಂಗಿ ಆಗಿ ಯಾವತ್ತೂ ನೋಡಿಲ್ಲ. ನನ್ನ ಮಗಳಾಗಿ ನೋಡಿಕೊಂಡಿದ್ದೀನಿ. ಖಂಡಿತವಾಗಲೂ ನಿನ್ನಂತಹ ತಂಗಿ ಇಲ್ಲ'' - ಅರುಣ್, ಸುಧಾರಾಣಿ ಸಹೋದರ

  ಪಾರ್ವತಮ್ಮ ನೋಡಿ ಸೆಲೆಕ್ಟ್ ಮಾಡಿದ್ರು

  ಪಾರ್ವತಮ್ಮ ನೋಡಿ ಸೆಲೆಕ್ಟ್ ಮಾಡಿದ್ರು

  ''ಒಂದು ಮುಂಜಿ ಫಂಕ್ಷನ್ ನಲ್ಲಿ ಪಾರ್ವತಮ್ಮ ಅವರು ನನ್ನ ನೋಡಿ ಹೀರೋಯಿನ್ ಆಗಬಹುದು ಅಂತ 'ಆನಂದ್' ಸಿನಿಮಾಗೆ ಸೆಲೆಕ್ಟ್ ಮಾಡಿದರು. ಅವರೇ ನನಗೆ ಸುಧಾರಾಣಿ ಅಂತ ಹೆಸರು ಕೊಟ್ಟಿದ್ದು'' - ಸುಧಾರಾಣಿ

  7th ಎಕ್ಸಾಂ ಬರೆಯಲಿಲ್ಲ!

  7th ಎಕ್ಸಾಂ ಬರೆಯಲಿಲ್ಲ!

  ''ಏಳನೇ ಕ್ಲಾಸ್ ನಲ್ಲಿ ಓದುವಾಗಲೇ 'ಆನಂದ್' ಸಿನಿಮಾ ಮಾಡಿದ್ದು. 7th ಎಕ್ಸಾಂ ಕೂಡ ನಾನು ಬರೆದಿರಲಿಲ್ಲ'' - ಸುಧಾರಾಣಿ

  'ಆನಂದ್' ಹಿಟ್ ಆದ್ಮೇಲೆ....

  'ಆನಂದ್' ಹಿಟ್ ಆದ್ಮೇಲೆ....

  '''ಆನಂದ್' ಹಿಟ್ ಆದ್ಮೇಲೆ ಸ್ಕೂಲ್ ಬಿಡೋ ಟೈಮ್ ನಲ್ಲಿ, ಗೇಟ್ ಮುಂದೆ ಜನ ತುಂಬಿರೋರು ಆಟೋಗ್ರಾಫ್ ಗಾಗಿ. ನನಗೆ ಒಂದೊಂದು ಬಾರಿ ತುಂಬಾ ಹಿಂಸೆ ಆಗ್ತಿತ್ತು'' - ಸುಧಾರಾಣಿ

  ಕ್ಲಾಸ್ ರೂಮ್ ಗೆ ಕಲ್ಲು ಹೊಡೆಯುತ್ತಿದ್ದರು!

  ಕ್ಲಾಸ್ ರೂಮ್ ಗೆ ಕಲ್ಲು ಹೊಡೆಯುತ್ತಿದ್ದರು!

  ''ನಾನಿದ್ದ ಕ್ಲಾಸ್ ರೂಮ್ ರೋಡ್ ಗೆ ಇತ್ತು. ಕೆಲವೊಂದು ಬಾರಿ ಪೇಪರ್ ನಲ್ಲಿ ಕಲ್ಲು ಇಟ್ಟು ಎಸೆಯುತ್ತಿದ್ದರು. ತುಂಬಾ ಸಲ ಆ ತರ ಆಗಿತ್ತು. ಅದೇ ಹಿಂಸೆ'' - ಸುಧಾರಾಣಿ

  ಹತ್ತನೇ ಕ್ಲಾಸ್ ಕಂಪ್ಲೀಟ್ ಮಾಡಬೇಕು!

  ಹತ್ತನೇ ಕ್ಲಾಸ್ ಕಂಪ್ಲೀಟ್ ಮಾಡಬೇಕು!

  ''ನಮ್ಮ ತಾಯಿಗೆ ಹತ್ತನೇ ಕ್ಲಾಸ್ ಆದರೂ ಕಂಪ್ಲೀಟ್ ಮಾಡಲಿ ಅಂತ ಆಸೆ ಇತ್ತು. ಸ್ಕೂಲ್ ಗೆ ಹೋಗುವಾಗ ಸಮಸ್ಯೆ ಆಗುತ್ತೆ ಅಂತ ಶಿವಾಜಿನಗರಕ್ಕೆ ಹೋಗಿ ಒಂದು ಬುರ್ಕಾ ಕೊಂಡುಕೊಂಡು ಬಂದಿದ್ವಿ'' - ಅರುಣ್, ಸುಧಾರಾಣಿ ಸಹೋದರ

  ಸಿನಿಮಾ ನೋಡುವಾಗಲೂ ಬುರ್ಕಾ

  ಸಿನಿಮಾ ನೋಡುವಾಗಲೂ ಬುರ್ಕಾ

  ''ಸಿನಿಮಾ ರಿಲೀಸ್ ಆದ್ಮೇಲೆ, ಆಡಿಯನ್ಸ್ ಮಧ್ಯೆ ಕೂತು ಸಿನಿಮಾ ನೋಡಬೇಕು ಅಂತ ಆಸೆ ಪಡೋಳು. ಹೀಗಾಗಿ ಬುರ್ಕಾ ಹಾಕಿಸಿ, ನಾವೆಲ್ಲಾ ಒಟ್ಟಿಗೆ ಹೋಗ್ತಿದ್ವಿ'' - ಅರುಣ್, ಸುಧಾರಾಣಿ ಸಹೋದರ

  ಪಿ.ಎಚ್.ವಿಶ್ವನಾಥ್ ಗೆ ಥ್ಯಾಂಕ್ಸ್!

  ಪಿ.ಎಚ್.ವಿಶ್ವನಾಥ್ ಗೆ ಥ್ಯಾಂಕ್ಸ್!

  ''ಸುಧಾರಾಣಿಗೆ ಕಲಾವಿದೆ ಅಂತ ಹೆಸರು ಬರುವುದಕ್ಕೆ ಪಿ.ಎಚ್.ವಿಶ್ವನಾಥ್ ಮತ್ತು 'ಪಂಚಮವೇದ' ಕಾರಣ. ಯಾಕಂದ್ರೆ, ಅದಕ್ಕೂ ಮುನ್ನ ಆ ತರಹದ ಪಾತ್ರ ನಾನು ಮಾಡಿರಲಿಲ್ಲ'' - ಸುಧಾರಾಣಿ

  English summary
  Kannada Actress Sudha Rani's life story was revealed in Zee Kannada Channel's popular show Weekend With Ramesh season 2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X