twitter
    For Quick Alerts
    ALLOW NOTIFICATIONS  
    For Daily Alerts

    ಎಂಜಿನಿಯರ್ ಆಗ್ಬೇಕಿದ್ದ ಎಸ್.ಪಿ.ಬಿಗೆ ಅದೃಷ್ಟ ಖುಲಾಯಿಸಿದ ಸತ್ಯಕಥೆ

    By Harshitha
    |

    ಭಾರತದ ಪ್ರಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅನ್ನೋದು ನಿಮಗೆ ಗೊತ್ತು. ಭಾರತದ ಹೆಮ್ಮೆಯ 'ಪದ್ಮಶ್ರೀ', 'ಪದ್ಮಭೂಷಣ' ಸೇರಿದಂತೆ ಸಾಲು ಸಾಲು ಪ್ರಶಸ್ತಿಗಳನ್ನ ಪಡೆದಿರುವ ಎಸ್.ಪಿ.ಬಿ ಬಾಲ್ಯ ಜೀವನದ ಬಗ್ಗೆ ಅಷ್ಟಾಗಿ ಯಾರಿಗೂ ಗೊತ್ತಿಲ್ಲ.

    ಆಂಧ್ರ ಪ್ರದೇಶದ ಕೊನೇಟಮ್ಮಪೇಟಾ ಎಂಬ ಪುಟ್ಟ ಊರಲ್ಲಿ ಜನಿಸಿದ ಎಸ್.ಪಿ.ಬಾಲಸುಬ್ರಹ್ಮಣ್ಯಂ, ತಂದೆಗೆ ಹೆಚ್ಚು ಹೊರೆ ಆಗದೆ ಸ್ಕಾಲರ್ಶಿಪ್ ನಲ್ಲೇ ಓದಿದ ಪ್ರತಿಭಾವಂತ. [ಭಾರತದ ಹೆಮ್ಮೆ ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ಆಗಿತ್ತು ಮಹಾ ಮೋಸ!]

    ಎಂಜಿನಿಯರ್ ಆಗ್ಬೇಕು ಅಂತ ಕನಸು ಹೊತ್ತಿದ್ದ ಎಸ್.ಪಿ.ಬಿ ಎಂದೂ ಗಾಯಕರಾಗಿ ಚಿತ್ರರಂಗಕ್ಕೆ ಕಾಲಿಡುವ ಆಲೋಚನೆ ಹೊಂದಿರಲಿಲ್ಲ. ಆದರೂ, ಅದೃಷ್ಟ ಎಸ್.ಪಿ.ಬಿ ಮನೆ ಬಾಗಿಲಿಗೆ ಹುಡುಕ್ಕೊಂಡು ಬಂದಿದ್ದು ಹೇಗೆ?

    ಎಲ್ಲವನ್ನೂ ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ....

    ತಂದೆ ಕಷ್ಟ ಪಡುತ್ತಿದ್ದರು!

    ತಂದೆ ಕಷ್ಟ ಪಡುತ್ತಿದ್ದರು!

    ''ನಮ್ಮ ತಂದೆ ನಾಟಕ ಮಾಡಿ, ರಾತ್ರಿ ಎಲ್ಲಾ ಕಷ್ಟಪಡುತ್ತಿದ್ದರು. ಅದನ್ನ ನೋಡಿ ನಾನು ಬೇಗ ದುಡಿಯಲು ಶುರು ಮಾಡಿ ಅವರಿಗೆ ಸಹಾಯ ಮಾಡಬೇಕು ಅಂತ ಸದಾ ಅಂದುಕೊಳ್ಳುತ್ತಿದ್ದೆ. ನನಗೆ ಸಂಗೀತದ ಮೇಲೆ ಆಸಕ್ತಿ ಇತ್ತು. ಆದ್ರೆ, ಅದನ್ನೇ ಪ್ರೊಫೆಶನ್ ಆಗಿ ತೆಗೆದುಕೊಳ್ತೀನಿ ಅಂತ ಎಂದೂ ಅಂದುಕೊಂಡಿರಲಿಲ್ಲ'' - ಎಸ್.ಪಿ.ಬಾಲಸುಬ್ರಹ್ಮಣ್ಯಂ [ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ಡಾ.ರಾಜ್ ಕ್ಷಮೆ ಕೇಳಿದ ಗುಟ್ಟು ರಟ್ಟಾಯ್ತು!]

    ಎಸ್.ಪಿ.ಬಿ ಬಗ್ಗೆ ಅಮ್ಮನ ಮಾತು

    ಎಸ್.ಪಿ.ಬಿ ಬಗ್ಗೆ ಅಮ್ಮನ ಮಾತು

    ''ತೊಟ್ಟಿಲಲ್ಲಿ ಮಲಗಿಸಿ ಲಾಲಿ ಹಾಡು ಹಾಡ್ತಾ ಇದ್ದೆ. ನನಗೆ ಆಗ 17 ವರ್ಷ. ನಾನೇ ಚಿಕ್ಕವಳು. ನಂಗೆ ನೀನು ಪುಟ್ಟ ಪಾಪು. ನಿನ್ನೆ ನೋಡ್ತಾ ಇದ್ರೆ ತುಂಬಾ ಖುಷಿ ಆಗ್ತಾ ಇತ್ತು. ನೀನು ನಿನ್ನ ತಂದೆ ತರಹನೇ ಕಾಣ್ತೀಯ. ನೀನು ಮೊದಲನೇ ಮಗ ಆದ್ರಿಂದ ನಿನ್ನ ಎಲ್ಲರೂ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ನಿನ್ನ ತಂದೆಗೆ ನೀನು ಅಂದ್ರೆ ಪ್ರಾಣ'' - ಶಕುಂತಲಮ್ಮ, ತಾಯಿ [ಗಾನ ಕೋಗಿಲೆ ಎಸ್.ಪಿ.ಬಾಲಸುಬ್ರಹ್ಮಣ್ಯಂಗೆ ಕೈ ಕೊಟ್ಟ ಹುಡುಗಿ ಯಾರು?]

    ಹಾಡು ಅಂದ್ರೆ ಹುಚ್ಚು

    ಹಾಡು ಅಂದ್ರೆ ಹುಚ್ಚು

    ''ಚಿಕ್ಕವಯಸ್ಸಿನಿಂದಲೂ ನಿನಗೆ ಹಾಡು ಅಂದ್ರೆ ಹುಚ್ಚು. ಮಲಗಿಸುವಾಗ ತೊಟ್ಟಿಲಲ್ಲಿ ಲಾಲಿ ಹಾಡು ಹಾಡಬೇಕಿತ್ತು. ಅದು 'ಆಜಾರೆ..ಆಜಾರೆ..ಜುಂಜುಂ ಬರಸಾರೆ..' ಹಿಂದಿ ಹಾಡೇ ಬೇಕಿತ್ತು. ನಿನ್ನಿಂದ ನಾನು ಏನೂ ಕೆಲಸ ಮಾಡೋಕ್ಕಾಗ್ತಾ ಇರ್ಲಿಲ್ಲ'' - ಶಕುಂತಲಮ್ಮ, ತಾಯಿ [ಮಕ್ಕಳು ಏನ್ ಓದ್ತಿದ್ದಾರೆ ಅನ್ನೋದೇ ಎಸ್.ಪಿ.ಬಿಗೆ ಗೊತ್ತಿರಲಿಲ್ಲ!]

    ತಂದೆ ಹರಿಕಥೆ ವಿದ್ವಾಂಸ

    ತಂದೆ ಹರಿಕಥೆ ವಿದ್ವಾಂಸ

    ''ನಿನ್ನ ತಂದೆ ಹರಿಕಥೆ ವಿದ್ವಾಂಸರಾಗಿದ್ರು. ನೀನು ನಿನ್ನ ಸಾಧನೆಯಿಂದ ತಂದೆಯ ಹೆಸರನ್ನು ಇನ್ನೂ ಎತ್ತರಕ್ಕೆ ಬೆಳೆಸಿದ್ದೀಯ. ನನಗೆ ಅದೇ ಸಾಕು. ನನ್ನ ಹಾಗೂ ನಿನ್ನ ತಂದೆಯ ಆಶೀರ್ವಾದ ಸದಾ ನಿನ್ನ ಮೇಲೆ ಇರುತ್ತೆ'' - ಶಕುಂತಲಮ್ಮ, ತಾಯಿ [ಎಸ್.ಪಿ.ಬಿ ಮಾಡಿರುವ ದಾಖಲೆಗಳು ಅಬ್ಬಬ್ಬಾ.! ಒಂದಾ..ಎರಡಾ.!!?]

    ನನ್ನ ಅದೃಷ್ಟ

    ನನ್ನ ಅದೃಷ್ಟ

    ''ಅವರ ಮಗನಾಗಿ ಹುಟ್ಟಿದ್ದು ನನ್ನ ಅದೃಷ್ಟ. ಅದು ನಮ್ಮ ಅಪ್ಪನ ವಿಗ್ರಹ. ಏನೇ ಮಾಡಿದರೂ ಅವರ ಋಣ ತೀರಿಸುವುದು ಕಷ್ಟ. ನಾನು ಇಲ್ಲಿ ಇರುವುದಕ್ಕೆ ಕಾರಣ ನಮ್ಮ ತಂದೆ. ತುಂಬಾ ಕಷ್ಟ ಪಟ್ಟು ನಮ್ಮನ್ನ ಅವರು ಬೆಳೆಸಿದ್ದಾರೆ. ಹರಿಕಥೆ ಮಾಡಿ ದೊಡ್ಡ ಸಂಸಾರ ನಡೆಸಿದರು ಅವರು'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

    ಸ್ಕಾಲರ್ಶಿಪ್ ನಲ್ಲೇ ಓದಿದ್ದು!

    ಸ್ಕಾಲರ್ಶಿಪ್ ನಲ್ಲೇ ಓದಿದ್ದು!

    ''ನಮ್ಮ ತಂದೆಗೆ ಕಷ್ಟ ಕೊಡದೆ ಸ್ಕಾಲರ್ ಶಿಪ್ ನಲ್ಲಿ ಓದುತ್ತಾ ಬಂದೆ. ನಾನು ಗಾಯಕ ಆಗ್ಬೇಕು ಅಂತ ಎಂದೂ ಅಂದುಕೊಂಡವನಲ್ಲ. ನಾನು ಎಂಜಿನಿಯರ್ ಆಗ್ಬೇಕಿತ್ತು. ಅದೇ ನನ್ನ ಕನಸಾಗಿತ್ತು. ಹವ್ಯಾಸದಿಂದ ಶುರು ಮಾಡಿದೆ. ಆದ್ರೆ, ಬರ್ತಾ ಬರ್ತಾ ಅವಕಾಶಗಳು ಜಾಸ್ತಿ ಆಯ್ತು. ಅವಕಾಶಗಳು ಜಾಸ್ತಿ ಆಗ್ತಿದ್ದಂತೆ ಕಾಲೇಜಿಗೆ ಹೋಗುವುದೇ ಕಷ್ಟವಾಯ್ತು'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

    ಆಯ್ಕೆ ಮಾಡಿದ್ದು...

    ಆಯ್ಕೆ ಮಾಡಿದ್ದು...

    ''ಮೊದಲು ರಿಹರ್ಸಲ್ ಮಾಡ್ಬೇಕಿತ್ತು. ಆಮೇಲೆ ರೆಕಾರ್ಡಿಂಗ್ ಮಾಡ್ಬೇಕಿತ್ತು. ಕಾಲೇಜಿನಲ್ಲಿ ಅಟೆಂಡೆನ್ಸ್ ಕಡಿಮೆ ಆಗ್ತಾ ಇತ್ತು. ಆಗ ನಮ್ಮ ತಂದೆ ಹೇಳಿದಿಷ್ಟೇ - ''ಎರಡು ಕುದುರೆ ಮೇಲೆ ಸವಾರಿ ಮಾಡಬೇಡ'' ಅಂತ. ಅವಕಾಶ ಬಿಟ್ಟರೆ ಸಿಗಲ್ಲ ಅಂತ ಸಂಗೀತ ಆಯ್ಕೆ ಮಾಡಿಕೊಂಡೆ'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

    ಮೊದಲು ರೆಕಾರ್ಡ್ ಮಾಡಿದ್ದು!

    ಮೊದಲು ರೆಕಾರ್ಡ್ ಮಾಡಿದ್ದು!

    ''ಕಾಳಹಸ್ತಿಯಲ್ಲಿ ಓದುವಾಗ ಟೇಪ್ ರೆಕಾರ್ಡರ್ ಬಂತು ಮೊದಲು. ಸ್ಕೂಲ್ ನಲ್ಲಿ ಹಾಡುವಾಗ ನನ್ನ ಮೇಷ್ಟ್ರು ಜಿ.ವಿ.ಸುಬ್ರಮಯ್ಯ ಅವರು ರೆಕಾರ್ಡ್ ಮಾಡ್ತೀವಿ ಅಂದ್ರು. ಅವತ್ತು ನಾನು ಹಾಡಿದ ಮೊದಲ ಹಾಡು ರೆಕಾರ್ಡ್ ಆಯ್ತು. 55 ವರ್ಷಗಳ ಹಿಂದೆ'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

    ಸ್ವಂತ ಆರ್ಕೇಸ್ಟ್ರಾ

    ಸ್ವಂತ ಆರ್ಕೇಸ್ಟ್ರಾ

    ''ನೆಲ್ಲೂರಿನಲ್ಲಿ ಒಂದು ಆರ್ಕೇಸ್ಟ್ರಾ ಶುರುಮಾಡಿದ್ವಿ. ಅದರಲ್ಲಿ ನಾನು ಹಾಡುವಾಗ ಮೊಹಮ್ಮದ್ ರಫೀ ಹಾಡುಗಳು ತುಂಬಾ ಇಷ್ಟ ಆಗ್ತಿತ್ತು. ನನಗೆ ಹಾಡುವ ಸ್ಫೂರ್ತಿ ಅಂದ್ರೆ ಅವರೇ. He is one of the finest singers. ನಾನು ಅವರನ್ನ ಭೇಟಿ ಮಾಡೋಕೆ ಆಗಲಿಲ್ಲ. ಆದ್ರೆ, ನನಗೆ ಅವರೇ ಇನ್ಸ್ ಪಿರೇಷನ್. '' - ಎಸ್.ಪಿ.ಬಾಲಸುಬ್ರಹ್ಮಣ್ಯಂ

    ಜಾನಕಿ ಅಮ್ಮಗೆ ಥ್ಯಾಂಕ್ಸ್!

    ಜಾನಕಿ ಅಮ್ಮಗೆ ಥ್ಯಾಂಕ್ಸ್!

    ''ಗಾಯನ ನನ್ನ ಪ್ರೊಫೆಶನ್ ಆಗುತ್ತೆ ಅಂತ ನಾನು ಎಂದೂ ಅಂದುಕೊಂಡಿರಲಿಲ್ಲ. ನನ್ನ ತಲೆಗೆ ಅಂತಹ ಮೊದಲ ಬೀಜ ನಾಟಿದವರು ಜಾನಕಿ ಅಮ್ಮ. ಆಗ ನನಗಿನ್ನೂ 16-17 ವರ್ಷ ವಯಸ್ಸು. ಕಾಂಪಿಟೇಷನ್ ಒಂದರಲ್ಲಿ ನಾನು ಹಾಡುವುದನ್ನ ನೋಡಿಬಿಟ್ಟು ಯಾಕೆ ಸಿನಿಮಾದಲ್ಲಿ ಹಾಡಬಾರದು ಅಂತ ಕೇಳಿದರು'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

    ಎಲ್ಲರೂ ಸಲಹೆ ಮಾಡಿದ್ದು ಒಂದೇ!

    ಎಲ್ಲರೂ ಸಲಹೆ ಮಾಡಿದ್ದು ಒಂದೇ!

    ''ಒಂದು ವರ್ಷ ನಾನು ಎಲ್ಲರ ಮನೆಗೆ ಹೋಗಿ ಆಡಿಷನ್ ಕೊಟ್ಟೆ. ಆಗ ನನಗಿನ್ನೂ ಚಿಕ್ಕ ವಯಸ್ಸು, ಓದು ಅಂತ ಎಲ್ಲರೂ ಸಲಹೆ ಮಾಡಿದರು. ನಂತರ ನನ್ನನ್ನ ಹುಡುಕ್ಕೊಂಡು ಬಂದು ಹಾಡಿಸಿದರು. ಮೊದಲ ಹಾಡು ತೆಲುಗಿನಲ್ಲಿ ನಾನು ಹಾಡಿದ್ದು 1966 ಡಿಸೆಂಬರ್ 15 ರಂದು'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

    'ಶಂಕರಾಭರಣಂ' ಸಿಕ್ಕಿದ್ದು....

    'ಶಂಕರಾಭರಣಂ' ಸಿಕ್ಕಿದ್ದು....

    ''ಶಂಕರಾಭರಣಂ' ಸಿಕ್ಕಿದ್ದು ನನ್ನ ಪುಣ್ಯ. ಚಿತ್ರದ ನಿರ್ದೇಶಕರು ಕೆ.ವಿಶ್ವನಾಥ್ ನನ್ನ ಸಂಬಂಧಿ. ಸಿನಿಮಾಗೆ ಹಾಡಬೇಕು ಅಂತ ಅವರು ನನ್ನ ಕೇಳಿದ್ರು. ನಾನು ಟ್ರೇನ್ಡ್ ಸಿಂಗರ್ ಅಲ್ಲ. ಯಾವ ರಾಗ ಅನ್ನೋದು ಕೂಡ ನನಗೆ ಗೊತ್ತಿಲ್ಲ. ಬೇಡ ನನ್ನ ಬಿಟ್ಟುಬಿಡಿ ಅಂತ ಹೇಳಿದೆ'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

    ರಾಷ್ಟ್ರ ಪ್ರಶಸ್ತಿ ಬಂತು

    ರಾಷ್ಟ್ರ ಪ್ರಶಸ್ತಿ ಬಂತು

    ''ಸಿನಿಮಾ ನನ್ನಿಂದ ಕೆಟ್ಟು ಹೋಗಬಾರದು ಅಂತ ನಾನು ಹೇಳಿದ್ದೆ. ಆದರೂ, ನನಗೆ ತುಂಬಾ ಫೋರ್ಸ್ ಮಾಡಿದರು. ತುಂಬಾ ಪ್ರ್ಯಾಕ್ಟೀಸ್ ಮಾಡಿ ಹಾಡಿದ್ದು. ರಾಷ್ಟ್ರ ಪ್ರಶಸ್ತಿ ಬಂತು. ಅಲ್ಲಿಂದ ನನಗೆ ಗೌರವ ಹೆಚ್ಚಾಯ್ತು'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

    ಶಸ್ತ್ರ ಚಿಕಿತ್ಸೆಯಲ್ಲೂ ರೆಕಾರ್ಡ್

    ಶಸ್ತ್ರ ಚಿಕಿತ್ಸೆಯಲ್ಲೂ ರೆಕಾರ್ಡ್

    ''ಮಧ್ಯರಾತ್ರಿಯಲ್ಲಿ ಎ.ಸಿ. ಆನ್ ನಲ್ಲಿದ್ದು ಐಸ್ ಕ್ರೀಮ್ ತಿಂದರೂ ನನಗೆ ಏನೂ ಅಗಲ್ಲ. ನಾನು ನನ್ನ ವೃತ್ತಿಯನ್ನ ಪೂಜಿಸುತ್ತೇನೆ. ಎರಡು ಬಾರಿ ನನಗೆ ಗಂಟಲಿನ ಶಸ್ತ್ರ ಚಿಕಿತ್ಸೆ ಆಗಿದೆ. ಇದರಲ್ಲೂ ನನ್ನದು ರೆಕಾರ್ಡ್. ಈ ದೇಶದಲ್ಲಿ ಎರಡು ಬಾರಿ ವೋಕಲ್ ಕಾರ್ಡ್ ಸರ್ಜರಿ ಮಾಡಿಸಿಕೊಂಡಿರೋ ಗಾಯಕ ನಾನೇ'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

    ಥ್ಯಾಂಕ್ಸ್ ರಮೇಶ್

    ಥ್ಯಾಂಕ್ಸ್ ರಮೇಶ್

    ''ನನ್ನನ್ನ ಎಲ್ಲಾ ರಾಜ್ಯಗಳಲ್ಲಿ ಪ್ರೀತಿಸುತ್ತಾರೆ. ಆದ್ರೆ, ಕರ್ನಾಟಕದಲ್ಲಿ ಮಾತ್ರ ನನ್ನ ಎಲ್ಲರಿಗಿಂತ ಹೆಚ್ಚು ಪ್ರೀತಿಸುತ್ತಾರೆ. ಯಾಕೆ ಅಂತ ಗೊತ್ತಿಲ್ಲ. ಇದರಲ್ಲಿ ಏನೋ ಒಂದು ಸ್ಪೆಷಲ್ ಇದೆ. ಬೇರೆ ಯಾವ ಭಾಷೆಯಲ್ಲಿ ಮಾಡಿದರೂ, ಈ ತರ ಬೇರೆಲ್ಲೂ ಆಗುವುದಿಲ್ಲ. ಕರ್ನಾಟಕದಲ್ಲಿ ಮಾತ್ರ ಹೀಗೆ ಮಾಡುವುದಕ್ಕೆ ಸಾಧ್ಯ. ಎಲ್ಲಾ ನಮ್ಮಿಂದ ರಮೇಶ್'' - ಎಸ್.ಪಿ.ಬಾಲಸುಬ್ರಹ್ಮಣ್ಯಂ

    English summary
    Multilingual Singer S.P.Balasubrahmanyam's life story was revealed in Zee Kannada Channel's popular show Weekend With Ramesh.
    Friday, September 25, 2020, 14:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X