For Quick Alerts
  ALLOW NOTIFICATIONS  
  For Daily Alerts

  ಲೀಲಾವತಿ ಬಗ್ಗೆ ಶಿವರಾಜ್ ಕುಮಾರ್ ಮಾಡಿದ ಕಾಮೆಂಟ್

  By Harshitha
  |

  ಹಿರಿಯ ನಟಿ ಲೀಲಾವತಿ ಹಾಗೂ ಡಾ.ರಾಜ್ ಕುಮಾರ್ ಒಂದ್ಕಾಲದಲ್ಲಿ ಸೂಪರ್ ಹಿಟ್ ಜೋಡಿ. ಇವರಿಬ್ಬರು ತೆರೆ ಮೇಲೆ ಒಂದಾದ್ರು ಅಂದ್ರೆ, ಸಿನಿಮಾ ಸೂಪರ್ ಹಿಟ್ ಅಂತಲೇ ಲೆಕ್ಕ. ಇದೇ ಕಾರಣಕ್ಕೋ ಏನೋ, ಡಾ.ರಾಜ್ ಕುಮಾರ್-ಲೀಲಾವತಿ ಒಟ್ಟಿಗೆ 36 ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  ಯಾರಾದರೂ ಎರಡ್ಮೂರು ಸಿನಿಮಾ ಜೊತೆಗೆ ಮಾಡಿದ್ರು ಅಂದ್ರೆ ಗಾಸಿಪ್ ಹಬ್ಬಿಸುವವರು ನಮ್ಮ ಜನ. ಅಂದ್ಮೇಲೆ 36 ಸಿನಿಮಾದಲ್ಲಿ ಒಂದಾಗಿದ್ದಾರೆ ಅಂತ ಸುಮ್ನೆ ಬಿಡ್ತಾರಾ? [ವೀಕೆಂಡ್ ನಲ್ಲಿ ಅಮೋಘ ಕ್ಷಣಗಳ ಮೆಲುಕು ಹಾಕಲಿದ್ದಾರೆ ಲೀಲಾವತಿ]

  ಸಹಜವಾಗಿ ಡಾ.ರಾಜ್ ಕುಟುಂಬ ಹಾಗೂ ಲೀಲಾವತಿ ನಡುವೆ ಇರುವ ಒಡಕು-ಒಗ್ಗಟ್ಟಿನ ಬಗ್ಗೆ ಗಾಂಧಿನಗರದಲ್ಲಿ ತಲೆಗೊಂದು ಮಾತನಾಡುವವರಿದ್ದಾರೆ. ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಶಿವಣ್ಣ, ಲೀಲಾವತಿ ಅವರ ಮನೆಗೆ ತೆರಳಿ ತಮ್ಮ ಪುತ್ರಿ ಮದುವೆಗೆ ಆಹ್ವಾನಿಸಿದ್ದರು. [ಗಾಂಧಿನಗರದ ಅಚ್ಚರಿ.! ಲೀಲಾವತಿ ಮನೆಯಲ್ಲಿ ಶಿವರಾಜ್ ಕುಮಾರ್]

  ಇದೀಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲೂ ಹಿರಿಯ ನಟಿ ಲೀಲಾವತಿ ಬಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೆಚ್ಚುಗೆಯ ಮಾತಗಳನ್ನಾಡಿದರು. ಮುಂದೆ ಓದಿ.....

  ಎಲ್ಲರೂ ಕೇಳುವುದು ಒಂದೇ ಮಾತು..!

  ಎಲ್ಲರೂ ಕೇಳುವುದು ಒಂದೇ ಮಾತು..!

  ''ರಣಧೀರ ಕಂಠೀರವ' ಚಿತ್ರದಿಂದ 36 ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದೀವಿ. 'ಅಮ್ಮ' ಪಾತ್ರ ಬಿಟ್ಟು ಮಿಕ್ಕೆಲ್ಲಾ ಪಾತ್ರದಲ್ಲಿ ನಟಿಸಿದ್ದೇನೆ. ಬಹಳಷ್ಟು ಜನ ಪತ್ರಕರ್ತರು ನನಗೆ ಕೇಳಿದ್ದಾರೆ. ಎಲ್ಲರೂ ನನ್ನನ್ನ ಪ್ರೀತಿಯಿಂದ ಕೇಳುವ ಒಂದೇ ಒಂದು ಮಾತು, ''ಇಷ್ಟು ಅನ್ಯೋನ್ಯವಾಗಿ ನಟಿಸಿದ್ದೀರಲ್ಲಾ'' ಅಂತ'' - ಲೀಲಾವತಿ

  ಜೋಡಿ ಆಗೋಕೆ ಆಗುತ್ತಾ?

  ಜೋಡಿ ಆಗೋಕೆ ಆಗುತ್ತಾ?

  ''ಜೋಡಿ ಚೆನ್ನಾಗಿದೆ ಅಂತ ಎಲ್ಲರೂ ಬಾಯಲ್ಲಿ ಹೇಳಬಹುದೇ ಹೊರತು, ಹೇಳಿದ್ದೆಲ್ಲಾ ಜೋಡಿ ಆಗೋಕೆ ಆಗುತ್ತಾ? ಆಗಲ್ಲ.!''- ಲೀಲಾವತಿ

  ಲೀಲಾವತಿ ಬಗ್ಗೆ ಶಿವಣ್ಣ ಮಾತು

  ಲೀಲಾವತಿ ಬಗ್ಗೆ ಶಿವಣ್ಣ ಮಾತು

  ''ನನಗೆ ಲೀಲಾವತಿ ಅಂದ ತಕ್ಷಣ ಅವರ ಸ್ಮೈಲ್ ನೆನಪಾಗುತ್ತದೆ. ತುಂಬಾ innocent ಸ್ಮೈಲ್ ಅವರದ್ದು. ನನ್ನ ಚಿಕ್ಕವಯಸ್ಸಿಂದ ಅವರು ನೋಡಿದ್ದಾರೆ. ಅವರು ನಮ್ಮ ಫ್ಯಾಮಿಲಿ ಇದ್ದ ಹಾಗೆ. ನಮ್ಮ ತಾಯಿ ಜೊತೆ ಮತ್ತು ನಮ್ಮ ಫ್ಯಾಮಿಲಿ ಜೊತೆ ಅವರ ಒಡನಾಟ ಮರೆಯುವ ಹಾಗಿಲ್ಲ'' - ಶಿವರಾಜ್ ಕುಮಾರ್, ನಟ

  ಅಪ್ಪಾಜಿ ಜೊತೆ ನೋಡೋದೇ ಚೆಂದ!

  ಅಪ್ಪಾಜಿ ಜೊತೆ ನೋಡೋದೇ ಚೆಂದ!

  ''ಅಪ್ಪಾಜಿ ಜೊತೆಯಲ್ಲಿ ಅವರನ್ನ ನೋಡೋಕೆ ಚೆಂದ. ಅವರು ಮಾಡಿದ ಪಾತ್ರಗಳು ಅಷ್ಟು ಲವಲವಿಕೆಯಿಂದ ಇರೋದು'' - ಶಿವರಾಜ್ ಕುಮಾರ್, ನಟ

  ಕೆಮಿಸ್ಟ್ರಿ ಇದೆ!

  ಕೆಮಿಸ್ಟ್ರಿ ಇದೆ!

  ''ಸಿಪಾಯಿ ರಾಮು' , 'ಭಕ್ತ ಕುಂಬಾರ'...ಈ ಎರಡು ಸಿನಿಮಾ ನನಗೆ ಯಾವತ್ತೂ ಮರೆಯೋಕೆ ಆಗಲ್ಲ. Typical Husband and Wife relationship ನ ನೋಡಬಹುದು. ಇಬ್ಬರಲ್ಲಿ ಅಂತಹ ಕೆಮಿಸ್ಟ್ರಿ ಇತ್ತು'' - ಶಿವರಾಜ್ ಕುಮಾರ್, ನಟ

  ಬೆಸ್ಟ್ ಜೋಡಿ

  ಬೆಸ್ಟ್ ಜೋಡಿ

  ''ಹೇಗೆ ಭಾರತಿ-ವಿಷ್ಣುವರ್ಧನ್ ಒಳ್ಳೆ ಜೋಡಿ ಅಂತಾರೋ, ಹಾಗೇ, ರಾಜ್ ಕುಮಾರ್-ಲೀಲಾವತಿ ಅಂದ್ರೆ ಅದು ತಪ್ಪಾಗಲ್ಲ'' - ಶಿವರಾಜ್ ಕುಮಾರ್, ನಟ

  ಲೀಲಾವತಿ ನಟನೆ ಅದ್ಭುತ

  ಲೀಲಾವತಿ ನಟನೆ ಅದ್ಭುತ

  ''ಭಕ್ತ ಕುಂಬಾರ' ಚಿತ್ರದಲ್ಲಿ ಅವರ characterisation ಇದ್ಯಲ್ಲಾ. ಅದನ್ನ ಯಾವತ್ತೂ ಮರೆಯೋಕೆ ಆಗಲ್ಲ. ಅಷ್ಟು ಅದ್ಭುತವಾಗಿ ಮಾಡಿದ್ದಾರೆ'' - ಶಿವರಾಜ್ ಕುಮಾರ್, ನಟ

  ಒಳ್ಳೆ ಆರ್ಟಿಸ್ಟ್

  ಒಳ್ಳೆ ಆರ್ಟಿಸ್ಟ್

  ''ಅಪ್ಪಾಜಿ ಜೊತೆ ಹೀರೋಯಿನ್ ಆಗಿ ಮಾಡಿದ್ದಾರೆ ಜೊತೆಗೆ ಅತ್ತೆ ಪಾತ್ರ ಮಾಡಿದ್ದಾರೆ. ಒಳ್ಳೆ ಆರ್ಟಿಸ್ಟ್ ಗೆ ಸಿಗುವ ಲಕ್ಷಣ ಅದು'' - ಶಿವರಾಜ್ ಕುಮಾರ್, ನಟ

  ಸಪೋರ್ಟ್ ಯಾವತ್ತೂ ಇರುತ್ತೆ

  ಸಪೋರ್ಟ್ ಯಾವತ್ತೂ ಇರುತ್ತೆ

  ''We always love you and we will be loving you. ನಮ್ಮ ಸಪೋರ್ಟ್ ನಿಮಗೆ ಯಾವತ್ತೂ ಇರುತ್ತೆ'' - ಶಿವರಾಜ್ ಕುಮಾರ್, ನಟ

  ಶಿವಣ್ಣನ ಬಗ್ಗೆ ಲೀಲಾವತಿ ಮಾತು

  ಶಿವಣ್ಣನ ಬಗ್ಗೆ ಲೀಲಾವತಿ ಮಾತು

  ''ಶಭಾಸ್.! ಬಹಳ ಸಂತೋಷದ ವಿಷಯ. ಮುದ್ದಾದ ಮಾತು ಹೇಳಿದ್ರು. ದೇವರು ಶಿವರಾಜ್ ಕುಮಾರ್ ರವರಿಗೆ ಒಳ್ಳೆಯದು ಮಾಡಲಿ. ಚೆನ್ನಾಗಿ ಬಾಳಲಿ ಅವರು. ಅವರ ಮನಸ್ಸಿಗೆ ಯಾರೂ ನೋವು ಕೊಡದೇ ಇರಲಿ ಅಂತ ನಾನು ಹರಸುತ್ತೇನೆ'' - ಲೀಲಾವತಿ

  English summary
  Kannada Actor Shiva Rajkumar spoke about Kannada Veteran Actress Leelavathi in Zee Kannada Channel's popular show Weekend With Ramesh season 2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X