»   » 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದರ್ಶನ್ ಹೇಳಿರುವ ಸತ್ಯಗಳೇನು?

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದರ್ಶನ್ ಹೇಳಿರುವ ಸತ್ಯಗಳೇನು?

Posted By:
Subscribe to Filmibeat Kannada

ಅಂತೂ ದರ್ಶನ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಘಳಿಗೆ ಬಂದೇ ಬಿಟ್ಟಿದೆ. ಜೀ ಕನ್ನಡ ವಾಹಿನಿಯ ಜನಪ್ರಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗವಹಿಸಿದ್ದಾರೆ.

ಈಗಾಗಲೇ ಕಾರ್ಯಕ್ರಮದ ಚಿತ್ರೀಕರಣ ಮುಗಿದದ್ದು, ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ದರ್ಶನ್ ಜೀವನಚರಿತ್ರೆ ಅನಾವರಣವಾಗಲಿದೆ. [ರಿಯಾಲಿಟಿ ಶೋಗೆ ಬರಲ್ಲ ಅಂದಿದ್ದ ದರ್ಶನ್ ವೀಕೆಂಡ್ ಗೆ ಬಂದ್ರು]

ಎಷ್ಟೋ ಮಂದಿಗೆ ಗೊತ್ತಿಲ್ಲದ ದರ್ಶನ್ ರವರ ನೋವು-ನಲಿವಿನ ಸಂಗತಿ, ದರ್ಶನ್ ಬೆಳೆದು ಬಂದ ಹಾದಿ, ದರ್ಶನ್ ರವರ ಇಷ್ಟ-ಕಷ್ಟಗಳು ಈ ವಾರದ 'ವೀಕೆಂಡ್ ವಿತ್ ರಮೇಶ್' ವಿಶೇಷ. ಮುಂದೆ ಓದಿ....

ಮಿಮಿಕ್ರಿ ಮಾಡುವುದರಲ್ಲಿ ದರ್ಶನ್ ನಿಸ್ಸೀಮ!

ಕಾರ್ಟೂನ್ ಗಳಿಗೆ ಮಿಮಿಕ್ರಿ ಮಾಡುವುದರಲ್ಲಿ ದರ್ಶನ್ ನಿಸ್ಸೀಮರು ಅನ್ನೋದು ನಿಮಗೆ ಗೊತ್ತಾ? ಗೊತ್ತಿಲ್ಲ ಅಂದ್ರೆ, ಮೊದಲು ಈ ವಿಡಿಯೋ ನೋಡಿ....

ರಿಯಾಲಿಟಿ ಶೋಗೆ ಬರಲ್ಲ ಅಂದಿದ್ದ ದರ್ಶನ್!

ರೈತರ ಸರಣಿ ಆತ್ಮಹತ್ಯೆಯಿಂದ ನೊಂದಿರುವ ದರ್ಶನ್, ಒಂದು ಲಕ್ಷ ರೂಪಾಯಿಯನ್ನ ರೈತರ ಕುಟುಂಬಕ್ಕೆ ನೀಡಿದರೆ ಮಾತ್ರ ತಾವು ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತೇನೆ ಅಂತ ಈ ಹಿಂದೆ ಟ್ವೀಟ್ ಮಾಡಿದ್ದರು. ಇದೀಗ ದರ್ಶನ್ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಅಪ್ಪನಿಗೆ ಹೊಡೆಯುವಾಗ ದರ್ಶನ್ ಏನ್ ಮಾಡ್ತಿದ್ರು ಗೊತ್ತಾ?

ಎಲ್ಲರಿಗೂ ಗೊತ್ತಿರುವ ಹಾಗೆ, ಕನ್ನಡ ಚಿತ್ರರಂಗದ ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್, ದರ್ಶನ್ ರವರ ತಂದೆ. ಸಿನಿಮಾದಲ್ಲಿ ತೂಗುದೀಪ ಶ್ರೀನಿವಾಸ್ ಹೀರೋಗಳಿಂದ ಏಟು ತಿನ್ನುವಾಗ ದರ್ಶನ್ ರವರ ಪ್ರತಿಕ್ರಿಯೆ ಹೇಗಿರ್ತಿತ್ತು ಅಂತ ತಿಳ್ಕೋಬೇಕಾದ್ರೆ ಈ ವಿಡಿಯೋ ನೋಡಿ....

ಎಲ್ಲಾ ಕನ್ನಡಿಗರ ಭಿಕ್ಷೆ

''ಫ್ಲೂಕ್ ನಲ್ಲಿ ಹೀರೋ ಆದವನು ನಾನು. ಕಲಾವಿದ ಆಗ್ತೀನಿ, ನಾಲ್ಕು ಏಟು ತಿಂದರೆ ವಿಲನ್ ಆದರೂ ಆಗ್ತೀನಿ ಒಟ್ನಲ್ಲಿ ಸಿನಿಮಾದಲ್ಲಿರ್ತೀನಿ ಅಂದುಕೊಂಡು ಬಂದಿದ್ದು. ನಾನು ಈ ಮಟ್ಟಕ್ಕೆ ಬಂದಿರುವುದು ಎಲ್ಲಾ ಕನ್ನಡಿಗರು ಹಾಕಿರುವ ಭಿಕ್ಷೆ'' ಅಂತ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದರ್ಶನ್ ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ....

ತಾಯಿ ಮೀನಾ ತೂಗುದೀಪ

ದರ್ಶನ್ ಬೆಳೆದು ಬಂದ ಹಾದಿ ಬಗ್ಗೆ ತಾಯಿ ಮೀನಾ ತೂಗುದೀಪ ಮನಬಿಚ್ಚಿ ಮಾತನಾಡಿದ್ದಾರೆ.

ವಿ.ಹರಿಕೃಷ್ಣ

ದರ್ಶನ್ ರವರ ಇತ್ತೀಚಿನ ಚಿತ್ರಗಳಿಗೆ ಸಂಗೀತ ನೀಡುತ್ತಾ ಬಂದಿರುವ ವಿ.ಹರಿಕೃಷ್ಣ ಕೂಡ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಗಾಯಕ ಹೇಮಂತ್ ಕುಮಾರ್

ಗಾಯಕ ಹೇಮಂತ್ ಮತ್ತು ದರ್ಶನ್ ರವರ ಗೆಳೆತನ ಕೂಡ ಈ ವಾರದ 'ವೀಕೆಂಡ್ ವಿತ್ ರಮೇಶ್' ಹೈಲೈಟ್.

ಕ್ರಿಕೆಟ್ ಅಂದ್ರೆ ಇಷ್ಟನಾ?

ಸಿಸಿಎಲ್ ನಲ್ಲಿ ದರ್ಶನ್ ಆಟವಾಡುವುದನ್ನ ನೋಡಿದ್ದೀರಾ.! ಆದ್ರೆ, 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ದರ್ಶನ್ ಕ್ರಿಕೆಟ್ ಪ್ರೇಮದ ಬಗ್ಗೆ ಒಂದು ಸೀಕ್ರೆಟ್ ಕೂಡ ಬಹಿರಂಗವಾಗಲಿದೆ.

ಆಪ್ತ ಸ್ನೇಹಿತ ಬುಲೆಟ್ ಪ್ರಕಾಶ್

ದರ್ಶನ್ ರವರ ಅತ್ಯಾಪ್ತ ಬುಲೆಟ್ ಪ್ರಕಾಶ್ ಕೂಡ ದರ್ಶನ್ ವಿಶೇಷ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಮಿಸ್ ಮಾಡ್ಬೇಡಿ....

'ವೀಕೆಂಡ್ ವಿತ್ ರಮೇಶ್' ದರ್ಶನ್ ವಿಶೇಷ ಕಾರ್ಯಕ್ರಮ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

English summary
Kannada Actor Darshan has taken part in Zee Kannada Channel's popular show Weekend With Ramesh. Watch the promos here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada