For Quick Alerts
  ALLOW NOTIFICATIONS  
  For Daily Alerts

  ಟಿವಿ ಶೋನಲ್ಲಿ ಪುನೀತ್ ಬಗ್ಗೆ ಯೋಗರಾಜ್ ಭಟ್ರು ಹೇಳಿದ್ದೇನು?

  |

  ಕನ್ನಡ ಚಿತ್ರರಂಗಕ್ಕೆ ಮುಂಗಾರು ಮಳೆ ಹರಿಸಿದ ಜನಪ್ರಿಯ ನಿರ್ದೇಶಕ, ನಿರ್ಮಾಪಕ ಯೋಗರಾಜ್ ಭಟ್ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಶನಿವಾರದ ಶೋನಲ್ಲಿ (ಆ30) ಅತಿಥಿಯಾಗಿದ್ದರು. ವೀಕೆಂಡ್ ನಲ್ಲಿ ಜನ ಆರಾಮಾಗಿದ್ರು, ಕರ್ನಾಟಕದ ನೆಮ್ಮದಿ ಹಾಳುಮಾಡಲು ನಾನು ಬಂದಿದ್ದೇನೆಂದು ಕಿಚಾಯಿಸಿ ಯೋಗರಾಜ್ ಭಟ್ ಮಾತು ಆರಂಭಿಸಿದರು.

  ಕಾರ್ಯಕ್ರಮದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಯೋಗರಾಜ್ ಭಟ್ ಬಗ್ಗೆ ಮಾತನಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಭಟ್ರು, ಪುನೀತ್ ರಾಜಕುಮಾರ್ ಅವರ ಸಹಚರ್ಯನೇ ಒಂದು ದೊಡ್ಡ ಸುಖ. ಇನ್ನೂ ಅವರದ್ದು ಮಗುವಿನಂತಹ ಮನಸ್ಸು, ಅವರು ಅದ್ಭುತ ಸಂಸಾರಸ್ಥ ಎಂದರು. (ಇಂಡಸ್ಟ್ರಿ ಆಳುವವರು ನಾವಲ್ಲ, ಐ ಮೀನ್ ಇಟ್: ಪುನೀತ್)

  ಮಾತು ಮುಂದುವರಿಸುತ್ತಾ ಭಟ್ರು, ಎಲ್ಲಾ ನಿರ್ದೇಶಕರೂ ಪುನೀತ್ ಜೊತೆ ಕೆಲಸ ಮಾಡಲು ಇಷ್ಟ ಪಡುತ್ತಾರೆ, ಯಾಕೆಂದರೆ ಅವರ ಸರಳತೆ. ಅದು ಅವರ ತಂದೆ, ಅವರ ಕುಟುಂಬದಿಂದ ಬಂದ ಗುಣ. ದೊಡ್ಡ ಮಂಕಿ ಕ್ಯಾಪ್ ಹಾಕಿಕೊಂಡು ಮಕ್ಕಳನ್ನು ಈಗಲೂ ಸುತ್ತಾಡಿಸಲು ಕರೆದುಕೊಂಡು ಹೋಗುತ್ತಾರೆ. ಅವರೊಬ್ಬ ರೋಲ್ ಮಾಡೆಲ್ ಎಂದು ಭಟ್ರು, ಪುನೀತ್ ಬಗ್ಗೆ ಹೆಮ್ಮೆಯ ಮಾತನ್ನಾಡಿದ್ದಾರೆ.

  ತುಂಬಾ ಚೆನ್ನಾಗಿ ಸಾಹಿತ್ಯ ಬರೆಯುವ ನೀವು ನಿಮ್ಮ ಬಗ್ಗೆ ಏನು ಹೇಳಿಕೊಳ್ಳಲು ಇಷ್ಟ ಪಡುತ್ತೀರಾ ಎನ್ನುವ ರಮೇಶ್ ಪ್ರಶ್ನೆಗೆ, ನಾನೊಬ್ಬ ತುಂಬಾ ಸರಿಯಾಗಿ ಕಾಣುವಂತಹ ಹುಚ್ಚ ಎಂದು ಯೋಗರಾಜ್ ಭಟ್ ತನ್ನನ್ನು ವರ್ಣಿಸಿಕೊಂಡಿದ್ದಾರೆ.

  ಸ್ನೇಹಿತರ ಜೊತೆ ಒಡನಾಟದ ಆ ದಿನಗಳನ್ನು ವಿವರಿಸುತ್ತಿದ್ದ ಭಟ್ರು, ಒಂದೇ ರೂಮಿನಲ್ಲಿ ಒಟ್ಟು ಹನ್ನೆರಡು ಜನರಿದ್ದೆವು. ಒಟ್ಟಿಗೆ ಅಷ್ಟೂ ಜನರಿಗೆ ಅಡಿಗೆ ಮಾಡಲು ಪಾತ್ರೆಗಳಿಲ್ಲದೇ ಬಕೆಟಿನಲ್ಲಿ ಮೊಸರನ್ನ ಮಾಡಿದ ದಿನವೂ ಇದೆ ಎಂದು ಸ್ಮರಿಸಿಕೊಂಡಿದ್ದಾರೆ.

  ಕಾರ್ಯಕ್ರಮದಲ್ಲಿ ಭಟ್ರ ಬಗ್ಗೆ ಪುನೀತ್ ಹೇಳಿದ್ದೇನು? ಸ್ಲೈಡಿನಲ್ಲಿ

  ಪುನೀತ್ ರಾಜಕುಮಾರ್

  ಪುನೀತ್ ರಾಜಕುಮಾರ್

  ನಿಮ್ಮ ಬಗ್ಗೆ ಮಾತನಾಡುತ್ತಿದ್ದರೆ ಇಡೀ ದಿನ ಕಳೆದು ಹೋಗುತ್ತಿದೆ. ತುಂಬಾ ಕಂಫರ್ಟೆಬಲ್ ಆಗಿರುವ ನಿರ್ದೇಶಕರು ನೀವು. ನಿಮ್ಮ ಜೊತೆ ಮಾಡಿದ ಪರಮಾತ್ಮ ನನಗೆ ಹೊಸ ಅನುಭವವನ್ನು ನೀಡಿದೆ. ನೀವು ನಿರ್ದೇಶಕರು ಎನ್ನುವುದಕ್ಕಿಂತ ನೀವೊಬ್ಬ ಒಳ್ಳೆ ಸ್ನೇಹಿತ. ನಿಮ್ಮ ಜೊತೆ ಕೆಲಸ ಮಾಡಿದ್ದಕ್ಕೆ ನನಗೆ ಹೆಮ್ಮೆಯಿದೆ - ಪುನೀತ್ ರಾಜಕುಮಾರ್

  ಸ್ನೇಹಿತರ ಜೊತೆಗಿನ ಒಡನಾಟ

  ಸ್ನೇಹಿತರ ಜೊತೆಗಿನ ಒಡನಾಟ

  ಸ್ನೇಹಿತರೆಲ್ಲಾ ಸೇರಿ ಕಾರ್ಯಕ್ರಮದಲ್ಲಿ ಭಟ್ರಿಗೆ ಪ್ರಿಯವಾದ ಜೋಳದ ರೊಟ್ಟಿ, ಮೊಸರು ತಿನ್ನಿಸಿ ಮಾತನಾಡುತ್ತಿದ್ದ ಸ್ನೇಹಿತರು, ಪ್ಯಾಂಟನ್ನು ಯಾಕೆ ಮುಂದಕ್ಕೆ ಹಾಕಬೇಕೆಂದು ಹಿಂದಕ್ಕೆ ಹಾಕೊಂಡು ಪ್ರಯತ್ನಿಸಿದ್ದರು ಎಂದು ಅವರ ಸ್ನೇಹಿತರು ತಮ್ಮ ಭಟ್ರ ಜೊತೆಗಿನ ಅಂದಿನ ಜೀವನವನ್ನು ಮೆಲುಕು ಹಾಕಿಕೊಂಡಿದ್ದಾರೆ.

  ಭಟ್ರ ಬಗ್ಗೆ ಪತ್ನಿ ಹೇಳಿದ್ದೇನು

  ಭಟ್ರ ಬಗ್ಗೆ ಪತ್ನಿ ಹೇಳಿದ್ದೇನು

  ನಾನು ಮೊದಲ ಸಾರಿಗೆ ನನ್ನ ಪತ್ನಿಯನ್ನು ಭೇಟಿ ಮಾಡಿದಾಗ, ಆಕೆ ನನ್ನನ್ನು ಬೇಡ ಎಂದಿದ್ದಳು. ಆಮೇಲೆ ಓಕೆ ಎಂದಳು. ಕೆಲವರು ಸಂಖ್ಯಾಶಾಸ್ರದ ಆಧಾರದ ಮೇಲೆ ಎಂಟನೇ ತಾರೀಕಿನಂದು ಮದುವೆಯಾಗಲು ಒಪ್ಪಿಕೊಳ್ಳುತ್ತಿರಲಿಲ್ಲ. ಆದರೆ ನಾನು ಅಂದೇ ಮದುವೆಯಾಗಲು ನಿರ್ಧರಿಸಿದೆ - ಯೋಗರಾಜ್ ಭಟ್

  ಹದಿನೈದು ವರ್ಷದಲ್ಲಿ ಹತ್ತು ಮನೆ ಚೇಂಜ್

  ಹದಿನೈದು ವರ್ಷದಲ್ಲಿ ಹತ್ತು ಮನೆ ಚೇಂಜ್

  ಹದಿನೈದು ವರ್ಷದಲ್ಲಿ ಹತ್ತು ಮನೆ ಚೇಂಜ್ ಮಾಡಿದೆವು. ಎರಡೆರಡು ವರ್ಷಕ್ಕೊಮ್ಮೆ ಯಾಕೆ ಅವರಿಗೆ ಮನೆ ಬೋರಾಗುತ್ತಿತ್ತು ಎಂದು ನನಗೆ ಈಗಲೂ ಅರ್ಥವಾಗಿಲ್ಲ. ಶಿಫ್ಟ್ ಮಾಡಲು ನಾವು ಇದ್ದೆವಲ್ಲಾ ಎನ್ನುವದಕ್ಕೋ ಏನೋ ಗೊತ್ತಿಲ್ಲ. ಅವರಂತೂ ಒಂದು ಕಡ್ಡಿಯನ್ನೂ ಆಚೀಚೆ ಇಡುತ್ತಿರಲಿಲ್ಲ - ಭಟ್ರ ಪತ್ನಿ

  ಆಗ ಹೇಗಿದ್ರೋ, ಈಗಲೂ ಹಾಗೇ ಇದ್ದಾರೆ

  ಆಗ ಹೇಗಿದ್ರೋ, ಈಗಲೂ ಹಾಗೇ ಇದ್ದಾರೆ

  ಆಗ ಹೇಗಿದ್ದರೋ, ಈಗಲೂ ಹಾಗೇ ಇದ್ದಾರೆ. ಹನ್ನೆರಡು ವರ್ಷದಿಂದ ಅವರನ್ನು ಟಾಲರೇಟ್ ಮಾಡಿಕೊಂಡು ಬಂದೆ. ಅವರು ಸಿಗರೇಟು ಸೇದುತ್ತಿದ್ದಾಗ ಇರಿಟೇಟ್ ಆಗುತ್ತಿತ್ತು. ಆದರೂ ಸಹಿಸಿಕೊಂಡಿದ್ದೇನೆ. ಮುಂದೇನೂ ಸಹಿಸಿ ಕೊಳ್ಳಲೇಬೇಕಾಗುತ್ತದೆ. ಆದರೂ ಅವರು ನನ್ನ ಬೆಸ್ಟ್ ಫ್ರೆಂಡ್, ಯು ಆರ್ ಎ ಗುಡ್ ಹಸ್ಬೆಂಡ್ - ಭಟ್ರ ಪತ್ನಿ

  ಅತಿರೇಕದಲ್ಲಿ ಸಿನಿಮಾಗೆ ಬಂದೆ

  ಅತಿರೇಕದಲ್ಲಿ ಸಿನಿಮಾಗೆ ಬಂದೆ

  ತುಂಬಾ ಅತಿರೇಕದಲ್ಲಿ ಸಿನಿಮಾಗೆ ಬಂದೆ. ಬೆಳದಿಂಗಳ ಬಾಲೆ ಚಿತ್ರದ ಮೂಲಕ ಚಿತ್ರರಂಗದಲ್ಲಿ ಕೆಲಸ ಮಾಡಲು ಆರಂಭಿಸಿದೆ. ಮಣಿ ಮತ್ತು ರಂಗ SSLC ಚಿತ್ರ ಅಷ್ಟೇನೂ ಯಶಸ್ವಿಯಾಗಲಿಲ್ಲ. ಆಗ ಕನ್ನಡ ಚಿತ್ರರಂಗದಲ್ಲಿ ನನಗೆ ಸ್ಥಾನ ಇರುವುದಿಲ್ಲವೇನೋ ಅಂದು ಕೊಂಡಿದ್ದೆ. ಮುಂಗಾರುಮಳೆ ಹಿಟ್ ಆದ ನಂತರ ನನ್ನ ಸ್ಟಾರ್ ಕೂಡಾ ಹಿಟ್ ಆಯಿತು - ಯೋಗರಾಜ್ ಭಟ್.

  ಗೋಲ್ಡನ್ ಸ್ಟಾರ್ ಗಣೇಶ್ ಜೊತೆ

  ಗೋಲ್ಡನ್ ಸ್ಟಾರ್ ಗಣೇಶ್ ಜೊತೆ

  ನಾನು ಗಣೇಶ್ ಒಟ್ಟಿಗೆ ದುಃಖ, ಸುಖವನ್ನು ಕಂಡವರು. ಮುಂಗಾರುಮಳೆ, ಗಾಳಿಪಟ ಸಮಯದಲ್ಲಿ ನಾನು ಅವನನ್ನು ಚಂದ್ರಗುಪ್ತ ಮೌರ್ಯ ಎಂದು ಕರೆಯುತ್ತಿದ್ದೆ. ಅವನು ನನ್ನನ್ನು ಚಾಣಕ್ಯರೇ ಎಂದು ಕರೆಯುತ್ತಿದ್ದ. ನಾನು ಅವನು ಒಟ್ಟೊಟ್ಟಿಗೆ ಉದ್ದಾರ ಆದವರು. ನನ್ನನ್ನು ಮುಂಗಾರುಮಳೆಯ ನಿರ್ಮಾಪಕರ ಬಳಿ ಕರೆದುಕೊಂಡು ಹೋಗಿದ್ದೇ ಗಣೇಶ್ - ಯೋಗರಾಜ್ ಭಟ್.

  ಭಟ್ರು ಕಾರ್ಯಕ್ರಮದಲ್ಲಿ ಕೊನೆಯದಾಗಿ ಹೇಳಿದ್ದು

  ಭಟ್ರು ಕಾರ್ಯಕ್ರಮದಲ್ಲಿ ಕೊನೆಯದಾಗಿ ಹೇಳಿದ್ದು

  ನಾವೂ ಅಧಮರು. ನಾನು ಯಾರಲ್ಲೂ ದ್ವೇಷ ಕಟ್ಟಿಕೊಳ್ಳುವುದಿಲ್ಲ. ನನಗೆ ತುಂಬಾ ಸಿಟ್ಟು ಬರಿಸಿದವರಿಗೆ ಈ ವೇದಿಕೆಯ ಮೂಲಕ ಥ್ಯಾಂಕ್ಸ್ ಹೇಳಲು ಬಯಸುತ್ತೇನೆ ಎಂದು ಕಾರ್ಯಕ್ರಮದ ಕೊನೆಯಲ್ಲಿ ಯೋಗರಾಜ್ ಭಟ್ರು ಹೇಳಿದರು.

  English summary
  Weekend with Ramesh TV show with noted Director Yograj Bhat on Saturday, Aug 30.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X