For Quick Alerts
  ALLOW NOTIFICATIONS  
  For Daily Alerts

  ಟಿವಿಯಲ್ಲಿ ಡಬ್ಬಿಂಗ್ ಚಿತ್ರಗಳ ಪ್ರಸಾರ ಹೆಚ್ಚಾಯ್ತಾ? ಕನ್ನಡ ಪ್ರೇಕ್ಷಕರು ಏನಂತಿದ್ದಾರೆ?

  |

  ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳು ಪ್ರಭಾವ ಹೆಚ್ಚಾಗುತ್ತಿದೆ. ಪರಭಾಷೆ ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಥಿಯೇಟರ್‌ನಲ್ಲಿ ತೆರೆಕಾಣುತ್ತಿವೆ. ಇದನ್ನು ಪ್ರೇಕ್ಷಕರು ಸಹ ಸ್ವಾಗತಿಸಿದ್ದರು. ಆದ್ರೆ, ಲಾಕ್‌ಡೌನ್ ಬಳಿಕ ಟಿವಿಯಲ್ಲಿ ಡಬ್ಬಿಂಗ್ ಚಿತ್ರಗಳ ಪ್ರಸಾರ ಹೆಚ್ಚಾಗಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.

  ಲಾಕ್‌ಡೌನ್‌ ಸಮಯದಲ್ಲಿ ಕನ್ನಡ ಮನರಂಜನಾ ವಾಹಿನಿಗಳು ನಿರಂತರವಾಗಿ ಡಬ್ಬಿಂಗ್ ಚಿತ್ರಗಳನ್ನು ಪ್ರಸಾರ ಮಾಡಿದೆ. ಕನ್ನಡ ಸಿನಿಮಾಗಳ ಪ್ರಸಾರ ಬಹಳ ಕಮ್ಮಿಯಾಗಿದೆ ಎಂಬ ವಾದವೂ ವ್ಯಕ್ತವಾಗಿದೆ. ಈ ಸಂಬಂಧ ಕನ್ನಡ ಫಿಲ್ಮಿಬೀಟ್‌ನಲ್ಲಿ ಪೋಲ್ ಕೇಳಲಾಗಿತ್ತು.

  ಕನ್ನಡದಲ್ಲಿ ಸೂರ್ಯಾ ಶರೀರಕ್ಕೆ ಶಾರೀರವಾದ ಸುಮಂತ್ ಭಟ್ಕನ್ನಡದಲ್ಲಿ ಸೂರ್ಯಾ ಶರೀರಕ್ಕೆ ಶಾರೀರವಾದ ಸುಮಂತ್ ಭಟ್

  ಟಿವಿಯಲ್ಲಿ ಸತತವಾಗಿ ಡಬ್ಬಿಂಗ್ ಚಿತ್ರಗಳು ಪ್ರಸಾರ ಮಾಡುತ್ತಿರುವುದಕ್ಕೆ ನಿಮ್ಮ ಬೆಂಬಲ ಇದ್ಯಾ? ಎಂದು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಭಾರಿ ಪ್ರತಿಕ್ರಿಯೆ ಲಭ್ಯವಾಗಿದ್ದು, ಸ್ವಾಗತಿಸುವವರ ಸಂಖ್ಯೆಯೂ ಹೆಚ್ಚಿದೆ, ಹಾಗೆ ವಿರೋಧಿಸುವವರ ಸಂಖ್ಯೆಯೂ ಹೆಚ್ಚಿದೆ. ಕೆಲವು ಕಾಮೆಂಟ್‌ಗಳನ್ನು ನಿಮ್ಮ ಮುಂದೆ ಆಯ್ದು ಪ್ರಸ್ತುತಪಡಿಸಲಾಗಿದೆ. ಮುಂದೆ ಓದಿ...

  ಕ್ವಾಲಿಟಿ ಚೆನ್ನಾಗಿದೆ ಸ್ವಾಗತ

  ಕ್ವಾಲಿಟಿ ಚೆನ್ನಾಗಿದೆ ಸ್ವಾಗತ

  ''ಮಾಡ್ಲಿ ಬಿಡಿ ಕ್ವಾಲಿಟಿ ಚೆನ್ನಾಗಿದೆ ಅಂದರೆ ಇಷ್ಟ ಪಡುತ್ತೇವೆ. ಇಲ್ಲಾ ಅಂದ್ರೆ ತಿರಸ್ಕಾರ ಮಾಡ್ತೇವೆ. ಒಟ್ನಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ನೀಡಬೇಕು ಅಷ್ಟೆ'' ಎಂದು ಓರ್ವ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.

  ಕನ್ನಡ ಭಾಷೆಯಲ್ಲಿ ಬಂದರೆ ಒಳ್ಳೆಯದಲ್ವ

  ಕನ್ನಡ ಭಾಷೆಯಲ್ಲಿ ಬಂದರೆ ಒಳ್ಳೆಯದಲ್ವ

  ''ಬೇರೆ ಭಾಷೆಯ ಚಿತ್ರಗಳನ್ನು ಬೇರೆ ಭಾಷೆಯಲ್ಲಿ ನೋಡುವುದಕ್ಕಿಂತ...ನಮ್ಮ ಭಾಷೆಯಲ್ಲಿ ಅಂದರೆ ಕನ್ನಡದಲ್ಲಿ ನೋಡಲು ಚೆಂದ...ಕನ್ನಡ ಭಾಷೆಯಲ್ಲಿ ಬಂದರೆ ಒಳ್ಳೆಯದಲ್ವ...'' ಎಂಬ ನೆಟ್ಟಿಗನೊಬ್ಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  'ತೆನಾಲಿ ರಾಮ'ನಿಗೆ ವಾಯ್ಸ್ ಕೊಡ್ತಿದ್ದಾರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ'ತೆನಾಲಿ ರಾಮ'ನಿಗೆ ವಾಯ್ಸ್ ಕೊಡ್ತಿದ್ದಾರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

  ಕನ್ನಡಿಗನ ಬಗ್ಗೆ ತಮಿಳಿನಲ್ಲಿ ಸಿನಿಮಾ

  ಕನ್ನಡಿಗನ ಬಗ್ಗೆ ತಮಿಳಿನಲ್ಲಿ ಸಿನಿಮಾ

  ''ಕನ್ನಡಿಗರೇ ಆದ ಕ್ಯಾಪ್ಟನ್ ಗೋಪಿನಾಥ್ ಅವರ ಚಿತ್ರವನ್ನು ಯಾರೋ ತಮಿಳಿನವರು ನಿರ್ಮಾಣ ಮಾಡಿದ್ದಾರೆ. ಈಗ ಡಬ್ಬಿಂಗ್ ಇರದಿದ್ದರೇ ಅದೇ ಕನ್ನಡಿಗನ ಜೀವನಾಧರಿತ ಚಿತ್ರವನ್ನು ನಾವು ತಮಿಳಿನಲ್ಲಿ ನೋಡ್ ಬೇಕಾದ ಗತಿ ಇರುತ್ತಿತ್ತು...'' ಎಂದು ವ್ಯಕ್ತಿಯೊಬ್ಬ ಹೇಳಿದ್ದಾರೆ.

  ಟಿವಿ ಅವರಿಗೆ ಸ್ವಾತಂತ್ರ್ಯ ಸಿಕ್ಕಿದೆ

  ಟಿವಿ ಅವರಿಗೆ ಸ್ವಾತಂತ್ರ್ಯ ಸಿಕ್ಕಿದೆ

  ''- ಟಿವಿ ಅವರಿಗೆ ಸ್ವಾತಂತ್ರ್ಯ ಸಿಕ್ಕ ಹಾಗೇ ಆಗಿದೇ.....

  - ಇನ್ನೂ ಸ್ವಲ್ಪ ದಿನ ಅಷ್ಟೇ ನಮ್ಮ ಕನ್ನಡ ಸಿನಿಮಾಗೆ ಬೆಲೆ ಕೂಡಾ ಇರಲ್ಲ.

  - ಇದೆ..... ಆದರೆ ಜೋತೆಗೆ ಮೂಲ ಕನ್ನಡ ಸಿನಿಮಾಗಳನ್ನು ಪ್ರಸಾರ ಮಾಡಬೇಕು...'' ಎಂದು ಜನರು ಕಾಮೆಂಟ್ ಮಾಡಿದ್ದಾರೆ.

  ನಮ್ಮವರನ್ನೇ ಬೆಳೆಸೋಣ

  ನಮ್ಮವರನ್ನೇ ಬೆಳೆಸೋಣ

  ''ಡಬ್ಬಿಂಗ್ ಬೇಡ. ನಮ್ಮ ಕನ್ನಡದ ಕಲಾವಿದರಿಗೆ ಕೆಲಸ ಇಲ್ಲದಂತಾಗಿದೆ..ಇದು ಹೀಗೆ ಮುಂದುವರೆದರೆ. ಕನ್ನಡ ಚಿತ್ರರಂಗಕ್ಕೆ ತುಂಬಾ ಅಪಾಯ.... ಬಿಡಿ ನಮ್ಮ ಕಲಾವಿದರು ಬೆಳೆಯಲಿ. ನಮ್ಮಲ್ಲೆ ಒಳ್ಳೆಯ ಸಿನಿಮಾಗಳು ಬರುತ್ತಿವೆ...ಅವನ್ನೆ ನೋಡಿ ನಮ್ಮ ಪ್ರತಿಬೆಗಳನ್ನ ಬೆಳೆಸೊಣ'' ಎಂಬ ಕೂಗು ಸಹ ಇದೆ.

  ಕೊಹ್ಲಿ ವಿರುದ್ಧ ತಿರುಗಿಬಿದ್ದ ಕಾಂಗ್ರೆಸ್ ಮುಖಂಡ | Filmibeat Kannada
  ಚೆನ್ನಾಗಿದ್ದರೆ ಬೆಂಬಲ ಇದೆ

  ಚೆನ್ನಾಗಿದ್ದರೆ ಬೆಂಬಲ ಇದೆ

  ''ಸರಿಯಾಗಿ ಡಬ್ಬಿಂಗ್ ಮಾಡಿದ್ರೆ ಡಬ್ಬಿಂಗ್ ಗೆ ಸಂಪೂರ್ಣ ಬೆಂಬಲ ಇರುತ್ತದೆ. ಆದ್ರೆ, ತುಟಿಯ ಚಲನೆ ತುಂಬಾ ನೆ ವ್ಯತ್ಯಾಸ ಇರುತ್ತದೆ'' ಎಂದು ವ್ಯಕ್ತಿಯೊಬ್ಬ ಕಾಮೆಂಟ್ ಮಾಡಿದ್ದಾರೆ.

  English summary
  Kannada Entertainment channels telecasting more Dubbing movies in after lockdown. what is the audience opinion about this development.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X