»   » ಹುಚ್ಚ ವೆಂಕಟ್ ಗೆ ಸುದೀಪ್ 'ಐ ಲವ್ ಯು' ಎಂದಾಗ...

ಹುಚ್ಚ ವೆಂಕಟ್ ಗೆ ಸುದೀಪ್ 'ಐ ಲವ್ ಯು' ಎಂದಾಗ...

Posted By:
Subscribe to Filmibeat Kannada

ಕಿಚ್ಚ ಸುದೀಪ್ ಗುಡುಗಿದರು. ಹುಚ್ಚ ವೆಂಕಟ್ ವಿರುದ್ಧ ಕೆಂಡಮಂಡಲವಾದರು. ಗಾಯಕ ರವಿ ಮುರೂರು ಮೇಲೆ ಕೈ ಮಾಡಿದ್ದಕ್ಕೆ ಹುಚ್ಚ ವೆಂಕಟ್ ಮೇಲೆ ಸುದೀಪ್ ಹೌಹಾರಿದರು.

'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಕೆರಳುವ ಮುನ್ನ ಸಿಕ್ಕಾಪಟ್ಟೆ ಕೂಲ್ ಆಗಿದ್ದರು. ಹುಚ್ಚ ವೆಂಕಟ್ ಜೊತೆ ಜಾಲಿಯಾಗೇ ಮಾತನಾಡುತ್ತಿದ್ದರು. ಇನ್ ಫ್ಯಾಕ್ಟ್ ಹುಚ್ಚ ವೆಂಕಟ್ ಗೆ ಸುದೀಪ್ 'ಐ ಲವ್ ಯು ಮ್ಯಾನ್' ಅಂದಿದ್ರು.! [ಹುಚ್ಚ ವೆಂಕಟ್ ಅಭಿಮಾನಿಯಿಂದ ಸುದೀಪ್ ಗೆ ಖಡಕ್ ಪ್ರಶ್ನೆ]

huccha-venkat-sudeep

ಊಟದ ವಿಚಾರವಾಗಿ 'ಬಿಗ್ ಬಾಸ್' ಮನೆಯಲ್ಲಿ ಭಿನ್ನಾಭಿಪ್ರಾಯ ಭುಗಿಲೆದ್ದಿತ್ತು. ಇದೇ ವಿಚಾರವಾಗಿ ಹುಚ್ಚ ವೆಂಕಟ್ ಗೆ ಸುದೀಪ್ ಪ್ರಶ್ನಿಸಿದರು. ಅದಕ್ಕೆ ಹುಚ್ಚ ವೆಂಕಟ್ - ''ಎಷ್ಟು ಸಲಿ ಟೀ ಕುಡಿತೀನಿ ಅಂತ ಲೆಕ್ಕ ಹಾಕುವುದು ಬೇಜಾರಾಗುತ್ತೆ. ಮೊದಲ ವಾರ ಯಾವುದೇ ರಿಸ್ಟ್ರಿಕ್ಷನ್ ಇರ್ಲಿಲ್ಲ. ಆಗ ಸಮಸ್ಯೆ ಇರ್ಲಿಲ್ಲ. ಈಗ....ಮತ್ತೆ ಯಾಕೆ ಬಿಡಿ ಈ ವಿಷ್ಯ. ಬಿಟ್ಬಿಡಿ. ಜನ ನೋಡ್ತಿರ್ತಾರೆ. ಅವರೇ ತೀರ್ಮಾನ ಮಾಡ್ಲಿ. ನೀವು ಹೇಳಿದ ಮಾತು ಇಷ್ಟ ಆಯ್ತು ಸುದೀಪ್. ಥ್ಯಾಂಕ್ಸ್'' ಅಂತ ಹೇಳಿದರು. [ಕೆರಳಿದ ಕಿಚ್ಚ ಸುದೀಪ್ ಗೆ ಓಪನ್ ಚಾಲೆಂಜ್ ಹಾಕಿದ ಹುಚ್ಚ ವೆಂಕಟ್.!]

ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಹುಚ್ಚ ವೆಂಕಟ್ ನೀಡಿದ ಪ್ರತಿಕ್ರಿಯೆ ಸುದೀಪ್ ಗೆ ಇಷ್ಟವಾಯ್ತು. ಆದ ಕಾರಣ ''ಐ ಲವ್ ಯು ಮ್ಯಾನ್'' ಅಂದ್ರು. ಇದಾಗಿ ಕಣ್ಣು ಮಿಟುಕಿಸುವಷ್ಟರೊಳಗೆ ಆಗಬಾರದ್ದು ಆಗೇ ಹೋಯ್ತು.!

English summary
Before Bigg Boss 3 Kannada witnessing the highdrama of Huccha Venkat hitting Singer Ravi Muroor, Kiccha Sudeep said 'I love you man' for Huccha Venkat.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada