Just In
Don't Miss!
- News
ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಬಿಗ್ ಬಾಸ್' ಮನೆಯೊಳಗೆ ಹೋಗ್ತಾರೆ ನಟಿ ಸಂಯುಕ್ತ ಹೆಗ್ಡೆ.! ಪ್ರಾಮಿಸ್.!

'ಕಿರಿಕ್ ಪಾರ್ಟಿ' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸುದ್ದಿ ಮಾಡಿದ, 'ರೋಡೀಸ್' ರಿಯಾಲಿಟಿ ಶೋ ಮೂಲಕ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದ, ವಿವಾದಗಳಿಂದ ಸೌಂಡ್ ಮಾಡಿದ ನಟಿ ಸಂಯುಕ್ತ ಹೆಗ್ಡೆ 'ಬಿಗ್ ಬಾಸ್' ಮನೆಯೊಳಗೆ ಹೋದರೆ ಹೇಗೆ.?
ಸುದೀಪ್ ಗೆ ಗೌರವ ಕೊಡದ ಸಂಯುಕ್ತ ಹೆಗ್ಡೆ ವಿರುದ್ಧ ಕಿಚ್ಚನ ಫ್ಯಾನ್ಸ್ ಆಕ್ರೋಶ.
ಈ ಐಡಿಯಾ 'ಬಿಗ್ ಬಾಸ್' ಆಯೋಜಕರಿಗೆ ಬಂದಿದೆ. 'ಬಿಗ್ ಬಾಸ್ ಕನ್ನಡ' ಕಾರ್ಯಕ್ರಮದಲ್ಲಿ ಸ್ಪರ್ಧಿಸಲು ಕಲರ್ಸ್ ಕನ್ನಡ ವಾಹಿನಿಯವರು ಸಂಯುಕ್ತ ಹೆಗ್ಡೆಗೆ ಅಧಿಕೃತ ಆಹ್ವಾನ ನೀಡಿದ್ದಾರೋ, ಇಲ್ವೋ ಗೊತ್ತಿಲ್ಲ. ಆದ್ರೆ, ಕಿಚ್ಚ ಸುದೀಪ್ ಮಾತ್ರ ಸಂಯುಕ್ತ ಬಳಿ ನೇರವಾಗಿ ಕೇಳಿಬಿಟ್ಟರು.! ಮುಂದೆ ಓದಿರಿ...

'ಕಿಚ್ಚನ್ ಟೈಮ್'ನಲ್ಲಿ ಬಾಣ ಬಿಟ್ಟ ಸುದೀಪ್
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ 'ಸೂಪರ್ ಸಂಡೆ ವಿತ್ ಕಿಚ್ಚ ಸುದೀಪ್' ಬದಲು 'ಕಿಚ್ಚನ್ ಟೈಮ್' ಪ್ರಸಾರ ಅಗುತ್ತಿದೆ. 'ಕಿಚ್ಚನ್ ಟೈಮ್' ಸಂಚಿಕೆಯ ಮೊದಲ ಅತಿಥಿಯಾಗಿ 'ಕಿರಿಕ್ ಪಾರ್ಟಿ' ಚಿತ್ರದ ನಾಯಕಿ ಸಂಯುಕ್ತ ಹೆಗ್ಡೆ ಭಾಗವಹಿಸಿದರು. ಇದೇ ವೇಳೆ ''ನೀವು 'ಬಿಗ್ ಬಾಸ್' ಮನೆಯೊಳಗೆ ಹೋಗ್ಬೇಕ್ರೀ'' ಎಂದು ಸುದೀಪ್ ಕೇಳಿದರು.

ಕೈ ಮುಗಿದ ಸಂಯುಕ್ತ
ಸುದೀಪ್ ಹಾಗೆ ಕೇಳುತ್ತಿದ್ದಂತೆಯೇ, ಕೈ ಮುಗಿಯುತ್ತಾ, ''ಇಲ್ಲ ನನಗೆ ಕೋಪ ತುಂಬಾ ಜಾಸ್ತಿ. ಹೀಗಾಗಿ, 'ಬಿಗ್ ಬಾಸ್' ಮನೆಯೊಳಗೆ ಕೋಪ ತುಂಬಾ ಬಂದು ಬಿಟ್ಟರೆ, ಯಾರ ಮೇಲಾದರೂ ಹೊಡೆಯುವ ಸಾಧ್ಯತೆ ಇದೆ'' ಎಂದರು ನಟಿ ಸಂಯುಕ್ತ ಹೆಗ್ಡೆ. ನಿಜ ಹೇಳ್ಬೇಕಂದ್ರೆ, ನಿಜ ಜೀವನದಲ್ಲಿ ಕೋಪ ಬಂದಾಗ ''ಹೊಡೆದಿದ್ದೇನೆ'' ಎಂದು ಒಪ್ಪಿಕೊಂಡಿದ್ದಾರೆ ನಟಿ ಸಂಯುಕ್ತ ಹೆಗ್ಡೆ.

ಪ್ರಾಮಿಸ್ ಮಾಡಿದ ಸಂಯುಕ್ತ
''ಬಿಗ್ ಬಾಸ್ ಮನೆ ಒಳಗೆ ನಿಮ್ಮನ್ನ ಕಳುಹಿಸಬೇಕು'' ಎಂದು ಸುದೀಪ್ ಮತ್ತೆ ಹೇಳಿದಾಗ, ''ಕಳುಹಿಸಿ ಸರ್, ಹೋಗೋಣ'' ಎಂದು ಸಂಯುಕ್ತ ಹೇಳಿದರು. ಅದಕ್ಕೆ ''ಯಾವಾಗ'' ಎಂದು ಸುದೀಪ್ ಮರುಪ್ರಶ್ನೆ ಮಾಡಿದಾಗ ''ಹೇಳಿದಾಗ ಹೋಗೋಣ...'' ಎಂದು ನಟಿ ಸಂಯುಕ್ತ ಹೆಗ್ಡೆ 'ಪ್ರಾಮಿಸ್' ಮಾಡಿದ್ದಾರೆ.

ಮುಂದಿನ ಸೀಸನ್ ನಲ್ಲಿ ಭಾಗವಹಿಸುತ್ತಾರಾ.?
ಅಲ್ಲಿಗೆ, 'ಬಿಗ್ ಬಾಸ್' ಸ್ಪರ್ಧಿಯಾಗಲು ಸಂಯುಕ್ತಗೆ ಆಸಕ್ತಿ ಇದೆ ಅಂತಾಯ್ತು. ಹಾಗಾದ್ರೆ, ಮುಂದಿನ ಸೀಸನ್ ನಲ್ಲಿ ಸಂಯುಕ್ತ ಹೆಗ್ಡೆ 'ಬಿಗ್ ಬಾಸ್' ಮನೆಯೊಳಗೆ ಬಂಧಿಯಾಗ್ತಾರಾ.? ನೋಡೋಣ.!