twitter
    For Quick Alerts
    ALLOW NOTIFICATIONS  
    For Daily Alerts

    1 ಕೋಟಿ ವೆಚ್ಚದಲ್ಲಿ ಪುನೀತ್ ರಾಜ್‌ಕುಮಾರ್ 46 ವರ್ಷದ ಜರ್ನಿ ಸೆಲೆಬ್ರೆಷನ್: ಜೀ ಕನ್ನಡದಲ್ಲಿ ಪ್ರಸಾರ

    |

    ಪುನೀತ್ ರಾಜ್‌ಕುಮಾರ್ ವ್ಯಕ್ತಿತ್ವ ಎಂಥವರಿಗೂ ಇಷ್ಟ ಆಗುತ್ತೆ. ಸದಾ ನಗುತ್ತಲೇ ಇರುತ್ತಿದ್ದ ಕರ್ನಾಟಕ ರತ್ನ ಎಂದೆಂದಿಗೂ ಅಮರ. ರಾಜಕುಮಾರನಂತೆಯೇ ನಟಿಸುತ್ತಿದ್ದ ಅಪ್ಪು ಮಕ್ಕಳಿಂದ ಹಿಡಿದು ಹಿರಿಯರವರೆಗೂ ಬಲು ಪ್ರೀತಿ. ಪುನೀತ್ ನಿಧನದ ಬಳಿಕ ಸಮಾಜ ಸೇವೆ ಕಂಡು ಕನ್ನಡಿಗರು ಭಾವುಕರಾಗಿದ್ದಾರೆ. ಯಾರಿಗೂ ಅರಿಯದಂತೆ ತನ್ನ ಕೈಲಾದ ಸಹಾಯ ಮಾಡಿ ಹೋದ ಹೊರಟು ಹೋದ ಅಪ್ಪುವಿನ 46 ವರ್ಷಗಳ ಜರ್ನಿಯನ್ನು ಜೀ ಕನ್ನಡ ವಾಹಿನಿ ಸೆಲೆಬ್ರೆಟ್ ಮಾಡಿದೆ.

    ಅಪ್ಪು ಬದುಕಿದ್ದಷ್ಟೇ ಪವರ್‌ಫುಲ್ ಪುನೀತ್ ರಾಜ್‌ಕುಮಾರ್ ಸಿನಿ ಜರ್ನಿ. 46 ವರ್ಷ ಸಿನಿಮಾರಂಗದಲ್ಲಿಯೇ ಕಳೆದ ಪುನೀತ್ ಸಾಧನೆ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಬಾಲ ನಟನಾಗಿಯೇ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಅಪ್ಪು ಚಿಕ್ಕ ವಯಸ್ಸಿನಲ್ಲಿಯೇ ರಾಷ್ಟ್ರ ಪ್ರಶಸ್ತಿ ಪಡೆದ ನಟ. ಅಪ್ಪನಷ್ಟೇ ಸಾಧನೆ ಮಾಡಿದ ಕಣ್ಮರೆಯಾದ ಕನ್ನಡಿಗರ ಪಾಲಿನ ಕರ್ನಾಟಕ ರತ್ನನ ಅಮೋಘ ಜರ್ನಿಯನ್ನು ಜೀ ಕನ್ನಡ ಸೆಲೆಬ್ರೆಟ್ ಮಾಡಿದೆ. ಈ ಜರ್ನಿಯಲ್ಲಿ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಹಾಗೂ ಅವರ ಕುಟುಂಬ ಭಾಗವಹಿಸಿತ್ತು.

    ಜೀ ಕನ್ನಡದಲ್ಲಿ 'ಕರುನಾಡ ರತ್ನ' ಪ್ರಸಾರ

    ಜೀ ಕನ್ನಡದಲ್ಲಿ 'ಕರುನಾಡ ರತ್ನ' ಪ್ರಸಾರ

    ಪುನೀತ್ ಚಿಕ್ಕ ವಯಸ್ಸಿನಿಂದ ಅವರು ನಿಧನರಾಗುವ ಕೊನೆಯ ದಿನದ ವರೆಗೂ ಎಷ್ಟು ಫೋಟೊಗಳು ಇವೆಯೋ ಅಷ್ಟೂ ಫೋಟೊಗಳನ್ನು ವಾಲ್ ಆಫ್ ಫ್ರೇಮ್ ಮಾಡಲಾಗಿದೆ. ಪ್ರವೇಶ ದ್ವಾರದಲ್ಲಿಯೇ ಈ ಈ ವಾಲ್ ಆಫ್ ಫ್ರೇಮ್ ಇರುತ್ತೆ. ಅಪ್ಪು ನಟಿಸಿದ ಅಷ್ಟೂ ಸಿನಿಮಾಗಳ ಪೋಸ್ಟರ್ ಅನ್ನು ಡಿಸೈನ್ ಮಾಡಿ ಎಂಟ್ರೆನ್ಸ್‌ನಲ್ಲಿ ಹಾಕಲಾಗಿದೆ. ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯದ ಸಾಂಗ್ ನೋಡಬಹುದು. ಅವರ ಹಾಡುಗಳಿಗೆ ಡ್ಯಾನ್ಸ್ ಕೂಡ ಇರುತ್ತದೆ. ಅವರ ಹಾಡು ಬಿಟ್ಟರೆ ಬೇರೆ ಏನೂ ಈ ಕಾರ್ಯಕ್ರಮದಲ್ಲಿ ಇರುವುದಿಲ್ಲ.

    ಅಪ್ಪು ಹಾಡು ಹಾಡಿದ ಶಿವಣ್ಣ

    ಅಪ್ಪು ಹಾಡು ಹಾಡಿದ ಶಿವಣ್ಣ

    ಕರುನಾಡ ರತ್ನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ರಾಜ್‌ಕುಮಾರ್ ಕುಟುಂಬ ಭಾಗವಹಿಸಿತ್ತು. ಶಿವರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್, ಯುವರಾಜ್‌ಕುಮಾರ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ಈ ವೇಳೆ ವೇದಿಕೆ ಮೇಲೆ ಶಿವರಾಜ್‌ಕುಮಾರ್ ಅಪ್ಪು ನಟಿಸಿದ ಸಿನಿಮಾದ 'ಬಾನ ದಾರಿಯಲ್ಲಿ..' ಹಾಡನ್ನು ಹಾಡಿದರು. ಅಲ್ಲದೆ ಪುನೀತ್ ಇಷ್ಟ ಪಟ್ಟು ಹಾಡುತ್ತಿದ್ದ ಬಾಬಿ ಸಿನಿಮಾದ 'ಮೇ ಶಾರ್ ತೋ ನಹಿ' ಚಿತ್ರದ ಹಾಡನ್ನು ಹಾಡಿದ್ದಾರೆ.

    ಅಪ್ಪುಗಾಗಿ ಕ್ರೇಜಿಸ್ಟಾರ್ ಬರೆದು ಹಾಡು

    ಅಪ್ಪುಗಾಗಿ ಕ್ರೇಜಿಸ್ಟಾರ್ ಬರೆದು ಹಾಡು

    ಪ್ರೀತಿಯ ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಜೀವನದ ಮೌಲ್ಯಗಳು, ಸಾಧನೆ, ಸಂದೇಶದ ಜೊತೆಗೆ ಅವರ ಅಮೂಲ್ಯ ನೆನಪುಗಳನ್ನು 'ಕರುನಾಡ ರತ್ನ' ಕಾರ್ಯಕ್ರಮ ಅನಾವರಣಗೊಳಿಸಲಿದೆ. GKGS ಟ್ರಸ್ಟ್ ಮತ್ತು ವರುಣ್ ಸ್ಟುಡಿಯೊಸ್ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದು Zee ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮದ ಮತ್ತೊಂದು ಹೈಲೈಟ್ ಅಂದ್ರೆ, ರವಿಚಂದ್ರನ್ ಸ್ವತ: ಅಪ್ಪು ನೆನಪಲ್ಲಿ ಒಂದು ಹಾಡಿಗೆ ಸಾಹಿತ್ಯ ರಚಿಸಿದ್ದರು. ಆ ಹಾಡನ್ನು ಕ್ರೇಜಿ ಸಮ್ಮುಖದಲಿ ಹಾಡಿ, ಹೆಜ್ಜೆ ಹಾಕಲಾಗಿದೆ.

    ಹಂಸಲೇಖ ಟ್ಯೂನ್‌ಗೆ ಕಂಬದ ರಂಗಯ್ಯ ಧ್ವನಿ

    ಹಂಸಲೇಖ ಟ್ಯೂನ್‌ಗೆ ಕಂಬದ ರಂಗಯ್ಯ ಧ್ವನಿ

    ನಾದಬ್ರಹ್ಮ ಹಂಸಲೇಖ ಕೂಡ ಈ ಕಾರ್ಯಕ್ರಮಕ್ಕಾಗಿ ಒಂದು ಟ್ಯೂನ್ ಹಾಕಿ ಸಾಹಿತ್ಯ ರಚಿಸಿದ್ದರು. ಈ ಹಾಡನ್ನು 'ಕರುನಾಡ ರತ್ನ' ವೇದಿಕೆ ಮೇಲೆ ಹಾಡಲಾಗಿದೆ. ಸರಿಗಮಪ ಸ್ಪರ್ಧಿ ಕಂಬದ ರಂಗಯ್ಯನಾದ ಬ್ರಹ್ಮ ಹಾಕಿದ ಟ್ಯೂನ್‌ಗೆ ಧ್ವನಿಯಾಗಿದ್ದಾರೆ. ಇದು ಈ ಕಾರ್ಯಕ್ರಮದ ಹೈಲೈಟ್‌ಗಳಲ್ಲೊಂದು.

    ಅಪ್ಪು ಲೈಫ್ ಜರ್ನಿಗೆ ಒಂದು ಕೋಟಿ

    ಅಪ್ಪು ಲೈಫ್ ಜರ್ನಿಗೆ ಒಂದು ಕೋಟಿ

    ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಜರ್ನಿಯನ್ನು ತೆರೆಮೇಲೆ ತರಲು ಕೋಟಿ ವೆಚ್ಚವಾಗಿದೆ. 'ಕರುನಾಡ ರತ್ನ' ಈ ಕಾರ್ಯಕ್ರಮದ ವೇದಿಕೆ ಹಾಗೂ ಸ್ಟೇಜ್‌ಗಳನ್ನು ನಿರ್ಮಾಣ ಮಾಡುವುದಕ್ಕೆ ವರುಣ್ ಸ್ಟುಡಿಯೋ ಹಾಗೂ GKGS ಟ್ರಸ್ಟ್ ಒಂದು ಕೋಟಿ ಖರ್ಚು ಮಾಡಿದೆ. ಇನ್ನು ಕಾರ್ಯಕ್ರಮದ ಉಳಿದ ವ್ಯವಸ್ಥೆಗೆ ಪ್ರತ್ಯೇಕವಾಗಿ ಖರ್ಚು ಮಾಡಲಾಗಿದೆ. ಈ ಕಾರ್ಯಕ್ರಮ ಜೀ ಕನ್ನಡದಲ್ಲಿ ಭಾನುವಾರ ಪ್ರಸಾರ ಆಗಲಿದೆ. ಆದರೆ, ಈ ಭಾನುವಾರ ಪ್ರಸಾರ ಆಗುತ್ತಾ? ಮುಂದಿನ ವಾರಕ್ಕೆ ಪೋಸ್ಟ್ ಆಗುತ್ತಾ ಅನ್ನುವುದು ಇನ್ನೂ ಗೊತ್ತಿಲ್ಲ.

    English summary
    Year end special Puneeth Rajkumar 46 year journey was Celebrate in Zee Kannada. Shivarajkumar, Raghavendra Rajkumar, Ravichandran, Kannada Directors and producers participated.
    Wednesday, December 15, 2021, 9:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X