»   » ಪ್ರೇಮ್-ರಾಮ್ ದೇವ್ ನಡುವೆ ಕುಸ್ತಿ, ರಾಧಿಕಾ ಕಾಲಿಗೆ ಪೆಟ್ಟು.!

ಪ್ರೇಮ್-ರಾಮ್ ದೇವ್ ನಡುವೆ ಕುಸ್ತಿ, ರಾಧಿಕಾ ಕಾಲಿಗೆ ಪೆಟ್ಟು.!

Posted By:
Subscribe to Filmibeat Kannada

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ರಿಯಾಲಿಟಿ ಶೋ 'ಡ್ಯಾನ್ಸ್ ಡ್ಯಾನ್ಸ್ ಜ್ಯೂನಿಯರ್ಸ್' ಕಾರ್ಯಕ್ರಮ ಈ ವಾರ ತುಂಬಾ ವಿಶೇಷತೆಗಳಿಂದ ಕೂಡಿದೆ. ಕಳೆದ ವಾರ ಪುನೀತ್ ರಾಜ್ ಕುಮಾರ್ ಅತಿಥಿಯಾಗಿ ಆಗಮಿಸಿದ್ದರು. ಈ ವಾರ ಯೋಗ ಗುರು ಬಾಬಾ ರಾಮ್ ದೇವ್ ಅತಿಥಿಯಾಗಿ ಆಗಮಿಸಿದ್ದಾರೆ.

ಮೊದಲೇ ಹೇಳಿ-ಕೇಳಿ ಡ್ಯಾನ್ಸ್ ಕಾರ್ಯಕ್ರಮ. ಮತ್ತೊಂದೆಡೆ ಯೋಗಗುರು ಅತಿಥಿ ಬೇರೆ. ಕಾರ್ಯಕ್ರಮ ಹೇಗಪ್ಪಾ ಇರುತ್ತೆ ಎಂಬ ಕುತೂಹಲ ಇದ್ರೆ ಈ ವಾರ ಮಿಸ್ ಮಾಡ್ದೆ 'ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್' ನೋಡಿ. ಯಾಕಂದ್ರೆ, ಆಟ, ಪಾಠ, ಯೋಗ, ಕುಸ್ತಿ, ಜೊತೆಗೆ ಡ್ಯಾನ್ಸ್, ಎಲ್ಲವೂ ಸೇರಿ ಈ ವಾರ ಭರಪೂರ ಮನರಂಜನೆ.

Yoga Guru Baba Ramdev Guest For Dance Dance Juniors

ತೀರ್ಪುಗಾರರಾದ ನೆನಪಿರಲಿ ಪ್ರೇಮ್ ಮತ್ತು ಯೋಗಗುರು ಬಾಬಾ ರಾಮ್ ದೇವ್ ಕುಸ್ತಿ ಆಡಿದರು. ನಾನಾ....ನೀನಾ.....ಎಂದು ಫೈಲ್ವಾನ್ ಗಳಂತೆ ಜಿದ್ದಾ ಜಿದ್ದಿ ನಡೆಸಿದರು. ಇನ್ನು ಮತ್ತೊಂದೆಡೆ ಮಹಿಳೆಯರ ಕುಸ್ತಿ ಕೂಡ ಜೋರಾಗಿತ್ತು. ತೀರ್ಪುಗಾರ್ತಿ ನಟಿ ರಾಧಿಕಾ ಕುಮಾರಸ್ವಾಮಿ ಮತ್ತು ನಿರೂಪಕಿ ಶ್ವೇತಾ ಚೆಂಗಪ್ಪ ಅವರ ಮಧ್ಯೆ ಕುಸ್ತಿ ಕಾಳಗ ನಡೆದೇ ಹೋಯ್ತು.

ಈ ಮಧ್ಯೆ ನಟಿ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದು ಕಾರ್ಯಕ್ರಮಕ್ಕೆ ಕೊಂಚ ಬೇಸರ ತರಿಸಿತು. ರಾಧಿಕಾ ಕುಮಾರಸ್ವಾಮಿ ಮತ್ತು ನಿರೂಪಕಿ ಶ್ವೇತಾ ಚೆಂಗಪ್ಪ ಕುಸ್ತಿ ಆಡುವಾಗ, ಕೆಳಗೆ ಬಿದ್ದ ರಾಧಿಕಾ ಅವರಿಗೆ ಹೆಬ್ಬೆರಳಿಗೆ ಗಾಯವಾಗಿ ರಕ್ತ ಸುರಿದಿದೆ. ನಂತರ ವೇದಿಕೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು.

ಪ್ರೋಮೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.....

English summary
Yoga Guru Baba Ramdev Guest For Papulor Dance Reality Show Dance Dance Juniors on Star Suvarna Channel at 16 and 17th July.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada