»   » ಬಿಗ್ ಬಾಸ್ : ಯೋಗ ಗುರು ವಿವೇಕ್ ಹೊರಕ್ಕೆ

ಬಿಗ್ ಬಾಸ್ : ಯೋಗ ಗುರು ವಿವೇಕ್ ಹೊರಕ್ಕೆ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕಲರ್ಸ್ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋನಲ್ಲಿ ಶಿಲ್ಪಾ ಅಗ್ನಿಹೋತ್ರಿ ಮನೆಯಿಂದ ಹೊರ ಹಾಕಿದ ನಂತರ ನಾಯಕ ಅಪೂರ್ವ ಅಗ್ನಿಹೋತ್ರಿ ಸಪ್ಪಗಾಗಿದ್ದಾರೆ. ಈ ಹಿಂದೆ ಇದ್ದ ಮನಸ್ತಾಪಗಳು ಭುಗಿಲೆದ್ದು ಸ್ಫೋಟಗೊಂಡು ಜಗಳ ಪ್ರತಿಕ್ಷಣದ ಸಂಗತಿಯಾಗಿ ಬಿಟ್ಟಿದೆ.

ಬಿಗ್ ಬಾಸ್ ನಲ್ಲಿ ಬಾಕ್ಸ್ ಟಾಸ್ಕ್ ನಂತರ ದೊಡ್ಡ ಟ್ವಿಸ್ಟ್ ಗಳನ್ನು ಬಿಗ್ ಬಾಸ್ ನೀಡುತ್ತಿದ್ದಾರೆ. ಈ ವಾರ ಎರಡು ಸ್ಪರ್ಧಿಗಳು ಮನೆ ಬಿಟ್ಟು ಹೋಗುತ್ತಾರೆ ಎಂದು ಬಿಗ್ ಬಾಸ್ ಈಗಾಗಲೇ ಘೋಷಿಸಿದ್ದಾರೆ. ಒಬ್ಬ ಸ್ಪರ್ಧಿ ಪ್ರೇಕ್ಷಕರಿಂದ ಕಡಿಮೆ ವೋಟ್ ಪಡೆದು ಮನೆಯಿಂದ ಹೊರ ನಡೆಯುವುದು ಮಾಮೂಲಿನ ಸಂಗತಿಯಾದರೆ ಇನ್ನೊಬ್ಬ ಸ್ಪರ್ಧಿ ಅಚ್ಚರಿಯ ವೋಟೌಟ್ ಗೆ ಒಳಪಡುತ್ತಿದ್ದಾರೆ.

ನಗ್ನ ಯೋಗ ಗುರು ವಿವೇಕ್ ವಿರುದ್ಧ ಕುಶಾಲ್ ತಿರುಗಿ ಬಿದ್ದು ಕಿಚಾಯಿದ ಘಟನೆ ನಂತರ ಇಬ್ಬರೂ ಈಗ 'ಬಿಗ್ ಟ್ವಿಸ್ಟ್ ' ನ ಭಾಗವಾಗುತ್ತಿದ್ದಾರೆ. ಕಣ್ಣೀರಿಟ್ಟ ವಿವೇಕ್ ಮತ್ತೊಮ್ಮೆ ಕಣ್ಣೀರು ಸುರಿಸುತ್ತಾ ಮನೆಯಿಂದ ಹೊರ ಬೀಳುವ ಸುದ್ದಿ ಸಿಕ್ಕಿದೆ. ಈ ನಡುವೆ ತನೀಶಾ ಜತೆ ಕಿತ್ತಾಡಿಕೊಂಡ ಕುಶಾಲ್, ತನೀಶಾ ವಿರುದ್ಧ ಕ್ರಮ ಜರುಗಿಸದ ಬಿಗ್ ಬಾಸ್ ಪಕ್ಷಪಾತ ವಿರೋಧಿಸಿ ಮನೆಯಿಂದ ಹೊರ ಹಾರುವ ಯತ್ನ ನಡೆಸಿದ ಘಟನೆ ನಡೆದಿದೆ.

ಕುಶಾಲ್ ಬಾಕ್ಸ್ ಟಾಸ್ಕ್ ನಲ್ಲಿ ಗೌಹರ್ ವಿರುದ್ಧ ನಿಂತು ಆಕೆಯ ಕೋಪ ಗುರಿಯಾಗಿದ್ದ. ಅರ್ಮಾನ್ ಕೂಡಾ ಬಾಕ್ಸ್ ಟಾಸ್ಕ್ ನಲ್ಲಿ ಎಲ್ಲಿ ತಲೆ ಡಿಚ್ಚಿ ಕೊಟ್ಟ. ಕಾಮ್ಯಾ ಹಳೆ ಕಥೆ ಹೊರಗೆಳೆದು ಕಿರುಚಾಡಿದ ಆದರೆ, ದಿನದ ಕೊನೆಯಲ್ಲಿ ಆಕೆ ಕಾಲಿಗೆ ಬಿದ್ದು ಕ್ಷಮೆಯಾಚಿಸಿದ ನಂತರ ಕುಶಾಲ್ ಮನೆ ಗೋಡೆ ಹತ್ತಿ ಹೊರಕ್ಕೆ ಹಾರುವ ಯತ್ನ ನಡೆಸಿದ ಮುಂದೇನಾಯ್ತು ಓದಿ...

ಅಚ್ಚರಿಯ ಎವಿಕ್ಷನ್

ಕಳೆದ ವಾರವಷ್ಟೇ ಬಿಗ್ ಬಾಸ್ ಮನೆಗೆ ಅನೀರಿಕ್ಷಿತವಾಗಿ ಕಾಲಿಟ್ಟಿದ್ದ ವಿವೇಕ್ ಈ ವಾರದ ಮಧ್ಯೆದಲ್ಲೇ ಮನೆಯಿಂದ ಹೊರ ನಡೆದಿದ್ದಾರೆ

ಈ ಮುಂಚೆ ಹೇಜೆಲ್ ಕೀಚ್, ಅನಿತಾ, ಶಿಲ್ಪಾ ಅಗ್ನಿ ಹೋತ್ರಿ ಮನೆಯಿಂದ ಹೊರ ಬಿದ್ದಿದ್ದಾರೆ. ತನೀಶಾ ಮುಖರ್ಜಿ, ಅರ್ಮಾನ್, ಪ್ರತ್ಯೂಷಾ ಬ್ಯಾನರ್ಜಿ, ಆಸೀಫ್ ಅಜೀಂ ನಾಮಿನೇಷನ್ ಆಗಿದ್ದರು.

ಗೌಹರ್ ಖಾನ್, ಸಂಗ್ರಾಮ್ ಸಿಂಗ್, ಎಲ್ಲಿ ಅವ್ರಾಮ್, ವಿಜೆ ಆಂಡಿ, ಕಾಮ್ಯಾ ಪಂಜಾಬಿ ಹಾಗೂ ಅಪೂರ್ವ ಅಗ್ನಿಹೋತ್ರಿ ಸೇಫ್ ಜೋನ್ ನಲ್ಲಿದ್ದಾರೆ.

ವಿವೇಕ್ ಪ್ರತಿಕ್ರಿಯೆ

ಈ ಬೆಳವಣಿಗೆ ನನಗೆ ಅಚ್ಚರಿ ತಂದಿದೆ. ಆದರೆ ಮನೆಯಿಂದ ಹೊರ ಬಂದಿರುವುದು ಸಂತಸ ತಂದಿದೆ. ಬಿಗ್ ಬಾಸ್ ಮನೆಯಲ್ಲಿ ನಡೆಯುವುದೆಲ್ಲ ಪೂರ್ವ ಲಿಖಿತವಾಗಿರುತ್ತದೆ ಎಂದು ತುಂಬಾ ಜನ ಹೇಳುತ್ತಾರೆ. ಆದರೆ, ಅದು ಲೈವ್ ಆಗಿ ನಡೆಯುತ್ತದೆ ಟೆಲಿಕಾಸ್ಟ್ ಸಮಯದಲ್ಲಿ ಸ್ವಲ್ಪ ಎಡಿಟ್ ಮಾಡುತ್ತಾರೆ ಅಷ್ಟೇ.

ರಿಯಾಲಿಟಿ ಶೋ ದೊಡ್ಡ ಪಾಠ ಕಲಿಸುತ್ತದೆ. ವಿವಿಧ ಮನಸ್ಥಿತಿಯ ಜನರ ನಡುವೆ ಬೆರೆಯುವುದನ್ನು ಕಲಿಸುತ್ತದೆ ಎಂದು ವಿವೇಕ್ ಪಿಟಿಐಗೆ ಪ್ರತಿಕ್ರಿಯಿಸಿದ್ದಾರೆ.

ಕಣ್ಣೀರಿಟ್ಟಿದ್ದ ವಿವೇಕ್

ನಗ್ನ ಯೋಗ ಗುರು ವಿವೇಕ್ ಅರ್ಮಾನ್ ಕೊಹ್ಲಿ ಹಾಗೂ ಕುಶಾಲ್ ಥಂಡನ್ ಜತೆ ಜಗಳವಾಡಿದ್ದೇ ಸಾಧನೆಯಾಗಿತ್ತು. ಪಾತ್ರೆ ತೊಳೆಯುವ ವಿಷಯದಲ್ಲಿ ಕುಶಾಲ್ ಜತೆ ಜಗಳವಾಡಿ ಕಣ್ಣೀರಿಟ್ಟಿದ್ದ ವಿವೇಕ್ ಹಾಸ್ಯದ ವಸ್ತುವಾಗಿದ್ದ.

ನಂತರ ಅರ್ಮಾನ್ ಜತೆ ಕಿತ್ತಾಡಿದ್ದ. ಕೊನೆ ಕೊನೆಗೆ ಗೆಳತಿ ಪ್ರತ್ಯೂಷಾ ಕೋಪಕ್ಕೂ ಗುರಿಯಾದ. ಆರಂಭದ ದಿನಗಳಲ್ಲಿ ವಿವೇಕ್ ಯೋಗ ಸಂಗ್ರಾಮ್ ಗೂ ನಗೆ ಉಕ್ಕಿಸಿತ್ತು. ಪ್ರೇಕ್ಷಕರಿಗೂ ವಿವೇಕ್ ನಡೆ ನುಡಿ ಸ್ವಲ್ಪ ವಿಚಿತ್ರವಾಗಿ ಕಾಣಿಸಿದ್ದು ಆತ ಹೊರಕ್ಕೆ ಹೋಗಲು ಕಾರಣ ಎನ್ನಬಹುದು

ನಾಯಕನಾಗಿ ಅಪೂರ್ವ

ಈ ಮಧ್ಯೆ ಅಪೂರ್ವ ನಾಯಕನಾದ ಮೇಲೆ ಮನೆ ಮಂದಿಯೆಲ್ಲ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ಗೌಹರ್-ಕುಶಾಲ್ ಮಧ್ಯೆ ಜಗಳ, ಅರ್ಮಾನ್ -ತನೀಶಾ ನಡುವೆ ಮನಸ್ತಾಪ, ಪ್ರತ್ಯೂಷಾ-ವಿವೇಕ್ ವಾಗ್ದಾಳಿ ನಡುವೆಯೂ ಒಟ್ಟಿಗೆ ಇದ್ದಾರೆ.

ಕುಶಾಲ್ ದುಂಡಾವರ್ತನೆ ಅವರನ್ನು ಮನೆಯಿಂದ ಹೊರಕ್ಕೆ ಕಳಿಸುವ ಹಂತಕ್ಕೆ ತಂದಿದೆ. ಸಹಜವಾಗಿ ಇದರಿಂದ ಗೌಹರ್ ದುಃಖಿತಳಾಗಿದ್ದಾಳೆ. ಅರ್ಮಾನ್-ತನೀಶಾ ಮಿಕ್ಕ ಸ್ಪರ್ಧಿಗಳಿಂದ ದೂರವೆ ಉಳಿದಿದ್ದಾರೆ. ಅಪೂರ್ವ ಕೂಡಾ ಒಂದರ್ಥದಲ್ಲಿ ಒಬ್ಬಂಟಿ

English summary
Yoga trainer Vivek Mishra has become the sixth celebrity to be ousted from 'Bigg Boss 7' in a surprise mid-week elimination.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada