»   » ಸುದೀಪ್ ಮತ್ತು ಯೋಗರಾಜ್ ಭಟ್ ಕಾಂಬಿನೇಶನ್ ಸಿನಿಮಾ ಸುದ್ದಿ!

ಸುದೀಪ್ ಮತ್ತು ಯೋಗರಾಜ್ ಭಟ್ ಕಾಂಬಿನೇಶನ್ ಸಿನಿಮಾ ಸುದ್ದಿ!

Posted By:
Subscribe to Filmibeat Kannada

ನಟ ಸುದೀಪ್ ಸ್ಯಾಂಡಲ್ ವುಡ್ ನ ದೊಡ್ಡ ಸ್ಟಾರ್. ಯೋಗರಾಜ್ ಭಟ್ ಕನ್ನಡದ ಸ್ಟಾರ್ ಡೈರೆಕ್ಟರ್. ಈ ಇಬ್ಬರು ಒಟ್ಟಿಗೆ ಹಿಂದೆ 'ರಂಗ SSLC' ಸಿನಿಮಾ ಮಾಡಿದ್ದರು. ಇದೀಗ ಮತ್ತೆ ಇವರಿಬ್ಬರು ಸಿನಿಮಾ ಮಾಡುವ ಸುದ್ದಿ ಕೇಳಿ ಬಂದಿದೆ.

'ಮೋಜೊ' ಚಿತ್ರಕ್ಕೆ ಧ್ವನಿ ನೀಡಿದ ನಿರ್ದೇಶಕ ಯೋಗರಾಜ್ ಭಟ್

ಇತ್ತೀಚಿಗಷ್ಟೆ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಸೂಪರ್ ಟಾಕ್ ಟೈಂ'ಗೆ ನಿರ್ದೇಶಕ ಯೋಗರಾಜ್ ಭಟ್ ಅತಿಥಿಯಾಗಿ ಬಂದಿದ್ದರು. ಕಾರ್ಯಕ್ರಮದಲ್ಲಿ ಮಾತನಾಡುವಾಗ ಅಕುಲ್ ನಟ ಸುದೀಪ್ ವಿಚಾರ ತೆಗೆದರು. ಆಗ ಭಟ್ಟರು ಸುದೀಪ್ ಜೊತೆ ಸಿನಿಮಾ ಮಾಡುವ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ...

ಅಕುಲ್ ಪ್ರಶ್ನೆ

''ಸುದೀಪ್ ಮತ್ತು ನೀವು 'ರಂಗ SSLC' ಸಿನಿಮಾ ಮಾಡಿದ್ರಿ...ಆಗ ನಿಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಇದೆ ಎನ್ನುವ ಸುದ್ದಿ ಇತ್ತು. ಅದರ ಬಗ್ಗೆ ಹೇಳಿ'' ಅಂತ ಅಕುಲ್ ಪ್ರಶ್ನೆ ಕೇಳಿದರು.

ಭಟ್ಟರ ಉತ್ತರ

''ಸುದೀಪ್ ನನಗೆ ಅದ್ಭುತ ಸ್ನೇಹಿತ. ನನಗೆ ತುಂಬ ಇಷ್ಟ ಆಗುವ ನಟರಲ್ಲಿ ಸುದೀಪ್ ಕೂಡ ಒಬ್ಬರು. ಅವರ ನನ್ನ ನಡುವೆ ಈ ರೀತಿ ಹಬ್ಬಿದ್ದ ಸುದ್ದಿ ನಿಜ ಅಲ್ಲ'' ಎಂಬ ಯೋಗರಾಜ್ ಭಟ್ ಪ್ರತಿಕ್ರಿಯೆ ನೀಡಿದರು.

'ಕಿಲಾಡಿ ಕುಟುಂಬ'ದಲ್ಲಿ ಜಗ್ಗಣ್ಣ - ಯೋಗರಾಜ್ ಭಟ್ ಜುಗಲ್ ಬಂದಿ

ಸಾಧನೆ ದೊಡ್ಡದು

''ಸುದೀಪ್ ಹಿಂದಿ, ತೆಲುಗು ಭಾಷೆಯಲ್ಲಿ ನಟಿಸಿ ಮಾಡಿರುವ ಸಾಧನೆ ದೊಡ್ಡದು. ಅವರ ನಟನೆ, ಎತ್ತರ, ಧ್ವನಿ, ಬಟ್ಟೆಗಳ ಬಗ್ಗೆ ಅವರಿಗೆ ಇರುವ ಕಲ್ಪನೆ ನನಗೆ ತುಂಬ ಇಷ್ಟ ಆಗುತ್ತದೆ'' - ಯೋಗರಾಜ್ ಭಟ್, ನಿರ್ದೇಶಕ.

ಖಂಡಿತ ಸಿನಿಮಾ ಮಾಡ್ತೀವಿ

''ಪ್ರತಿ ವರ್ಷ ನಾನು ಒಟ್ಟಿಗೆ ಸಿನಿಮಾ ಮಾಡಬೇಕು ಅಂತ ಮಾತಾಡುತ್ತೇವೆ. ಆದರೆ ಅವರು ಅವರ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ನಾನು ಕೂಡ ಬೇರೆ ಬೇರೆ ಸಿನಿಮಾ ಮಾಡುತ್ತಿದ್ದೇನೆ. ಆದರೆ ಮುಂದೆ ಖಂಡಿತ ಇಬ್ಬರು ಒಟ್ಟಿಗೆ ಸಿನಿಮಾ ಮಾಡ್ತೀವಿ.''- ಯೋಗರಾಜ್ ಭಟ್, ನಿರ್ದೇಶಕ.

'ಬಿಗ್' ಸುದ್ದಿ: ದರ್ಶನ್ ಬಗ್ಗೆ ಟ್ವೀಟ್ ಮಾಡಿದ ಕಿಚ್ಚ ಸುದೀಪ್

English summary
Director Yogaraj Bhat spoke about Sudeep in Colors Super Channel's popular show 'Super talk time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X