For Quick Alerts
  ALLOW NOTIFICATIONS  
  For Daily Alerts

  ಸರ್ಕಾರಿ ಶಾಲೆ ದತ್ತು ಪಡೆದ ಜೀ ಕನ್ನಡ ವಾಹಿನಿ

  By Rajendra
  |

  ಕನ್ನಡಿಗರ ನೆಚ್ಚಿನ ಜನಪ್ರಿಯ ಕನ್ನಡ ವಾಹಿನಿ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡುವುದರ ಜೊತೆಗೆ ಸಮಾಜ ಸೇವೆಯಲ್ಲೂ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಬೆಂಗಳೂರಿನ ಬಾಣಸವಾಡಿಯ ಬಿ. ಚನ್ನಸಂದ್ರ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ದತ್ತು ಪಡೆಯುವುದರ ಮೂಲಕ ಆ ಶಾಲೆಯ 200 ಮಕ್ಕಳಿಗೆ ಜೀ ಕನ್ನಡ ವಾಹಿನಿಯಿಂದ ಉಚಿತ ಶೂ ವಿತರಿಸಲಾಯಿತು.

  ಗಣರಾಜ್ಯೋತ್ಸವದ ಅಂಗವಾಗಿ (ಜನವರಿ 26 ರಂದು) ಕನ್ನಡ ಚಿತ್ರರಂಗದ ಖ್ಯಾತ ತಾರೆ ಅಮೂಲ್ಯಾ ಜೀ ಕನ್ನಡದ ಪರವಾಗಿ ಬಿ. ಚನ್ನಸಂದ್ರ ಸರ್ಕಾರಿ ಶಾಲೆಯಲ್ಲಿ ಮಕ್ಕಳೊಂದಿಗೆ ಧ್ವಜಾರೋಹಣ ನೆರವೇರಿಸಿ, ಮಕ್ಕಳಿಗೆ ಸಿಹಿ ಹಾಗೂ ಉಚಿತ ಶೂಗಳನ್ನು ವಿತರಿಸಿದರು. [ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಕಿರುತೆರೆಗೆ ಎಂಟ್ರಿ]

  ನಂತರ ಮಾತನಾಡಿದ ಅಮೂಲ್ಯಾ ಜೀ ಕನ್ನಡ ವಾಹಿನಿಯು ಮನರಂಜನೆಯ ಜೊತೆಗೆ ಬಡ ಮಕ್ಕಳಿಗೆ ನೆರವು ನೀಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದನ್ನು ಶ್ಲಾಘಿಸಿದರು.

  ಜೀ ವಾಹಿನಿಯ ಉಪಾಧ್ಯಕ್ಷ ಗೌತಮ್ ಮಾಚಯ್ಯ ಮಾತನಾಡಿ, "ಜೀ ವಾಹಿನಿಯು ಕೇವಲ ಮನರಂಜನೆಗೆ ಸೀಮಿತವಾಗಿರದೇ ಸಮಾಜಕ್ಕೆ ಅನುಕೂಲವಾಗುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಅದರಲ್ಲಿ ಈ ಶಾಲೆಯನ್ನು ದತ್ತು ತೆಗೆದುಕೊಳ್ಳುವ ಕಾರ್ಯಕ್ರಮವೂ ಕೂಡ ಒಂದು" ಎಂದರು. [ಶ್ರಾವಣಿ ಸುಬ್ರಮಣ್ಯ ವಿಮರ್ಶೆ]

  ಈ ಶಾಲೆಯಲ್ಲಿ ಮಕ್ಕಳಿಗೆ ಅನುಕೂಲವಾಗುವಂತೆ ಪ್ರತಿ ತಿಂಗಳು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಮಾಚಯ್ಯ ಹೇಳಿದರು. ಇದೇ ಸಂದರ್ಭದಲ್ಲಿ ಈ ಶಾಲೆಯ ಎಲ್ಲ ಮಕ್ಕಳಿಗೆ ನಟಿ ಅಮೂಲ್ಯರೊಂದಿಗೆ 'ಶ್ರಾವಣಿ ಸುಬ್ರಮಣ್ಯ' ಚಲನಚಿತ್ರವನ್ನು ಉಚಿತವಾಗಿ ತೋರಿಸಲಾಯಿತು. (ಒನ್ಇಂಡಿಯಾ ಕನ್ನಡ)

  English summary
  Zee Kannada adopts govt school in Banasavadi B Channasandra, Bangalore on 26th January Republic day. At the same time arranged free screening of Kannada film ' 'Sravani Subramanya' for school students.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X