»   » ಅನ್ನದಾತರಿಗಾಗಿ ಜೀ ಕನ್ನಡ ವಾಹಿನಿಯಲ್ಲಿ 'ಸುಗ್ಗಿ ಸಂಭ್ರಮ'

ಅನ್ನದಾತರಿಗಾಗಿ ಜೀ ಕನ್ನಡ ವಾಹಿನಿಯಲ್ಲಿ 'ಸುಗ್ಗಿ ಸಂಭ್ರಮ'

Posted By:
Subscribe to Filmibeat Kannada

ವರ್ಷದ ಮೊದಲ ಹಬ್ಬ ಸಂಕ್ರಾಂತಿಯ ಸಂಭ್ರಮ ಎಲ್ಲೆಡೆ ಕಳೆಗಟ್ಟುತಿದೆ. ಅನ್ನ ನೀಡುವ ಭೂಮಿತಾಯಿಗೆ ಹಾಗೂ ಆಕೆಯ ಮಕ್ಕಳಿಗೆ ಒಂದು ದಿನ ಬಿಡುವು ಕೊಟ್ಟು ನಮನ ಸಲ್ಲಿಸುವ ಸುಗ್ಗಿ ಹಬ್ಬವನ್ನ ಜೀ ಕನ್ನಡ ವಾಹಿನಿ ವಿಭಿನ್ನವಾಗಿ ಆಚರಣೆ ಮಾಡಲು ಸಿದ್ದತೆ ಮಾಡಿಕೊಂಡಿದೆ.

ಕೇವಲ ವಾಹಿನಿ ಮೂಲಕ ಪ್ರೇಕ್ಷಕರಿಗೆ ಮನೋರಂಜನೆ ನೀಡುವುದಷ್ಟೇ ನಮ್ಮ ಕೆಲಸವಲ್ಲ ಎಂದು ನಿರ್ಧರಿಸಿರುವ ಜೀ ವಾಹಿನಿ ತಂಡ ವರ್ಷದ ಮೊದಲ ಹಬ್ಬವನ್ನ ಅನ್ನದಾತರಿಗಾಗಿ ಮಿಸಲಿಡಲು ನಿರ್ಧರಿಸಿದೆ.

ಸಂಕ್ರಾಂತಿ ಹಬ್ಬಕ್ಕೆ ನಿಮ್ಮ ಮನೆಗೆ ಬರ್ತಿದ್ದಾರೆ ದರ್ಶನ್, ಧ್ರುವ, ಗಣೇಶ್

ಹಳ್ಳಿ ಸೊಗಡು ಹಾಗೂ ರೈತರ ಜೊತೆಯಲ್ಲಿ ಸಂಕ್ರಾಂತಿ ಆಚರಣೆ ಮಾಡುವ ಉದ್ದೇಶದಿಂದ ಇಷ್ಟು ದಿನ ತೆರೆ ಮೇಲೆ ರಂಜಿಸುತ್ತಿದ್ದ ಕಲಾವಿದರನ್ನ ಪ್ರೇಕ್ಷಕರ ಮನೆ ಬಾಗಿಲಿಗೆ ಕರೆದುಕೊಂಡು ಹೋಗಿ ಹಳ್ಳಿಗಳಲ್ಲಿ ಅಲ್ಲಿಯ ಜನರ ಮಧ್ಯೆ ಹಬ್ಬವನ್ನ ಆಚರಣೆ ಮಾಡಲಿದ್ದಾರೆ. ಹಾಗಾದ್ರೆ ಜೀ ವಾಹಿನಿಯ ಸಂಕ್ರಾಂತಿ ಸುಗ್ಗಿ ಹೇಗಿರಲಿದೆ? ಯಾವ ಯಾವ ಜಿಲ್ಲೆಯಲ್ಲಿ ಈ ಸಂಭ್ರಮ ನಡೆಯಲಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

ಜೀ ವಾಹಿನಿಯಿಂದ ಸುಗ್ಗಿ ಸಂಭ್ರಮ

ರಾಜ್ಯದ ಅತ್ಯುತ್ತಮ ಮನೋರಂಜನಾ ವಾಹಿನಿಗಳಲ್ಲಿ ಒಂದಾದ ಜೀ ವಾಹಿನಿಯಿಂದ ಸಂಕ್ರಾಂತಿ ಹಬ್ಬವನ್ನ ಆಚರಣೆ ಮಾಡಲಾಗುತ್ತಿದೆ. ದೇಶದ ಬೆನ್ನೆಲುಬು ಆಗಿರುವ ರೈತರ ಜೊತೆ ಸುಗ್ಗಿ ಸಂಭ್ರಮ ಹಂಚಿಕೊಳ್ಳಲು ಕಲಾವಿದರೆಲ್ಲರೂ ತಯಾರಾಗಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಸಂಕ್ರಾಂತಿ ಸಂಭ್ರಮ

ಜನವರಿ 11 ರಂದು ಅಂದರೆ ನಾಳೆ ಮಂಡ್ಯ ಜಿಲ್ಲೆಯ 'ಮಂಗಲ' ಗ್ರಾಮದಲ್ಲಿ ಜೀ ವಾಹಿನಿಯ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವನ್ನ ಆರ್ವ ಬಸವಟ್ಟಿ ಮತ್ತು ಕಾಮಿಡಿ ಕಿಲಾಡಿ ಖ್ಯಾತಿಯ ನಯನ ನಡೆಸಿಕೊಡಲಿದ್ದಾರೆ.

ಪ್ರೇಕ್ಷಕರ ಮನೆಯಲ್ಲಿ ಕಲಾವಿದರು

ಸಂಕ್ರಾಂತಿ ಸಂಭ್ರಮದಲ್ಲಿ 'ಜೋಡಿಹಕ್ಕಿ', 'ಸುಬ್ಬಲಕ್ಷ್ಮಿ ಸಂಸಾರ', 'ಯಾರೇ ನೀ ಮೋಹಿನಿ', 'ವಿದ್ಯಾ ವಿನಾಯಕ', 'ನಾಗಿಣಿ' ಮತ್ತು 'ಬ್ರಹ್ಮಗಂಟು' ತಂಡಗಳು ಭಾಗವಹಿಸಲಿವೆ. ರಿಯಾಲಿಟಿ ಶೋ ತಂಡದಿಂದ 'ಸ ರಿ ಗ ಮ ಪ' , 'ಕಾಮಿಡಿ ಕಿಲಾಡಿಗಳು' ಮತ್ತು 'ಡಾನ್ಸ್ ಕರ್ನಾಟಕ ಡಾನ್ಸ್' ತಂಡಗಳು ಭಾಗವಹಿಸಲಿವೆ.

ರಾಜ್ಯದ ಅನೇಕ ಜಿಲ್ಲೆಯಲ್ಲಿ ಸಂಕ್ರಾಂತಿ ಸಂಭ್ರಮ

ಸಂಕ್ರಾಂತಿ ಸಂಭ್ರಮದ ಜೊತೆಗೆ 'ಸಂಕ್ರಾಂತಿ ಗೋ ಉತ್ಸವ' ಎಂಬ ವಿಶೇಷ ಕಾರ್ಯಕ್ರಮವನ್ನು ಜೀ ವಾಹಿನಿ ಆಯೋಜನೆ ಮಾಡಿದೆ. ಹಾಸನ, ಚಾಮರಾಜನಗರ, ಶಿವಮೊಗ್ಗ ಮತ್ತು ತುಮಕೂರಿನ ಪ್ರತಿಷ್ಠಿತ ಹಳ್ಳಿಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಸ್ಪರ್ಧೆಯ ಮೂಲಕ ಗೋ ಮಾತೆಗೆ ನಮನ ಸಲ್ಲಿಸುವುದು ಜೀ ವಾಹಿನಿಯ ಉದ್ದೇಶವಾಗಿದೆ.

ಹಬ್ಬದ ದಿನವೇ ಸಂಕ್ರಾಂತಿ ಸಂಭ್ರಮ ಪ್ರಸಾರ

ಸಂಕ್ರಾಂತಿ ರೈತರ ಹಬ್ಬವಾಗಿರುವುದರಿಂದ ಪ್ರೇಕ್ಷಕರಿಗೆ ರೈತರ ಸಂಸ್ಕೃತಿ, ಸಂಪ್ರದಾಯವನ್ನ ಪರಿಚಯಿಸುವುದ ಜೊತೆಯಲ್ಲಿ ಪ್ರಕೃತಿ ಮಾತೆಗೆ ಧನ್ಯವಾದ ಸಲ್ಲಿಸುವ ಆಲೋಚನೆಯಲ್ಲಿ ಈ ರೀತಿಯಲ್ಲಿ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದಾರೆ ಜೀ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು. ಜನವರಿ 14 ಸಂಜೆ 5ಕ್ಕೆ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಜೀ ವಾಹಿನಿಯಲ್ಲಿ ಪ್ರಸಾರವಾಗಲಿದೆ

English summary
Zee Kannada Channel organized a special program called the Sankranti Sambrama on the Sankranti festival. and also Sankranti Goo Utsava is being organized with Sankranti celebration. This program will be held in selected villages in the state.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X