»   » ಜೀ ಕನ್ನಡ ನೂತನ ಶೋ ಚೋಟಾ ಚಾಂಪಿಯನ್

ಜೀ ಕನ್ನಡ ನೂತನ ಶೋ ಚೋಟಾ ಚಾಂಪಿಯನ್

Posted By:
Subscribe to Filmibeat Kannada

ಚಾಂಪಿಯನ್ ಆಗೋದಿಕ್ಕೆ ದೊಡ್ಡವರೇ ಬೇಕಾಗಿಲ್ಲ ಪುಟ್ ಪುಟ್ ಪುಟಾಣೀಗಳೇ ಸಾಕು ಎಂದು ಕಿರುತೆರೆ ವೀಕ್ಷಕರನ್ನು ರಂಜಿಸಲು ಮತ್ತೊಂದು ಪುಟಾಣಿ ಶೋ ಬರುತ್ತಿದೆ. ಜೀ ಕನ್ನಡ ವಾಹಿನಿ 'ಚೋಟಾ ಚಾಂಪಿಯನ್' ಎಂಬ ನೂತನ ಮಕ್ಕಳ ಶೋ ಆರಂಭಿಸುತ್ತಿದೆ.

ಈ ಶೋನಲ್ಲಿ 2ರಿಂದ 3 ವರ್ಷದೊಳಗಿನ ಮಕ್ಕಳು ಪಾಲ್ಗೊಳ್ಳಬಹುದು. ಮಕ್ಕಳ ಜೊತೆ ಅವರ ಪೋಷಕರು ಶೋನಲ್ಲಿ ಸ್ಪರ್ಧಿಗಳಾಗಿರುತ್ತಾರೆ ಎಂಬುದು ವಿಶೇಷ. ಈ ಪುಟಾಣಿ ಶೋ ಕೇವಲ ಮಕ್ಕಳನ್ನಷ್ಟೇ ಅಲ್ಲ ದೊಡ್ಡವರನ್ನೂ ರಂಜಿಸಲಿದೆ.

Actor Srujan Lokesh

ಈ ಪುಟಾಣಿ ಶೋ ನಿರೂಪಕರು ನಟ ಸೃಜನ್ ಲೋಕೇಶ್. ಈ ಶೋ ಪೋಷಕರು ಹಾಗೂ ಮಕ್ಕಳ ನಡುವಿನ ಹೊಂದಾಣಿಕೆ, ಆತ್ಮೀಯತೆಯನ್ನು ತೋರಿಸುವುದಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಳ್ಳುತ್ತಾರೆ ಎಂಬ ಟಾಸ್ಕ್ ಗಳು ಈ ಶೋನಲ್ಲಿರುತ್ತವೆ ಎನ್ನುತ್ತದೆ ಜೀ ಕನ್ನಡ ವಾಹಿನಿ.

ಈಗಾಗಲೆ ಈ ಶೋನ ಪ್ರೊಮೋ ಬಿಡುಗಡೆಯಾಗಿದ್ದು ಅದರಲ್ಲಿ ಸೃಜನ್ ಲೋಕೇಶ್ ಮಾತನಾಡುತ್ತಾ, "ಕಾಫಿ ಕುಡಿಯೋದಕ್ಕೆ ಹಂಡೆ ಬೇಕಾಗಿಲ್ಲ ಚೋಟಾ ಲೋಟ ಸಾಕು, ಬ್ರಹ್ಮಾಂಡ ತೋರಿಸುವುದಕ್ಕೆ ಆಕಾಶ ಬೇಕಿಲ್ಲ ಇವ್ರುಗಳು ಬಾಯ್ಬಿಟ್ರೆ ಸಾಕು, ಬಂಡೇನ ಪುಡಿ ಪುಡಿ ಮಾಡೋದಕ್ಕೆ ಬುಲ್ಡೋಜರ್ ಬೇಡ ಚಿಕ್ಕ ಚಿಕ್ಕ ಬಾಂಬ್ ಗಳೇ ಸಾಕು" ಎನ್ನುತ್ತಾರೆ.

'ಚಿಕ್ಕವ್ರಿಗೆ ಮಸ್ತಿ ದೊಡ್ಡವರಿಗೆ ಕುಸ್ತಿ' ಎಂಬುದು ಈ ಶೋನ ಪಂಚ್ ಲೈನ್. ಶೋನಲ್ಲಿ ಗೆಲ್ಲುವ ಮಕ್ಕಳಿಗೆ ಸ್ಕಾಲರ್ ಶಿಫ್ ನೀಡಲಾಗುತ್ತದೆ. ಸೆ.14ರಿಂದ ಆರಂಭವಾಗುವ ಪುಟಾಣಿ ಚಾಂಪಿಯನ್ ಶನಿವಾರ ಮತ್ತು ಭಾನುವಾರ ರಾತ್ರಿ 9ರಿಂದ 10 ಗಂಟೆಗೆ ಮೂಡಿಬರಲಿದೆ. ಭಾಗವಹಿಸುವವರು ದೂರವಾಣಿ ಸಂಖ್ಯೆ 8884670707 ಸಂಪರ್ಕಿಸಬಹುದು. (ಒನ್ಇಂಡಿಯಾ ಕನ್ನಡ)

English summary
Zee Kannada will start airing a new non fiction show Chota Champion, for children aged between 2 to 3 from 14th Sept at 9 to 10 pm. The show celebrates the relentless relationship between parents and their children. Actor Srujan Lokesh hosting the show. 
Please Wait while comments are loading...