Don't Miss!
- News
ರಾಷ್ಟ್ರವಾದದ ಮೂಲಕ ವಂಚನೆಯನ್ನು ಮಚ್ಚಿಹಾಕಲು ಸಾಧ್ಯವಿಲ್ಲ: ಅದಾನಿಗೆ ಹಿಂಡೆನ್ಬರ್ಗ್ ತಿರುಗೇಟು- ಷೇರುಗಳಲ್ಲಿ ಮತ್ತೆ ಕುಸಿತ
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ಏಕಾಏಕಿ ಭಾರೀ ಇಳಿಕೆ!..ಸಖತ್ ಆಫರ್!
- Sports
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಭಾರತ ತಂಡದ ಆರಂಭಿಕ ಬ್ಯಾಟರ್
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾಪ್ಟನ್ ಪ್ರೀತ್ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತಮಿಳಿಗೆ ಹೊರಟ ಪಾರು ಖ್ಯಾತಿಯ ಮೋಕ್ಷಿತಾ ಪೈ!
ಪಾರು ಧಾರಾವಾಹಿಯ ನಾಯಕಿ ಮೋಕ್ಷಿತಾ ಪೈ ಕರುನಾಡಿನ ಮನೆ ಮಗಳಾಗಿದ್ದಾಳೆ. ಸೀರಿಯಲ್ ಜೊತೆಗೆ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಇದೀಗ ಮೋಕ್ಷಿತಾ ಪೈ ತಮಿಳು ಕಿರುತೆರೆಗೂ ಎಂಟ್ರಿ ಕೊಟ್ಟಿದ್ದು, ಮೀನಾಕ್ಷಿಯ ಮಗಳಾಗಿ ಮಿಂಚಲು ಸಜ್ಜಾಗಿದ್ದಾರೆ.
ಪಾರು ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಮೋಕ್ಷಿತಾ ಪೈ ಅವರಿಗೆ ಈಗ ಸಿನಿಮಾ ಹಾಗೂ ಇತರೆ ಸೀರಿಯಲ್ ಗಳಲ್ಲಿ ನಟಿಸುವ ಅವಕಾಶಗಳು ಒದಗಿ ಬರುತ್ತಿವೆ. ಆದರೆ, ಕಥೆ, ಪಾತ್ರಗಳ ಬಗ್ಗೆ ಮೋಕ್ಷಿತಾ ಪೈ ಅವರು ಬಹಳ ಕಾಳಜಿ ವಹಿಸಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಸ್ನೇಹಾಗೆ
ಸತ್ಯ
ಹೇಳಲೇ
ಬೇಕಾದ
ಪರಿಸ್ಥಿತಿಯಲ್ಲಿ
ಕಂಠಿ!
ಇನ್ನು ಈಗಾಗಲೇ ಮೋಕ್ಷಿತಾ ಅವರು ನಟಿಸಿದ ಚಿತ್ರವೊಂದು ರಿಲೀಸ್ ಗೆ ಸಜ್ಜಾಗಿದೆ. ಇನ್ನೂ ಒಂದು ಚಿತ್ರದಲ್ಲಿ ನಟಿಸಲಿದ್ದು, ಅದರ ಬಗ್ಗೆ ಹೆಚ್ಚಿನ ಮಾಹಿತಿ ಹೊರ ಬಿದ್ದಿಲ್ಲ. ಇದರೊಂದಿಗೆ ಈಗ ತಮಿಳು ಕಿರುತೆರೆಗೆ ಎಂಟ್ರಿಕೊಟ್ಟಿದ್ದಾರೆ.
ಕರುನಾಡಿನ ಮನೆ ಮಗಳಾಗಿರುವ ಪಾರು!
ಮೋಕ್ಷಿತಾ ಪೈ ನಟಿಸಿದ ಮೊದಲ ಧಾರಾವಾಹಿಯೇ 'ಪಾರು'. ಈ ಧಾರಾವಾಹಿ ಹಿಟ್ ಆಗಿದ್ದು, 'ಪಾರು' ಎಂದೇ ಚಿರಪರಿಚಿತರಾಗಿದ್ದಾರೆ. ವಿನಯಾ ಪ್ರಸಾದ್, ಎಸ್ ನಾರಾಯಣ್ ಸೇರಿದಂತೆ ಈ ಧಾರಾವಾಹಿಯಲ್ಲಿ ದೊಡ್ಡ ತಾರಾ ಬಳಗವಿದೆ. ಮೋಕ್ಷಿತಾ ಪೈ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಮನೆ ಮಗಳಾಗಿದ್ದಾರೆ. ಕಿರುತೆರೆಯಲ್ಲಿ ಸಿಕ್ಕ ಬೆಂಬಲದಿಂದಲೇ ಪಾರು ಈಗ ಸ್ಯಾಂಡಲ್ ವುಡ್ ಜೊತೆಗೆ ತಮಿಳು ಕಿರುತೆರೆಗೂ ಪದಾರ್ಪಣೆ ಮಾಡಿದ್ದಾರೆ.
ಬಾಲನ
ಪ್ಲ್ಯಾನ್
ಸಕ್ಸಸ್:
ದಿವ್ಯಾ
ಈಗ
ಇಂಗು
ತಿಂದ
ಮಂಗ!
ಸ್ಯಾಂಡಲ್‌ವುಡ್‌ನಲ್ಲಿ ಮಿಂಚುವ ಕನಸು!
ಮೋಕ್ಷಿತಾ ಪೈ ಅವರು ಬಣ್ಣದ ಲೋಕಕ್ಕೆ ಆಸೆ ಪಟ್ಟೇನು ಬಂದಿರಲಿಲ್ಲ. ಅವಕಾಶ ತಾನಾಗಿಯೇ ಮೋಕ್ಷಿತಾ ಅವರ ಮನೆ ಬಾಗಿಲಿಗೆ ಬಂದಿತ್ತು. ಅವಕಾಶವನ್ನು ಅಲ್ಲಗಳೆಯದೇ ಒಪ್ಪಿಕೊಂಡು ಈಗ ಪಾರು ಆಗಿ ಮಿಂಚುತ್ತಿದ್ದಾರೆ. ಈಗಾಗಲೇ ಮೋಕ್ಷಿತಾ ಪೈ ಅವರು ನಿರ್ಭಯಾ 2 ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಇದರ ಶೂಟಿಂಗ್ ಮುಗಿದಿದ್ದು, ರಿಲೀಸ್ ಗೆ ಸಜ್ಜಾಗಿದೆ. ಇನ್ನು ಅದಾಗಲೇ ವಿಜಯ್ ದುನಿಯಾ ನಿರ್ದೇಶನದ ಮತ್ತೊಂದು ಚಿತ್ರದಲ್ಲಿ ಮೋಕ್ಷಿತಾ ಪೈ ಅವರು ನಟಿಸಲಿದ್ದಾರೆ. ಆದರೆ ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿಲ್ಲ.
ತಮಿಳಿಗೆ ಪಾರು ಎಂಟ್ರಿ!
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಈಗಾಗಲೇ ಸೂಪರ್ ಡೂಪರ್ ಆಗಿ ಹಿಟ್ ಆಗಿದೆ. ಈ ಧಾರಾವಾಹಿ ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲೂ ಮೂಡಿ ಬರುತ್ತಿದೆ. ತೆಲುಗಿನ ರಾಧಮ್ಮ ಕೂತುರು ಧಾರಾವಾಹಿ ಈಗ ಬಂಗಾಲಿಯಲ್ಲೂ ರಿಮೇಕ್ ಆಗಿದೆ. ಇದೀಗ ತಮಿಳಿನಲ್ಲಿ ರಿಮೇಕ್ ಆಗಿದ್ದು, ಮೋಕ್ಷಿತಾ ಪೈ ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಪಾರು ಚಿತ್ರದ ಮೋಕ್ಷಿತಾ ಪೈ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿದ್ದಲ್ಲದೇ, ಈಗ ತಮಿಳು ಕಿರುತೆರೆಗೂ ಪಾದಾರ್ಪಣೆ ಮಾಡಿದ್ದಾರೆ.
ಮೀನಾಕ್ಷಿ ಪೊಣ್ಣು ಮೋಕ್ಷಿತಾ ಪೈ!
ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ತಮಿಳಿನಲ್ಲಿ ಮೀನಾಕ್ಷಿ ಪೊಣ್ಣು ಎಂಬ ಹೆಸರಿಡಲಾಗಿದೆ. ಇದರ ಪ್ರೋಮೋ ಈಗಾಗಲೇ ರಿಲೀಸ್ ಆಗಿದ್ದು, ಎಲ್ಲರೂ ನೋಡಿ ಖುಷಿಪಟ್ಟಿದ್ದಾರೆ. ಪಾರು ಧಾರಾವಾಹಿಯಲ್ಲಿ ಸಾಫ್ಟ್ ಆಗಿದ್ದ ಮೋಕ್ಷಿತಾ ಪೈ ಅವರು, ತಮಿಳಿನಲ್ಲಿ ರಗಡ್ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೀನಾಕ್ಷಿ ಪೊಣ್ಣು ಧಾರಾವಾಹಿಯಲ್ಲಿ ಎರಡನೇ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.