Don't Miss!
- News
ವಿಜಯಪುರದ ಆಲಮೇಲದಲ್ಲಿ ನೂರಾರು ಮಕ್ಕಳಿಗೆ ದಡಾರ: ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಮನವಿ
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜೀ ಕನ್ನಡದ 'ಸರಿಗಮಪ ಗ್ರ್ಯಾಂಡ್ ಫಿನಾಲೆ'ಯಲ್ಲಿ ಗೆದ್ದೋರು ಯಾರು? ರನ್ನರ್ ಅಪ್ ಯಾರು?
ಜೀ ಕನ್ನಡದ ಮತ್ತೊಂದು ರಿಯಾಲಿಟಿ ಶೋ ಮುಕ್ತಾಯವಾಗಿದೆ. ಕಳೆದ ಮೂರು-ನಾಲ್ಕು ತಿಂಗಳಿಂದ ಸಂಗೀತ ಪ್ರಿಯರನ್ನು ರಂಜಿಸುತ್ತಿದ್ದ 'ಸರಿಗಮಪ ಚಾಂಪಿಯನ್ಸ್' ನಿನ್ನೆ (ಫೆ 26)ಕ್ಕೆ ಕೊನೆಯಾಗಿದೆ. ಈ ಕಾರ್ಯಕ್ರಮವನ್ನು ಜೀ ಕನ್ನಡ ನೇರಪ್ರಸಾರ ಮಾಡಿತ್ತು. ಈ ಸೀಸನ್ ಆರು ತಂಡಗಳು ಭಾಗವಹಿಸಿದ್ದು, ಕಿರುತೆರೆ ವೀಕ್ಷಕರಿಗೆ ಈ ವೀಕೆಂಡ್‌ನಲ್ಲಿ ಸಂಗೀತದ ಜೊತೆ ಭರಪೂರ ಮನರಂಜನೆ ಸಿಕ್ಕಿದೆ.
ಪ್ರತಿವರ್ಷ ಜೀ ಕನ್ನಡ 'ಸರಿಗಮಪ ಚಾಂಪಿಯನ್ಸ್' ಕಾರ್ಯಕ್ರಮವನ್ನು ನಡೆಸುತ್ತೆ. ಇದೂವರೆಗೂ ಜೀ ಕನ್ನಡದ 'ಸರಿಗಮಪ' ಸೀಸನ್‌ನಲ್ಲಿ ಸಂಗೀತ ಪ್ರಿಯರನ್ನು ರಂಜಿಸಿದ ಗಾಯಕರನ್ನು ಒಂದೆಡೆ ಸೇರಿಸಿ ಈ ಕಾರ್ಯಕ್ರಮವನ್ನು ನಡೆಸುತ್ತಾರೆ. ಈ ಸೀಸನ್‌ನಲ್ಲಿ ಆರು ತಂಡಗಳನ್ನು ಮಾಡಿದ್ದು, ಒಂದೊಂದು ತಂಡದಲ್ಲಿ ಆರು ಮಂದಿ ಗಾಯಕರು ಪೈಪೋಟಿ ನೀಡಿದ್ದರು. ನಿನ್ನೆ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಈ ಆರು ತಂಡಗಳು ಭರ್ಜರಿ ಪ್ರದರ್ಶನ ನೀಡಿದ್ದಾರೆ. ಈ ಆರು ತಂಡಗಳಲ್ಲಿ ಗೆದ್ದವರು ಯಾರು? ರನ್ನರ್ ಅಪ್ ಯಾರು ಅನ್ನುವು ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.
500
ಸಂಚಿಕೆಗಳನ್ನು
ಪೂರೈಸಿದ
ಜೀ
ಕನ್ನಡದ
'ನಾಗಿಣಿ
2'
ಧಾರಾವಾಹಿ:
ಮುಂದೇನು?

ಗಾಯಕಿ ನಂದಿತಾ ತಂಡಕ್ಕೆ ಗೆಲುವು
ನಿನ್ನೆ( ಫೆ.26) ನಡೆದ 'ಸರಿಗಮಪ ಚಾಂಪಿಯನ್ಸ್' ಗ್ರ್ಯಾಂಡ್ ಫಿನಾಲೆಯಲ್ಲಿ ಗಾಯಕಿ ನಂದಿತಾ ಮೆಂಟರ್ ಆಗಿದ್ದ ತಂಡ ಗೆಲುವಿನ ನಗೆ ಬೀರಿದೆ. ನಂದಿತಾ ಟೀಮ್‌ನಲ್ಲಿ ರಜತ್, ಪೃಥ್ವಿ, ಸುಪ್ರಿಯಾ ಜೋಶಿ, ಸುಹಾನಾ, ಕೀರ್ತನ್ ಹೊಳ್ಳ, ಚೆನ್ನಪ್ಪ ಗಾಯಕರಾಗಿದ್ದರು. ಹಿಂದಿನಿಂದಲೂ ಉತ್ತಮ ಪ್ರದರ್ಶನ ನೀಡುತ್ತಲೇ ಬಂದಿದ್ದ ತಂಡ ನಿನ್ನೆ ನಡೆದ ನೇರ ಪ್ರಸಾರ ಕಾರ್ಯಕ್ರಮದಲ್ಲೂ ಕೂಡ ಉತ್ತಮ ಪ್ರದರ್ಶ ನ ನೀಡಿ ಗೆಲುವಿನ ನಗೆ ಬೀಗಿದೆ.

ರನ್ನರ್ ಅಪ್ ಯಾರು?
ಆರು ತಂಡಗಳ ಪೈಕಿ ಗೆಲುವಿನ ತಂಡವನ್ನು ಉಳಿದ ಎರಡು ತಂಡಗಳನ್ನು ಮೊದಲನೇ ಹಾಗೂ ಎರಡನೇ ರನ್ನರ್ ಅಪ್ ಎಂದು ಘೋಷಿಸಲಾಗಿದೆ. ಮೊದಲನೇ ರನ್ನರ್ ಅಪ್ ಗಾಯಕಿ ಅನುರಾಧಾ ಭಟ್ ತಂಡ. ಈ ತಂಡದಲ್ಲಿ ಅನುರಾಧ ಭಟ್ ಟೀಮ್‌ನಲ್ಲಿ ಅಂಕಿತಾ ಕುಂಡು, ಶ್ರೀ ಹರ್ಷ, ವರ್ಣ, ದರ್ಶನ್, ಅಭಿಶ್ಯಂತ್, ಮೆಹಬೂಬ್ ಭಾಗವಹಿಸಿದ್ದರು. ಇನ್ನು ಎರಡನೇ ರನ್ನರ್ ಅಪ್ ಪ್ರಶಸ್ತಿ ಇಂದು ನಾಗರಾಜ್ ತಂಡ ಗಿಟ್ಟಿಸಿಕೊಂಡಿದೆ. ಇಂದು ನಾಗರಾಜ್ ತಂಡದಲ್ಲಿ ಸುನೀಲ್, ಸಾಕ್ಷಿ, ಸುಪ್ರಿತ್, ಅನ್ವಿತಾ, ಅಖಿಲಾ, ಗಗನಾ ಸ್ಪರ್ಧಿಗಳಾಗಿದ್ದರು.

ಶ್ರೀಹರ್ಷ, ಕಂಬದ ರಂಗಯ್ಯಗೆ ವಿಶೇಷ ಪ್ರಶಸ್ತಿ
'ಸರಿಗಮಪ ಚಾಂಪಿಯನ್‌ಶಿಪ್ ಗ್ರ್ಯಾಂಡ್ ಫಿನಾಲೆಯಲ್ಲಿ 6 ತಂಡಗಳಿಂದ ಸುಮಾರು 36 ಸ್ಪರ್ಧಿಗಳು ಭಾಗವಹಿಸಿದ್ದರು. ನೇರಪ್ರಸಾರ ಕಾರ್ಯಕ್ರಮದಲ್ಲಿ 36 ಮಂದಿನೂ ಅದ್ಭುತ ಪೈಪೋಟಿ ನೀಡಿದ್ದಾರೆ. ಈ ಸಂಗೀತದ ಯುದ್ಧದಲ್ಲಿ ಎಲ್ಲಾ ಗಾಯಕರೂ ಸಂಗೀತ ಪ್ರಿಯರ ಮನಗೆದ್ದಿದ್ದಾರೆ. ಇದೇ ವೇಳೆ ವಿಶೇಷ ಪ್ರಶಸ್ತಿಯನ್ನುಗಾಯಕರಿಗೆ ನೀಡಲಾಗಿದೆ. ಇದರಲ್ಲಿ ಪರ್ಫಾಮೆನ್ಸ್ ಆಫ್ ದಿ ಸೀಸನ್ ಶ್ರೀಹರ್ಷ ಆಗಿ ಹೊರಹೊಮ್ಮಿದರೆ, ಎಂಟರ್‌ಟೈನರ್ ಆಫ್ ದಿ ಸೀಸನ್ ಪ್ರಶಸ್ತಿಯನ್ನು ಕಂಬದ ರಂಗಯ್ಯ ಪಾಲಾಗಿದೆ.

ಮೂವರು ತೀರ್ಪುಗಾರರ ಮಹಾ ತೀರ್ಪು
'ಸರಿಗಮಪ ಚಾಂಪಿಯನ್ಸ್' ಈ ಸೀಸನ್‌ನ ಮಹಾ ತೀರ್ಪುಗಾರರಾಗಿ ನಾದಬ್ರಹ್ಮ ಹಂಸಲೇಖ, ಗಾಯಕ ವಿಜಯ್ ಪ್ರಕಾಶ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇದ್ದರು. ಇವರ ಸಮ್ಮುಖದಲ್ಲಿ ಸುಮಾರು 36 ಗಾಯಕರು ತಮ್ಮ ಧ್ವನಿಯಿಂದ ಸಂಗೀತ ಸುಧೆ ಹರಿಸಿದ್ದರು. ತೀರ್ಪುಗಾರರ ಅಂಕ ಹಾಗೂ ಆಡಿಯನ್ಸ್ ವೋಟ್ ಎರಡನ್ನೂ ಸೇರಿಸಿ ವಿನ್ನರ್ ಹಾಗೂ ರನ್ನರ್ ಅಪ್ ಪ್ರಶಸ್ತಿಯನ್ನು ಘೋಷಿಸಲಾಗಿದೆ. ನಿನ್ನೆಗೆ ಈ ಸೀಸನ್‌ನ ಸಂಗೀತ ಕಾರ್ಯಕ್ರಮ ಅಂತ್ಯಕೊಂಡಿದ್ದು, ಮುಂದಿನ ಕಾರ್ಯಕ್ರಮಗಳನ್ನು ವೀಕ್ಷಕರು ಎದುರು ನೋಡುತ್ತಿದ್ದಾರೆ.