Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕ್ರೇಜಿಸ್ಟಾರ್ ರವಿಚಂದ್ರನ್ ಕಿಡ್ನಾಪ್: ಅಪಹರಣ ಮಾಡಿದವರು ಕ್ಯಾಮರಾ ಮುಂದೆ ಪ್ರತ್ಯಕ್ಷ
ಕೆಲವು ದಿನಗಳ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಅಪಹರಣ ಆಗಿದ್ದಾರೆ ಅನ್ನುವು ವಿಡಿಯೋ ಸದ್ದು ಮಾಡಿತ್ತು. ಜೀ ಕನ್ನಡ ತನ್ನ ಹೊಸ ಶೋಗಾಗಿ ವಿಭಿನ್ನ ಕಾನ್ಸೆಪ್ಟ್ ಮೂಲಕ ಪ್ರೋಮೊ ರಿಲೀಸ್ ಮಾಡಿತ್ತು. ಈ ಫ್ರೋಮೊ ನೋಡಿದ ಕ್ರೇಜಿ ಅಭಿಮಾನಿಗಳು ಶಾಕ್ ಆಗಿದ್ದಷ್ಟೇ ಅಲ್ಲದೆ ಥ್ರಿಲ್ ಆಗಿದ್ದರು. ಮತ್ತೊಂದು ಪ್ರೋಮೊ ನೋಡಲು ಕಾತುರದಿಂದ ಕಾದು ಕುಳಿತಿದ್ದರು. ಅದರಂತೆ ಮತ್ತೊಂದು ಪ್ರೋಮೊ ರಿಲೀಸ್ ಆಗಿದೆ.
ಕನ್ನಡ ಚಿತ್ರರಂಗದಲ್ಲಿ ವಿ. ರವಿಚಂದ್ರನ್ ಯಾರ ಕೈಗೂ ಸಿಗದಷ್ಟು ಬ್ಯುಸಿ. 2022ರಲ್ಲಿ ರವಿಚಂದ್ರನ್ ಮತ್ತಷ್ಟು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಡಲಿದ್ದಾರೆ. ಇತ್ತ ನೋಡಿದರೆ, ರಿಯಾಲಿಟಿ ಶೋನಲ್ಲಿಯೂ ಭಾಗಿಯಾಗುತ್ತಿದ್ದಾರೆ. ಇಷ್ಟು ಬ್ಯುಸಿಯಾಗಿರುವಾಗ ಅಪರಣದ ವಿಡಿಯೋ ಮತ್ತಷ್ಟು ಕುತೂಹಲ ಕೆರಳಿಸಿತ್ತು. ಯಾವ ಶೋಗೆ ಜಡ್ಜ್ ಆಗುತ್ತಾರೆ ಎಂಬ ಕುತೂಹಲವಿತ್ತು. ಈಗ ಎಲ್ಲಾ ಸೀಕ್ರೆಟ್ ರಿವೀಲ್ ಆಗಿದೆ. ಅಪಹರಣ ಮಾಡಿದ್ದು ಯಾರು? ಅನ್ನುವುದೂ ಕೂಡ ಬಹಿರಂಗಗೊಂಡಿದೆ.
ಶೂಟಿಂಗ್
ಸ್ಥಳದಿಂದಲೇ
ನಟ
ರವಿಚಂದ್ರನ್
ಕಿಡ್ನಾಪ್:
ಅಪಹರಣ
ಮಾಡಿದ್ದು
ಯಾರು?

ಕ್ರೇಜಿಸ್ಟಾರ್ ಅಪಹರಣ ಮಾಡಿದ್ಯಾರು?
ಕ್ರೇಜಿಸ್ಟಾರ್ ರವಿಚಂದ್ರನ್ ರಿಯಾಲಿಟಿ ಶೋಗೆ ಜಡ್ಜ್ ಆಗುತ್ತಾರೆ ಅಂದ್ಮೇಲೆ ಎಂಟ್ರಿನೂ ಅಷ್ಟೇ ಖಡಕ್ ಆಗಿರಬೇಕು. ಆದರೆ, ಇಲ್ಲಿ ಉಲ್ಟಾ ಆಗಿತ್ತು. ಕ್ರೇಜಿಸ್ಟಾರ್ ಕಿಡ್ನಾಪ್ ಆಗುವುದನ್ನು ತೋರಿಸಲಾಗಿತ್ತು. ಇದನ್ನು ನೋಡಿದ ಮೇಲೆ ರವಿಚಂದ್ರನ್ ಅಭಿಮಾನಿಗಳು ಮತ್ತಷ್ಟು ಖುಷಿಯಾಗಿದ್ದರು. ಆದರೆ, ಕ್ರೇಜಿಸ್ಟಾರ್ ಅನ್ನು ಕಿಡ್ನಾಪ್ ಮಾಡಿದ್ದು ಯಾರಿರಬಹುದು? ಯಾವ ಶೋಗಾಗಿ ಅಪಹರಣ ಮಾಡಿದ್ದಾರೆ? ಎನ್ನುವ ಕುತೂಹಲವಿತ್ತು. ಅದರಂತೆ ಈಗ ಅಪಹರಣ ಮಾಡಿದವರು ಯಾರು ಎಂಬುದು ರಿವೀಲ್ ಆಗಿದೆ. ಕಿಡ್ನಾಪ್ ಮಾಡಿದವರು ಕ್ಯಾಮರಾ ಮುಂದೆ ಪ್ರತ್ಯಕ್ಷ ಆಗಿದ್ದಾರೆ.
ಜೀ
ಕನ್ನಡದ
ಡ್ರಾಮ
ಜೂನಿಯರ್ಸ್
ಶೋಗೆ
ಕ್ರೇಜಿ
ಸ್ಟಾರ್
ರವಿಚಂದ್ರನ್
ಜಡ್ಜ್:
ರೋಲ್
ಏನು?

ರವಿಚಂದ್ರನ್ ಕಿಡ್ಯಾಪ್ ಆಗಿದ್ದೇಕೆ?
ಅಂದ್ಹಾಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅಪಹರಣ ಮಾಡಿದ್ದು, ಚಿಣ್ಣರು. ಇವರೆಲ್ಲರೂ ಡ್ರಾಮ ಜೂನಿರ್ಯಸ್ ಮಕ್ಕಳು. ಸದ್ಯದಲ್ಲೇ ಜೀ ಕನ್ನಡದಲ್ಲಿ ಡ್ರಾಮ ಜೂನಿಯರ್ಸ್ ಸೀಸನ್ 4 ಆರಂಭ ಆಗುತ್ತಿದೆ. ಕಳೆದ ಮೂರು ಸೀಸನ್ ಭರಪೂರ ಮನರಂಜನೆ ನೀಡಿದ್ದ ಪುಟಾಣಿ ಕಲಾವಿದರು, ಮತ್ತೆ ವೇದಿಕೆ ಏರಲು ಸಜ್ಜಾಗಿದ್ದಾರೆ. ಜೀ ಕನ್ನಡ ಪ್ರತಿಭಾವಂತ ಮಕ್ಕಳಿಗೆ ಈ ವಿನೂತನ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ. ಅದರ ಪ್ರಚಾರದ ಭಾಗವಾಗಿ ಅಪಹರಣದ ಫ್ರೋಮೊವನ್ನು ಬಿಡಲಾಗಿತ್ತು.

ಕ್ರೇಜಿಸ್ಟಾರ್ ಮುಂದೆನೇ ಚಿಣ್ಣರ ಡೈಲಾಗ್
ಜೀ ಕನ್ನಡ ರಿಲೀಸ್ ಮಾಡಿರುವ ಎರಡನೇ ಪ್ರೋಮೊದಲ್ಲಿ ರವಿಚಂದ್ರನ್ ಹಾಗೂ ಡ್ರಾಮ ಜೂನಿಯರ್ಸ್ ಮುಖಾ ಮುಖಿಯಾಗಿದೆ. ಕ್ರೇಜಿಸ್ಟಾರ್‌ಗೆ ಡ್ರಾಮ ಜೂನಿಯರ್ಸ್ ಜಡ್ಜ್ ಆಗಬೇಕು ಅಂತ ಕೇಳಿಕೊಂಡಿದ್ದಾರೆ. " ಶಾಂತಿ ಕ್ರಾಂತಿ, ಹಳ್ಳಿ ಮೇಷ್ಟು ಅಂತ ಸಿನಿಮಾಗಳಿಗೆ ಮಕ್ಕಳು ಬೇಕು. ಈಗ ನಾವು ಬೇಡ್ವಾ. ನಾವು ಚಿಕ್ಕವರಾಗಿರಬಹುದು, ಆದರೆ, ಕೊಡೋ ಬಿಲ್ಡಪ್ ದೊಡ್ಡದೇ" ಅಂತ ಖಡಕ್ ಡೈಲಾಗ್ ಬಿಟ್ಟಿದ್ದಾರೆ. ಈ ಡೈಲಾಗ್ ಡಿಲೇವರಿ ನೋಡಿದ್ಮೇಲೆ ಈ ಬಾರಿ 'ಡ್ರಾಮ ಜೂನಿಯರ್ಸ್ ಸೀಸನ್ 4' ಕಿರುತೆರೆ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುವುದು ಗ್ಯಾರಂಟಿ.
ಸ್ಯಾಂಡಲ್ವುಡ್ನ
ಫೇಮಸ್
ಜೋಡಿ
ರಾಮ್
ಕುಮಾರ್,
ಶ್ರುತಿ
ಕಿರುತೆರೆಯಲ್ಲಿ
ಮಿಂಚಲು
ರೆಡಿ:
ಧಾರಾವಾಹಿ
ಯಾವುದು?

ಜೂನಿಯರ್ಸ್ ಜೊತೆ ಮಾಸ್ಟರ್ ಪ್ರತ್ಯಕ್ಷ
ಕ್ರೇಜಿಸ್ಟಾರ್ ರವಿಚಂದ್ರನ್ ಜೀ ಕನ್ನಡದಲ್ಲಿ 'ಡ್ರಾಮ ಜೂನಿಯರ್ಸ್ ಸೀಸನ್ 4' ಕಾಮಿಡಿ ಶೋನಲ್ಲಿ ಜಡ್ಜ್ ಆಗಲಿದ್ದಾರೆ. ಎರಡನೇ ಪ್ರೋಮೊದಲ್ಲಿ ಕ್ರೇಜಿಸ್ಟಾರ್ ಮೂರು ಜಡ್ಜ್‌ಗಳಲ್ಲಿ ಒಬ್ಬರು ಅನ್ನೋದು ಫಿಕ್ಸ್ ಆಗಿದೆ. ಇನ್ನು ಉಳಿದ ಇಬ್ಬರು ಜಡ್ಜ್ ಯಾರು? ಅನ್ನುವುದನ್ನು ಜೀ ಕನ್ನಡ ಇನ್ನೂ ರಿವೀಲ್ ಮಾಡಿಲ್ಲ. ಕೆಲವು ಮೂಲಗಳ ಪ್ರಕಾರ, ಕನ್ನಡದ ಸ್ಟಾರ್ ನಟಿಯೊಬ್ಬರು ಈ ಶೋನಲ್ಲಿ ಮತ್ತೊಬ್ಬ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹಿರಿಯ ನಟಿ ಲಕ್ಷ್ಮಿ ಈ ಸೀಸನ್‌ಗೂ ಅತಿಥಿಯಾಗಿ ಮುಂದುವರೆಯಲಿದ್ದಾರೆ ಎನ್ನಲಾಗಿದೆ. ಆದರೆ, ಅಧಿಕೃತವಾಗಿ ಜೀ ಕನ್ನಡ ಮಾಹಿತಿ ಹೊರ ಹಾಕಿಲ್ಲ.