Just In
Don't Miss!
- News
ವ್ಯರ್ಥ ಮಾಡಲು ಸಮಯವಿಲ್ಲ: ಮೊದಲ ದಿನವೇ ಕರ್ತವ್ಯದಲ್ಲಿ ಬ್ಯುಸಿಯಾದ ಬೈಡನ್
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೊದಲ ದಿನವೇ ಮನಸೆಳೆದ 'ಲೈಫ್ ಸೂಪರ್ ಗುರೂ'
ಜೀ ಕನ್ನಡ ವಾಹಿನಿ ಮತ್ತೊಂದು ಬಿಗ್ ರಿಯಾಲಿಟಿ ಶೋ ಮೂಲಕ ಕಿರುತೆರೆ ವೀಕ್ಷಕರ ಮುಂದೆ ಬಂದಿದೆ. ಇದೂ ಒಂದು ರೀತಿ 'ಬಿಗ್ ಬಾಸ್' ರಿಯಾಲಿಟಿ ಶೋವನ್ನು ಕೊಂಚ ಹೋಲಿದರೂ ಸಂಪೂರ್ಣವಾಗಿ ಭಿನ್ನವಾಗಿರುವಂತಹ ಕಾರ್ಯಕ್ರಮ.
ಪ್ರತಿದಿನ ರಾತ್ರಿ 8 ರಿಂದ 9 ಗಂಟೆತನಕ ಈ ಶೋ ನವೆಂಬರ್ 17ರಿಂದ ಪ್ರಸಾರ ಆರಂಭಿಸಿದೆ. ಮೊದಲ ಎಪಿಸೋಡ್ ನಲ್ಲೇ ಕಿರುತೆರೆ ವೀಕ್ಷಕ ಬಳಗದ ಮನಗೆಲ್ಲುವಲ್ಲಿ ಲೈಫ್ ಸೂಪರ್ ಗುರು ಯಶಸ್ವಿಯಾಯಿತು. ಹತ್ತು ಮಂದಿ ಸೂಪರ್ ಸೀನಿಯರ್ಸ್ ಹಾಗೂ ಹತ್ತು ಮಂದಿ ಜಾಲಿ ಜೂನಿಯರ್ಸ್ ನಡುವಿನ ಸ್ಪರ್ಧೆಯೇ ಈ ಶೋ. [ಜೀ ಕನ್ನಡ ಬಿಗ್ ಶೋ 'ಲೈಫ್ ಸೂಪರ್ ಗುರೂ' ಶುರು]
ಹರೆಯದ ಯುವಕರು ಹಾಗೂ 60 ದಾಟಿದ, ಮಾಗಿದ ಆದರೂ ಉತ್ಸಾಹ ಕುಂದದ ಹಿರಿಯರ ನಡುವೆ ಸ್ಪರ್ಧೆ ಏರ್ಪಡಿಸಿ ಅದರಲ್ಲಿ ವಿಜೇತರಾದ 10 ಕಿರಿಯರು ಹಾಗೂ 10 ಹಿರಿಯರನ್ನು ಒಂದೇ ಮನೆಯಲ್ಲಿ 3 ತಿಂಗಳ ಕಾಲ ಇರಿಸಲಾಗುತ್ತದೆ. ಮೊದಲ ದಿನದ ಎಪಿಸೋಡ್ ನ ಹೈಲೈಟ್ಸ್ ಇಲ್ಲಿವೆ ಓದಿ.

ನಟ, ನಿರ್ದೇಶಕ ರಮೇಶ್ ಅರವಿಂದ್ ಚಾಲನೆ
"ಲೈಫ್ ಸೂಪರ್ ಗುರು, ಲೈಫ್ ಸೂಪರ್ ಗುರು ನೀ ಏನಾರ ಹೇಳು..." ಎಂಬ ಹಾಡಿನೊಂದಿಗೆ ಹೊಸ ರಿಯಾಲಿಟಿ ಶೋ ಚಾಲನೆ ನೀಡಿದವರು ನಟ, ನಿರ್ದೇಶಕ ರಮೇಶ್ ಅರವಿಂದ್. ಅವರದೇನಿದ್ದರೂ ಮೊದಲ ಎಪಿಸೋಡ್ ಗೆ ಬಂದು ಹಾಲು ಉಕ್ಕಿಸಿ ಆಟಕ್ಕೆ ಚಾಲನೆ ನೀಡುವುದಷ್ಟೇ.

ಇದೇ ಮೊದಲ ಬಾರಿಗೆ ಗುರು ಮತ್ತು ಯೋಗಿ
ಇದೇ ಮೊದಲ ಬಾರಿಗೆ ಮಠ ಖ್ಯಾತಿಯ ಗುರುಪ್ರಸಾದ್ ಹಾಗೂ ಯೋಗಿ ನಿರೂಪಕರಾಗಿ ಬಂದಂತಹ ಶೋ ಇದು. ಶೋನ ಆರಂಭದಲ್ಲೇ ಇವರಿಬ್ಬರೂ ಒಂದು ಪ್ರಮಾಣವನ್ನೂ ಮಾಡಿದರು. ನಮಗೆ ಆಂಕರಿಂಗ್ ಗೊತ್ತಿಲ್ಲ, ತಪ್ಪಾದರೆ ತಿದ್ದುಕೋಳ್ತೀವಿ ಎಂದು ಮೊದಲೇ ನಿರೀಕ್ಷಣಾ ಜಾಮೀನಿ ಪಡೆದುಕೊಂಡು ಶೋ ಆರಂಭಿಸಿದರು.

ಜಾಲಿ ಜೂನಿಯರ್ಸ್ Vs ಸೂಪರ್ ಸೀನಿಯರ್ಸ್
ಲೂಸ್ ಮಾದ ಯೋಗೀಶ್ ಜಾಲಿ ಜೂನಿಯರ್ಸ್ ನ್ನು ಪ್ರತಿನಿಧಿಸಿದರೆ, ಗುರುಪ್ರಸಾದ್ ಅವರು ಸೂಪರ್ ಸೀನಿಯರ್ಸ್ ಪ್ರತಿನಿಧಿ. ಇಬ್ಬರೂ ತಮ್ಮ ತಮ್ಮ ಕಡೆಯ ಸ್ಪರ್ಧಿಗಳನ್ನು ಪರಿಚಯಿಸಿದರು. ಮೊದಲ ಎಪಿಸೋಡ್ ನಲ್ಲಿ ಪರಿಚಯಿಸಿದ್ದು ಇಬ್ಬರು ಸೀನಿಯರ್ಸ್ ಹಾಗೂ ಇಬ್ಬರು ಜೂನಿಯರ್ಸ್.

ಎಂಬತ್ತೆರಡರ ನವಯುವಕ ಚಾಲೆಂಜಿಂಗ್ ಚಕ್ರವರ್ತಿ
ಮೊದಲ ಸೂಪರ್ ಸೀನಿಯರ್ ಚಾಲೆಂಜಿಂಗ್ ಚಕ್ರವರ್ತಿ. ವಯಸ್ಸು 82 ಆದರೂ ಉತ್ಸಾಹ ಮಾತ್ರ ಇನ್ನೂ 20ರ ಪ್ರಾಯ. ಮದುವೆಯಾಗಲಿಲ್ಲ, ಮನೆ ಇಲ್ಲ ಎಂಬ ಕೊರತೆ ಇವರಿಗಿಲ್ಲ. ಫೇಸ್ ಬುಕ್ ಮೂಲಕ ನನಗೆ ಜಗತ್ತಿನಾದ್ಯಂತ ಗೆಳೆಯರಿದ್ದಾರೆ ಎನ್ನುತ್ತಾರೆ ಚಕ್ರವರ್ತಿ.

ಫೇಸ್ ಬುಕ್ ನಲ್ಲಿ ನಾಲ್ಕು ಸಾವಿರ ಗೆಳೆಯರು
ಹರೆಯಲ್ಲಿ ಮದುವೆಯಾಗು ಎಂದು ನಮ್ಮ ತಾಯಿ ಕೇಳಿದಾಗ ನನಗೆ ಬೈಕ್ ಬೇಕು ಎಂದು ಕೇಳಿದ್ದೆ. ಆಗಿನಿಂದಲೂ ನನಗೆ ಬೈಕ್ ಕ್ರೇಜ್ ಇದೆ ಎನ್ನುವ ಅವರು ಎಂಬತ್ತೆರಡು ವಯಸ್ಸು ಅಲ್ಲವೇ ಅಲ್ಲ ಎನ್ನುತ್ತಾರೆ. ಫೇಸ್ ಬುಕ್ ನಲ್ಲಿ ನನಗೆ ನಾಲ್ಕು ಸಾವಿರ ಜನ ಗೆಳೆಯರಿದ್ದಾರೆ. ಈಗಲೂ ನೂರು, ನೂರನಲವತ್ತು ಕಿ.ಮೀ ವೇಗದಲ್ಲಿ ಬೈಕ್ ಓಡುಸುತ್ತೇನೆ ಎನ್ನುತ್ತಾರೆ ಚಕ್ರವರ್ತಿ.

ಯುವಕರಿಗೆ ಮಾವನೀಯರೆ ಹೇಳಲು ಬಂದವರು
ಈ ಶೋ ಮೂಲಕ ಯುವಕರಿಗೆ ಮಾನವೀಯತೆ ಹಾಗೂ ತಾಳ್ಮೆಯನ್ನು ಹೇಳಿಕೊಡಬೇಕೆಂದಿದ್ದೇನೆ ಎಂದರು. ಮನುಷ್ಯ ಯಾವಾಗ ಚಿಕ್ಕಮಕ್ಕಳ ಪುಸ್ತಕಗಳನ್ನು ಓದುವುದನ್ನು ಬಿಡುತ್ತಾನೋ ಆಗಲೇ ಅವನಿಗೆ ವಯಸ್ಸಾಗಿತ್ತು ಎಂದರ್ಥ ಎನ್ನುತ್ತಾರೆ ಹಿರಿಯ ಉತ್ಸಾಹಿ ಚಕ್ರವರ್ತಿ.

ನನ್ನ ನೋಟಕ್ಕೆ, ಸ್ಟೈಲ್ ಗೆ ಬೀಳದ ಹುಡುಗೀರೆ ಇಲ್ಲ
ಚಕ್ರವರ್ತಿ ಅವರಿಗೆ ಸೆಡ್ಡುಹೊಡೆಯಲು ಬಂದವರು ಇನ್ನೂ 18ರ ಪ್ರಾಯನ ಜಾಲಿ ಜೂನಿಯರ್ ಅಭಿಷೇಕ್ ದಾಸ್. ಬೈಕ್ ಸ್ಟಂಟ್ಸ್ ಎಂದರೆ ಇವರಿಗಿಷ್ಟ. ಸ್ವಿಮ್ಮಿಂಗ್ ನನ್ನ ಬಿಗ್ಗೆಸ್ಟ್ ಗಿಫ್ಟ್. ನ್ಯಾಶನಲ್ ಲೆವೆಲ್ ನಲ್ಲೂ ಸ್ಪರ್ಧಿಸಿದ್ದೆ. ನನಗೆ ಸಿಕ್ಕಾಪಟ್ಟೆ ಗರ್ಲ್ ಫ್ರೆಂಡ್ಸ್ ಇದ್ದಾರೆ. ಒಂದರ್ಥದಲ್ಲಿ ನಾನೊಬ್ಬ ಪ್ಲೇಬಾಯ್. ನನ್ನ ನೋಟಕ್ಕೆ, ಸ್ಟೈಲ್ ಗೆ ಬೀಳದ ಹುಡುಗೀರೆ ಇಲ್ಲ ಎನ್ನುವ ಅಭಿಷೇಕ್ ಬೈಕ್ ಸ್ಟಂಟ್ ಮಾಡುತ್ತಾ, 180 ಕಿ.ಮೀ ವೇಗದಲ್ಲೂ ಬೈಕ್ ಚಲಾಯಿಸಿದ್ದಾರಂತೆ.

ಸ್ಟೆಪ್ಸ್ ಹತ್ತಕ್ಕೆ ಆಗದ ವಯಸ್ಸಲ್ಲಿ ಸ್ಟೆಪ್ಸ್ ಹಾಕಿದ ಇಂದಿರಾ
ಸ್ಟೆಪ್ಸ್ ಹತ್ತಕ್ಕೆ ಆಗದ ವಯಸ್ಸಲ್ಲಿ ಸ್ಟೆಪ್ಸ್ ಹಾಕುತ್ತಾ ವೇದಿಕೆಗೆ ಬಂದವರು ಇಂದಿರಾ ರಘು. ಅಬ್ಬಾ ಈ ವಯಸ್ಸಲ್ಲೂ ಎಂಥಹಾ ಉತ್ಸಾಹ ಇವರದು ಎಂದು ಎಲ್ಲರ ಗಮನಸೆಳೆದರು. "ಲೈಲಾ ಹೂ ಲೈಲಾ..." ಹಾಡಿಗೆ ಹೆಜ್ಜೆ ಹಾಕುತ್ತಾ ಇಂದಿರಾ ರಘು ಅವರು ವೇದಿಕೆಗೆ ಆಗಮಿಸಿ ತಮ್ಮ ಬಗ್ಗೆ ಹೇಳಿಕೊಂಡರು.

ಲೈಟ್ಸ್ ಕ್ಯಾಮೆರಾ ಮುಂದೆ ಬಂದ ಸ್ವೀಟ್ ಅರುವತ್ತರ ಸ್ಪರ್ಧಿ
ನಿಮ್ಮ ವಯಸ್ಸು ಎಷ್ಟು ಎಂದಾಗ ಸಿಹಿಯಾದ ಅರುವತ್ತು ವರ್ಷ ಎಂದರು. ಅರುವತ್ತು ವರ್ಷದಲ್ಲಿ ಸಾಕಷ್ಟು ನೋಡಿದ್ದಾಯ್ತು, ಆದರೆ ಲೈಟ್ಸ್ ಕ್ಯಾಮೆರಾ ಆಕ್ಷನ್ ನೋಡಿರಲಿಲ್ಲ. ಈಗ ಅದನ್ನು ನೋಡೇ ಬಿಡೋಣ ಎಂದು ಇಲ್ಲಿಗೆ ಬಂದಿದ್ದೇನೆ ಎಂದರು.

ಈ ಸ್ಪರ್ಧೆಯಲ್ಲಿ ಗೆದ್ದೇ ಗೆಲ್ಲುತ್ತೇನೆ
ತಮಗೆ ಸಕ್ಕರೆ ಕಾಯಿಲೆ ಇದ್ದರೂ ದಿನಾ ವ್ಯಾಯಾಮ, ಹಾಡು ಡಾನ್ಸ್, ದೇವಸ್ತಾನಕ್ಕೆ ನಡೆದುಕೊಂಡೇ ಹೋಗುತ್ತೇನೆ ಎನ್ನುತ್ತಾರೆ. ಇವರ ಬತ್ತದ ಉತ್ಸಾಹ ಎಂತವರಿಗೂ ಹುಮ್ಮಸ್ಸು ತುಂಬುತ್ತದೆ. ಈ ಸ್ಪರ್ಧೆಯಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ಉತ್ಸಾಹ ಇದೆ ಎಂದರು ಇಂದಿರಾ ರಘು.

ಗೂಡಿಗೊಬ್ಳೇ ರಾಣಿ ಜೇನು ಶಿಲ್ಪಾ ಮಂಜುನಾಥ್
ಊರಿಗೊಬ್ಳೆ ಅರಗಿಣಿ, ನೀರಿಗಿಳಿದರೆ ರಾಣಿ ಮೀನು, ಗೂಡಿಗೊಬ್ಳೇ ರಾಣಿ ಜೇನು ಎಂದು ಹೇಳುತ್ತಾ ಬಂದವರು ಶಿಲ್ಪಾ ಮಂಜುನಾಥ್. ಇವರ ವಯಸ್ಸು ಇನ್ನೂ 21. ಸ್ಟೈಲ್ ಸ್ಟೇಟ್ ಮೆಂಟ್ ಮಾಡೋ ಹುಡುಗಿ, ಜಾಲಿಯಾಗಿರುವುದೆಂದರೆ ಇವರಿಗಿಷ್ಟ. ಇಂಜಿನಿಯರಿಂಗ್ ಓದಿರುವ ಶಿಲ್ಪಾ ಮಿಸ್ ಕರ್ನಾಟಕದಲ್ಲೂ ಭಾಗವಹಿಸಿ ಗೆದ್ದವರು. ಈ ಶೋ ಬಗ್ಗೆ ಸಿಕ್ಕಾಪಟ್ಟೆ ಆಸೆ ಇಟ್ಟುಕೊಂಡಿದ್ದೀನಿ ಎಂದರು.

ತಾತನ ಯೋಚನೆ ದೊಡ್ಡದಾ, ಮೊಮ್ಮಗನ ಆಲೋಚನೆ ದೊಡ್ಡದಾ
ಒಟ್ಟಾರೆ ಈ ನಾಲ್ಕು ಮಂದಿಯನ್ನು ಮೊದಲ ಎಪಿಸೋಡ್ ನಲ್ಲಿ ಪರಿಚಯಿಸಲಾಗಿದೆ. ದೊಡ್ಡವರ ಆಚಾರಗಳು, ಚಿಕ್ಕವರ ವಿಚಾರಗಳು ನಿಜಕ್ಕೂ ಇಂಟರೆಸ್ಟಿಂಗ್ ಆಗಿವೆ. ಒಬ್ಬರದ್ದು ಟೆಸ್ಟ್ ಮ್ಯಾಚ್ ಆದರೆ, ಇನ್ನೊಬ್ಬರದ್ದು ಟ್ವೆಂಟಿ ಟ್ವೆಂಟಿ ಮ್ಯಾಚ್. ಬದುಕು ಇಪ್ಪತ್ತಕ್ಕೆ ಹಗುರಾನೂ ಅಲ್ಲ, ಅರುವತ್ತಕ್ಕೆ ಭಾರನೂ ಅಲ್ಲ. ತಾತನ ಯೋಚನೆ ದೊಡ್ಡದಾ, ಮೊಮ್ಮಗನ ಆಲೋಚನೆ ದೊಡ್ಡದಾ ಎಂಬ ಕಾನ್ಸೆಪ್ಟ್ ನಲ್ಲಿ ಶೋ ಆರಂಭವಾಗಿದೆ.