»   » ಅಮೀರ್ 'ಥಗ್ಸ್ ಆಫ್ ಹಿಂದೂಸ್ತಾನ್' ಲೋಗೋ ರಿಲೀಸ್, ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್

ಅಮೀರ್ 'ಥಗ್ಸ್ ಆಫ್ ಹಿಂದೂಸ್ತಾನ್' ಲೋಗೋ ರಿಲೀಸ್, ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್

Posted By:
Subscribe to Filmibeat Kannada

ಬಾಲಿವುಡ್ ಅಂಗಳದಲ್ಲಿ ಸದ್ಯದಲ್ಲಿ ಚಿತ್ರೀಕರಣ ಹಂತದಲ್ಲಿದ್ದು, ಸಿನಿ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿರುವುದು ಅಮೀರ್ ಖಾನ್ ಮತ್ತು ಅಮಿತಾಬ್ ಬಚ್ಚನ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರ. ಈ ಸಿನಿಮಾದ ಅಫೀಶಿಯಲ್ ಲೋಗೋ ಈಗ ಬಿಡುಗಡೆ ಆಗಿದೆ. ಅಲ್ಲದೇ ಟ್ವಿಟ್ಟರ್ ಟ್ರೆಂಡಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿದೆ.['ಥಗ್ಸ್ ಆಫ್ ಹಿಂದೂಸ್ತಾನ್' ನಾಯಕಿ ಯಾರು? ಉತ್ತರಿಸಿದ ಅಮೀರ್ ಖಾನ್]

'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರ ಹಲವು ದಿನಗಳಿಂದ ಚಿತ್ರದ ನಾಯಕಿ ವಿಷಯದಲ್ಲಿ ನಿರಂತರ ಸುದ್ದಿಯಾಗುತ್ತಿತ್ತು. ಇತ್ತೀಚೆಗೆ ಚಿತ್ರದ ನಾಯಕಿ ಯಾರು ಎಂಬುದನ್ನು ಸ್ವತಃ ಅಮೀರ್ ಖಾನ್ ಟ್ವೀಟ್ ಮಾಡಿ ನಾಯಕಿಯರ ಬಗ್ಗೆ ಹರಿದಾಡುತ್ತಿದ್ದ ರೂಮರ್ಸ್ ಗೆ ಬ್ರೇಕ್ ಹಾಕಿದ್ದರು. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಅಂತಿಮವಾಗಿ ಕತ್ರಿನಾ ಕೈಫ್ ಮತ್ತು 'ದಂಗಲ್' ಚಿತ್ರದ ಖ್ಯಾತಿಯ ನಟಿ ಫಾತಿಮಾ ಸನಾ ಶೇಖ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಚಿತ್ರತಂಡ ಜೂನ್ ತಿಂಗಳಲ್ಲಿ ಶೂಟಿಂಗ್ ಗಾಗಿ ಯೂರೋಪ್ ಗೆ ತೆರಳಲಿದೆಯಂತೆ.

Aamir Khan starrer 'Thugs of Hindostan' movie logo released

'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರವನ್ನು ವಿಜಯ್ ಕೃಷ್ಣ ಆಚಾರ್ಯ ರವರು ನಿರ್ದೇಶನ ಮಾಡುತ್ತಿದ್ದು, 'ಯಶ್ ರಾಜ್ ಫಿಲ್ಮ್ಸ್' ಬ್ಯಾನರ್ ಅಡಿ ಆದಿತ್ಯ ಚೋಪ್ರಾ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರವನ್ನು 2018 ರ ದೀಪಾವಳಿ ಹಬ್ಬದ ವೇಳೆಗೆ ರಿಲೀಸ್ ಮಾಡಲಾಗುತ್ತದೆ ಎಂದು ತಿಳಿಯಲಾಗಿದೆ.

Aamir Khan starrer 'Thugs of Hindostan' movie logo released

ವಿಶೇಷ ಅಂದ್ರೆ 'ಥಗ್ಸ್ ಆಫ್ ಹಿಂದೂಸ್ತಾನ್' ಚಿತ್ರವನ್ನು ಭಾರತದ 9 ಪ್ರಮುಖ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತದೆ ಎಂಬ ಗಾಳಿಸುದ್ದಿ ಹರಿದಾಡುತ್ತಿದೆ. ಒಂದು ವೇಳೆ ಈ ಸುದ್ದಿ ನಿಜವಾದಲ್ಲಿ ಭಾರತದಲ್ಲಿ ಅತಿಹೆಚ್ಚು ಭಾಷೆಗಳಲ್ಲಿ ಬಿಡುಗಡೆ ಆದ ಮೊದಲನೇ ಚಿತ್ರವಾಗಲಿದೆ.['ದಂಗಲ್' ನಂತರ ಹೊಸ ಸಾಹಸಕ್ಕೆ ರೆಡಿಯಾದ ಅಮೀರ್ ಖಾನ್]

English summary
Bollywood Actor Aamir Khan and Amitab Bachchan starrer 'Thugs of Hindostan' movie logo released. This movie is directing by Vijay Krishna Acharya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada