»   » ಐಶ್ವರ್ಯ ರೈ ಚಿತ್ರದ ಶೂಟಿಂಗ್ ನಲ್ಲಿ ಅಪಘಾತ.!

ಐಶ್ವರ್ಯ ರೈ ಚಿತ್ರದ ಶೂಟಿಂಗ್ ನಲ್ಲಿ ಅಪಘಾತ.!

Posted By:
Subscribe to Filmibeat Kannada

ಬಾಲಿವುಡ್ ಬ್ಯೂಟಿ ಐಶ್ವರ್ಯ ರೈ ಬಚ್ಚನ್ ಅಭಿನಯಿಸುತ್ತಿರುವ 'ಫೆನ್ನಿಖಾನ್' ಚಿತ್ರದ ಶೂಟಿಂಗ್ ವೇಳೆ ಅಪಘಾತ ಸಂಭವಿಸಿದ್ದು, ಚಿತ್ರದ ಸಹಾಯಕ ನಿರ್ದೇಶಕನಿಗೆ ಗಾಯವಾಗಿದೆ.

ಕಳೆದ ಐದು ದಿನಗಳಿಂದ ಮುಂಬೈನಲ್ಲಿ 'ಫೆನ್ನಿಖಾನ್' ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ನಿನ್ನೆ (ಭಾನುವಾರ) ರಸ್ತೆಯಲ್ಲಿ ಐಶ್ವರ್ಯ ರೈ ನಿಂತು ಟ್ಯಾಕ್ಸಿಗೆ ಕೈ ಅಡ್ಡ ಹಾಕುವ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಚಿತ್ರದ ಸಹಾಯಕ ನಿರ್ದೇಶಕನೊಬ್ಬ ರಸ್ತೆ ದಾಟುವಾಗ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ. ಚಿತ್ರದ ಸಹಾಯ ನಿರ್ದೇಶಕ ವಾಕಿ ಟಾಕಿ ಹಿಡಿದುಕೊಂಡು ಮಾತನಾಡುತ್ತಾ ರಸ್ತೆ ದಾಟುತ್ತಿದ್ದರು. ಈ ವೇಳೆ ಬೈಕ್ ಹಾರನ್ ಮಾಡಿದರು ಕೇಳಿಸಿಕೊಳ್ಳಲಿಲ್ಲ. ಹೀಗಾಗಿ, ಈ ಘಟನೆ ನಡೆದಿದೆ ಎನ್ನಲಾಗಿದೆ.

ಪ್ರಿಯಾಂಕಾ ಮಾಡಬೇಕಿದ್ದ ಚಿತ್ರವನ್ನ ಐಶ್ವರ್ಯ ರೈ ಒಪ್ಪಿದ್ದೇಕೆ?

Accident in Fenny Khan Movie Set

ಈ ಘಟನೆ ಕಂಡು ಕೂಡಲೆ ಐಶ್ ಸ್ಥಳಕ್ಕೆ ಧಾವಿಸಿದ್ರು. ಆದ್ರೆ, ಸಾರ್ವಜನಿಕರು ಹೆಚ್ಚಾದ ಕಾರಣ ಐಶ್ವರ್ಯ ರೈ ಅವರನ್ನ ಭದ್ರತಾ ಸಿಬ್ಬಂಧಿ ಕರೆದುಕೊಂಡು ಹೋದರು ಎನ್ನಲಾಗಿದೆ. ಇನ್ನು ಅಪಘಾತಕ್ಕೋಳಗಾದ ಸಹಾಯ ನಿರ್ದೇಶಕನನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಪ್ರಾಣಾಪಾಯಕ್ಕೆ ಯಾವುದೇ ತೊಂದರೆ ಆಗಿಲ್ಲ. ಸದ್ಯದಲ್ಲೇ ಚಿತ್ರೀಕರಣಕ್ಕೆ ಹಾಜರಾಗುತ್ತಾರೆ ಎಂದು ಚಿತ್ರತಂಡ ತಿಳಿಸಿದೆ.

English summary
Assistant director injured on the sets of Aishwarya Rai Bachchan, Anil Kapoor film Fanney Khan. ಫೆನ್ನಿ ಖಾನ್ ಚಿತ್ರದ ಶೂಟಿಂಗ್ ವೇಳೆ ಅವಘಡ. ಚಿತ್ರದ ಸಾಹಸ ನಿರ್ದೇಶಕನಿಗೆ ಗಾಯ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X