For Quick Alerts
  ALLOW NOTIFICATIONS  
  For Daily Alerts

  ದುಬಾರಿ ಬೆಲೆಗೆ ಎರಡು ಅಪಾರ್ಟ್‌ಮೆಂಟ್ ಖರೀದಿಸಿದ ನಟಿ ಕಾಜೊಲ್

  |

  ಬಾಲಿವುಡ್ ನಟ ನಟಿಯರು ಇತ್ತೀಚೆಗೆ ರಿಯಲ್‌ ಎಸ್ಟೇಟ್‌ ಮೇಲೆ ಹೂಡಿಕೆಯನ್ನು ಹೆಚ್ಚು ಮಾಡಿದ್ದಾರೆ. ಕಳೆದ ವರ್ಷದಿಂದಲೂ ಬಾಲಿವುಡ್ಡಿಗರ ರಿಯಲ್‌ ಎಸ್ಟೇಟ್ ಪ್ರೀತಿ ಹೆಚ್ಚಾಗಿದೆ. ದುಬಾರಿ ಏರಿಯಾಗಳಲ್ಲಿಯೇ ಅಪಾರ್ಟ್‌ಮೆಂಟ್ ಖರೀದಿ ಮಾಡುತ್ತಿದ್ದಾರೆ.

  Recommended Video

  'ತ್ರಿಭಂಗ' ಎಂಬ ವೆಬ್ ಸೀರಿಸ್ ನಲ್ಲಿ ಕಾಜಲ್

  ಇದೀಗ ನಟ ಅಜಯ್ ದೇವಗನ್ ಪತ್ನಿ ನಟಿ ಕಾಜೊಲ್ ಎರಡು ಐಶಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಖರೀದಿ ಮಾಡಿದ್ದಾರೆ. ಅದೂ ಮುಂಬೈನ ದುಬಾರಿ ಏರಿಯಾದಲ್ಲಿ.

  ಮನೆ ಮಾರಿದ ಅಮಿತಾಬ್ ಬಚ್ಚನ್: ಮೌಲ್ಯ ಎಷ್ಟು ಕೋಟಿ?
  ಮುಂಬೈನ ಸಮುದ್ರ ತೀರದ ಏರಿಯಾ ಜುಹುವಿನಲ್ಲಿ ಎರಡು ಐಶಾರಾಮಿ ಅಪಾರ್ಟ್‌ಮೆಂಟಗಳು ಅನ್ನು ಒಟ್ಟಿಗೆ ಖರೀದಿಸಿದ್ದಾರೆ ನಟಿ ಕಾಜೊಲ್.

  ಜುಹುವಿನ ಅನನ್ಯಾ ಬಿಲ್ಡಿಂಗ್‌ನಲ್ಲಿ ಈ ಎರಡು ಅಪಾರ್ಟ್‌ಮೆಂಟ್‌ಗಳಿದ್ದು ಎರಡೂ ಅಪಾರ್ಟ್‌ಮೆಂಟ್‌ಗಳ ಒಟ್ಟು ವಿಸ್ತೀರ್ಣ 2000 ಚದರ ಅಡಿಗೂ ಹೆಚ್ಚಾಗಿದೆ. ಮುಂಬೈನ ಜುಹುವಿನಲ್ಲಿ ಒಂದು ಚದರ ಅಡಿ ಖಾಲಿ ಜಾಗದ ಬೆಲೆ 46,000 ದಿಂದ 50,000 ರುಪಾಯಿಗಳಿವೆ. ಅಂಥಹುದರಲ್ಲಿ ಕಾಜೊಲ್ ನಿರ್ಮಿತ ಅಪಾರ್ಟ್‌ಮೆಂಟ್ ಖರೀದಿಸಿದ್ದಾರೆ.

  ಅನನ್ಯಾ ಬಿಲ್ಡಿಂಗ್‌ನ 10ನೇ ಫ್ಲೋರ್‌ನಲ್ಲಿ ಈ ಎರಡೂ ಫ್ಲ್ಯಾಟ್‌ಗಳಿದ್ದು, ಈ ಎರಡು ಫ್ಲ್ಯಾಟ್‌ಗೆ 11.95 ಕೋಟಿ ರುಪಾಯಿಯನ್ನು ಕಾಜೊಲ್ ನೀಡಿದ್ದಾರೆ. ಕಾಜೊಲ್ ಸಹಿ ಮಾಡಿರುವ ಆಸ್ತಿಯ ದಾಖಲೆಯಲ್ಲಿ ಈ ಅಂಶ ನಮೂದಾಗಿದ್ದು, ತಮ್ಮ ಈಗಿನ ಬಂಗ್ಲೆ 'ಶಿವ ಶಕ್ತಿ'ಗೆ ಹತ್ತಿರದಲ್ಲಿಯೇ ಕಾಜೊಲ್‌ರ ಹೊಸ ಅಪಾರ್ಟ್‌ಮೆಂಟ್ ಇದೆ.

  ಹೊತ್ತಿನ ಊಟಕ್ಕೆ ಪರದಾಡಿದ್ದ ನಟ ಈಗ ಅರಮನೆಯಂತ ಬಂಗಲೆಯ ಒಡೆಯ
  ಕಳೆದ ವರ್ಷ ಮೇ ತಿಂಗಳಲ್ಲಿ ಅಜಯ್ ದೇವಗನ್ ಬಾಂಬೆಯ ಜುಹುವಿನಲ್ಲಿಯೇ ದೊಡ್ಡ ಬಂಗ್ಲೆಯೊಂದನ್ನು ಖರೀದಿಸಿದ್ದರು. ದೊಡ್ಡ ವಿಸ್ತೀರ್ಣದ ಆ ಬಂಗ್ಲೆಗೆ 60 ಕೋಟಿಯನ್ನು ಅಜಯ್ ದೇವಗನ್ ನೀಡಿದ್ದರು. ಈ ಬಂಗ್ಲೆ ಸಹ ಅವರ ಶಿವ ಶಕ್ತಿ ಬಂಗ್ಲೆಯಿಂದ ಹೆಚ್ಚು ದೂರವೇನೂ ಇಲ್ಲ.

  ಆಗೊಂದು ಈಗೊಂದು ಸಿನಿಮಾಗಳಲ್ಲಿ ನಟಿಸುವ ಕಾಜೋಲ್ ಸಿನಿಮಾ ನಿರ್ಮಾಣದ ಕಡೆಗೆ ಹೆಚ್ಚು ಕಾಳಜಿ ವಹಿಸಿದ್ದಾರೆ. ಪತಿಯ ಕೆಲ ಸಿನಿಮಾ ನಿರ್ಮಾಣ ಮಾಡಿರುವ ಕಾಜೊಲ್ ನಿರ್ಮಾಣದ ಮೂಲಕ ಸಾಕಷ್ಟು ಹಣ ಗಳಿಸಿದ್ದಾರೆ. ಅಜಯ್ ದೇವಗನ್ ಹಾಗೂ ಕಾಜೋಲ್‌ಗೆ ಒಂದು ಗಂಡು ಹಾಗೂ ಒಬ್ಬ ಹೆಣ್ಣು ಮಗಳಿದ್ದಾಳೆ. ಹೆಣ್ಣು ಮಗಳು ಪದವಿ ಶಿಕ್ಷಣ ಕಲಿಯುತ್ತಿದ್ದು ಕೆಲವೇ ವರ್ಷಗಳಲ್ಲಿ ಸಿನಿಮಾಕ್ಕೆ ಎಂಟ್ರಿಯಾಗುವ ಸಾಧ್ಯತೆಯೂ ಇದೆ.

  ಇತ್ತೀಚೆಗೆ ಹಲವು ಬಾಲಿವುಡ್ ನಟ ನಟಿಯರು ಮುಂಬೈನಲ್ಲಿ ಮನೆಗಳನ್ನು ಖರೀದಿಸಿದ್ದಾರೆ. ನವಾಜುದ್ದೀನ್ ಸಿದ್ಧಿಖಿ ಐಶಾರಾಮಿ ಮನೆ ಕಟ್ಟಿಸಿದರೆ. ಅಭಿಷೇಕ್ ಬಚ್ಚನ್, ಹೃತಿಕ್ ರೋಷನ್, ಆಯುಷ್ಮಾನ್ ಖುರಾನಾ, ದೀಪಿಕಾ ಪಡುಕೋಣೆ, ಟೈಗರ್ ಶ್ರಾಫ್, ಸನ್ನಿ ಲಿಯೋನ್ ಇನ್ನೂ ಹಲವರು ಹೊಸ ಮನೆಗಳನ್ನು ಖರೀದಿಸಿದ್ದಾರೆ. ಅಮಿತಾಬ್ ಬಚ್ಚನ್ ಮಾತ್ರ ದೆಹಲಿಯ ತಮ್ಮ ಹಳೆಯ ಮನೆಯನ್ನು ಮಾರಾಟ ಮಾಡಿದ್ದಾರೆ.

  19 ಕೋಟಿ ಮೌಲ್ಯದ ಮನೆ ಖರೀದಿಸಿದ ನಟ: ವಿಶೇಷತೆ ಏನು?
  ಸಿನಿಮಾದ ವಿಷಯಕ್ಕೆ ಮರಳುವುದಾದರೆ ಕಾಜೊಲ್ 'ಸಲಾಮ್ ವೆಂಕಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಾಜೋಲ್‌ರ ಪತಿ ಅಜಯ್ ದೇವಗನ್ ನಟಿಸಿರುವ 'RRR' ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಜೊತೆಗೆ 'ಮೈದಾನ್', 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. 'ದೃಶ್ಯಂ 2' ಸಿನಿಮಾ ಚಿತ್ರೀಕರಣ ಪ್ರಾರಂಭವಾಗಿದೆ. ಅಜಯ್ ದೇವಗನ್ ನಿರ್ದೇಶಿಸುತ್ತಿರುವ 'ಮೇ ಡೇ' ಚಿತ್ರೀಕರಣ ಚಾಲ್ತಿಯಲ್ಲಿದೆ. ಇದರ ಜೊತೆಗೆ ತಮಿಳಿನ 'ಖೈದಿ' ಸಿನಿಮಾದ ಹಿಂದಿ ರೀಮೇಕ್‌ನಲ್ಲಿ ಅಜಯ್ ನಟಿಸುತ್ತಿದ್ದಾರೆ. ಜೊತೆಗೆ 'ಗೋಬರ್', 'ಥ್ಯಾಂಕ್ ಗಾಡ್', 'ಚಾಣಕ್ಯ', ಸಾಡೆ ಸಾಥಿ', 'ಗೋಲ್ ಮಾಲ್ 5', 'ನಾಂದಿ' ಸಿನಿಮಾದ ಹಿಂದಿ ರೀಮೇಕ್‌ಗಳಲ್ಲಿ ನಟಿಸಲಿದ್ದಾರೆ.

  English summary
  Actress Kajol purchased two luxuries apartments in Mumbai's Juhu area. Kajol paid 11.95 crore rs for two apartments which were 2000 sqr feet in size.
  Thursday, February 17, 2022, 15:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X