For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್‌ಗೆ ಕಿಚ್ಚ ಸುದೀಪ್ ಆಕ್ಷನ್ ಕಟ್ ಹೇಳೋದ್ಯಾವಾಗ?

  |

  ಕಿಚ್ಚ ಸುದೀಪ್ ಈಗ 'ವಿಕ್ರಾಂತ್ ರೋಣ' ಸಿಕ್ಕಿರುವ ರೆಸ್ಪಾನ್ಸ್‌ಗೆ ಖುಷಿಯಾಗಿದ್ದಾರೆ. ಬೇರೆ ಭಾಷೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಕನ್ನಡದಲ್ಲಿ ಈ ಸಿನಿಮಾ ಮಸ್ತ್ ರೆಸ್ಪಾನ್ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಯಶಸ್ಸಿನ ಖುಷಿಯಲ್ಲಿ ಅಲೆದಾಡುತ್ತಿದ್ದಾರೆ.

  ಪೂರ್ಣ ಪ್ರಮಾಣದಲ್ಲಿ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ನಟಿಸಿದ ಪ್ಯಾನ್‌ ಇಂಡಿಯಾ ಸಿನಿಮಾ ರಿಲೀಸ್ ಆಗಿದೆ. ಈ ಕಾರಣಕ್ಕೆ ಸುದೀಪ್ ಸಿನಿಮಾ ಬಿಡುಗಡೆ ಬಳಿಕವೂ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ದೆಹಲಿ, ಬೆಂಗಳೂರು ಅಂತ ಓಡಾಡಿಕೊಂಡಿದ್ದಾರೆ.

  ಒಂದೇ ಥಿಯೇಟರ್‌ನಲ್ಲಿ ₹25 ಲಕ್ಷ: ಕರ್ನಾಟಕದಲ್ಲಿ 'ವಿಕ್ರಾಂತ್ ರೋಣ' ಮೊದಲ ದಿನದ ಗಳಿಕೆ ಎಷ್ಟು?ಒಂದೇ ಥಿಯೇಟರ್‌ನಲ್ಲಿ ₹25 ಲಕ್ಷ: ಕರ್ನಾಟಕದಲ್ಲಿ 'ವಿಕ್ರಾಂತ್ ರೋಣ' ಮೊದಲ ದಿನದ ಗಳಿಕೆ ಎಷ್ಟು?

  ಒಂದ್ಕಡೆ 'ವಿಕ್ರಾಂತ್ ರೋಣ' ಥಿಯೇಟರ್‌ನಲ್ಲಿ ಸದ್ದು ಮಾಡುತ್ತಿದ್ದರೆ, ಇನ್ನೊಂದು ಕಡೆ ಸುದೀಪ್ ನಿರ್ದೇಶನದ ಸಿನಿಮಾ ಬಗ್ಗೆ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಕಿಚ್ಚ ಸುದೀಪ್ ನಿರ್ದೇಶನ ಮಾಡುವುದು ಯಾವಾಗ? ಯಾರ ಸಿನಿಮಾಗೆ ನಿರ್ದೇಶನ ಮಾಡುತ್ತಾರೆ ಎನ್ನುವ ಪ್ರಶ್ನೆ ಎದ್ದಿತ್ತು. ಆಗಲೇ ಸಲ್ಮಾನ್ ಹೆಸರು ಹೇಳಿ ಬಂದಿತ್ತು. ಇದಕ್ಕೆ ಸ್ವತ: ಸುದೀಪ್ ಉತ್ತರ ಕೊಟ್ಟಿದ್ದಾರೆ.

  'ವಿಕ್ರಾಂತ್ ರೋಣ' ಮುಂದೆ ಅಂಗಾತ ಮಲಗಿದ 'ರಾಮಾ ರಾವ್' & 'ಏಕ್ ವಿಲನ್'!'ವಿಕ್ರಾಂತ್ ರೋಣ' ಮುಂದೆ ಅಂಗಾತ ಮಲಗಿದ 'ರಾಮಾ ರಾವ್' & 'ಏಕ್ ವಿಲನ್'!

  ಸಲ್ಮಾನ್‌ಗೆ ಸುದೀಪ್ ನಿರ್ದೇಶನ ಯಾವಾಗ?

  ಸಲ್ಮಾನ್‌ಗೆ ಸುದೀಪ್ ನಿರ್ದೇಶನ ಯಾವಾಗ?

  ಕಿಚ್ಚ ಸುದೀಪ್ ಹಾಗೂ ಸಲ್ಮಾನ್ ಖಾನ್ ಇಬ್ಬರೂ ಆತ್ಮೀಯರು ಅನ್ನೋದು ಗೊತ್ತೇ ಇದೆ. 'ದಬಾಂಗ್ 3' ಸಿನಿಮಾದಲ್ಲಿ ಕಿಚ್ಚ ಸುದೀಪ್ ಖಳನಾಯಕರಾಗಿ ನಟಿಸಿದ್ದರು. ಇಲ್ಲಿಂದ ಇಬ್ಬರ ಸ್ನೇಹ ಮತ್ತಷ್ಟು ಗಟ್ಟಿಯಾಗಿದೆ. ಈ ಕಾರಣಕ್ಕೆ ಸಲ್ಮಾನ್ ಖಾನ್ 'ವಿಕ್ರಾಂತ್ ರೋಣ' ಸಿನಿಮಾವನ್ನು ಉತ್ತರ ಭಾರತದಲ್ಲಿ ಬಿಡುಗಡೆ ಮಾಡಲು ಮುಂದೆ ಬಂದಿತ್ತು. 'ವಿಕ್ರಾಂತ್ ರೋಣ'ಗೆ ಸುದೀಪ್ ಪ್ರಚಾರ ಶುರು ಮಾಡಿದ್ದಲ್ಲಿಂದ ಸಲ್ಮಾನ್ ಖಾನ್‌ಗೆ ಯಾವಾಗ ಡೈರೆಕ್ಟ್ ಮಾಡುತ್ತಿರಾ ಎಂಬ ಪ್ರಶ್ನೆ ಎದ್ದೇಳುತ್ತಲೇ ಇದೆ. ಅದಕ್ಕೀಗ ಸುದೀಪ್ ಉತ್ತರ ಕೊಟ್ಟಿದ್ದಾರೆ.

  ಸಲ್ಮಾನ್‌ಗೆ ಕಿಚ್ಚ ನಿರ್ದೇಶನ ಪಕ್ಕಾ?

  ಸಲ್ಮಾನ್‌ಗೆ ಕಿಚ್ಚ ನಿರ್ದೇಶನ ಪಕ್ಕಾ?

  ಕಿಚ್ಚ ಸುದೀಪ್ ಹಾಗೂ ಸಲ್ಮಾನ್ ಖಾನ್ ಮತ್ತೊಂದು ಸಿನಿಮಾ ಮಾಡೋದು ಪಕ್ಕಾ ಆದರೆ, ಯಾವಾಗ ಅನ್ನೋದು ಇನ್ನು ಫಿಕ್ಸ್ ಆಗಿಲ್ಲ. ಈ ಮಧ್ಯೆ ಸಲ್ಮಾನ್ ಖಾನ್ ಸಿನಿಮಾಗೆ ಕಿಚ್ಚ ಸುದೀಪ್ ನಿರ್ದೇಶನ ಮಾಡುತ್ತಾರೆ ಎಂಬ ವದಂತಿ ಬಗ್ಗೆ ಈಗಾಗಲೇ ಪ್ರತಿಕ್ರಿಯೆ ನೀಡಿದ್ದಾರೆ. ಪಿಂಕ್‌ವಿಲ್ಲಾ ವೆಬ್‌ ಸೈಟ್‌ ಜೊತೆಗಿನ ಸಂದರ್ಶನದಲ್ಲಿ ಸುದೀಪ್ ಈ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. "ಕಳೆದ ಕೆಲವು ವರ್ಷಗಳಿಂದ ಈ ಪ್ರಶ್ನೆ ಎದುರಾಗುತ್ತಲೇ ಇದೆ. ಇದಕ್ಕೆ ಇನ್ನೂ ಸ್ವಲ್ಪ ದಿನ ಕಾಯಲೇ ಬೇಕು. ಸಲ್ಮಾನ್ ಖಾನ್‌ಗೆ ನಾನು ಕಥೆ ಹೇಳಬೇಕಿದೆ. ಆ ಕಥೆಯನ್ನು ಅವರು ಓಕೆ ಮಾಡಬೇಕಿದೆ. ಸಲ್ಮಾನ್ ಖಾನ್ ಈಗಾಗಲೇ ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ. ಕಾಲ ಕೂಡಿ ಬಂದಾಗ ಸಿನಿಮಾ ಆಗುತ್ತೆ" ಎಂದು ಸುದೀಪ್ ಹೇಳಿದ್ದಾರೆ.

  ಕಿಚ್ಚ ನಿರ್ದೇಶನ ಮಾಡೋದ್ಯಾವಾಗ?

  ಕಿಚ್ಚ ನಿರ್ದೇಶನ ಮಾಡೋದ್ಯಾವಾಗ?

  ಕಿಚ್ಚ ಸುದೀಪ್ ನಟ ಅನ್ನೋದು ಒಂದು ಕಡೆಯಾದರೆ, ಇನ್ನೊಂದು ಕಡೆ ಒಬ್ಬ ನಿರ್ದೇಶಕ ಕೂಡ ಹೌದು. ಸಿನಿಪ್ರಿಯರು ಬಹಳ ದಿನಗಳಿಂದ ಕಿಚ್ಚ ಸುದೀಪ್‌ಗೆ ಸಿನಿಮಾವನ್ನು ನಿರ್ದೇಶನ ಮಾಡಬೇಕು ಅಂತ ಒತ್ತಡ ಹೇರುತ್ತಲೇ ಇದ್ದಾರೆ. ಆದರೆ, ಕಿಚ್ಚ ಸದ್ಯಕ್ಕೆ ಡೈರೆಕ್ಷನ್ ಮಾಡುವ ಹಾಗೆ ಕಾಣಿಸುತ್ತಿಲ್ಲ. ಈ ಬಗ್ಗೆ ಚಿತ್ರರಂಗಕ್ಕೆ ಬಂದು 25ನೇ ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿಯೇ ಈ ಮಾತನ್ನು ಹೇಳಿದ್ದರು. ಸಿನಿಮಾದಲ್ಲಿ ನಟಿಸುವುದಕ್ಕೆ ಅವಕಾಶ ಸಿಗುವವರೆಗೂ ಸಿನಿಮಾ ಮಾಡುತ್ತಲೇ ಇರುತ್ತೇನೆ ಎಂದಿದ್ದರು.

   ಸಿನಿಮಾ ಗೆದ್ದ ಖುಷಿ!

  ಸಿನಿಮಾ ಗೆದ್ದ ಖುಷಿ!

  ಸದ್ಯ ಕಿಚ್ಚ ಸುದೀಪ್ 'ವಿಕ್ರಾಂತ್ ರೋಣ' ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ. ಮೊದಲ ದಿನದ ರೆಸ್ಪಾನ್ಸ್ ಬಳಿಕ ಸುದೀಪ್ ನಿರಾಳರಾಗಿದ್ದಾರೆ. ಅಂದುಕೊಂಡಂತೆ ಸಿನಿಮಾ ಮೆಗಾ ಹಿಟ್ ಆದರೆ, ಇನ್ನು ಹೆಚ್ಚು ಸಿನಿಮಾಗಳಲ್ಲಿ ಬ್ಯುಸಿಯಾಗಲಿದ್ದಾರೆ. ಈ ಕಾರಣಕ್ಕೆ ಸದ್ಯಕ್ಕೆ ಸಲ್ಮಾನ್ ಖಾನ್ ಸಿನಿಮಾ ನಿರ್ದೇಶನ ಮಾಡುವುದು ಅನುಮಾನ.

  English summary
  After Vikrant Rona Release Sudeep Reveals about Salman Khan Directorial Movie, Know More
  Friday, July 29, 2022, 23:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X