»   » ಕನ್ನಡ ಬಾರದ 'ಕನ್ನಡತಿ' ಐಶ್ವರ್ಯ ರೈಗೆ ಇಂದು 41

ಕನ್ನಡ ಬಾರದ 'ಕನ್ನಡತಿ' ಐಶ್ವರ್ಯ ರೈಗೆ ಇಂದು 41

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಮಂಗಳೂರಿನಲ್ಲಿ ಹುಟ್ಟಿ ಕನ್ನಡದ ಯಾವುದೇ ಚಿತ್ರದಲ್ಲಿ ನಟಿಸದಿದ್ದರೂ, ಕನ್ನಡ ಮಾತನಾಡಲು ಬರದಿದ್ದರೂ ಐಶ್ವರ್ಯ ರೈ ಅವರನ್ನು 'ಕನ್ನಡತಿ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುವವರು ನಾವು.

  ಅದೇನು ಕಾಕತಾಳಿಯವೋ ಏನೋ? ಕನ್ನಡ ರಾಜ್ಯೋತ್ಸವದ ದಿನವಾದ ನವೆಂಬರ್ ಒಂದರಂದು ಐಶ್ವರ್ಯ ರೈ ಜನಿಸಿದ್ದು. 01.11.1973 ರಲ್ಲಿ ಮಂಗಳೂರಿನಲ್ಲಿ ಜನಿಸಿದ ಐಶ್ವರ್ಯ ರೈಗೆ ಇಂದು 41ನೇ ಹುಟ್ಟುಹಬ್ಬದ ಸಂಭ್ರಮ.

  ಕೃಷ್ಣರಾಜ್ ಮತ್ತು ಬೃಂದಾ ರೈ ದಂಪತಿಗಳಿಗೆ ಜನಿಸಿದ ಬಂಟ್ಸ್ ಸಮುದಾಯದ ಐಶ್ವರ್ಯ ರೈ ಒಂಬತ್ತನೆ ತರಗತಿಯಲ್ಲೇ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ಅನೇಕ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಐಶ್ವರ್ಯ ವಿಶ್ವಸುಂದರಿ ಸ್ಪರ್ಧೆ ಗೆದ್ದ ನಂತರ ಮನೆಮಾತಾದರು.

  41ರ ವಯಸ್ಸಿನಲ್ಲೂ ಸೌಂದರ್ಯದ ಖಣಿಯಂತಿರುವ ಐಶ್ವರ್ಯಾ, 1997ರಲ್ಲಿ ಮಣಿರತ್ನಂ ನಿರ್ದೇಶನದ ತಮಿಳು 'ಇರುವರ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಅಡಿಯಿಟ್ಟರು. ದೇಶದ ಪ್ರತಿಷ್ಠಿತ ಬಚ್ಚನ್ ಕುಟುಂಬದ ಸೊಸೆಯಾಗಿರುವ ಐಶ್ವರ್ಯಾ, ಪತಿ ಅಭಿಷೇಕ್ ಗಿಂತ ಏಳು ವರ್ಷ ದೊಡ್ಡವರು.

  ನವೆಂವರ್ 2011ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಐಶ್ವರ್ಯಾ, ಹಾಲಿವುಡ್ ಚಿತ್ರದಲ್ಲೂ ನಟಿಸಿದ್ದರು. ಕೇನ್ಸ್ ನಲ್ಲಿ ನಡೆಯುವ ಕೇನ್ಸ್ ಉತ್ಸವದಲ್ಲಿ ತಪ್ಪದೇ ಪಾಲ್ಗೊಳ್ಳುವ ಐಶ್ವರ್ಯಾ, ತಾಯಿಯಾದ ನಂತರ ಯಾವುದೇ ಚಿತ್ರದಲ್ಲಿ ನಟಿಸದಿದ್ದರೂ, ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಕನ್ನಡ ಪರ ಸಮಾವೇಶದಲ್ಲಿ ಐಶ್ವರ್ಯಾ ಭಾಗವಹಿಸಿದ್ದ ಒಂದು ಉದಾಹರಣೆಯೆಂದರೆ, ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ ಮಾತ್ರ. ಐಶ್ವರ್ಯಾ ಹುಟ್ಟುಹಬ್ಬದ ದಿನವಾದ ಇಂದು ಐಶ್ವರ್ಯಾ - ಅಭಿಷೇಕ್ ದಂಪತಿಗಳ ಬಗ್ಗೆ ಕೆಲವೊಂದು ವಿವರಗಳು, ಸ್ಲೈಡಿನಲ್ಲಿ..

  ಮೊದಲು ಭೇಟಿಯಾಗಿದ್ದು

  1997ರಲ್ಲಿ ಔರ್ ಪ್ಯಾರ್ ಹೋ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಐಶ್ವರ್ಯಾ -ಅಭಿಷೇಕ್ ಮೊದಲು ಭೇಟಿಯಾಗಿದ್ದು. ಸ್ವಿಜರ್ ಲ್ಯಾಂಡ್ ನಲ್ಲಿ ಅಮಿತಾಭ್ ಪ್ರಮುಖ ಭೂಮಿಕೆಯಲ್ಲಿದ್ದ 'ಮೃತ್ಯುದಾದ' ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಲ್ಲಿ ನಾನು ಬ್ಯೂಸಿಯಾಗಿದ್ದೆ. ಐಶ್ವರ್ಯಾ 'ಔರ್ ಪ್ಯಾರ್ ಹೋ' ಚಿತ್ರದ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದರು. ಆ ಚಿತ್ರದ ನಾಯಕನಾಗಿದ್ದ ಬಾಬ್ಬಿ ಡಿಯೋಲ್ ನನ್ನನ್ನು ಊಟಕ್ಕೆ ಆಹ್ವಾನಿಸಿದ್ದರು, ಅಲ್ಲಿ ನಾನು ಮತ್ತು ಐಶ್ವರ್ಯಾ ಮೊದಲು ಮಾತುಕತೆ ನಡೆಸಿದ್ದೆವು ಎಂದು ಅಭಿಷೇಕ್ ತಮ್ಮ ಮೊದಲ ಭೇಟಿಯ ಬಗ್ಗೆ ವಿವರಿಸಿದ್ದಾರೆ.

  ಮೊದಲ ಭೇಟಿ ಪ್ರೀತಿಗೆ ತಿರುಗಲಿಲ್ಲ

  ಆದರೆ ಇವರಿಬ್ಬರ ಮೊದಲ ಭೇಟಿ ಪ್ರೀತಿಗೆ ತಿರುಗಲಿಲ್ಲ, ಯಾಕೆಂದರೆ ಆಗ ಐಶ್ವರ್ಯಾ, ಸಲ್ಮಾನ್ ಖಾನ್ ಜೊತೆ dating ನಲ್ಲಿದ್ದರು. ಸಲ್ಮಾನ್ ಮತ್ತು ಐಶ್ವರ್ಯಾ ಸಂಬಂಧ ತುಂಬಾ ದಿನ ಮುಂದುವರಿಯಲಿಲ್ಲ. ಇದಾದ ನಂತರ ಐಶ್ವರ್ಯಾ, ವಿವೇಕ್ ಒಬೆರಾಯ್ ಜೊತೆ ಸುತ್ತಲಾರಂಭಿಸಿದರು.

  ಅಭಿಷೇಕ್ ಜೊತೆ ಚಿತ್ರಗಳು

  ವಿವೇಕ್ ಜೊತೆಗಿನ ಒಡನಾಟ ಕೂಡಾ ಹೆಚ್ಚು ದಿನ ಇರಲಿಲ್ಲ. ಇದಾದ ನಂತರ ಅಭಿಷೇಕ್ ಮತ್ತು ಐಶ್ವರ್ಯಾ ಸಾಲು ಸಾಲು ಚಿತ್ರದಲ್ಲಿ ನಟಿಸಲಾರಂಭಿಸಿದರು. ಉಮ್ರಾವ್ ಜಾನ್ ಚಿತ್ರದ ಸಮಯದಲ್ಲಿ ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆಂದು ಗುಲ್ಲೆಬ್ಬಿತ್ತು. ಆದರೆ ಗುರು ಚಿತ್ರದ ಸಮಯದಲ್ಲಿ ಇವರಿಬ್ಬರ ನಡುವೆ ಡೇಟಿಂಗ್ ಆರಂಭವಾಯಿತು.

  ಚಂದ್ರಶೇಖರ ಸ್ವಾಮಿ ಹೇಳಿದ ಸ್ವಾಮಿ

  ಇವರಿಬ್ಬರ ನಡುವಿನ ಡೇಟಿಂಗ್ ಬಗ್ಗೆ ಬಹಳ ಸುದ್ದಿಯಾಗುತ್ತಿದ್ದ ಸಮಯದಲ್ಲಿ, ಅಮಿತಾಭ್ ಸಹೋದರ್ ಅಜಿತಾಭ್ ಬಚ್ಚನ್ ಬೆಂಗಳೂರಿನಲ್ಲಿ ಖ್ಯಾತ ಜ್ಯೋತಿಷಿ ಚಂದ್ರಶೇಖರ ಸ್ವಾಮಿಯವರನ್ನು ಭೇಟಿಯಾಗಿದ್ದರು. ಇವರಿಬ್ಬರಿಗೂ ಕಂಕಣಬಲ ಕೂಡಿಬಂದಿದೆ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದರು. ಇದಾದ ನಂತರ ಅಭಿಷೇಕ್ ಟೊರಂಟೋದಲ್ಲಿ ಐಶ್ವರ್ಯಾಗೆ ಪ್ರಪೋಸ್ ಮಾಡಿದ್ದರು. ಏಪ್ರಿಲ್ 2007ರಲ್ಲಿ ಇಬ್ಬರಿಗೂ ಮದುವೆಯ ತಾರಾಬಲ ಕೂಡಿಬಂದಿತು.

  ಮೂರು ದಿನದ ಮದುವೆ

  ಮೂರು ದಿನ ಮುಂಬೈನಲ್ಲಿ ಅತ್ಯಂತ ವೈಭವೋಪಿತವಾಗಿ ನಡೆದ ಮದುವೆಗೆ ಕಲಾವಿದರ ದಂಡೇ ಹರಿದು ಬಂದಿತ್ತು. ಇತ್ತೀಚೆಗೆ ಇಬರಿಬ್ಬರ ನಡುವೆ ಸಂಬಂಧ ಹಳಸಿದೆ ಎನ್ನುವ ಸುದ್ದಿಯೂ ಹರಿದಾಡುತ್ತಿತ್ತು. ಈ ರೀತಿಯ ಸುದ್ದಿ ಹರಿದಾಡಿದಾಗಲೆಲ್ಲಾ ನಮ್ಮಿಬ್ಬರ ಸಂಬಂಧ ಮತ್ತಷ್ಟು ಗಟ್ಟಿಯಾಗುತ್ತದೆ ಎಂದು ಇಬ್ಬರೂ ಸುದ್ದಿಯನ್ನು ತಳ್ಳಿಹಾಕಿದ್ದರು.

  English summary
  Most beautiful woman in the world AIshwarya Rai Bachchan turns 41 today. Intimate Details of Aishwarya Rai - Abhishek Bachchan Marriage

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more