»   » ಸಿನಿಮಾ ಕೈಬಿಡಿ ಸಲ್ಮಾನ್ ಖಾನ್: ಅಜಯ್ ದೇವಗನ್ ಲೆಟರ್!

ಸಿನಿಮಾ ಕೈಬಿಡಿ ಸಲ್ಮಾನ್ ಖಾನ್: ಅಜಯ್ ದೇವಗನ್ ಲೆಟರ್!

Posted By:
Subscribe to Filmibeat Kannada

ಬಾಲಿವುಡ್ ನಟ ಕಮ್ ನಿರ್ಮಾಪಕ ಅಜಯ್ ದೇವಗನ್ ಮತ್ತು ಖ್ಯಾತ ನಿರ್ದೇಶಕ ಕಮ್ ನಟ ಕರಣ್ ಜೋಹರ್ ಹಿಂದೊಮ್ಮೆ ಇಬ್ಬರು ಟ್ವಿಟರ್ ಗುದ್ದಾಟದಿಂದ ಸುದ್ದಿ ಆಗಿದ್ದರು. ಈಗ ಮತ್ತೊಮ್ಮೆ ಇಬರಿಬ್ಬರ ನಡುವೆ ಸಾಮಾಜಿಕ ತಾಣಗಳಲ್ಲಿ ಜುಗಲ್ ಬಂದಿ ಶುರುವಾಗುವ ಸನ್ನಿವೇಶ ಇದೆ. ಆದರೆ ಇದಕ್ಕೆ ಕಾರಣ ಅಜಯ್ ದೇವಗನ್ ಸಲ್ಮಾನ್ ಖಾನ್ ಅವರಿಗೆ ಬರೆದಿರುವ ಲೆಟರ್.[ಅಜಯ್ ದೇವಗನ್ ಸಿನ್ಮಾ ಸೋಲಿಸಲು 'ಸುಪಾರಿ' ಕೊಟ್ಟ ಕರಣ್]

ಅಂದಹಾಗೆ ಅಜಯ್ ದೇವಗನ್ ಸಲ್ಮಾನ್‌ ಖಾನ್‌ ಗೆ ಬರೆದಿರುವ ಲೆಟರ್ ನಲ್ಲಿ ಸಿನಿಮಾ ಕೈಬಿಡುವಂತೆ ಮನವಿ ಮಾಡಿದ್ದಾರಂತೆ. ಅಜಯ್‌ ದೇವಗನ್ ಹೀಗೆ ಹೇಳಿದ್ದಾದರು ಏಕೆ? ಯಾವ ಸಿನಿಮಾ ಕೈಬಿಡಲು ಸಲ್ಮಾನ್ ಖಾನ್‌ ಗೆ ಸಂದೇಶ ಕಳುಹಿಸಿದ್ದಾರೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಅಜಯ್ ದೇವಗನ್ ಲೆಟರ್ ಬರೆದ ಹಿನ್ನೆಲೆ

ಅಜಯ್ ದೇವಗನ್ ತಮ್ಮ 'ಶಿವಾಯ್' ಚಿತ್ರ ಪ್ರಮೋಶನ್ ವೇಳೆ ತಮ್ಮ ಮುಂದಿನ ಚಿತ್ರ 'ಸನ್ಸ್ ಆಫ್ ಸರ್ದಾರ್' ಬಗ್ಗೆ ಮಾಹಿತಿ ನೀಡಿದ್ದರು. ವಿಶೇಷ ಅಂದ್ರೆ ಈ ಸಿನಿಮಾವನ್ನು 2006 ಹಾಲಿವುಡ್ ಖ್ಯಾತ '300' ಚಿತ್ರದ ಮಟ್ಟಕ್ಕೆ ನಿರ್ಮಿಸುವುದಾಗಿ ಹೇಳಿಕೊಂಡಿದ್ದರು. ಈಗ ಈ ಸಿನಿಮಾ ಗೆ ಸಂಬಂಧ ಪಟ್ಟ ವಿಷಯದಿಂದ ಸಲ್ಮಾನ್‌ ಖಾನ್ ಗೆ ಪತ್ರ ಬರೆದಿದ್ದಾರೆ.[ಸಿಂಗಂ ರಿಟರ್ನ್ಸ್ ವಿರುದ್ಧ ಹಿಂದೂ ಸಂಘಟನೆಗಳು ಕಿಡಿ]

ಅಜಯ್ ದೇವಗನ್ ಚಿತ್ರಕ್ಕೂ ಸಲ್ಮಾನ್ ಖಾನ್‌ ಗೂ ಸಂಬಂಧವೇನು?

ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ಮತ್ತು ಕರಣ್ ಜೋಹರ್ ಒಟ್ಟಾಗಿ, ಅಜಯ್ ದೇವಗನ್ ಘೋಷಿಸಿದ್ದ 'ಸನ್ಸ್ ಆಫ್ ಸರ್ದಾರ್' ವಿಷಯವುಳ್ಳ ಸಿನಿಮಾವನ್ನು ಅಕ್ಷಯ್ ಕುಮಾರ್ ಅಭಿನಯದಲ್ಲಿ ನಿರ್ಮಿಸುವುದಾಗಿ ಹೇಳಿದ್ದರು. ಈ ಮಾಹಿತಿ ನಿಜ ಎಂದು ಖಚಿತವಾದ ನಂತರ ಅಜಯ್‌ ದೇವಗನ್ ನಿರಾಸೆ ಗೊಂಡಿದ್ದರು.

ಸಲ್ಮಾನ್‌ ಖಾನ್‌ ಗೆ ಸಂದೇಶ

'ಸನ್ಸ್ ಆಫ್ ಸರ್ದಾರ್' ಚಿತ್ರದ ಮಾಹಿತಿ ಯುಳ್ಳ ಸಿನಿಮಾ ವನ್ನು ಸಲ್ಮಾನ್ ಖಾನ್ ಮತ್ತು ಕರಣ್ ಜೋಹರ್ ನಿರ್ಮಿಸುತ್ತಿರುವ ಕಾರಣ ಈಗ ಅಜಯ್ ದೇವಗನ್‌ ಅವರು ಸಲ್ಮಾನ್‌ ಗೆ ಭಾವನಾತ್ಮಕ ಸಂದೇಶವನ್ನು ಕಳುಹಿಸಿದ್ದಾರೆ. ತಾವು ಬರೆದ ಲೆಟರ್ ನಲ್ಲಿ ಸಾಧ್ಯವಾದರೆ ಈ ಸಿನಿಮಾ ಕೈಬಿಡುವಂತೆ ಕೇಳಿಕೊಂಡಿದ್ದಾರಂತೆ.

ಸಿನಿಮಾ ತೆಗೆಯುವುದು ಸರಿಯಲ್ಲ..

ಸರಗರ್ಹಿಯ ಯುದ್ಧದ ಕುರಿತ ಅಜಯ್ ದೇವಗನ್ ಅವರ 'ಸನ್ಸ್ ಆಫ್ ಸರ್ದಾರ್' ಸಿನಿಮಾದ ಸ್ಕ್ರಿಫ್ಟ್ ಕೆಲಸ ಈಗಾಗಲೇ ನಡೆದಿದ್ದು, ಇದೇ ಮಾಹಿತಿಯ ಸಿನಿಮಾ ನಿರ್ಮಾಣ ಮಾಡಲು ಮುಂದಾಗುವುದು ಸರಿಯಲ್ಲ ಎಂದು ಸಲ್ಮಾನ್ ಗೆ ಅಜಯ್‌ ದೇವಗನ್ ತಿಳಿಸಿದ್ದಾರಂತೆ.

ವಿವಾದ ಬಗೆಹರಿಯುತ್ತಾ..

ಅಂದಹಾಗೆ ಸಲ್ಮಾನ್ ಖಾನ್ ಮತ್ತು ಅಜಯ್ ದೇವಗನ್ 'ಹಮ್ ದಿಲ್ ದೇ ಚುಕೆ' ಎಂಬ ಚಿತ್ರದಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. ಈಗ ಸಲ್ಮಾನ್ ಜೊತೆ ಕರಣ್ ಜೋಹರ್ ಸಹ ಸಿನಿಮಾ ನಿರ್ಮಾಣದ ಹೊಣೆ ಹೊತ್ತಿರುವ ಕಾರಣ ಅವರೇನಾದರೂ ಮತ್ತೆ ಜುಗಲ್ ಬಂದಿಗೆ ಇಳಿಯುತ್ತಾರಾ? ಅಥವಾ ಸಲ್ಮಾನ್ ಮತ್ತು ಅಜಯ್ ದೇವಗನ್ ಅವರೇ ಈ ಸಮಸ್ಯೆ ಬಗೆಹರಿಸಿಕೊಳ್ಳುತ್ತಾರಾ ಕಾದು ನೋಡಬೇಕಿದೆ.

English summary
Ajay Devgn writes a letter to Salman Khan over Sons of Sardaar. Here is what Ajay Devgan wrote in hit letter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada