Don't Miss!
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- News
Ejipura Flyover: ಟೆಂಡರ್ ಕರೆಯಲು ಮೀರಿದ ಸಮಯ, ಸ್ಥಳೀಯರ ಆಕ್ರೋಶ
- Technology
PVRನಿಂದ ಭರ್ಜರಿ ಸಿಹಿಸುದ್ದಿ; ಸಿನಿಮಾ ಪ್ರಿಯರ ಕಣ್ಣಿಗೆ ಹಬ್ಬದ ಸಂಭ್ರಮ!
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೊದಲ ಮಗುವಿನ ನಿರೀಕ್ಷೆಯಲ್ಲಿ ಆಲಿಯಾ-ರಣ್‌ಬೀರ್: ಬೇಬಿ ಕಮಿಂಗ್ ಸೂನ್ ಎಂದ ನಟಿ!
ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ವಾರದ ಮೊದಲ ದಿನವೇ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಅದೇನಪ್ಪಾ ಅಂದ್ರೆ, ಬಾಲಿವುಡ್‌ನ ಸ್ಟಾರ್ ಜೋಡಿ ಆಲಿಯಾ ಹಾಗೂ ರಣ್‌ಬೀರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿಯನ್ನು ಆಲಿಯಾ ತನ್ನ ಇನ್‌ಸ್ಟಾಗ್ರಾಂನಲ್ಲಿ ಅನೌನ್ಸ್ ಮಾಡಿದ್ದಾರೆ. ಸಿಹಿ ಸುದ್ದಿ ನೀಡಿದ ಆಲಿಯಾ ಭಟ್ ಹಾಗೂ ರಣ್‌ಬೀರ್‌ಗೆ ಇಡೀ ಬಾಲಿವುಡ್ ಶುಭ ಕೋರುತ್ತಿದೆ.
ಥೈಲ್ಯಾಂಡ್
ಜನರ
ಮನಗೆದ್ದ
'ಗಂಗೂಬಾಯಿ':
ಬಾಲಿವುಡ್
ಸಿನಿಮಾ
ಗೆದ್ದಿದ್ದೇಗೆ?
ಬಾಲಿವುಡ್‌ನ ಈ ಸ್ಟಾರ್ ಜೋಡಿ ಇದೇ ಏಪ್ರಿಲ್ 14ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಇಂದು ( ಜೂನ್ 27) ರಂದು ಆಲಿಯಾ ಭಟ್ ತಾನು ಗರ್ಭಿಣಿಯಾಗಿರುವ ವಿಷಯವನ್ನು ಫೋಟೊ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿ ಆಲಿಯಾ-ರಣ್‌ಬೀರ್
ಸೋಮವಾರ ( ಜೂನ್ 27) ಬೆಳ್ಳಂಬೆಳಗ್ಗೆ ಆಲಿಯಾ ಭಟ್ ಸಿಹಿ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ವೈರಲ್ ಆಗುತ್ತಿದೆ. ಆಸ್ಪತ್ರೆಯಲ್ಲಿ ಅಲ್ಟ್ರಾ ಸೌಂಡ್ ಮಾಡಿಸುತ್ತಿರುವ ಫೋಟೊವನ್ನು ಆಲಿಯಾ ಭಟ್ ಶೇರ್ ಮಾಡಿದ್ದು, " ಅವರ್ ಬೇಬಿ ಕಮಿಂಗ್ ಸೂನ್" ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಸಿಂಹಗಳ ಜೊತೆ ಸಿಂಹದ ಮರಿ ಇರುವ ಫೋಟೊ ಕೂಡ ಶೇರ್ ಮಾಡಿದ್ದಾರೆ. ಆದರೆ, ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ.
'ಡಾರ್ಲಿಂಗ್
ಪ್ರಭಾಸ್
ನನ್ನ
ಫೇವರಿಟ್
ಆಕ್ಟರ್'
ಎಂದ
ರಣ್‌ಬೀರ್
ಕಪೂರ್
ಆಲಿಯಾ ಹೆಚ್ಚಿನ ಮಾಹಿತಿ ನೀಡಿಲ್ಲ
ಆಲಿಯಾ ಭಟ್ ಹಾಗೂ ರಣ್‌ಬೀರ್ ಕಪೂರ್ ಇಬ್ಬರೂ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದಾರಷ್ಟೇ. ಆದರೆ, ಹೆಚ್ಚಿನ ಮಾಹಿತಿಯನ್ನು ಶೇರ್ ಮಾಡಿಲ್ಲ. ಉಳಿದ ಎಲ್ಲಾ ಮಾಹಿತಿಯನ್ನು ಗುಟ್ಟಾಗಿಟ್ಟಿದ್ದಾರೆ. ರಣ್‌ಬೀರ್ ಹಾಗೂ ಆಲಿಯಾ ಇಬ್ಬರೂ ಏಪ್ರಿಲ್ 14ರಂದು ಕೇವಲ ತಮ್ಮ ಕುಟುಂಬ ಹಾಗೂ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾದ ಎರಡು ತಿಂಗಳಲ್ಲಿ ಪ್ರೆಗ್ನೆನ್ಸಿಯನ್ನು ಅನೌನ್ಸ್ ಮಾಡಿದ್ದಾರೆ. ಬಾಂದ್ರಾದಲ್ಲಿರುವ ಆಲಿಯಾ ಮನೆಯಲ್ಲಿ ಖುಷಿ ಮನೆ ಮಾಡಿದೆ.

'ಶಂಶೇರಾ' ಪ್ರೆಸ್ ಮೀಟ್‌ನಲ್ಲಿ ರಣ್‌ಬೀರ್ ಹಿಂಟ್
'ಶಂಶೇರಾ' ಸಿನಿಮಾ ಪ್ರಮೋಷನ್ ಮಾಡುವ ವೇಳೆ ರಣ್‌ಬೀರ್ ಕಪೂರ್ ಹಿಂಟ್ ಕೊಟ್ಟಿದ್ದರು ಎನ್ನಲಾಗಿದೆ. ಮದುವೆ ಬಳಿಕ ಎಷ್ಟು ಸಿನಿಮಾ ಮಾಡುತ್ತಿದ್ದಾರೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ರಣ್‌ಬೀರ್ ಮಾರ್ಮಿಕವಾಗಿ ಉತ್ತರಿಸಿದ್ದರು. ಅದೂ ಕೂಡ ವೈರಲ್ ಆಗಿದೆ. " ನಾನು ಈಗ ತುಂಬಾನೇ ಕೆಲಸ ಮಾಡಬೇಕಿದೆ. ಕುಟುಂಬ ನೋಡಿಕೊಳ್ಳಬೇಕು. ಅವರಿಗಾಗಿ ಕೆಲಸ ಮಾಡಬೇಕಿದೆ. ಇದಕ್ಕೂ ಮೊದಲು ನಾನು ನನಗೋಸ್ಕರ ಕೆಲಸ ಮಾಡುತ್ತಿದ್ದೆ." ಎಂದು ರಣ್‌ಬೀರ್ ಕಪೂರ್ ಹೇಳಿದ್ದರು.
ವಿಶಾಖಪಟ್ಟಣದಲ್ಲಿ
ರಣ್‌ಬೀರ್
ಜೊತೆ
ರಾಜಮೌಳಿ:
'ಬ್ರಹ್ಮಾಸ್ತ್ರ'ದ
ಭರ್ಜರಿ
ಪ್ರಚಾರ!

ಆಲಿಯಾ ಒಪ್ಪಿಕೊಂಡ ಸಿನಿಮಾಗಳ ಕಥೆಯೇನು?
ಆಲಿಯಾ ಭಟ್ ಈಗಾಗಲೇ ಹಾಲಿವುಡ್ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಹಿಂದಿಯಲ್ಲಿ 'ಬ್ರಹ್ಮಾಸ್ತ್ರ' ಬಿಡುಗಡೆಗೆ ಸಜ್ಜಾಗಿದೆ. ಇನ್ನೊಂದ್ಕಡೆ 'ರಾಕಿ ಔರ್ ರಾಣಿ ಕಿ ಕಹಾನಿ' ಸಿನಿಮಾ ಶೂಟಿಂಗ್ ಹಂತದಲ್ಲಿದೆ. ಹೀಗಾಗಿ ಈ ಸಿನಿಮಾಗಳ ಕಥೆಯೇನು? ಹೆರಿಗೆ ನಂತರವೂ ಸಿನಿಮಾಗಳಲ್ಲಿ ನಟಿಸುತ್ತಾರಾ? ಅನ್ನೋ ವಿಚಾರಕ್ಕೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.