For Quick Alerts
  ALLOW NOTIFICATIONS  
  For Daily Alerts

  ದೀಪಿಕಾ-ರಣ್ವೀರ್ ಸಿಂಗ್ ಬಗ್ಗೆ ಅನಿಲ್ ಕಪೂರ್ ಬೇಸರ.! ಯಾಕೆ.?

  |

  ಅಂತೂ ಬಾಲಿವುಡ್ ನ ದಿ ಮೋಸ್ಟ್ ಬ್ಯೂಟಿಫುಲ್ ಜೋಡಿ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಂದು ಇಟಲಿಯ ಲೇಕ್ ಕೋಮೋದಲ್ಲಿ ದೀಪಿಕಾ-ರಣ್ವೀರ್ ವಿವಾಹ ಮಹೋತ್ಸವ ಕೊಂಕಣಿ ಸಂಪ್ರದಾಯದಂತೆ ಜರುಗಿತು.

  ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ಮದುವೆಗೆ ಸಾಕ್ಷಿ ಆದರು. 'ವಧು-ವರ'ನಾಗಿ ದೀಪಿಕಾ-ರಣ್ವೀರ್ ಹೇಗೆ ಕಾಣ್ತಿದ್ದಾರೆ ಎಂಬುದನ್ನ ಕಣ್ತುಂಬಿಕೊಳ್ಳಲು ಅಭಿಮಾನಿಗಳಂತೂ ಕಾತುರದಿಂದ ಕಾಯುತ್ತಿದ್ದಾರೆ.

  ಹೀಗಿರುವಾಗಲೇ, ದೀಪಿಕಾ ಮತ್ತು ರಣ್ವೀರ್ ಬಗ್ಗೆ ಅನಿಲ್ ಕಪೂರ್ ಬೇಸರಗೊಂಡಿದ್ದಾರೆ. ರಣ್ವೀರ್-ದೀಪಿಕಾ ಮದುವೆ ಬಗ್ಗೆ ಅನಿಲ್ ಕಪೂರ್ ಅಪ್ ಸೆಟ್ ಆಗಿದ್ದಾರೆ. ಯಾಕೆ.? ಅಂಥದ್ದು ಏನಾಯ್ತು.? ಅಂದ್ರಾ.. ಫೋಟೋ ಸ್ಲೈಡ್ ಗಳಲ್ಲಿ ಓದಿರಿ... ನಿಮಗೆ ಗೊತ್ತಾಗುತ್ತೆ....

  ಅನಿಲ್ ಕಪೂರ್ ಗೆ ಆಹ್ವಾನ ಇಲ್ಲ.!

  ಅನಿಲ್ ಕಪೂರ್ ಗೆ ಆಹ್ವಾನ ಇಲ್ಲ.!

  ರಣ್ವೀರ್ ಸಿಂಗ್ ಹಾಗೂ ಅನಿಲ್ ಕಪೂರ್ ಸಂಬಂಧಿಗಳು. ಹೀಗಿದ್ದರೂ, ಮದುವೆ ಸಮಾರಂಭದಲ್ಲಿ ಭಾಗವಹಿಸಲು ಕಪೂರ್ ಕುಟುಂಬಕ್ಕೆ ಆಹ್ವಾನ ನೀಡದೇ ಇರುವುದಕ್ಕೆ ರಣ್ವೀರ್ ಹಾಗೂ ದೀಪಿಕಾ ಮೇಲೆ ಅನಿಲ್ ಕಪೂರ್ ಮುನಿಸಿಕೊಂಡಿದ್ದಾರೆ.

  ಕೊಂಕಣಿ ಸಂಪ್ರದಾಯದಂತೆ ದಾಂಪತ್ಯಕ್ಕೆ ಅಡಿ ಇಟ್ಟ ದೀಪಿಕಾ-ರಣ್ವೀರ್

  ಅರಿಶಿನ ಶಾಸ್ತ್ರಕ್ಕೆ ಕರೆಯಲಿಲ್ಲ.!

  ಅರಿಶಿನ ಶಾಸ್ತ್ರಕ್ಕೆ ಕರೆಯಲಿಲ್ಲ.!

  ಮುಂಬೈನಲ್ಲಿ ನಡೆದ ರಣ್ವೀರ್ ಸಿಂಗ್ ಅರಿಶಿನ ಶಾಸ್ತ್ರಕ್ಕೂ ಕಪೂರ್ ಕುಟುಂಬಕ್ಕೆ ಆಹ್ವಾನ ಇರಲಿಲ್ಲ. ಹಾಗ್ನೋಡಿದ್ರೆ, ಅರಿಶಿನ ಶಾಸ್ತ್ರಕ್ಕೆ ಕಾಸ್ಟಿಂಗ್ ಡೈರೆಕ್ಟರ್ ಗಳನ್ನೆಲ್ಲ ಕರೆಯಲಾಗಿತ್ತು. ಆದ್ರೆ, ಕಪೂರ್ ಕುಟುಂಬವನ್ನ ಅವಾಯ್ಡ್ ಮಾಡಿದ್ದಕ್ಕೆ ಅನಿಲ್ ಕಪೂರ್ ಬೇಸರಗೊಂಡಿದ್ದಾರೆ.

  ಕೊಂಕಣಿ ಸಂಪ್ರದಾಯದಂತೆ ಉಂಗುರ ಬದಲಿಸಿಕೊಂಡ ದೀಪಿಕಾ-ರಣ್ವೀರ್

  ಯಾರನ್ನೂ ಕರೆದಿಲ್ವಂತೆ.!

  ಯಾರನ್ನೂ ಕರೆದಿಲ್ವಂತೆ.!

  ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ, ನಿರ್ದೇಶಕಿ ಫರಾ ಖಾನ್, ನಟ ಶಾರುಖ್ ಖಾನ್ ಮತ್ತು ಕರಣ್ ಜೋಹರ್ ಮನೆಗೆ ದೀಪಿಕಾ-ರಣ್ವೀರ್ ಭೇಟಿ ಕೊಟ್ಟಿದ್ದು ಮದುವೆಗೆ ಆಹ್ವಾನ ನೀಡಲು ಅಲ್ವಂತೆ. ಬದಲಾಗಿ, ಎಲ್ಲರ ಆಶೀರ್ವಾದ ಪಡೆಯಲು ಎಂದು ವರದಿ ಆಗಿದೆ.

  ಫೋಟೋ ನೋಡಿ: ಅರಿಶಿಣ ಶಾಸ್ತ್ರ ಮುಗಿಸಿದ ರಣ್ವೀರ್ ಸಿಂಗ್

  40 ಜನರು ಭಾಗಿ

  40 ಜನರು ಭಾಗಿ

  ನಿನ್ನೆಯಷ್ಟೇ ಇಟಲಿಯಲ್ಲಿ ದೀಪಿಕಾ-ರಣ್ವೀರ್ ನಿಶ್ಚಿತಾರ್ಥ ನಡೆಯಿತು. ಜೊತೆಗೆ ಮೆಹಂದಿ ಮತ್ತು ಸಂಗೀತ ಕಾರ್ಯಕ್ರಮ ಕೂಡ ಜರುಗಿತು. ಇಂದು ಕೊಂಕಣಿ ಸಂಪ್ರದಾಯದಂತೆ ದೀಪಿಕಾ-ರಣ್ವೀರ್ ಮದುವೆ ಆದರು. ಕುಟುಂಬಸ್ಥರು ಸೇರಿದಂತೆ ಕೇವಲ 40 ಜನರು ಮಾತ್ರ ದೀಪಿಕಾ-ರಣ್ವೀರ್ ಮದುವೆಗೆ ಸಾಕ್ಷಿಯಾದರು ಎನ್ನಲಾಗಿದೆ.

  ಫೋಟೋ ನೋಡಿ: ದೀಪಿಕಾ ಪಡುಕೋಣೆ ಮನೆಯಲ್ಲಿ ಮದುವೆ ಸಂಭ್ರಮ ಶುರು

  Read in English:
  English summary
  Anil Kapoor is deeply hurt with Deepika Padukone and Ranveer Singh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X