Don't Miss!
- Sports
ರಿಷಭ್ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ: ಈ ವಾರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಸಾಧ್ಯತೆ
- News
Mangaluru cooker blast: ಸುಟ್ಟಗಾಯಗಳಿಂದ ಚೇತರಿಸಿಕೊಂಡ ಆರೋಪಿಯನ್ನು ವಶಕ್ಕೆ ಪಡೆಯಲಿರುವ ಎನ್ಐಎ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಲ್ಮಾನ್ ಖಾನ್ ಮನೆಯಲ್ಲಿ ಶುರುವಾಗಿತ್ತು ಅರ್ಜುನ್-ಮಲೈಕಾ ಲವ್! ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ
ಬಾಲಿವುಡ್‌ನಲ್ಲಿ ಅತೀ ಹೆಚ್ಚು ಚರ್ಚೆಯಲ್ಲಿರುವ ಲವ್ ಸ್ಟೋರಿ ಅಂದರೆ ಅದು ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್. 2018ರಲ್ಲಿ ಇವರಿಬ್ಬರು ಡೇಟಿಂಗ್ ಮಾಡುತ್ತಿರೋ ಬಗ್ಗೆ ಮೊದಲು ಸುದ್ದಿಯಾಗಿತ್ತು. ಆಗ ಅಚ್ಚರಿಗೆ ಕಾರಣವಾಗಿದ್ದು ಸುಮಾರು 12 ವರ್ಷಗಳ ವಯಸ್ಸಿನ ಅಂತರ. ಅಂದಿನಿಂದ ಇಂದಿನ ವರೆಗೂ ಈ ಜೋಡಿ ಲವ್ ಸ್ಟೋರಿ ಬೇಜಾನ್ ಸದ್ದು ಮಾಡುತ್ತಲೇ ಇದೆ.
ಅರ್ಜುನ್ ಕಪೂರ್ ಇತ್ತೀಚೆಗೆ 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅರ್ಜುನ್ ಹುಟ್ಟುಹಬ್ಬವನ್ನು ಸೆಲೆಬ್ರೆಟ್ ಮಾಡಲು ಇವರಿಬ್ಬರೂ ಪ್ಯಾರಿಸ್‌ಗೆ ಹೋಗಿದ್ದಾರೆ. ಸಿಟಿ ಆಫ್ ರೊಮ್ಯಾಮ್ಸ್ ಎಂದೇ ಜನಪ್ರಿಯವಾಗಿರುವ ಪ್ಯಾರಿಸ್‌ನಲ್ಲಿ ಈ ಜೋಡಿ ರೊಮ್ಯಾಂಟಿಕ್ ಮೂಡಿಗೆ ಜಾರಿದೆ.
ಸಲ್ಲು
ಫ್ಯಾಮಿಲಿಯಲ್ಲಿ
ಮತ್ತೊಂದು
ವಿಚ್ಛೇದನ,
ಸೋಹೈಲ್-ಸೀಮಾ
ದೂರ
ಈ ವಿಶೇಷ ಲವ್ ಸ್ಟೋರಿಯನ್ನು ಬಾಲಿವುಡ್ ಅಚ್ಚರಿಯಿಂದ ನೋಡಿಲ್ಲ. ಆದರೆ, ಸಿನಿಪ್ರಿಯರಿಗೆ ಈ ಲವ್ ಸ್ಟೋರಿ ವಿಶೇಷ ಅಂತ ಅನಿಸಿದೆ. ಅದಕ್ಕೆ ಕಾರಣ ಹಲವು. ಅಸಲಿಗೆ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಾ? ಯಾವಾಗ ಮದುವೆ ಆಗಬಹುದು? ಅವರು ಹೇಗೆ ಮದುವೆ ಆಗಬಹುದು ಅನ್ನೋ ಕುತೂಹಲವಂತೂ ಇದ್ದೇ ಇದೆ. ಆದರೆ, ಅದಕ್ಕೂ ಮುನ್ನ ಅರ್ಜುನ್ ಹಾಗೂ ಮಲೈಕಾ ಮಧ್ಯೆ ಲವ್ ಆಗಿದ್ದೇ ಒಂದು ಇಂಟ್ರೆಸ್ಟಿಂಗ್ ಸ್ಟೋರಿ.

ಸಲ್ಮಾನ್ ಮನೆಯಲ್ಲೇ ಲವ್
ಆಗಿನ್ನೂ ಅರ್ಜುನ್ ಕಪೂರ್ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿರಲಿಲ್ಲ. ಮೊದಲ ಸಿನಿಮಾಗೆ ತಯಾರಿ ಮಾಡಿಕೊಳ್ಳುತ್ತಿದ್ದರು. ಆಗ ಫಿಟ್ನೆಸ್ ಮತ್ತು ಆಕ್ಟಿಂಗ್ ಬಗ್ಗೆ ಸಲಹೆ ಪಡೆಯಲು ಆಗಾಗ ಸಲ್ಮಾನ್ ಖಾನ್ ಮನೆಗೆ ಹೋಗುತ್ತಿದ್ದರು. ಆ ವೇಳೆ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಜೊತೆ ಅಫೇರ್ ಶುರುವಾಗಿತ್ತು. ಆದರೆ, ಅದು ದಿಢೀರನೇ ಬ್ರೇಕಪ್ ಆಯ್ತು. ಬಳಿಕ ಎಲ್ಲವೂ ನಾರ್ಮಲ್ ಆಗಿಯೇ ಇತ್ತು. ಅದ್ಯಾವಾಗ ಮಲೈಕಾ ಹಾಗೂ ಅರ್ಬಾಜ್ ಖಾನ್ ನಡುವೆ ವಿಚ್ಛೇದನಕ್ಕೆ ಮುಂದಾದರೋ ಆಗಲೇ ಮಲೈಕಾ ಜೊತೆ ಅರ್ಜುನ್ ಹೆಸರು ಕೇಳಿಬಂದಿತ್ತು.
ಮಲೈಕಾ
ಅರೋರಾ,
ಅರ್ಜುನ್
ಕಪೂರ್
ಪ್ರೇಮಿಗಳ
ದಿನ
ಸ್ಪೆಷಲ್
ಸೆಲೆಬ್ರೆಷನ್!

ಮಲೈಕಾ ನೋಡಲೆಂದೇ ಸಲ್ಲು ಮನೆಗೆ ವಿಸಿಟ್
ಬಾಲಿವುಡ್‌ನ ಇನ್ನೊಂದು ಮೂಲಗಳ ಪ್ರಕಾರ, ಮಲೈಕಾ ಅರೋರಾರನ್ನು ಪಟಾಯಿಸಿಕೊಳ್ಳಲೆಂದೇ ಸಲ್ಮಾನ್ ಖಾನ್ ಮನೆಗೆ ಅರ್ಜುನ್ ಕಪೂರ್ ವಿಸಿಟ್ ಹಾಕುತ್ತಿದ್ದ. ಅರ್ಪಿತಾ ಫ್ರೆಂಡ್‌ಶಿಪ್ ಮಾಡಿಕೊಂಡು ಭೇಟಿ ನೀಡುತ್ತಿದ್ದ ಎಂದಿವೆ. ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡುವುದಕ್ಕೂ ಮುನ್ನವೇ ಮಲೈಕಾ ಅರೋರಾ ಮೇಲೆ ಅರ್ಜುನ್‌ಗೆ ಮನಸಾಗಿತ್ತು. ಹೀಗಾಗಿ ಅವರನ್ನು ಪಟಾಯಿಸಲೆಂದೇ ಅಲ್ಲಿಗೆ ಹೋಗುತ್ತಿದ್ದ ಅರ್ಜುನ್ ಕಪೂರ್ ಅನ್ನೋ ಮಾತು ಕೂಡ ಇದೆ. ಆದರೆ, ಇದ್ಯಾವುದನ್ನೂ ಇಬ್ಬರೂ ಎಲ್ಲೂ ಹೇಳಿಕೊಂಡಿಲ್ಲ.

ಮಲೈಕಾ ಮನೆ ಮುಂದೆ ಪ್ರತ್ಯಕ್ಷ
ಮಲೈಕಾ ಅರೋರಾ ಮಾಜಿ ಪತಿ ಅರ್ಬಾಜ್ ಖಾನ್ ಮನೆ ತೊರೆದು ಪ್ರತ್ಯೇಕವಾಗಿ ನೆಲೆಸಲು ಆರಂಭಿಸಿದ್ದರು. ಆ ಬಳಿಕ ಒಂದು ದಿನ ಮಧ್ಯರಾತ್ರಿ ಅರ್ಜುನ್ ಕಪೂರ್ ಇದೇ ಮಲೈಕಾ ಮನೆಗೆ ಭೇಟಿ ನೀಡಿದ್ದ. ಅದನ್ನು ಫೋಟೊಗ್ರಾಫರ್‌ಗಳು ಕ್ಯಾಮರಾದಲ್ಲಿ ಸೆರೆಹಿಡಿದಿದ್ದರು. ಇಲ್ಲಿಂದ ಬಾಲಿವುಡ್‌ನಲ್ಲಿ ಮೊದಲು ಇಬ್ಬರ ಲವ್ ಸ್ಟೋರಿಗೆ ಪುರಾವೆ ಸಿಕ್ಕಂತಾಗಿತ್ತು.
ಬ್ರೇಕಪ್
ಗಾಳಿಸುದ್ದಿ
ಬಳಿಕ
ಒಟ್ಟಿಗೆ
ಕಾಣಿಸಿಕೊಂಡ
ಮಲೈಕಾ
ಅರೋರಾ-ಅರ್ಜುನ್
ಕಪೂರ್:
ಫೋಟೊ
ವೈರಲ್

ಲವ್ ಸ್ಟೋರಿ ಬಹಿರಂಗ
ಗಾಳಿ ಸುದ್ದಿಗಳು ಜೋರಾಗಿ ಹಬ್ಬುತ್ತಿದ್ದಂತೆ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಕೈ ಕೈ ಹಿಡಿದುಕೊಂಡಿದ್ದ ಫೋಟೊ ರಿವೀಲ್ ಆಗಿತ್ತು. ಇಲ್ಲಿಂದ ಫ್ಯಾಷನ್ ಶೋ, ಪಾರ್ಟಿಗಳು, ರಿಯಾಲಿಟಿ ಶೋಗಳಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದರು. ಈಗ ಹೆಚ್ಚು ಹಾಲಿಡೇ ಟ್ರಿಪ್‌ಗಳಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ.

ಮದುವೆ ಬಗ್ಗೆ ಈ ಜೋಡಿ ಹೇಳೋದೇನು?
ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಇದೂವರೆಗೂ ಮದುವೆ ಬಗ್ಗೆ ಮಾತಾಡುತ್ತಿಲ್ಲ. ಹಾಲಿಡೇ, ಪಾರ್ಟಿ ಅಂತ ಎಂಜಾಯ್ ಮಾಡಿಕೊಂಡಿದೆ. ಆದರೆ, ಫ್ಯಾಷನ್ ಶೋವೊಂದರಲ್ಲಿ ಮಲೈಕಾ ವೈಟ್ ವೆಡ್ಡಿಂಗ್ ತನಗೆ ಇಷ್ಟ ಎಂದು ಹೇಳಿದ್ದರು. ಈ ಕಾರಣಕ್ಕೆ ಯಾವಾಗ ಬೇಕಾದರೂ ಈ ಜೋಡಿ ಮದುವೆ ಆಗಬಹುದು. ಇಲ್ಲಾ ಹೀಗೆ ಮುಂದುವರೆಯಲೂಬಹುದು.