For Quick Alerts
  ALLOW NOTIFICATIONS  
  For Daily Alerts

  ಹಿಂದಿಯಲ್ಲಿ ಸೌತ್ ಚಿತ್ರಗಳ ಯಶಸ್ಸು ನನಗೆ ಅಚ್ಚರಿಯಲ್ಲ: ಅನಿಲ್ ಕಪೂರ್!

  |

  ಸದ್ಯ 'ಕೆಜಿಎಫ್ 2' ಚಿತ್ರದ ಬಗ್ಗೆ ಎಲ್ಲೆಲ್ಲೂ ಸಂಚಲನ ಸೃಷ್ಟಿ ಆಗಿದೆ. ಈ ಚಿತ್ರ ಮಾಡುತ್ತಿರುವ ದಾಖಲೆಗಳು ಎಲ್ಲರನ್ನು ಮಾತನಾಡಿಸುತ್ತಿದೆ. ಅದರಲ್ಲೂ ಬಾಲಿವುಡ್‌ನಲ್ಲಿ 'ಕೆಜಿಎಫ್ 2' ಚಿತ್ರ ಮಾಡಿದ ದಾಖಲೆ ಸಾಮಾನ್ಯವೇನಲ್ಲ. ಇದರಿಂದ ಬಾಲಿವುಡ್‌ನಲ್ಲಿ ಒಂದಷ್ಟು ಮಂದಿ ತಲೆ ಕೆಡಿಸಿಕೊಂಡರೆ, ಮತ್ತೊಂದಷ್ಟು ಮಂದಿ ಈ ಸಕ್ಸಸ್ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.

  ಬಾಲಿವುಡ್‌ನಲ್ಲಿ ಹಲವು ತಾರೆಯರು 'ಕೆಜಿಎಫ್ 2' ಚಿತ್ರದ ಬಗ್ಗೆ ಮಾತನಾಡುತ್ತಿದ್ದಾರೆ. ಚಿತ್ರದ ಯಶಸ್ಸಿನ ಬಗ್ಗೆ ಹಲವು ಹೇಳಿಕೆ ನೀಡುತ್ತಿದ್ದಾರೆ. 'ಕೆಜಿಎಫ್ 2' ಮಾತ್ರವಲ್ಲಾ 'ಪುಷ್ಪ', 'RRR' ಚಿತ್ರಗಳು ಸಾಲಾಗಿ ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿವೆ. ಬಾಲಿವುಡ್ ಚಿತ್ರಗಳೇ ನಾಚುವಂತೆ ಕೋಟಿ, ಕೋಟಿ ಲೂಟಿ ಮಾಡಿ ದಾಖಲೆ ಬರೆದಿವೆ. ಹಾಗಾಗಿ ಬಾಲಿವುಡ್ ಮಂದಿ ಈ ಬಗ್ಗೆ ಲೆಕ್ಕಾಚಾರ ಶುರು ಮಾಡಿದ್ದಾರೆ.

  ಶಾರುಖ್ ಖಾನ್ ಹೊಸ ಸಿನಿಮಾ 'ಡಂಕಿ', ರಾಜ್‌ಕುಮಾರ್ ಹಿರಾನಿ ಸಾರಥ್ಯ! ಶಾರುಖ್ ಖಾನ್ ಹೊಸ ಸಿನಿಮಾ 'ಡಂಕಿ', ರಾಜ್‌ಕುಮಾರ್ ಹಿರಾನಿ ಸಾರಥ್ಯ!

  ಸೌತ್ ಚಿತ್ರಗಳ ಕುರಿತು ನಟ ಅನಿಲ್ ಕಪೂರ್ ಮಾತನಾಡಿದ್ದಾರೆ. ಸಂದರ್ಶನ ಒಂದರಲ್ಲಿ ಸೌತ್ ಚಿತ್ರಗಳ ಬಗ್ಗೆ, ಸೌತ್ ಚಿತ್ರಗಳ ಯಶಸ್ಸಿನ ಬಗ್ಗೆ ಮಾತನಾಡಿದ್ದು, ದಕ್ಷಿಣ ಭಾರತೀಯ ಚಿತ್ರಗಳು ಸದಾ ಉತ್ತಮವಾಗಿ ಇರುತ್ತವೆ ಎಂದು ಹೇಳಿದ್ದಾರೆ.

  " ದಕ್ಷಿಣ ಭಾರತದಲ್ಲಿ ಸದಾ ಉತ್ತಮ ಸಿನಿಮಾಗಳನ್ನು ಮಾಡುತ್ತಾರೆ. ಸೌತ್ ಚಿತ್ರಗಳು ಇಲ್ಲಿ ರಿಮೇಕ್ ಆಗಿ ಹಿಟ್ ಆಗಿವೆ. ಅಲ್ಲಿ ಅತ್ಯುತ್ತಮ ಚಿತ್ರಗಳನ್ನು ಮಾಡಲಾಗುತ್ತದೆ. ನಾನು ನನ್ನ ಸಿನಿಮಾ ಜರ್ನಿಯನ್ನು ತೆಲುಗು ಚಿತ್ರದಿಂದ ಆರಂಭಿಸಿದೆ. ಅಲ್ಲಿಂದ ನಾನು ವೃತ್ತಿಪರತೆಯನ್ನು ಕಲಿತಿದ್ದೇನೆ. ನಂತರ ನಾನು ಕನ್ನಡದ ಒಂದು ಚಿತ್ರದಲ್ಲಿ ಅಭಿನಯಿಸಿದ್ದೇನೆ." ಎಂದಿದ್ದಾರೆ ಅನಿಲ್ ಕಪೂರ್.

  "ಬಳಿಕ ನಾನು ಹಲವು ಚಿತ್ರಗಳನ್ನು ಮಾಡಿದ್ದೇನೆ. 'ರಕ್ವಾಲಾ', 'ಇನ್ಸಾಫ್ ಕಿ ಆವಾಜ್', 'ಹಮ್ ಆಪ್ಕೆ ದಿಲ್ ಮೆ ರೆಹ್ತೇ', 'ಅಮಾರ್ ದಿಲ್ ಆಪ್ಕೆ ಪಾಸ್‌ ಹೈ' ಸೇರಿದಂತೆ ಹಲವು ಚಿತ್ರಗಳು ಸೌತ್ ಚಿತ್ರಗಳ ಸ್ಫೂರ್ತಿಯೇ ಆಗಿವೆ. ಈ ಚಿತ್ರಗಳು ಸೂಪರ್ ಹಿಟ್ ಆಗಿವೆ." ಅಂತ ಅನಿಲ್ ಕಪೂರ್ ಹೇಳಿದ್ದಾರೆ.

  Bollywood Star Anil Kapoor Talk About South Films And Says South Is Always Good

  ಇನ್ನು ಮಾತು ಮುಂದುವರೆಸಿದ ಅನಿಲ್ ಕಪೂರ್. "ನಾನು ಅಲ್ಲಿನ ತಂತ್ರಜ್ಞರು, ದೂರ ದೃಷ್ಟಿಯುಳ್ಳ ನಿರ್ದೇಶಕರಿಂದ ಸದಾ ಸ್ಪೂರ್ತಿ ಪಡೆಯುತ್ತೇನೆ. ಈಗಿನ ದೊಡ್ಡ ಯಶಸ್ಸಿನಿಂದ ನನಗೆ ಅಚ್ಚರಿಯಾಗಿಲ್ಲ." ಎಂದಿದ್ದಾರೆ ಅನಿಲ್ ಕಪೂರ್.

  'ಕೆಜಿಎಫ್ 2' ನೋಡ, ನೋಡುತ್ತಿದ್ದಂತೆಯೇ ದಾಖಲೆಯ ಸುರಿಮಳೆ ಸುರಿಸುತ್ತಿದೆ. ಅದರಲ್ಲೂ ಹಿಂದಿ ಮಂದಿಗೆ 'ಕೆಜಿಎಫ್ 2' ದೊಡ್ಡ ಶಾಕ್ ಕೊಟ್ಟಿದೆ. ಚಿತ್ರ ರಿಲೀಸ್ ಆದ 5 ದಿನಕ್ಕೆ ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ 200 ಕೋಟಿ ಗಳಿಕೆ ಮಾಡಿ ದಾಖಲೆ ಬರೆದಿದೆ. ಇದು ಹಿಂದಿಯಲ್ಲಿ ಅತಿ ವೇಗವಾಗಿ ಗಳಿಕೆ ಮಾಡಿದ ಚಿತ್ರ ಎನಿಸಿಕೊಂಡಿದೆ. ಈ ಬಗ್ಗೆ ಟ್ರೇಡ್ ವಿಶ್ಲೇಶಕರು ಟ್ವಿಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

  ಬಾಲಿವುಡ್‌ನಲ್ಲಿ ಹಿಂದಿ ಚಿತ್ರಗಳು ಮಾಡಿದ ದಾಖಲೆಯನ್ನು ಮುರಿದು ಹೊಸ ಇತಿಹಾಸ ಮಾಡಿದೆ 'ಕೆಜಿಎಫ್ 2'. ಹಿಂದಿಯಲ್ಲಿ ದೊಡ್ಡ ಓಪನಿಂಗ್ ಪಡೆದುಕೊಂಡ ಚಿತ್ರ ಅಂದರೆ ಅದು ಟೈಗರ್‌ ಶ್ರಾಫ್, ಹೃತಿಕ್ ರೋಷನ್ ಅಭಿನಯದ 'ವಾರ್'. ಈ ಚಿತ್ರ 51.60 ಕೋಟಿ ಓಪನಿಂಗ್ ಪಡೆದುಕೊಂಡು ದಾಖಲೆ ಬರೆದಿತ್ತು. ಆದರೆ ಈಗ 'ಕೆಜಿಎಫ್ 2', 53.95 ಕೋಟಿ ಗಳಿಕೆ ಮಾಡಿ 'ವಾರ್' ಸಿನಿಮಾದ ದಾಖಲೆಯನ್ನು ಮುರಿದಿದೆ. ಈ ಮೂಲಕ 'ಕೆಜಿಎಫ್ 2' ನಂಬರ್ 1 ಪಟ್ಟಕ್ಕೇರಿದೆ.

  English summary
  Bollywood Star Anil Kapoor Talk About South Films And Says South Is Always Good, Know More About It
  Thursday, April 21, 2022, 9:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X