»   » 'ಕಾಮಿಡಿ ನೈಟ್ಸ್' ಕಪಿಲ್ ಶರ್ಮಾ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲು

'ಕಾಮಿಡಿ ನೈಟ್ಸ್' ಕಪಿಲ್ ಶರ್ಮಾ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲು

Posted By:
Subscribe to Filmibeat Kannada

'ಕಾಮಿಡಿ ನೈಟ್ಸ್' ಖ್ಯಾತಿಯ ಕಪಿಲ್ ಶರ್ಮಾ ಆಸ್ಪತ್ರೆ ಸೇರಿದ್ದಾರೆ. ಚಿತ್ರೀಕರಣದ ವೇಳೆ ರಕ್ತದೊತ್ತಡ ಇಳಿಕೆಯಿಂದ ಅಸ್ವಸ್ಥಗೊಂಡ ಕಪಿಲ್ ಅವರನ್ನ ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.['ಕಾಮಿಡಿ ನೈಟ್ಸ್' ಅಭಿಮಾನಿಗಳಿಗೆ ಒಂದು ಕಹಿ ಸುದ್ದಿ]

ಪರೇಶ್ ರಾವಲ್ ಅಭಿನಯದ 'ಗೆಸ್ಟ್ ಇನ್ ಲಂಡನ್' ಚಿತ್ರದ ಎಪಿಸೋಡ್ ಚಿತ್ರೀಕರಣ ನಡೆಯುತ್ತಿತ್ತು. ಈ ಸಂಧರ್ಭದಲ್ಲಿ ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡ ಕಪಿಲ್ ಶರ್ಮಾಗೆ ಉಸಿರಾಟ ತೊಂದರೆ ಉಂಟಾಯಿತು. ಈ ವೇಳೆ ಅವರನ್ನ ಆಸ್ಪತ್ರೆಗೆ ಸೇರಿಸಲಾಯಿತು ಎಂದು ತಿಳಿದುಬಂದಿದೆ.[ಕಪಿಲ್ ಶೋ'ನಿಂದ ಹೊರಬಂದ ಸುನಿಲ್ ಗ್ರೋವರ್ ಹೊಸ 'ಕಾಮಿಡಿ ಶೋ'ಗೆ ಸಾರಥಿ!]

Comedian Kapil Sharma Hospitalized

ನಿರಂತರವಾಗಿ ಶೂಟಿಂಗ್ ಅಂತ ಕೆಲಸದಲ್ಲಿ ತೊಡಗಿಕೊಂಡಿದ್ದರಿಂದ ಆಯಾಸಗೊಂಡಿದ್ದಾರೆ, ಮೊದಲಿನಿಂದಲೂ ಕಪಿಲ್ ಗೆ ಲೋ ಬ್ಲಡ್ ಪ್ರೆಶರ್ ಸಮಸ್ಯೆಯಿತ್ತು ಎಂದು ಕಪಿಲ್ ಸ್ನೇಹಿತರು ತಿಳಿಸಿದ್ದಾರೆ. ಸದ್ಯ, ಚಿಕಿತ್ಸೆ ಪಡೆಯುತ್ತಿರುವ ಕಪಿಲ್ ಚೇತರಿಸಿಕೊಳ್ತಿದ್ದಾರೆ ಎನ್ನಲಾಗಿದೆ.['ದಿ ಕಪಿಲ್ ಶರ್ಮಾ ಶೋ'ನಿಂದ ಸುನಿಲ್ ಗ್ರೋವರ್ ಹೊರಬೀಳ್ತಾರಾ?, ಉತ್ತರ ಇಲ್ಲಿದೆ..]

ಇನ್ನು ಕಳೆದ ತಿಂಗಳಿನಲ್ಲಷ್ಟೇ ಸುನಿಲ್ ಗ್ರೋವರ್ ಮತ್ತು ಕಪಿಲ್ ಶರ್ಮಾ ಇಬ್ಬರು ಕಾರ್ಯಕ್ರಮಕ್ಕೆ ಸಂಬಂಧಪಟ್ಟಂತೆ ಕಿತ್ತಾಡಿಕೊಂಡಿದ್ದರು. ಅದಾದ ನಂತರ ಕಪಿಲ್ ಶರ್ಮಾ ಶೋ ಟಿ.ಆರ್.ಪಿ ಕೂಡ ಇಳಿಕೆಯಾಗಿತ್ತು. ಇದರಿಂದ ಕಪಿಲ್ ಸಾಕಷ್ಟು ಒತ್ತಡದಲ್ಲಿದ್ದರು ಎನ್ನಲಾಗಿದೆ. ಮತ್ತೊಂದೆಡೆ ಸಲ್ಮಾನ್ ಖಾನ್ ಅವರ 'ದಸ್ ಕಾ ದಮ್' ಕಾರ್ಯಕ್ರಮ ಪ್ರಸಾರವಾಗಲಿದ್ದು, ಸದ್ಯದಲ್ಲೇ ಕಪಿಲ್ ಶರ್ಮಾ ಶೋ ರದ್ದಾಗಲಿದೆ ಎಂಬ ವದಂತಿಯೂ ಇದೆ.

English summary
Kapil Sharma admitted to hospital after complaining of uneasiness, shooting of his show cancelled.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada