»   » ಶಾರೂಖ್ ಖಾನ್ ಅಭಿಮಾನಿಗಳ ಬಾಯಿಗೆ ಲಡ್ಡು ಬಂದು ಬೀಳಲಿದೆ.!

ಶಾರೂಖ್ ಖಾನ್ ಅಭಿಮಾನಿಗಳ ಬಾಯಿಗೆ ಲಡ್ಡು ಬಂದು ಬೀಳಲಿದೆ.!

Posted By:
Subscribe to Filmibeat Kannada

ಶಾರೂಖ್ ಖಾನ್ ನಟನೆಯ ಹೊಸ ಸಿನಿಮಾ 'ಜಬ್ ಹ್ಯಾರಿ ಮೀಟ್ ಸೆಜಲ್' ಚಿತ್ರದ ಫಸ್ಟ್ ಲುಕ್ ಇತ್ತೀಚಿಗಷ್ಟೆ ರಿಲೀಸ್ ಆಗಿತ್ತು. ಇದೀಗ ಶಾರೂಖ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.

ಶಾರೂಖ್ ಖಾನ್ ಅವರ ಸೂಪರ್ ಹಿಟ್ ಸಿನಿಮಾ 'ದೇವದಾಸ್' ಚಿತ್ರ ಈಗ ಮತ್ತೆ ರೀ ರಿಲೀಸ್ ಆಗುತ್ತಿದೆ. ಈ ಸಿನಿಮಾವನ್ನು 3D ವರ್ಷನ್ ನಲ್ಲಿ ಬಿಡುಗಡೆ ಮಾಡುವುದಕ್ಕೆ ನಿರ್ದೇಶಕ ಸಂಜಯ್ ಲೀಲಾ ಬಂಸಾಲಿ ಪ್ಲಾನ್ ಮಾಡಿದ್ದಾರೆ.

[ಸಲ್ಮಾನ್ ಮತ್ತು ಶಾರೂಖ್ ಫ್ಯಾನ್ಸ್ ಗೆ ಇದು ಖುಷಿಯ ಜೊತೆ ಅಚ್ಚರಿ.!]

'Devdas' movie re release after 15 years

ಇದೇ ಜುಲೈ 12ಕ್ಕೆ 'ದೇವದಾಸ್' ಸಿನಿಮಾ ರಿಲೀಸ್ ಆಗಿ 15 ವರ್ಷವನ್ನು ಪೂರೈಸುತ್ತಿದೆ. ಈ ವಿಶೇಷವಾಗಿ ಸಿನಿಮಾವನ್ನು ಮತ್ತೆ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಚಿಂತನೆ ನೆಡೆಸಿದೆ.

[ಮೂರು ವರ್ಷದ ಪುತ್ರನಿಗೆ ಶಾರೂಖ್ ಕಟ್ಟಿಕೊಟ್ಟ ಪುಟಾಣಿ ಮನೆ!]

'Devdas' movie re release after 15 years

2002 ರಲ್ಲಿ ರಿಲೀಸ್ ಆಗಿದ್ದ 'ದೇವದಾಸ್' ಸಿನಿಮಾ ಆ ಕಾಲದ ಅದ್ದೂರಿ ಸಿನಿಮಾ ಆಗಿತ್ತು. 50ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿ 98 ಕೋಟಿ ಗಳಿಕೆ ಮಾಡಿತ್ತು. ಚಿತ್ರದಲ್ಲಿ ಶಾರೂಖ್ ಗೆ ಮಾಧುರಿ ದೀಕ್ಷಿತ್ ಮತ್ತು ಐಶ್ವರ್ಯ ರೈ ಜೋಡಿಯಾಗಿದ್ದರು.

English summary
Shah Rukh Khan, Aishwarya Rai Bachchan and Madhuri Dixit starrer, 'Devdas' is all set to re release the 15th anniversary of its release on July 12.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada