»   » ರಜನಿಕಾಂತ್ ಅಳಿಯ ಧನುಷ್ ಜೊತೆ ಚಿಟ್ ಚಾಟ್

ರಜನಿಕಾಂತ್ ಅಳಿಯ ಧನುಷ್ ಜೊತೆ ಚಿಟ್ ಚಾಟ್

By: ಫಿಲ್ಮಿಬೀಟ್ ಸಿಬ್ಬಂದಿ
Subscribe to Filmibeat Kannada

ಶಮಿತಾಬ್ ಚಿತ್ರದಲ್ಲಿ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಜೊತೆ ನಟಿಸುವ ಯೋಗ ತೊರೆದಿದ್ದಕ್ಕೆ ರಜನಿಕಾಂತ್ ಅಳಿಯ ಧನುಷ್ ಸಹಜವಾಗೇ ಖುಷಿಯಾಗಿದ್ದಾರೆ. ಭಾಲ್ಕಿ ನಿರ್ದೇಶನ, ಅಕ್ಷರಾ ಅಹಸನ್ ಜೊತೆ ನಟನೆ ಬಗ್ಗೆ ಫಿಲ್ಮಿಬೀಟ್ ಪ್ರತಿನಿಧಿಯೊಂದಿಗೆ ಚಿಟ್ ಚಾಟ್ ನಡೆಸಿದ್ದಾರೆ. ಫೆ.6ರಂದು ಶಮಿತಾಬ್ ಚಿತ್ರ ಬಿಡುಗಡೆಯಾಗಲಿದೆ. ಬಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ನಟನೆ ಬಗ್ಗೆ ಧನುಷ್ ಹೇಳಿದ್ದು ಏನು? ಮುಂದೆ ಓದಿ

ಪ್ರ: ಬಾಲಿವುಡ್ ನಲ್ಲಿ ಈಗ ಸಿಕ್ಸ್ ಪ್ಯಾಕ್ಸ್ ಟ್ರೆಂಡ್ ಇದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ?
ಧನುಷ್: ಸಿಕ್ಸ್ ಪ್ಯಾಕ್ಸ್ ಮಾಡುವವರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗಬೇಕು. ಆನ್ ಸ್ಕ್ರೀನ್ ಚೆನ್ನಾಗಿ ಕಾಣಿಸಿಕೊಳ್ಳಬೇಕು ಎಂಬುದು ಬಾಲಿವುಡ್ ನಲ್ಲಿ ಹಿಂದಿನಿಂದ ನಡೆದುಕೊಂಡು ಬಂದಿದೆ. ಎಷ್ಟೋ ದಿನ ನೀರು ಇಲ್ಲದೆ ಸಿಕ್ಸ್ ಪ್ಯಾಕ್ಸ್ ಅಬ್ಸ್ ಗಾಗಿ ಕಷ್ಟಪಟ್ಟವರನ್ನು ನೋಡಿದ್ದೇನೆ. ಸಿಕ್ಸ್ ಪ್ಯಾಕ್ಸ್ ಹಿಂದಿನ ಪರಿಶ್ರಮವನ್ನು ಗುರುತಿಸಬೇಕು. [ಭಾಲ್ಕಿ ಬತ್ತಳಿಕೆಯ ಹೊಸ ಹೂ ಬಾಣ 'ಶಮಿತಾಬ್']

ಪ್ರ: ಅಮಿತಾಬ್ ಅವರು ಸೆಟ್ ಗೆ ಕರೆಕ್ಟ್ ಟೈಂಗೆ ಬರುತ್ತಾರೆ ಎಂದು ಹೇಳುತ್ತಾರೆ. ಶಮಿತಾಬ್ ವೇಳೆ ಹೇಗೆ?
ಧನುಷ್: ಭಾಲ್ಕಿ ಅವರ ಚಿತ್ರ ಎಂದ ಮೇಲೆ ಯಾರೂ ಲೇಟ್ ಬರೋದು ಸಾಧ್ಯವಿಲ್ಲ. 8 ಗಂಟೆಗೆ ಶೂಟಿಂಗ್ ಎಂದರೆ ನಾವೆಲ್ಲ 7.30 ಗೆ ಇರುತ್ತಿದ್ದೆವು.

Exclusive Dhanush Interview

ಪ್ರ: ನೀವು ಸೆಲೆಬ್ರಿಟಿ ತಾರೆಯ ಅಳಿಯ ಹಾಗೂ ನಿಮ್ಮ ಕುಟುಂಬದಲ್ಲೂ ಈ ಚಿತ್ರದಲ್ಲಿದ್ದಂತೆ ಆತ್ಮಾಭಿಮಾನದ ಸಂಘರ್ಷ ನಡೆದಿತ್ತೆ?
ಧನುಷ್ : ಅಭಿಮಾನ ಇರಬೇಕು. ದುರಾಭಿಮಾನ ಇರಬಾರದು, ಪ್ರತಿಷ್ಠೆ ಎಂಬುದು ನಮ್ಮತನವನ್ನು ಹಾಳು ಮಾಡುತ್ತದೆ. ನಮ್ಮ ಪ್ರತಿಭೆ ಬಗ್ಗೆ ನಂಬಿಕೆ ಇರಬೇಕು. ಸೆಲೆಬ್ರಿಟಿ ಸ್ಥಾನಕ್ಕೇರಿದ ಮೇಲೆ ಪ್ರತಿಷ್ಠೆ ಜೊತೆಗೆ ಸರಳತೆಯೂ ಇರಬೇಕು ಇದನ್ನು ನಾನು ರಜನಿ, ಅಮಿತಾಬ್ ಸರ್ ನಿಂದ ಕಲಿತಿದ್ದೇನೆ.

ಪ್ರ: ಇತ್ತೀಚಿಗೆ ನೋಡಿದ ಹಿಂದಿ ಚಿತ್ರ ಯಾವುದು?
ಧನುಷ್: ಪಿಕೆ ಚಿತ್ರ ನೋಡಿದೆ. ಅಮೀರ್ ಖಾನ್ ಚಿತ್ರಗಳನ್ನು ನೋಡಿದರೆ ಜಗತ್ತಿನ ಜಂಜಾಟಗಳೆಲ್ಲ ಸಣ್ಣದಾಗಿ ಕಾಣುತ್ತದೆ. ಚೆನ್ನೈನ ಪ್ರೇಕ್ಷಕರಿಗೂ ಚಿತ್ರ ಇಷ್ಟವಾಗಿರುವುದು ಸಂತೋಷ.[ರಾಂಝಾನಾ ವಿಮರ್ಶೆ: ಪ್ರೇಮಿಗಳಿಗೆ ಸಿನಿರಸಿಕರಿಗೆ]

ಪ್ರ: ಕೊಲವೆರಿ ಡಿ ಹಾಡಿನ ಯಶಸ್ಸು ಯಾವ ಪರಿಣಾಮ ಬೀರಿದೆ?
ಧನುಷ್: ಇದರಿಂದ ನನಗೆ ಯಾವುದೇ ಅಡ್ಡ ಪರಿಣಾಮವಾಗಲಿಲ್ಲ. ಇದರಿಂದ ಒಳ್ಳೆಯದೇ ಆಗಿದೆ. ಹಾಡು ಹಿಟ್ ಆಗಿದ್ದು ಆಕಸ್ಮಿಕ. ನಾನೊಬ್ಬ ನಟ, ಗಾಯಕನಲ್ಲ. ಆದರೆ, ಇಂಥ ಆಕಸ್ಮಿಕ ಅಪಘಾತಗಳು ಸಂಭವಿಸಿದರೆ ಜೀವನದಲ್ಲಿ ಥ್ರಿಲ್ ಇರುತ್ತದೆ.ಈಗ ಈ ಹಾಡು ಬೋರ್ ಹೊಡೆಸಿ ನನ್ನ ಐಪ್ಯಾಡ್ ನಿಂದಲೂ ಡಿಲೀಟ್ ಆಗಿ ಬಿಟ್ಟಿದೆ.

English summary
Shamitabh starring Dhanush, Amitabh Bachchan and Akshara Haasan will get to release on February 6. The team is busy promoting the movie. Here is an exclusive interview of Dhanush. He speaks about his experience in acting along with Big B, director Balki and other interests.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada